ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ನಿರಾಶೆ: ಚಿತ್ತದುರ್ಗದಲ್ಲಿ ಹೋರಾಟಗಾರರ ಆಕ್ರೋಶ

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಮಾ. 12
ಲಿಂಗತ್ನ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರರು ಹಾಗೂ ಸಮುದಾಯದ ಪ್ರತಿನಿಧಿಗಳು ರಾಜ್ಯ ಬಜೆಟ್ ಕುರಿತು ತೀವ್ರ ನಿರಾಶೆ ವ್ಯಕ್ತಪಡಿಸಿದ್ದು, ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಮೂಲಭೂತ ಸಮಸ್ಯೆಗಳು ಶಿಕ್ಷಣ, ವಾಸಸ್ಥಳ, ಜೀವನೋಪಾಯ ಅರೋಗ್ಯ ಮತ್ತು ಸಾಮಾಜಿಕ ಭದ್ರತೆ. ಇವುಗಳಿಗೆ ಈ ಬಜೆಟ್‍ನಲ್ಲಿ ಸಮರ್ಪಕವಾದ ಅನುದಾನ ಅಥವಾ ಸ್ಪಷ್ಟ ಕ್ರಮಗಳು ಕಾಣಿಸಿಲ್ಲ ಎಂದು ದೂರಿದ್ದಾರೆ. 


ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸಮರ ಸಾರಥಿ ಸೇವಾ ಸಂಘದ ಆಶ್ರಯದಲ್ಲಿ ರಾಜ್ಯ ಬಜೆಟ್ ಕುರಿತು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅರುಂಧತಿ ಕಾಂಗ್ರೆಸ್ ಪಕ್ಷದ ಚುನಾವಣಾ ಘೋಷಣಾಪತ್ರದಲ್ಲಿ ಲಿಂಗತ್ಯ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 200 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಲಾಗಿತ್ತು ಆದರೆ ಪ್ರಸ್ತುತ ರಾಜ್ಯ ಬಜೆಟ್‍ನಲ್ಲಿ ಆ ಭರವಸೆಯನ್ನು ಪ್ರತಿಬಿಂಬಿಸುವ ಯಾವುದೇ ಸ್ಪಷ್ಟ ಅನುದಾನ ಕಾಣಿಸಿಲ್ಲ. 30.000ರಿಂದ 45,000ಕ್ಕೆ ಸಹಾಯಧನ ಹೆಚ್ಚಿಸಿರುವುದನ್ನು ಹೊರತುಪಡಿಸಿ ಸಮುದಾಯದ ಬದುಕಿನ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತಹ ಯಾವುದೇ ಮಹತ್ವದ ಹೊಸ ಯೋಜನೆಗಳು ಅಥವಾ ಅನುದಾನಗಳು ಬಜೆಟ್‍ನಲ್ಲಿ ಕಾಣಿಸಿಲ್ಲ ಎಂದು ಅವರು ಹೇಳಿದರು.


ಸಂಘದ ಅಧ್ಯಕ್ಷ ಚಂದ್ರಮ್ಮ ಮಾತನಾಡಿ, ವಯೋವೃದ್ಧ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಅನೇಕ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಅವರಿಗಾಗಿ ಪಿಂಚಣಿ ಮೊತ್ತವನ್ನು ಹೆಚ್ಚಿಸುವುದು ಸೇರಿದಂತೆ ಸಮರ್ಪಕ ಸಾಮಾಜಿಕ ಭದ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದರು. ಸಂಘದ ಕಾರ್ಯದರ್ಶಿ ನೂತನ ಮಾತನಾಡಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸುರಕ್ಷಿತ ಮತ್ತು ಗೌರವಯುತ ವಾಸಸ್ಥಳದ ಕೊರತೆ ಇನ್ನೂ ಗಂಭೀರ ಸಮಸ್ಯೆಯಾಗಿದೆ ಸರ್ಕಾರವು ಲಿಂಗತ್ವ ಹಾಗೂ ಲೈಂಗಿಕ ಅಲ್ಪ ಸಂಖ್ಯಾತ ಸಮುದಾಯದ ಬದುಕಿನ ಮೂಲಭೂತ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಗಣನೀಯವಾಗಿ ಹೆಚ್ಚಿನ ಹಾಗೂ ಪ್ರತ್ಯೇಕ ಬಜೆಟ್ ಅನುದಾನಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.


ಲಿಂಗತ್ಯ ಹಾಗೂ ಲೈಂಗಿಕ ಅಲ್ಪ ಸಂಖ್ಯಾತರ ಹೋರಾಟಗಾರ್ತಿ ಸ್ಫೂರ್ತಿ ಮಾತನಾಡಿ ಲಿಂಗತ್ಯ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಇತರ ಅಂಚಿನ ಸಮುದಾಯಗಳಂತೆ ಲಿಂಗತ್ನ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಸಮುದಾಯದ ಶಿಕ್ಷಣ, ವಾಸಸ್ಥಳ, ಜೀವನೋಪಾಯ. ಆರೋಗ್ಯ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಅಗತ್ಯಗಳನ್ನು ಪೂರೈಸಲು ಪ್ರತ್ಯೇಕ ಹಾಗೂ ಗಣನೀಯವಾಗಿ ಹೆಚ್ಚಿನ ಬಜೆಟ್ ಅನುದಾನವನ್ನು ಸರ್ಕಾರ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.


ಲಿಂಗತ್ಯ ಹಾಗೂ ಲೈಂಗಿಕ ಅಲ್ಪ ಸಂಖ್ಯಾತರ ಸಂಸ್ಥೆಯ ಸದಸ್ಯರಾದ ಸಾನಿಯಾ, ಕಾಂಚನ ಗೋಷ್ಟಿಯಲ್ಲಿ  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *