# https://samagrasuddi.co.in > ನಿಖರತೆಗೆ ಮತ್ತೊಂದು ಹೆಸರು ## Posts - [ದಿನಕ್ಕೊಂದು ಶ್ಲೋಕ: ಭಗವದ್ಗೀತೆ – ಅಧ್ಯಾಯ 2| ಶ್ಲೋಕ 13(ಸಾಂಖ್ಯ ಯೋಗ)| ಶ್ಲೋಕ 20](https://samagrasuddi.co.in/a-shloka-a-day-bhagavad-gita-chapter-2-shloka-13-samkhya-yoga-shloka-20/): ಮೂಲ ಶ್ಲೋಕ (ಸಂಸ್ಕೃತ): ದೇಹಿನೋऽಸ್ಮಿನ್ ಯಥಾ ದೇಹೇಕೌಮಾರಂ ಯೌವನಂ ಜರಾ |ತಥಾ ದೇಹಾಂತರಪ್ರಾಪ್ತಿಃಧೀರಸ್ತತ್ರ ನ ಮುಹ್ಯತಿ || ಕನ್ನಡ ಅರ್ಥ: ಈ ದೇಹದಲ್ಲಿ ಆತ್ಮಕ್ಕೆ ಬಾಲ್ಯ, ಯೌವನ ಮತ್ತು ವೃದ್ಧಾಪ್ಯ ಎಂಬ ಹಂತಗಳು ಹೇಗೋ,ಅದೇ ರೀತಿ ಮತ್ತೊಂದು ದೇಹವನ್ನು ಪಡೆಯುವುದೂ ಸಹ ಸಹಜವಾಗಿದೆ.ಈ ಸತ್ಯವನ್ನು ಅರಿತ ಧೀರನು ಗೊಂದಲಕ್ಕೆ ಒಳಗಾಗುವುದಿಲ್ಲ. ವಿವರಣೆ ಈ ಶ್ಲೋಕದಲ್ಲಿ ಶ್ರೀಕೃಷ್ಣನು ಜನನ–ಮರಣದ ರಹಸ್ಯವನ್ನು ಸುಲಭವಾಗಿ ವಿವರಿಸುತ್ತಾನೆ. ದೇಹ ಬದಲಾಗುತ್ತದೆ ಆದರೆ ಆತ್ಮ ಸ್ಥಿರವಾಗಿರುತ್ತದೆ ಎಂಬ ತತ್ವವನ್ನು, ಬಾಲ್ಯ–ಯೌವನ–ವೃದ್ಧಾಪ್ಯದ ಉದಾಹರಣೆಯ ಮೂಲಕ ತಿಳಿಸುತ್ತಾನೆ. ಪ್ರತಿದಿನವೂ ನಾವು ದೇಹದಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಿದ್ದೇವೆ, ಆದರೆ “ನಾನು” ಎಂಬ ಆತ್ಮ ಅದೇ ಆಗಿರುತ್ತದೆ. ಅದೇ ರೀತಿ ಮರಣವೂ ದೇಹ ಬದಲಾವಣೆಯೊಂದೇ ಆಗಿದೆ. ಈ ಸತ್ಯವನ್ನು ಅರಿತವನು ಭಯ, ಶೋಕ ಮತ್ತು ಅತೃಪ್ತಿಯಿಂದ ಮುಕ್ತನಾಗುತ್ತಾನೆ. ಜೀವನದ ಅನಿವಾರ್ಯ ಬದಲಾವಣೆಗಳನ್ನು ಶಾಂತ ಮನಸ್ಸಿನಿಂದ ಸ್ವೀಕರಿಸುವ ಜ್ಞಾನವನ್ನು ಈ ಶ್ಲೋಕ ನೀಡುತ್ತದೆ. ಇಂದಿನ ಸಂದೇಶ: ಬದಲಾವಣೆ ದೇಹಕ್ಕೆ; ಸ್ಥಿರತೆ ಆತ್ಮಕ್ಕೆ. - [ನಿತ್ಯ ಭವಿಷ್ಯ, 21 ಜನವರಿ : ಇಂದು ಈ ರಾಶಿಯವರ ಪರೀಕ್ಷೆಯ ದಿನವಾದಾಗಿದ್ದು, ಫಲಿತಾಂಶವೂ ನಿಮ್ಮ ವರ್ತನೆಯ ಮೇಲಿರುವುದು.](https://samagrasuddi.co.in/daily-predictions-21st-january-today-is-the-test-day-for-this-zodiac-sign-and-the-result-also-depends-on-your-attitude/): ಜನವರಿ 21,​​ 2026ರ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರ ಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಉತ್ತರಾಷಾಢ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಶತಭಿಷಾ, ಯೋಗ : ವ್ಯತಿಪಾತ್, ಕರಣ : ಗರಜ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 17 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12-36 – 15:01, ಯಮಗಂಡ ಕಾಲ 08:20 – 09:45, ಗುಳಿಕ ಕಾಲ 11:10 – 12:36 ಮೇಷ ರಾಶಿ: ನಿಮ್ಮ ವ್ಯವಹಾರದ ಬಗ್ಗೆ ಸಲ್ಲದ ಮಾತುಗಳು ಕೇಳಿ, ಅದರೆ ಮನಸ್ಸಿಗೆ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಯಾವುದಾದರೂ ಆಮಿಷಕ್ಕೆ ಬಲಿಯಾಗುವ ಸಾಧ್ಯತೆ ಇದೆ. ನೀವು […] - [Day Special - ಜನವರಿ 21: ಈಶಾನ್ಯ ರಾಜ್ಯಗಳ ಉದಯದಿಂದ ಜಾಗತಿಕ ಇತಿಹಾಸದವರೆಗೆ](https://samagrasuddi.co.in/day-special-january-21-from-the-rise-of-north-eastern-states-to-global-history/): ಕ್ಯಾಲೆಂಡರ್‌ನಲ್ಲಿ ಪ್ರತಿ ದಿನಾಂಕಕ್ಕೂ ತನ್ನದೇ ಆದ ಮಹತ್ವವಿರುತ್ತದೆ. ಕೆಲವು ದಿನಗಳು ಕೇವಲ ಸಂಖ್ಯೆಗಳಾಗಿ ಉಳಿದುಬಿಡುತ್ತವೆ, ಇನ್ನು ಕೆಲವು ದಿನಗಳು ಇತಿಹಾಸದ ಗತಿಯನ್ನೇ ಬದಲಿಸಿದ ಘಟನೆಗಳಿಗೆ ಸಾಕ್ಷಿಯಾಗಿರುತ್ತವೆ. ಅಂತಹ ಒಂದು ಮಹತ್ವದ ದಿನಾಂಕವೇ ಜನವರಿ 21. ಭಾರತದ ಭೂಪಟದಲ್ಲಿ ಹೊಸ ರಾಜ್ಯಗಳ ಉದಯವಾದ ದಿನವಿದು, ಹಾಗೆಯೇ ವಿಶ್ವ ಇತಿಹಾಸದಲ್ಲಿ ಪ್ರಬಲ ಸಾಮ್ರಾಜ್ಯಗಳ ಪತನ ಮತ್ತು ಹೊಸ ಯುಗದ ಆರಂಭ ಕಂಡ ದಿನವೂ ಹೌದು. ಇಂದಿನ ದಿನದ ಪ್ರಮುಖ ಘಟನೆಗಳು, ಐತಿಹಾಸಿಕ ಮಹತ್ವ ಮತ್ತು ವಿಶೇಷ ಆಚರಣೆಗಳ ಸಮಗ್ರ ವಿವರ ಇಲ್ಲಿದೆ. ​ಭಾರತೀಯ ಇತಿಹಾಸದಲ್ಲಿ ಇಂದಿನ ಮಹತ್ವ (Indian History) ​1. ತ್ರಿಪುರಾ, ಮಣಿಪುರ ಮತ್ತು ಮೇಘಾಲಯ ರಾಜ್ಯೋತ್ಸವ ದಿನ (ಈಶಾನ್ಯ ಭಾರತದ ಹೊಸ ಅಧ್ಯಾಯ): ಭಾರತದ ಇತಿಹಾಸದಲ್ಲಿ, ವಿಶೇಷವಾಗಿ ಈಶಾನ್ಯ ಭಾಗಕ್ಕೆ ಇಂದು ಅತ್ಯಂತ ಮಹತ್ವದ ದಿನವಾಗಿದೆ. 1972 ರ ಜನವರಿ 21 ರಂದು, ‘ಈಶಾನ್ಯ ಪ್ರದೇಶಗಳ (ಮರುಸಂಘಟನೆ) ಕಾಯಿದೆ, 1971’ ರ ಅಡಿಯಲ್ಲಿ ಈಶಾನ್ಯ ಭಾರತದ ಭೂಪಟವನ್ನು ಪ್ರಮುಖವಾಗಿ ಮರುರೂಪಿಸಲಾಯಿತು. ​2. […] - [ವೈರಲ್ ವಿಡಿಯೋ: ಕೊಹ್ಲಿ ಕುಡಿದ ಆ 'ನಿಗೂಢ' ಪಾನೀಯ ಯಾವುದು?](https://samagrasuddi.co.in/what-is-the-mysterious-drink-that-kohli-drank-in-the-viral-video/): ವಿರಾಟ್ ಕೊಹ್ಲಿ (Virat Kohli) ಕೇವಲ ತಮ್ಮ ಆಟದಿಂದ ಮಾತ್ರವಲ್ಲ, ಮೈದಾನದಲ್ಲಿನ ತಮ್ಮ ಹಾವಭಾವಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಕೊಹ್ಲಿ ಕುಡಿದ ನಿಗೂಢ ಪಾನೀಯವೊಂದು (Mystery Drink) ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದನ್ನು ಕುಡಿದ ನಂತರ ಕೊಹ್ಲಿ ನೀಡಿದ ವಿಚಿತ್ರ ಪ್ರತಿಕ್ರಿಯೆ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ. ​ಅಷ್ಟಕ್ಕೂ ಆ ಪುಟ್ಟ ಗ್ಲಾಸ್‌ನಲ್ಲಿದ್ದ ಕಂದು ಬಣ್ಣದ ಪಾನೀಯ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ. ​ಏನಿದು ವೈರಲ್ ಘಟನೆ? ​ಪಂದ್ಯದ ನಡುವೆ ವಿರಾಟ್ ಕೊಹ್ಲಿ ಚಿಕ್ಕ ಗ್ಲಾಸ್‌ನಲ್ಲಿ ಕಂದು ಬಣ್ಣದ ಪಾನೀಯವೊಂದನ್ನು ಸೇವಿಸಿದರು. ಆಶ್ಚರ್ಯವೆಂಬಂತೆ, ಅದನ್ನು ಬಾಯಿಗೆ ಹಾಕಿದ ತಕ್ಷಣ ಅವರ ಮುಖದ ಭಾವನೆ ಸಂಪೂರ್ಣ ಬದಲಾಯಿತು. ಏನೋ ಕಹಿ ಅಥವಾ ಅತ್ಯಂತ ಒಗರು ರುಚಿಯ ವಸ್ತುವನ್ನು ಸೇವಿಸಿದಂತೆ ಅವರು ಮುಖ ಕಿವುಚಿದರು. ತಕ್ಷಣವೇ ಅದರ ರುಚಿಯನ್ನು ಸರಿದೂಗಿಸಲು ನೀರು ಕುಡಿದು, ಬಾಳೆಹಣ್ಣು ತಿನ್ನುತ್ತಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದಂತೆ, “ಕೊಹ್ಲಿ ಅಂತಹದ್ದೇನು […] - [ಪ್ರೆಶರ್ ಕುಕ್ಕರ್ ಸ್ಫೋಟ: ಈ 5 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!](https://samagrasuddi.co.in/dont-ignore-these-5-signs-of-a-pressure-cooker-explosion/): ​ಇತ್ತೀಚಿನ ದಿನಗಳಲ್ಲಿ ಪ್ರೆಶರ್ ಕುಕ್ಕರ್ ಇಲ್ಲದ ಅಡುಗೆಮನೆಯೇ ಇಲ್ಲ ಎನ್ನಬಹುದು. ಆಲೂಗಡ್ಡೆ ಬೇಯಿಸುವುದರಿಂದ ಹಿಡಿದು ಬೇಳೆ, ಅನ್ನ ಮತ್ತು ಮಾಂಸಾಹಾರದವರೆಗೆ ಎಲ್ಲವನ್ನೂ ತ್ವರಿತವಾಗಿ ಮಾಡಲು ಪ್ರೆಶರ್ ಕುಕ್ಕರ್‌ಗಳು ಅತ್ಯಗತ್ಯ. ಇವು ಆಹಾರವನ್ನು ಬೇಗನೆ ಬೇಯಿಸುವುದು ಮಾತ್ರವಲ್ಲದೆ, ಇಂಧನ ಅಥವಾ ಗ್ಯಾಸ್ ಉಳಿತಾಯಕ್ಕೂ ಸಹಕಾರಿ. ​ಆದರೆ, ಎಷ್ಟೇ ಉಪಯುಕ್ತವಾಗಿದ್ದರೂ, ಇದನ್ನು ಸರಿಯಾಗಿ ಬಳಸದಿದ್ದರೆ ಅಥವಾ ನಿರ್ವಹಣೆ ಮಾಡದಿದ್ದರೆ ಇದು ಅಡುಗೆಮನೆಯಲ್ಲಿನ ಅತ್ಯಂತ ಅಪಾಯಕಾರಿ ವಸ್ತುವಾಗಿ ಬದಲಾಗಬಹುದು. ಪ್ರೆಶರ್ ಕುಕ್ಕರ್ ಸ್ಫೋಟದ ಸುದ್ದಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಕುಕ್ಕರ್ ಒಮ್ಮೆಲೇ ಅಥವಾ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವುದಿಲ್ಲ. ಅಪಘಾತ ಸಂಭವಿಸುವ ಮೊದಲು ಕುಕ್ಕರ್ ಕೆಲವು ಎಚ್ಚರಿಕೆಯ ಸಂಕೇತಗಳನ್ನು (Warning Signs) ನೀಡುತ್ತದೆ. ಈ ಲಕ್ಷಣಗಳನ್ನು ನಿರ್ಲಕ್ಷಿಸದೆ, ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡರೆ ದೊಡ್ಡ ಅನಾಹುತವನ್ನು ತಪ್ಪಿಸಬಹುದು. ​ಕುಕ್ಕರ್ ಸ್ಫೋಟಗೊಳ್ಳುವ ಮುನ್ನ ನೀಡುವ ಎಚ್ಚರಿಕೆಯ ಸಂಕೇತಗಳು ಮತ್ತು ಪಾಲಿಸಬೇಕಾದ ಸುರಕ್ಷತಾ ಕ್ರಮಗಳು ಇಲ್ಲಿವೆ: ​1. ವೆಂಟ್ ಪೈಪ್ (Vent Pipe) ಬಗ್ಗೆ ನಿಗಾವಹಿಸಿ ​ಕುಕ್ಕರ್ ಮುಚ್ಚಳದ ಮೇಲಿರುವ ವಿಸಿಲ್ […] - [ಬಿಜೆಪಿಯ ಚುಕ್ಕಾಣಿ ಹಿಡಿದ ನಿತಿನ್ ನಬಿನ್: ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ, ಸಿಹಿ ಹಂಚಿಕೆ.](https://samagrasuddi.co.in/bjp-leader-nitin-nabin-is-felicitated-by-bjp-workers-at-chitradurga-and-distribution-of-sweets/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 20 ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ನಿತಿನ್ ನಬಿನ್ ಅವರಿಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಕಿರಿಯ ವಯಸ್ಸಿನಲ್ಲೇ ಶಾಸಕರಾಗಿ, ಸತತವಾಗಿ ಜನಮನ್ನಣೆ ಪಡೆದು ಸಚಿವರಾಗಿ ಕರ್ತವ್ಯ ನಿರ್ವಹಿಸಿ, ಅನೇಕ ರಾಜ್ಯಗಳಲ್ಲಿ ಪಕ್ಷ ಸಂಘಟನೆ ನಡೆಸಿ ಇದೀಗ ಬಿಜೆಪಿ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರು ಎಂಬ ಖ್ಯಾತಿಗೆ ನಿತಿನ್ ನಬಿನ್ ಅವರು ಪಾತ್ರರಾಗಿದ್ದಾರೆ.ಅವರ ಕಾರ್ಯಾವಧಿಯಲ್ಲಿ ಬಿಜೆಪಿ ಪಕ್ಷವು ಸಂಘಟನಾತ್ಮಕವಾಗಿ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು. ನಿತಿನ್ ನಬಿನ್ ಅವರು ಬಿಹಾರ ಬಿಜೆಪಿಯ ಹಿರಿಯ ನಾಯಕ ಹಾಗೂ ಪಾಟ್ನಾದಿಂದ ನಾಲ್ಕು ಬಾರಿ ಶಾಸಕರಾಗಿದ್ದ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿಂಹ ಅವರ ಪುತ್ರ. ತಂದೆಯ ನಿಧನದ ಬಳಿಕ ಬಿಹಾರ ಬಿಜೆಪಿಯಲ್ಲಿ ಅವರು ಶಕ್ತಿಶಾಲಿ ಮತ್ತು […] - [ಸಮಾಜ ಸೇವೆ, ಧರ್ಮ ಮತ್ತು ಸಂಸ್ಕೃತಿಗೆ ನೂತನ ಪ್ರೇರಣೆ: ಚಿತ್ರದುರ್ಗ ಹಿಂದೂ ಸಂಗಮ ಉತ್ಸವ.](https://samagrasuddi.co.in/chitradurga-hindu-sangam-utsav-is-a-new-inspiration-for-social-service-religion-and-culture/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 20 ಹಿಂದೂ ಸಮಾಜದ ಸಂಘಟನೆ ಸ್ವಾವಲಂಬಿ ಸಂಸ್ಕಾರಯುಕ್ತ ಮತ್ತು ಸಾಮರಸ್ಯಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಹಿಂದೂ ಸಮಾಜವೇ ಒಟ್ಟುಗೂಡಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಮಂಡಲ ಪಂಚಾಯಿತಿ ನಗರಗಳಲ್ಲಿ ವಸತಿ ಮಟ್ಟದಲ್ಲಿ ಆಯೋಜಿಸುತ್ತಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಗ್ರಾಮಾಂತರ ಅಧ್ಯಕ್ಷ ಅನಿತ್ ಕುಮಾರ್ ತಿಳಿಸಿದರು. ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ನಗರ ಮತ್ತು ಗ್ರಾಮಾಂತರದ ಹಿಂದೂ ಸಂಗಮ ಆಯೋಜನಾ ಸಮಿತಿಯು. ನಗರದ 35 ವಾರ್ಡಗಳು ಹಾಗೂ ಗ್ರಾಮಾಂತರದ 32 ಮಂಡಲಗಳನ್ನು ಪ್ರತಿನಿಧಿಸುವಂತೆ ಆಯ್ದ 18 ಸ್ಥಳಗಳಲ್ಲಿ ಹಿಂದೂ ಸಂಗಮಗಳನ್ನು ಜನವರಿ 18 ರಿಂದ ಪ್ರಾರಂಭವಾಗಿ ಫೆಬ್ರವರಿ 8 ರವರೆಗೆ ವಿವಿಧ ದಿನಗಳಂದು ಆಯೋಜಿಸುತ್ತಿದೆ. ನಮ್ಮ ದೇವಾಲಯಗಳು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವುದಲ್ಲದೇ ನಮ್ಮ ಧರ್ಮ. […] - [ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವಿರೋಧ ಆಯ್ಕೆ.](https://samagrasuddi.co.in/ishwar-khandre-elected-unopposed-president-of-all-india-veerashaiva-lingayat-mahasabha/): ಬೆಂಗಳೂರು, ಜ.20: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಅಂತಿಮವಾಗಿ ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ, ಈಶ್ವರ್ ಖಂಡ್ರೆ ಅವರನ್ನು 24ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಹಲವು ಪ್ರಮುಖ ನಾಯಕರ ಹೆಸರುಗಳು ಕೇಳಿಬಂದಿದ್ದವು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಕೂಡ ಚರ್ಚೆಯಲ್ಲಿದ್ದು, ಲಿಂಗಾಯತ ಪಂಚಪೀಠದ ಪೀಠಾಧಿಪತಿಗಳೊಬ್ಬರು ಯಡಿಯೂರಪ್ಪ ಅವರು ಅಧ್ಯಕ್ಷರಾದರೆ ಸಂತೋಷ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಆದರೆ, ಅಂತಿಮವಾಗಿ ಕಾರ್ಯಕಾರಿ ಸಭೆಯ ನಿರ್ಧಾರದಲ್ಲಿ ಭಾಲ್ಕಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ತಂದೆಯ ಹಾದಿಯಲ್ಲಿ ಪುತ್ರ ಈಶ್ವರ್ ಖಂಡ್ರೆ ಅವರಿಗೆ ವೀರಶೈವ ಲಿಂಗಾಯತ ಮಹಾಸಭೆಯೊಂದಿಗೆ […] - [ಬಿಜೆಪಿಯ ಚುಕ್ಕಾಣಿ ಹಿಡಿದ ನಿತಿನ್ ನಬಿನ್: ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ.](https://samagrasuddi.co.in/bjp-leader-nitin-nabin-assumed-power-as-the-new-national-president/): ನವದೆಹಲಿ: ಭಾರತೀಯ ಜನತಾ ಪಕ್ಷದ (BJP) ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. 1980ರಲ್ಲಿ ಸ್ಥಾಪನೆಯಾದ ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಬಿನ್, ಕೇವಲ 45ನೇ ವಯಸ್ಸಿಗೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕೇಂದ್ರ ಸಚಿವರಾಗಿದ್ದ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ನಡೆದ ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ನಿತಿನ್ ನಬಿನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ನಬಿನ್ ಅವರು ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಶುಭಾಶಯ ಕೋರಿದರು. https://twitter.com/i/broadcasts/1ynKOMZzqWWJR ಅಧಿಕೃತ ಘೋಷಣೆ ಬಿಜೆಪಿಯ ಸಾಂಸ್ಥಿಕ ಚುನಾವಣೆಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ನಿತಿನ್ ನಬಿನ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಇದಕ್ಕೂ ಮೊದಲು […] - [ಬೆಂಗಳೂರಿನಿಂದ ಮಂತ್ರಾಲಯಕ್ಕೆ KSTDC ವಿಶೇಷ ಪ್ರವಾಸ ಪ್ಯಾಕೇಜ್: ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಸುವರ್ಣಾವಕಾಶ](https://samagrasuddi.co.in/kstdc-special-tour-package-from-bangalore-to-mantralaya-is-a-golden-opportunity-for-raghavendra-swami-darshan/): ಬೆಂಗಳೂರು: ರಾಘವೇಂದ್ರ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್ ಮೂಲಕ ಭಕ್ತರಿಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಹಾಗೂ ಪಂಚಮುಖಿ ಆಂಜನೇಯ ದೇವಸ್ಥಾನಗಳ ದರ್ಶನ ಸುಲಭವಾಗಿ ಲಭ್ಯವಾಗಲಿದೆ. ದಕ್ಷಿಣ ಭಾರತದ ಪ್ರಮುಖ ಪುಣ್ಯಕ್ಷೇತ್ರವಾಗಿರುವ ಮಂತ್ರಾಲಯಕ್ಕೆ ಕರ್ನಾಟಕದಿಂದ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ರಾಘವೇಂದ್ರ ಸ್ವಾಮಿ ಕರ್ನಾಟಕದ ಜನರ ಆರಾಧ್ಯ ದೈವವಾಗಿದ್ದು, ಮಠ ಆಂಧ್ರಪ್ರದೇಶದ ಗಡಿಯಲ್ಲಿ ಇದ್ದರೂ ಪ್ರತಿದಿನ ಲಕ್ಷಾಂತರ ಭಕ್ತರು ರಾಜ್ಯದಿಂದ ತೆರಳುತ್ತಾರೆ. ಭಕ್ತರ ಅನುಕೂಲಕ್ಕಾಗಿ ಇದೀಗ KSTDC ಈ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿದೆ. ಯಾವ ದಿನ ಲಭ್ಯ? ಈ ವಿಶೇಷ ಮಂತ್ರಾಲಯ ಪ್ರವಾಸ ಪ್ಯಾಕೇಜ್ ಪ್ರತಿ ಬುಧವಾರ ಮತ್ತು ಶುಕ್ರವಾರ ಲಭ್ಯವಿರಲಿದೆ. ಪ್ರಯಾಣದ ಸಂಪೂರ್ಣ ವಿವರ ಈ ಪ್ಯಾಕೇಜ್‌ನಲ್ಲಿ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಪ್ರಯಾಣ ವೇಳಾಪಟ್ಟಿಯನ್ನು ರೂಪಿಸಲಾಗಿದೆ. ದಿನ 1: ದಿನ 2: ಪ್ಯಾಕೇಜ್ ದರ ಎಷ್ಟು? ಈ […] - [ಅಕ್ಷಯ್ ಕುಮಾರ್ ಬೆಂಗಾವಲು ವಾಹನ ಅಪಘಾತ: ಜುಹುವಿನಲ್ಲಿ ಮರ್ಸಿಡಿಸ್–ಆಟೋ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ.](https://samagrasuddi.co.in/akshay-kumar-escort-vehicle-accident-mercedes-auto-collision-in-juhu-two-seriously-injured/): ಮುಂಬೈ: ಸೋಮವಾರ ರಾತ್ರಿ ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬೆಂಗಾವಲು ವಾಹನಕ್ಕೆ ಸಂಬಂಧಿಸಿದ ಭೀಕರ ಅಪಘಾತ ಸಂಭವಿಸಿದೆ. ರಾತ್ರಿ ಸುಮಾರು 9 ಗಂಟೆ ವೇಳೆಗೆ ಮರ್ಸಿಡಿಸ್ ಕಾರು, ಆಟೋ ರಿಕ್ಷಾ ಮತ್ತು ಅಕ್ಷಯ್ ಅವರ ಭದ್ರತಾ ವಾಹನದ ನಡುವೆ ಈ ಅಪಘಾತ ನಡೆದಿದೆ ಎಂದು ಮೂಲಗಳು ದೃಢಪಡಿಸಿವೆ. ಅಪಘಾತದ ವೇಳೆ ಅಕ್ಷಯ್ ಕುಮಾರ್ ಮತ್ತು ಪತ್ನಿ ಟ್ವಿಂಕಲ್ ಖನ್ನಾ ಮುಂದಿನ ಬೇರೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಹೇಗೆ ಸಂಭವಿಸಿತು ಅಪಘಾತ? ಪ್ರಾಥಮಿಕ ಮಾಹಿತಿಯ ಪ್ರಕಾರ, ಅತೀವೇಗದಲ್ಲಿ ಬಂದ ಮರ್ಸಿಡಿಸ್ ಕಾರು ಮೊದಲು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ನಿಯಂತ್ರಣ ತಪ್ಪಿ ಅಕ್ಷಯ್ ಕುಮಾರ್ ಅವರ ಬೆಂಗಾವಲು ಇನೋವಾ ಕಾರಿಗೆ ಅಪ್ಪಳಿಸಿದೆ ಎನ್ನಲಾಗಿದೆ. ಈ ವೇಳೆ ಮರ್ಸಿಡಿಸ್ ಕಾರು ಪಲ್ಟಿಯಾದ ದೃಶ್ಯವೂ ಕಂಡುಬಂದಿದೆ. ಇಬ್ಬರಿಗೆ ಗಂಭೀರ ಗಾಯ ಈ ಅಪಘಾತದಲ್ಲಿ ಆಟೋ ಚಾಲಕ ಮತ್ತು ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು, […] - [WPL: ಗುಜರಾತ್ ಮಣಿಸಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟ ಆರ್​ಸಿಬಿ! ಸತತ 5ನೇ ಜಯ](https://samagrasuddi.co.in/rcbs-5th-win-in-a-row-to-clinch-wpl-gujarat-manisi-play-offwpl/) - [ನಿತ್ಯ ಭವಿಷ್ಯ, 20 ಜನವರಿ : ಇಂದು ಈ ರಾಶಿಯವರು ತಮ್ಮನ್ನು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳುವರು](https://samagrasuddi.co.in/daily-predictions-20th-january-today-this-zodiac-sign-will-portray-itself-in-a-different-way/): ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ ಮಂಗಳವಾರ ಗೌರವದ ಚಿಂತೆ, ಆರೋಗ್ಯ ಸುಧಾರಣೆ, ದುರಸ್ತಿ, ಅಧಿಕ ಶ್ರಮ, ಹೂಡಿಕೆ, ಅನಿರೀಕ್ಷಿತ ವಾರ್ತೆ ಇವೆಲ್ಲ ಇಂದಿನ ವಿಶೇಷ.ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರ ಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಉತ್ತರಾಷಾಢ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಸಿದ್ಧಿ, ಕರಣ : ಕೌಲವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 16 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15-26 – 16:51, ಯಮಗಂಡ ಕಾಲ 09:45 – 11:10, ಗುಳಿಕ ಕಾಲ 12:35 – 14:01 ಮೇಷ ರಾಶಿ : ಗಂಭೀರ ವ್ಯಕ್ತಿತ್ವದಿಂದ ತಮಾಷೆಯನ್ನು […] - ['ಜನವರಿ 20: ಭಾರತದ 'ಅಣುಶಕ್ತಿ'ಯಿಂದ ಅಮೆರಿಕದ ಅಧ್ಯಕ್ಷರವರೆಗೆ - ಇಲ್ಲಿದೆ ಇಂದಿನ ರೋಚಕ ಇತಿಹಾಸ"](https://samagrasuddi.co.in/january-20-from-indias-nuclear-power-to-americas-president-here-is-todays-exciting-history/) - [ದಿನಕ್ಕೊಂದು ಶ್ಲೋಕ: ಭಗವದ್ಗೀತೆ – ಅಧ್ಯಾಯ 2 (ಸಾಂಖ್ಯ ಯೋಗ- ಶ್ಲೋಕ 11)|ಶ್ಲೋಕ 20](https://samagrasuddi.co.in/a-shloka-a-day-bhagavad-gita-chapter-2-samkhya-yoga-shloka-11-shloka-20/): ಮೂಲ ಶ್ಲೋಕ (ಸಂಸ್ಕೃತ): ಅಶೋಚ್ಯಾನನ್ವಶೋಚಸ್ತ್ವಂಪ್ರಜ್ಞಾವಾದಾಂಶ್ಚ ಭಾಷಸೇ |ಗತಾಸೂನಗತಾಸೂಂಶ್ಚನಾನುಶೋಚಂತಿ ಪಂಡಿತಾಃ || ಕನ್ನಡ ಅರ್ಥ: ನೀನು ಶೋಕಿಸಬೇಕಾದವರಿಗಾಗಿ ಶೋಕಿಸುತ್ತಿರುವೆಯಲ್ಲದೆ, ಜ್ಞಾನಿಗಳಂತೆ ಮಾತಾಡುತ್ತಿದ್ದೀಯ.ಆದರೆ ಜ್ಞಾನಿಗಳು ಬದುಕಿರುವವರಿಗೂ, ಸತ್ತವರಿಗೂ ಶೋಕಿಸುವುದಿಲ್ಲ. ವಿವರಣೆ ಈ ಶ್ಲೋಕದಿಂದ ಶ್ರೀಕೃಷ್ಣನು ಅರ್ಜುನನಿಗೆ ನಿಜವಾದ ಆತ್ಮಜ್ಞಾನವನ್ನು ಬೋಧಿಸಲು ಆರಂಭಿಸುತ್ತಾನೆ. ದೇಹ ನಾಶವಾಗುವದಾದರೂ ಆತ್ಮ ಶಾಶ್ವತ ಎಂಬ ತತ್ವವನ್ನು ಇಲ್ಲಿ ಸೂಚಿಸುತ್ತಾನೆ. ಸಾಮಾನ್ಯವಾಗಿ ಮನುಷ್ಯನು ದೇಹದ ಮಟ್ಟದಲ್ಲೇ ಯೋಚಿಸಿ ದುಃಖಕ್ಕೆ ಒಳಗಾಗುತ್ತಾನೆ. ಆದರೆ ಪಂಡಿತರು ಆತ್ಮದ ಶಾಶ್ವತತೆಯನ್ನು ಅರಿತು, ಅನಗತ್ಯ ಶೋಕದಿಂದ ದೂರ ಇರುತ್ತಾರೆ. ಜೀವನದಲ್ಲಿ ಬದಲಾವಣೆ, ಮರಣ ಮತ್ತು ವಿಛೇದ ಸಹಜವಾದ ಸತ್ಯಗಳು. ಇವುಗಳನ್ನು ಆತ್ಮಜ್ಞಾನದಿಂದ ಒಪ್ಪಿಕೊಂಡಾಗ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಈ ಶ್ಲೋಕವು ದುಃಖವನ್ನು ತೊರೆದು ಜ್ಞಾನಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಇಂದಿನ ಸಂದೇಶ: ದೇಹದ ಮೇಲೆಲ್ಲ, ಆತ್ಮದ ಸತ್ಯವನ್ನು ಅರಿತಾಗ ಶೋಕ ಕರಗುತ್ತದೆ. - [​ಕೊರಿಯನ್ 3-3-3 ಬ್ರಷಿಂಗ್ ವಿಧಾನ: ಹಲ್ಲುಗಳ ಆರೋಗ್ಯ ಮತ್ತು ಹೊಳಪಿಗೆ ಕೊರಿಯನ್ನರ ಸೀಕ್ರೆಟ್ ಇಲ್ಲಿದೆ!](https://samagrasuddi.co.in/the-korean-3-3-3-brushing-method-heres-the-korean-secret-to-healthy-and-bright-teeth/): ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ‘ಕೊರಿಯನ್ ಅಲೆ’ (Korean Wave) ಜೋರಾಗಿದೆ. ಕೊರಿಯನ್ ಚರ್ಮದ ಆರೈಕೆ (K-Beauty), ಆಹಾರ ಪದ್ಧತಿ (K-Food), ಮತ್ತು ಫ್ಯಾಷನ್ ಜಾಗತಿಕವಾಗಿ ಜನರ ಜೀವನಶೈಲಿಯ ಮೇಲೆ ಪ್ರಭಾವ ಬೀರುತ್ತಿದೆ. ಆದರೆ, ಕೊರಿಯನ್ನರ ಸೌಂದರ್ಯ ಕೇವಲ ಚರ್ಮಕ್ಕೆ ಸೀಮಿತವಾಗಿಲ್ಲ, ಅವರ ಮುಖದ ಸೌಂದರ್ಯವನ್ನು ಹೆಚ್ಚಿಸುವ ಹಲ್ಲುಗಳ ಆರೋಗ್ಯಕ್ಕೂ ಅವರು ವಿಶೇಷ ಆದ್ಯತೆ ನೀಡುತ್ತಾರೆ. ಇದಕ್ಕೆ ಸಾಕ್ಷಿಯೇ ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ “ಕೊರಿಯನ್ 3-3-3 ಬ್ರಷಿಂಗ್ ವಿಧಾನ”. ​ಇದು ಕೇವಲ ಒಂದು ಸಾಮಾನ್ಯ ಅಭ್ಯಾಸವಲ್ಲ, ಬದಲಾಗಿ ಹಲ್ಲು ಮತ್ತು ವಸಡಿನ ಆರೋಗ್ಯವನ್ನು ಕಾಪಾಡಲು ರೂಪಿಸಲಾದ ವೈಜ್ಞಾನಿಕ ವಿಧಾನವಾಗಿದೆ. ಏನಿದು 3-3-3 ಸೂತ್ರ? ಇದು ದಂತ ರೋಗಗಳನ್ನು ಹೇಗೆ ತಡೆಯುತ್ತದೆ? ಇಲ್ಲಿದೆ ಸಂಪೂರ್ಣ ವರದಿ. ​ಏನಿದು ‘3-3-3’ ಬ್ರಷಿಂಗ್ ಸೂತ್ರ? ​ಈ ವಿಧಾನವು ನೆನಪಿಟ್ಟುಕೊಳ್ಳಲು ಸುಲಭವಾಗಿದ್ದು, ದೈನಂದಿನ ಜೀವನದಲ್ಲಿ ಶಿಸ್ತನ್ನು ತರುತ್ತದೆ. ಇದರ ಮೂರು ಪ್ರಮುಖ ನಿಯಮಗಳು ಹೀಗಿವೆ: ​ಇದರ ಹಿಂದಿರುವ ವೈಜ್ಞಾನಿಕ ಸತ್ಯಗಳೇನು? ​ಈ ವಿಧಾನವು ಸುಮ್ಮನೆ ಹುಟ್ಟಿಕೊಂಡದ್ದಲ್ಲ. ಇದರ ಬಗ್ಗೆ […] - [​ರಾತ್ರಿ 10 ಗಂಟೆಗೆ ಮಲಗುವುದು ಕೇವಲ ಅಭ್ಯಾಸವಲ್ಲ, ಇದೊಂದು ಆರೋಗ್ಯ ಮಂತ್ರ!](https://samagrasuddi.co.in/sleeping-at-10-pm-is-not-just-a-habit-it-is-a-health-mantra/): ಇಂದಿನ ಆಧುನಿಕ ಜೀವನಶೈಲಿಯಲ್ಲಿ, ‘ಬ್ಯುಸಿ’ (Busy) ಎಂಬುದು ಒಂದು ಪದವಿಗಿಂತ ಹೆಚ್ಚಾಗಿ ಜೀವನದ ಅನಿವಾರ್ಯತೆಯಾಗಿದೆ. ಕೆಲಸದ ಒತ್ತಡ, ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಬದಲಾದ ಜೀವನಶೈಲಿಯಿಂದಾಗಿ ನಮ್ಮ ನಿದ್ರೆಯ ಸಮಯ ಸಂಪೂರ್ಣವಾಗಿ ಹಳಿ ತಪ್ಪಿದೆ. ಬಹುತೇಕ ಯುವಜನತೆ ಮತ್ತು ಮಧ್ಯವಯಸ್ಕರು ರಾತ್ರಿ 12 ಅಥವಾ 1 ಗಂಟೆಯ ನಂತರ ಮಲಗುವುದನ್ನು ರೂಢಿಸಿಕೊಂಡಿದ್ದಾರೆ. “ತಡವಾಗಿ ಮಲಗಿ, ತಡವಾಗಿ ಏಳುವ” ಸಂಸ್ಕೃತಿ ನಮ್ಮ ಆರೋಗ್ಯವನ್ನು ನಿಧಾನವಾಗಿ ಹಾಳುಮಾಡುತ್ತಿದೆ. ಆದರೆ, ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಪ್ರಕಾರ, ರಾತ್ರಿ 10 ಗಂಟೆಗೆ ನಿದ್ರಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ. ​ನೀವು ಕೇವಲ ಒಂದು ವಾರ ರಾತ್ರಿ 10 ಗಂಟೆಗೆ ಮಲಗುವ ಅಭ್ಯಾಸ ಮಾಡಿದರೆ, ನಿಮ್ಮ ದೇಹ ಮತ್ತು ಮನಸ್ಸಿನಲ್ಲಿ ಅಗಾಧವಾದ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಆ ಬದಲಾವಣೆಗಳೇನು? ಇಲ್ಲಿದೆ ಸಂಪೂರ್ಣ ವಿವರ. ​1. ದೇಹದ ‘ನೈಸರ್ಗಿಕ ಡಿಟಾಕ್ಸ್’ (Detoxification) ಪ್ರಕ್ರಿಯೆಗೆ ಚಾಲನೆ ​ನಮ್ಮ ದೇಹವು ಒಂದು ನೈಸರ್ಗಿಕ ಗಡಿಯಾರ ಅಥವಾ ‘ಜೈವಿಕ ಗಡಿಯಾರ’ದ (Biological Clock) ಪ್ರಕಾರ […] - [SSLC ಪೂರ್ವ ಸಿದ್ಧತೆ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್: ಶಿಕ್ಷಣ ಇಲಾಖೆ ಅಲರ್ಟ್, ಹೊಸ ಗೈಡ್‌ಲೈನ್ಸ್ ಜಾರಿ.](https://samagrasuddi.co.in/sslc-pre-preparation-exam-question-paper-leak-education-department-alert-new-guidelines-implementationsslc/): ಮುಖ್ಯ ಪರೀಕ್ಷೆಗೆ ಶಿಕ್ಷಣ ಇಲಾಖೆ ಖಡಕ್ ಹೊಸ ಮಾರ್ಗಸೂಚಿ ಬಿಡುಗಡೆ. ಬೆಂಗಳೂರು, ಜನವರಿ 19: ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತೆ (Preparatory) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ಹೊಸ ಹಾಗೂ ಖಡಕ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಶಾಲೆಗಳ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಕೆಲ ಶಾಲಾ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆಗಳನ್ನು ಹಂಚಿಕೆ ಮಾಡಿದ್ದರೆಂಬ ಆರೋಪಗಳು ಬೆಳಕಿಗೆ ಬಂದಿವೆ. ಹೊಸ ಮಾರ್ಗಸೂಚಿಗಳಲ್ಲೇನಿದೆ? ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಈ ಹಿಂದೆ ಕರ್ನಾಟಕ ಪರೀಕ್ಷಾ ಮಂಡಳಿ ಮೌಲ್ಯ ನಿರ್ಣಯ ಮಂಡಳಿಯ ನೇತೃತ್ವದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ, ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ 2 ಮತ್ತು 3ನೇ ಪರೀಕ್ಷೆಗಳ ಮೇಲ್ವಿಚಾರಣೆಯನ್ನು ಆಯುಕ್ತರ ನೇತೃತ್ವಕ್ಕೆ ವರ್ಗಾಯಿಸಲಾಗಿದೆ. ಗಣಿತ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಜನವರಿ 6ರಂದು ನಡೆದ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ […] - [ಮನರೇಗಾ ಯೋಜನೆಯ ರೂಪ ಹಾಗೂ ಹೆಸರಿನ ಬದಲಾವಣೆಗೆ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ: ಸಚಿವ ಡಿ.ಸುಧಾಕರ್ ಖಂಡನೆ](https://samagrasuddi.co.in/minister-d-sudhakar-condemns-central-governments-unilateral-decision-to-change-the-form-and-name-of-manrega-scheme/): ಚಿತ್ರದುರ್ಗ, ಜ.19:ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ರೂಪ ಬದಲಿಸಿ, ಹೆಸರನ್ನು ಬದಲಿಸಲು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಚಿತ್ರದುರ್ಗ ಜಿಲ್ಲಾಧಿಕಾರಿ ಸಚಿವ ಡಿ.ಸುಧಾಕರ್ ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಹೆಸರಿನ ಯೋಜನೆಯನ್ನು ವಿ.ಬಿ.ಜಿ. ರಾಮ್ ಜಿ ಎಂದು ಬದಲಾಯಿಸಿರುವುದನ್ನು ಖಂಡಿಸಿ, ಮರುಸ್ಥಾಪನೆವರೆಗೆ ಹೋರಾಟ ನಡೆಸಲು ಎಐಸಿಸಿ ಮತ್ತು ಕೆಪಿಸಿಸಿ ಆದೇಶಿಸಿರುವ ಹಿನ್ನೆಲೆ, ಸೋಮವಾರ ಜಿಲ್ಲಾ ಮಟ್ಟದ ಮುಖಂಡರು, ಕಾರ್ಯಕರ್ತರೊಂದಿಗೆ ಪಾದಯಾತ್ರೆ, ಪ್ರತಿಭಟನೆ ಮತ್ತು ಸತ್ಯಾಗ್ರಹ ನಡೆಸಿದರು. ಸುದ್ದಿಗಾರರಿಗೆ ಮಾತನಾಡಿದ ಡಿ.ಸುಧಾಕರ್ ಅವರು, ದೇಶದ ಆರ್ಥಿಕ ತಜ್ಞ ಡಾ. ಮನ್ಮೋಹನ್ ಸಿಂಗ್ ಜಾರಿಗೆ ತಂದ ಮನರೇಗಾ ಯೋಜನೆ ಕಳೆದ 20 ವರ್ಷಗಳಿಂದ ಗ್ರಾಮೀಣ ಕೂಲಿ ಕಾರ್ಮಿಕರಿಗೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರಿಗೆ, ಆಸ್ತಿಗಳ ರಕ್ಷಣೆ ಮತ್ತು ಸ್ವತ ಸಮಸ್ಯೆಗಳ ನಿವಾರಣೆ ಸೇರಿದಂತೆ ಕನಿಷ್ಠ ಕೂಲಿ ಹಾಗೂ ಉದ್ಯೋಗ ಖಾತರಿಯನ್ನು ಒದಗಿಸುತ್ತಿದ್ದುದಾಗಿ ವಿವರಿಸಿದರು. ಹಿಂದೆಯೂ ಈ ಯೋಜನೆಯ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದರೂ, ಹೋರಾಟಗಳಿಂದ ಯೋಜನೆ ಯಥಾಸ್ಥಿತಿಯಲ್ಲಿ ಮುಂದುವರೆದಿತ್ತು. ಅಡಚಣೆ ಇದ್ದರೂ ಯೋಜನೆ […] - [ರಾಯಣ್ಣ ಸ್ಮರಣಾರ್ಥ ಗಾನಸಂಗಮ: ಭಾಗವಹಿಸಲು ನೋಂದಣಿ ಜ.23 ಕೊನೆ ದಿನ.](https://samagrasuddi.co.in/last-day-for-registration-to-participate-in-the-rayanna-memorial-ganasangam-is-january-23/): ರಾಯಣ್ಣ ಶ್ರೇಷ್ಠ ದೇಶಭಕ್ತ; ಜನರಲ್ಲಿ ದೇಶಭಕ್ತಿ ಕ್ಷೀಣ – ಮರುಬಿತ್ತನೆಗೆ ಜಾಗೃತಿ ಅಗತ್ಯ: ಸೇನೆ ಅಧ್ಯಕ್ಷೆ ಕವಿತಾ. ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ, ಜ.19: ಆಂಗ್ಲರು ದೇಶದ ಮೇಲೆ ದಾಳಿ ನಡೆಸಿ, ಸಂಪನ್ಮೂಲ ಲೂಟಿ ಜೊತೆಗೆ ರಾಜರುಗಳ ಮೇಲೆ ದಬ್ಬಾಳಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಲ್ಲುವುದು, ಜೈಲಿಗೆ ಹಾಕುವುದು ದುಷ್ಕøತ್ಯ ವಿರುದ್ಧ ಲಕ್ಷಾಂತರ ಮಂದಿ ಚಳವಳಿ ನಡೆಸಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಹೇಳಿದರು. ನಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶಭಕ್ತಿ-ಗಾನಸಂಗಮ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿ, ದೇಶಭಕ್ತರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವೀರ ಸಂಗೊಳ್ಳಿ ರಾಯಣ್ಣ ಬ್ರೀಟಿಷರ ವಿರುದ್ಧ ನಡೆಸಿದ ಹೋರಾಟ ರೋಮಾಂಚನ ಎಂದು ತಿಳಿಸಿದರು. ನಾಡು-ನುಡಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ರಾಯಣ್ಣ ಭಾರತದ ಶ್ರೇಷ್ಠ ದೇಶಭಕ್ತ. ಇಂತಹ ಸ್ವಾತಂತ್ರ್ಯ ಹೋರಾಟಗಾರನಿಗೆ ರಾಷ್ಟ್ರಮಟದಲ್ಲಿ ಗೌರವ ಸಲ್ಲಬೇಕಿದೆ. ಈ […] - [ಚಿತ್ರದುರ್ಗ: ಮಾಳಪ್ಪನಟ್ಟಿಯಲ್ಲಿ ಯಶಸ್ವಿಯಾಗಿ ನಡೆದ ಗಣ ಹೋಮ ಕಾರ್ಯಕ್ರಮ.](https://samagrasuddi.co.in/gana-homam-program-successfully-held-at-chitradurga-malappanatti/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 19 ಸಿರಿಗರೆ ಯೋಜನ ಕಚೇರಿ ವ್ಯಾಪ್ತಿಯ ಮಾಳಪ್ಪನಟ್ಟಿ ವಲಯದ ಮಾಳಪ್ಪನಟ್ಟಿ ಗ್ರಾಮದ ಮೈಲಾರಲಿಂಗೇಶ್ವರ ಸಮುದಾಯ ಭವನದಲ್ಲಿ ಸಾಮೂಹಿಕ ಗಣ ಹೋಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಕಾರ್ಯಕ್ರಮ ಗ್ರಾಮದ ಸುಭಿಕ್ಷೆಗಾಗಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿ ಹುರಳಿ ಬಸವರಾಜ್ ಮಾತನಾಡಿ, ಇಂದಿನ ಜನರು ಧರ್ಮದ ತಳಹದಿ ಮೇಲೆ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇಂದಿನ ಸಮಾಜದ ಸಂಕಿರ್ಣ ಸಂದರ್ಭದಲ್ಲಿ ಶಾಂತಿ ನೆಮ್ಮದಿ ಹಾಗೂ ಪ್ರಗತಿಯ ಸುಂದರ ಭವಿಷ್ಯಕ್ಕಾಗಿ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ. ಪೂಜೆ ಪುನಸ್ಕಾರ ದಾನ ಧರ್ಮ ಆಚರಣೆಗಳು ಮಕ್ಕಳ ಹಾಗೂ ಯುವ ಜನರಲ್ಲಿ ಸಂಸ್ಕಾರವನ್ನು ಬೆಳಸುವಲ್ಲಿ ಮಹತ್ವರವಾದ ಪಾತ್ರವನ್ನು ವಹಿಸುತ್ತವೆ ಎಂದ ಅವರು. ಆಧ್ಯಾತ್ಮಿಕತೆ ಹಾಗೂ ಪೋಷಕರ ಪಾತ್ರದ ಬಗ್ಗೆ ಮಕ್ಕಳ ಪೋಷಕರ ನಡುವಿನ ಸಂಬಂಧದ ಬಗ್ಗೆ ಮನಮುಟ್ಟುವಂತೆ ಫಲಾನುಭವಿಗಳಿಗೆ ತಿಳಿಸಿದರು. ಕಾರ್ಯಕ್ರಮದ […] - [ಕಬ್ಬು, ಗಾಳಿಪಟ, ಹಳ್ಳಿ ವೇಷಭೂಷಣ: ಪಾರ್ಶ್ವನಾಥ ವಿದ್ಯಾಸಂಸ್ಥೆಯಲ್ಲಿ ಸಂಕ್ರಾಂತಿ ಸಂಭ್ರಮ.](https://samagrasuddi.co.in/sugarcane-kite-village-costume-sankranti-celebration-at-parswanath-vidyasthanam/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 19 ಚಿತ್ರದುರ್ಗ ನಗರದ ಶ್ರೀ ಪಾರ್ಶ್ವನಾಥ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಮಕ್ಕಳಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಸಂಕ್ರಾಂತಿ ಸಂಭ್ರಮವನ್ನು ಆಚರಿಸಲಾಯಿತು. ಈ ಸಮಾರಂಭದಲ್ಲಿ ಮಕ್ಕಳು ಹಳ್ಳಿಯ ವೇಷವನ್ನು ಧರಿಸಿ, ಸಂಕ್ರಾಂತಿಯ ವಿಶೇಷವಾದ ಕಬ್ಬು, ಗೆಣಸು, ಸೇಂಗಾ, ಅವರೆಕಾಯಿ, ಬೆಲ್ಲಾ ಎಳ್ಳು, ಮಡಿಕೆಯಲ್ಲಿ ಹಾಲು ಕಾಯಿಸುವುದು, ಕಡ್ಲೆಗಿಡ, ಹುಲ್ಲು, ಕೃಷಿಕ ಸಮುದಾಯದ ಮೂಲವಾದ ನೇಗಿಲು, ಬೀಸುವುದು, ಕಟ್ಟುವುದು, ರಾಶಿ ಹಾಕುವುದು, ಹಸುವಿನ ಪೂಜೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಅನೇಕ ಹಾಡು, ನೃತ್ಯಗಳನ್ನು ಪ್ರದರ್ಶಿಸಿದರು ಹಾಗೆಯೇ ಹಬ್ಬದ ಮಹತ್ವವನ್ನು ಸಹ ಮಕ್ಕಳು ಸಂಭಾಷಣೆಯ ಮೂಲಕ ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಸುರೇಶ್‍ಕುಮಾರ್‍ ಸಿಸೋಡಿಯಾ, ಸಹ ಕಾರ್ಯದರ್ಶಿ ಸುರೇಶ್‍ ಪಟಿಯಾತ್ , ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ,ಪೋಷಕರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಶಾಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳು ವಿದವಿಧವಾದ ಗಾಳಿಪಟವನ್ನು ಹಾರಿಸಿ […] - [96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ಭಾಸ್ಕರ್ ಆಯ್ಕೆ.](https://samagrasuddi.co.in/bhaskar-elected-as-the-working-president-of-the-96th-shivanama-week/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 19 ನಗರದ ಕಬೀರಾನಂದ ಬಡಾವಣೆಯಲ್ಲಿನ ಶ್ರೀ ಕಬೀರಾನಂದಾಶ್ರಮದಲ್ಲಿ ಫೆ. 9 ರಿಂದ 15ರವರೆಗೆ ನಡೆಯಲಿರುವ 96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ನಗರಸಭೆಯ ಮಾಜಿ ಸದಸ್ಯರಾದ ಭಾಸ್ಕರ್‍ರವರನ್ನು ಆಯ್ಕೆ ಮಾಡಲಾಗಿದೆ. ಸೋಮವಾರ ಶ್ರೀ ಕಬೀರಾನಂದಾಶ್ರಮದ ಆವರಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ ಹಾಗೂ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಮತ್ತು ಸಮಾಜದ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ನಗರಸಭೆಯ ಮಾಜಿ ಸದಸ್ಯರಾದ ಭಾಸ್ಕರ್‍ರವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ ಹಿಂದಿನ ಕಾಲದಲ್ಲಿ ಸಣ್ಣದಾಗಿ ನಡೆಯುತ್ತಿದ್ದ ಶಿವನಾಮ ಸಪ್ತಾಹ ಇಂದಿನ ದಿನದಲ್ಲಿ ಅದ್ದೂರಿಯಾಗಿ, ವಿಜೃಂಭಣೆಯಿಂದ ನಡೆಯುತ್ತಿದೆ. ಆದರೆ ಇದು ಮಠಕ್ಕೆ ಹೊರೆಯಾಗುತ್ತಿದೆ ಇದರ ಬಗ್ಗೆ ಭಕ್ತಾಧಿಗಳು ಗಮನ ನೀಡಬೇಕಿದೆ […] - [ರೈತರ ಬೇಡಿಕೆ ಈಡೇರಿಸಿ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ರೈತರಿಂದ ಮನವಿ.](https://samagrasuddi.co.in/farmers-appeal-to-district-in-charge-minister-d-sudhakar-to-fulfill-the-demand-of-farmers/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 19 ಜಿಲ್ಲೆಯ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್‍ ಅವರನ್ನು ಮುತ್ತಿಗೆ ಹಾಕಿ ಆಗ್ರಹಿಸಲಾಯಿತು. ಜಿಲ್ಲೆಯಲ್ಲಿ ಅತಿವೃಷ್ಟಿಗೆ ಈರುಳ್ಳಿ ಸಂಪೂರ್ಣ ನಾಶವಾಗಿದ್ದು, ಬೆಳೆ ಪರಿಹಾರ ಕೇವಲ ಬೆರಳಣಿಕೆಯಷ್ಟು ಕೊಟ್ಟಿದ್ದು, ರೈತರಿಗೆ ಬಹಳ ಅನ್ಯಾಯವಾಗಿದೆ ಮತ್ತು ಅಲ್ಪಸ್ವಲ್ಪ ಬೆಳೆಗೆ ಬೆಲೆ ಇಲ್ಲದಿರುವುದದರಿಂದ ಖರೀದಿ ಕೇಂದ್ರವನ್ನು ತೆರೆಯಬೇಕೆಂದು ಮನವಿ ಕೊಟ್ಟಿದ್ದರೂ ಸಹ ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಮತ್ತು ಬೆಳೆ ವಿಮೆಯು ಸಹ ಬಾರದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಅನಾವೃಷ್ಟಿಗೆ ಶೇಂಗಾ ತೊಗರಿ ಸಂಪೂರ್ಣ ಬೆಳೆ ಹಾನಿಯಾಗಿದ್ದರೂ ಸಹ ಪರಿಹಾರವನ್ನು ಕೊಟ್ಟಿರುವುದಿಲ್ಲ ಮತ್ತು ಬೆಳೆ ವಿಮೆಯು ಸಹ ಬಂದಿರುವುದಿಲ್ಲ ಜಿಲ್ಲೆಯಲ್ಲಿ ಸಾಕಷ್ಟು ಮೆಕ್ಕೆಜೋಳವನ್ನು ಬೆಳೆದಿದ್ದರೂ ಸಹ ಸರಿಯಾದ ಸಮಯಕ್ಕೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೆ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ರಾಗಿ ಖರೀದಿ […] - [ಪೈ ರೋಲ್‌ನಿಂದ ರಾಮಾನುಜನ್ ಮಾಯಾಚೌಕವರೆಗೆ: 'ಗಣಿತಾಲಯ'ದಲ್ಲಿ ಮಕ್ಕಳ ಕಲಿಕೆ.](https://samagrasuddi.co.in/childrens-learning-in-mathematics-from-pie-roll-to-ramanujan-maya-chowk/): ಕಾಟವ್ವನಹಳ್ಳಿ ಶಾಲಾ ಮಕ್ಕಳಿಂದ ‘ಗಣಿತಾಲಯ’ದಲ್ಲಿ ವಿಶಿಷ್ಟ ಕಲಿಕೆ. ಸ್ಥಳ: ಗಣಿತಾಲಯ, ಚಳ್ಳಕೆರೆ ಗಣಿತ ವಿಷಯದ ಮೇಲಿನ ಭಯವನ್ನು ಹೋಗಲಾಡಿಸಿ, ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಕುತೂಹಲವನ್ನು ಬೆಳೆಸುವ ಉದ್ದೇಶದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಟವ್ವನಹಳ್ಳಿ ಶಾಲೆಯ ವಿದ್ಯಾರ್ಥಿಗಳು ದಿನಾಂಕ 17-01-2026 ರಂದು ಚಳ್ಳಕೆರೆ ತಾಲೂಕಿನ ಸುಸಜ್ಜಿತ **‘ಗಣಿತಾಲಯ’**ಕ್ಕೆ ಶೈಕ್ಷಣಿಕ ಭೇಟಿ ನೀಡಿದರು. ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಟಿ. ಹಾಗೂ ಶಿಕ್ಷಕಿಯರಾದ ಭಾರತಿ ಸಿ.ಎಸ್. ಮತ್ತು ಸುನಿತಾರಾಣಿ ಅವರ ಮಾರ್ಗದರ್ಶನದಲ್ಲಿ ಈ ಜ್ಞಾನವರ್ಧಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಗಣಿತದ ಅದ್ಭುತ ಪ್ರಾತ್ಯಕ್ಷಿಕೆಗಳು ಈ ಭೇಟಿಯ ವಿಶೇಷ ಆಕರ್ಷಣೆಯೆಂದರೆ, ಗಣಿತಾಲಯದ ನಿರ್ಮಾತೃ ಹಾಗೂ ಪ್ರಸಿದ್ಧ ಗಣಿತ ಸಂಪನ್ಮೂಲ ವ್ಯಕ್ತಿಯಾದ ನಾಗೇಶ್ ಐನ್ ಸ್ಟೈನ್ ಅವರು ಸ್ವತಃ ಮಕ್ಕಳಿಗೆ ಗಣಿತದ ರಹಸ್ಯಗಳನ್ನು ಸರಳವಾಗಿ ವಿವರಿಸಿದರು. ಅವರು ನೀಡಿದ ಪ್ರಮುಖ ಪ್ರಾತ್ಯಕ್ಷಿಕೆಗಳು ಹೀಗಿವೆ: ಗಣಿತಾಲಯದ ವಿನ್ಯಾಸ ಮತ್ತು ವಾತಾವರಣ ಗಣಿತಾಲಯದ ಹೊರಮೈಯಲ್ಲಿ ಅಳವಡಿಸಲಾದ ಅನಂತ (∞), ಪೈ (π) ಮತ್ತು ವಿವಿಧ ಜ್ಯಾಮಿತೀಯ ಆಕೃತಿಗಳ ವಿನ್ಯಾಸವು ಮಕ್ಕಳ […] - [ನಿತ್ಯ ಭವಿಷ್ಯ,19 ಜನವರಿ: ಇಂದು ಈ ರಾಶಿಯವರು ಬಂಧುಗಳ ಮನೆಯಲ್ಲಿ ಅನಿರೀಕ್ಷಿತವಾಗಿ ಭೋಜನ ಮಾಡುವಿರಿ.](https://samagrasuddi.co.in/daily-predictions-19th-january-today-this-rashi-will-have-an-unexpected-dinner-at-a-relatives-house/): ಜನವರಿ 19,​​ 2026ರ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶಿಶಿರ, ಚಾಂದ್ರ ಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಶ್ರವಣಾ ಯೋಗ : ವಜ್ರ, ಕರಣ : ಬವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 16 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08-19 – 09:45, ಯಮಗಂಡ ಕಾಲ 11:10 – 12:35, ಗುಳಿಕ ಕಾಲ 14:00 – 15:26 ಮೇಷ ರಾಶಿ: ಅಂತಸ್ತಿನ ವಿಚಾರದಲ್ಲಿ ನಿಮಗೇ ಅಸಮಾಧನ. ಪ್ರೇಮ ಜೀವನ ಸುಧಾರಿಸುತ್ತದೆ. ಆರ್ಥಿಕ ಪರಿಸ್ಥಿತಿಯೂ ಮೊದಲಿಗಿಂತ ಉತ್ತಮವಾಗಿರುತ್ತದೆ. ಬೇಡದ ಸಂಗತಿಗಳೇ ಹೆಚ್ಚು ತಲೆಯಲ್ಲಿ ಓಡಾಡಬಹುದು. ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಮೇಲೆ ಹಿತಶತ್ರುಗಳು ಆಕ್ರಮಣ […] - [Bigg Boss Kannada Season 12: ಗಿಲ್ಲಿ ನಟ ವಿನ್ನರ್, ರಕ್ಷಿತಾ ಶೆಟ್ಟಿ ರನ್ನರ್ ಅಪ್.](https://samagrasuddi.co.in/bigg-boss-kannada-season-12-gilli-actor-winner-rakshita-shetty-runner-up/): Bigg Boss Kannada 12 Winner: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಐತಿಹಾಸಿಕ ವಿಜಯ ಸಾಧಿಸಿದ್ದಾರೆ. 23 ಸ್ಪರ್ಧಿಗಳನ್ನು ಹಿಂದಿಕ್ಕಿ, ಕೋಟಿ ಮತಗಳನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೊದಲಿನ ಶೋಗಳಲ್ಲಿ ರನ್ನರ್ ಅಪ್ ಸ್ಥಾನದಿಂದ ಬೇಸರಗೊಂಡಿದ್ದ ಗಿಲ್ಲಿ, ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ 23 ಸ್ಪರ್ಧಿಗಳನ್ನು ಹಿಂದಿಕ್ಕಿ ಗಿಲ್ಲಿ ನಟ ವಿನ್ ಆಗಿದ್ದಾರೆ. ಗಿಲ್ಲಿ ಕೈನ ಎತ್ತೋ ಮೂಲಕ ಸುದೀಪ್ ವಿನ್ನರ್ ಘೋಷಣೆ ಮಾಡಿದರು.  ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. 40 ಕೋಟಿಗೂ ಅಧಿಕ ವೋಟ್ ಪಡೆದು ಗೆಲುವು ಸಾಧಿಸಿದ್ದಾರೆ ಗಿಲ್ಲಿ ನಟ. ಅವರ ಅಭಿಮಾನಿಗಳ ಆಸೆ ಈಡೇರಿದೆ. ರಕ್ಷಿತಾಗೆ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ಈ ಮೊದಲು ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಿಲ್ಲಿ ನಟ ಗಮನ ಸೆಳೆದರು. ಎಲ್ಲಾ ಶೋಗಲ್ಲಿ ಅವರು ರನ್ನರ್​ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಳ್ಳಬೇಕಿತ್ತು.ಇದನ್ನು ಗಿಲ್ಲಿ ಕೂಡ ಹೇಳಿಕೊಂಡಿದ್ದರು. […] - [ದಿನಕ್ಕೊಂದು ಶ್ಲೋಕ : ಭಗವದ್ಗೀತೆ – ಅಧ್ಯಾಯ 2 | (ಸಾಂಖ್ಯ ಯೋಗ) ಶ್ಲೋಕ 11| ಶ್ಲೋಕ 19](https://samagrasuddi.co.in/bhagavad-gita-chapter-2-samkhya-yoga-verse-11/): ಮೂಲ ಶ್ಲೋಕ (ಸಂಸ್ಕೃತ): ಅಶೋಚ್ಯಾನನ್ವಶೋಚಸ್ತ್ವಂಪ್ರಜ್ಞಾವಾದಾಂಶ್ಚ ಭಾಷಸೇ |ಗತಾಸೂನಗತಾಸೂಂಶ್ಚನಾನುಶೋಚಂತಿ ಪಂಡಿತಾಃ || ಕನ್ನಡ ಅರ್ಥ: ನೀನು ಶೋಕಿಸಬೇಕಾದವರಿಗಾಗಿ ಶೋಕಿಸುತ್ತಿರುವೆಯಲ್ಲದೆ, ಜ್ಞಾನಿಗಳಂತೆ ಮಾತಾಡುತ್ತಿದ್ದೀಯ.ಆದರೆ ಜ್ಞಾನಿಗಳು ಬದುಕಿರುವವರಿಗೂ, ಸತ್ತವರಿಗೂ ಶೋಕಿಸುವುದಿಲ್ಲ. ವಿವರಣೆ ಈ ಶ್ಲೋಕದಿಂದ ಶ್ರೀಕೃಷ್ಣನು ಅರ್ಜುನನಿಗೆ ನಿಜವಾದ ಆತ್ಮಜ್ಞಾನವನ್ನು ಬೋಧಿಸಲು ಆರಂಭಿಸುತ್ತಾನೆ. ದೇಹ ನಾಶವಾಗುವದಾದರೂ ಆತ್ಮ ಶಾಶ್ವತ ಎಂಬ ತತ್ವವನ್ನು ಇಲ್ಲಿ ಸೂಚಿಸುತ್ತಾನೆ. ಸಾಮಾನ್ಯವಾಗಿ ಮನುಷ್ಯನು ದೇಹದ ಮಟ್ಟದಲ್ಲೇ ಯೋಚಿಸಿ ದುಃಖಕ್ಕೆ ಒಳಗಾಗುತ್ತಾನೆ. ಆದರೆ ಪಂಡಿತರು ಆತ್ಮದ ಶಾಶ್ವತತೆಯನ್ನು ಅರಿತು, ಅನಗತ್ಯ ಶೋಕದಿಂದ ದೂರ ಇರುತ್ತಾರೆ. ಜೀವನದಲ್ಲಿ ಬದಲಾವಣೆ, ಮರಣ ಮತ್ತು ವಿಛೇದ ಸಹಜವಾದ ಸತ್ಯಗಳು. ಇವುಗಳನ್ನು ಆತ್ಮಜ್ಞಾನದಿಂದ ಒಪ್ಪಿಕೊಂಡಾಗ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಈ ಶ್ಲೋಕವು ದುಃಖವನ್ನು ತೊರೆದು ಜ್ಞಾನಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಇಂದಿನ ಸಂದೇಶ: ದೇಹದ ಮೇಲೆಲ್ಲ, ಆತ್ಮದ ಸತ್ಯವನ್ನು ಅರಿತಾಗ ಶೋಕ ಕರಗುತ್ತದೆ. - [​ಇಂದೋರ್‌ನಲ್ಲಿ ವಿರಾಟ್ ಅಬ್ಬರ: ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಶತಕ ಸಿಡಿಸಿ ಸಚಿನ್-ಸೆಹ್ವಾಗ್ ದಾಖಲೆ ಮುರಿದ ಕೊಹ್ಲಿ!](https://samagrasuddi.co.in/kohli-breaks-sachin-sehwags-historic-century-against-new-zealand-in-indoreu/): ​ಇಂದೋರ್: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸಿದ್ದಾರೆ. ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ, ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗುವ ಮೂಲಕ ಐತಿಹಾಸಿಕ ಶತಕವನ್ನು ದಾಖಲಿಸಿದ್ದಾರೆ. ​ನ್ಯೂಜಿಲೆಂಡ್ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದೃಢವಾಗಿ ನಿಂತ ಕೊಹ್ಲಿ, ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡುವ ಮೂಲಕ ಹಲವು ವಿಶ್ವದಾಖಲೆಗಳನ್ನು ಪುಡಿಗಟ್ಟಿದ್ದಾರೆ. ​ಆಪತ್ಬಾಂಧವನಾದ ಕೊಹ್ಲಿ ತಂಡದ ಮೊತ್ತ ಕೇವಲ 28 ರನ್‌ಗಳಿದ್ದಾಗ ನಾಯಕ ರೋಹಿತ್ ಶರ್ಮಾ ಔಟಾದರು. ನಂತರ 71 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ಗಳು ಉರುಳಿದ್ದವು. ಸೋಲು ಖಚಿತ ಎನ್ನುವ ಹಂತದಲ್ಲಿ ಕ್ರೀಸ್‌ಗೆ ಬಂದ ಕೊಹ್ಲಿ, ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಅವರೊಂದಿಗೆ 88 ರನ್‌ಗಳ ಅಮೂಲ್ಯ ಪಾಲುದಾರಿಕೆ ನೀಡಿದರು. ನಿತೀಶ್ ಮತ್ತು ಜಡೇಜಾ ಔಟಾದ ಬಳಿಕ ಹರ್ಷಿತ್ ರಾಣಾ […] - [ಒತ್ತಡದಿಂದ ದೇಹದ ಮೇಲೆ ಪರಿಣಾಮ ಮತ್ತು ತಡೆ ಕ್ರಮಗಳು.](https://samagrasuddi.co.in/effects-of-stress-on-the-body-and-preventive-measures/): ಒತ್ತಡವನ್ನು ಹಗುರವಾಗಿ ತೆಗೆದುಕೊಳ್ಳುವವರು ಅಥವಾ ಒತ್ತಡದಿಂದ ಏನೂ ಆಗುವುದಿಲ್ಲ ಎಂದು ಅಂದುಕೊಳ್ಳುವವರು ಈ ಸಂದೇಶವನ್ನು ಗಮನಿಸಬೇಕು. ನಿರಂತರ ಒತ್ತಡವು ದೇಹದಲ್ಲಿ ‘ಕಾರ್ಟಿಸೋಲ್’ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳು ವಿಷಕ್ಕಿಂತಲೂ ಅಪಾಯಕಾರಿಯಾಗಿದ್ದು, ಹೃದಯ, ಮೆದುಳು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡಬಹುದು. ಒತ್ತಡದಿಂದ ದೇಹದಲ್ಲಿ ಸಂಭವಿಸುವ ಪ್ರಮುಖ ಬದಲಾವಣೆಗಳು: ಒತ್ತಡವನ್ನು ತಡೆಗಟ್ಟಲು ಸಲಹೆಗಳು: ಒತ್ತಡ ಕಡಿಮೆ ಮಾಡಲು ಪಾಲಿಸಬಹುದಾದ ಅಭ್ಯಾಸಗಳು: - [ಜನವರಿ 19: ಇತಿಹಾಸದ ಪುಟಗಳಲ್ಲಿ ಇಂದಿನ ಮಹತ್ವ, ಪ್ರಮುಖ ಘಟನೆಗಳು ಮತ್ತು ವಿಶೇಷತೆಗಳು](https://samagrasuddi.co.in/january-19-todays-significance-important-events-and-specials-in-the-history-pages/): ಜನವರಿ 19 ಕೇವಲ ಕ್ಯಾಲೆಂಡರ್‌ನ ಒಂದು ದಿನಾಂಕವಲ್ಲ. ಭಾರತದ ರಾಜಕೀಯ ಇತಿಹಾಸದ ಮಹತ್ವದ ತಿರುವು, ವೀರ ಯೋಧನ ಸ್ಮರಣೆ ಮತ್ತು ವಿಪತ್ತು ನಿರ್ವಹಣಾ ಪಡೆಯ ಸೇವೆಯನ್ನು ನೆನಪಿಸುವ ದಿನವಾಗಿದೆ. ಇಂದಿನ ದಿನದ ಪ್ರಮುಖ ಐತಿಹಾಸಿಕ ಘಟನೆಗಳು ಮತ್ತು ವಿಶೇಷತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ​1. ಭಾರತದ ರಾಜಕೀಯ ತಿರುವು: ಇಂದಿರಾ ಗಾಂಧಿ ಯುಗಾರಂಭ (1966) ​ಭಾರತದ ರಾಜಕೀಯ ಇತಿಹಾಸದಲ್ಲಿ ಜನವರಿ 19 ಅತ್ಯಂತ ಮಹತ್ವದ ದಿನ. 1966ರಲ್ಲಿ ಇದೇ ದಿನದಂದು ಇಂದಿರಾ ಗಾಂಧಿಯವರು ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾದರು. ಇದು ಅವರು ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಮತ್ತು ದೇಶದ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಲು ದಾರಿ ಮಾಡಿಕೊಟ್ಟಿತು. ​2. ಮೇವಾರ್ ವೀರನಿಗೆ ನಮನ: ಮಹಾರಾಣಾ ಪ್ರತಾಪ್ ಪುಣ್ಯತಿಥಿ (1597) ​ಮೊಘಲರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಮೇವಾರ್‌ನ ರಜಪೂತ ರಾಜ ಮಹಾರಾಣಾ ಪ್ರತಾಪ್ ಅವರ ಪುಣ್ಯತಿಥಿ ಇಂದು. ಹಲ್ದಿಘಾಟಿ ಕದನದಲ್ಲಿ ಅವರ ಶೌರ್ಯ ಮತ್ತು ಸ್ವಾಭಿಮಾನದ […] - [ಚಿಪ್ಸ್ ಪ್ಯಾಕೆಟ್‌ನಲ್ಲಿ ಅರ್ಧದಷ್ಟು ಗಾಳಿ ತುಂಬಿರಲು ಅಸಲಿ ಕಾರಣವೇನು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ](https://samagrasuddi.co.in/do-you-know-the-real-reason-why-a-packet-of-chips-is-half-full-of-air-here-is-an-interesting-information/): ​ಚಿಪ್ಸ್ ಅಥವಾ ಲೇಸ್ (Lays) ಅಂದರೆ ಸಾಕು, ಪುಟಾಣಿ ಮಕ್ಕಳ ಕಿವಿ ನೆಟ್ಟಗಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಬಾಯಿ ಚಪ್ಪರಿಸಿ ಸವಿಯುವ ತಿನಿಸು ಇದು. ಆದರೆ, ನೀವು ಗಮನಿಸಿರಬಹುದು, ದೊಡ್ಡ ಪ್ಯಾಕೆಟ್ ತೆಗೆದುಕೊಂಡರೂ ಅದರಲ್ಲಿ ಚಿಪ್ಸ್ ಪ್ರಮಾಣ ಮಾತ್ರ ತೀರಾ ಕಡಿಮೆಯಿರುತ್ತದೆ! ​ಪ್ಯಾಕೆಟ್ ತುಂಬ ಬರೀ ಗಾಳಿಯೇ ಇರುತ್ತಲ್ಲಾ ಎಂದು ಗ್ರಾಹಕರು ಗೊಣಗುವುದು ಸಾಮಾನ್ಯ. ಕಂಪನಿಯವರು ಲಾಭ ಮಾಡಲು ಅಥವಾ ಜನರನ್ನು ಮರುಳು ಮಾಡಲು ಹೀಗೆ ಮಾಡುತ್ತಾರೆ ಎಂದು ನೀವು ಅಂದುಕೊಂಡಿದ್ದರೆ, ಅದು ತಪ್ಪು. ಚಿಪ್ಸ್ ಪ್ಯಾಕೆಟ್‌ನಲ್ಲಿ ಗಾಳಿ ತುಂಬುವುದರ ಹಿಂದೆ ಒಂದು ವೈಜ್ಞಾನಿಕ ಮತ್ತು ಅನಿವಾರ್ಯ ಕಾರಣವಿದೆ. ಅದು ಏನೆಂದು ತಿಳಿಯೋಣ ಬನ್ನಿ. ​1. ಇದು ಸಾಮಾನ್ಯ ಗಾಳಿಯಲ್ಲ, ‘ಸಾರಜನಕ’ (Nitrogen) ​ನಾವು ಉಸಿರಾಡುವ ಸಾಮಾನ್ಯ ಗಾಳಿಯನ್ನು ಚಿಪ್ಸ್ ಪ್ಯಾಕೆಟ್‌ನಲ್ಲಿ ತುಂಬಿರುವುದಿಲ್ಲ. ಬದಲಾಗಿ, ಅದರಲ್ಲಿ ಸಾರಜನಕ (Nitrogen) ಅನಿಲವನ್ನು ತುಂಬಲಾಗಿರುತ್ತದೆ. ​2. ಚಿಪ್ಸ್ ಹಾಳಾಗದಂತೆ ತಡೆಯಲು (Freshness) ​ಒಂದು ವೇಳೆ ಪ್ಯಾಕೆಟ್‌ನಲ್ಲಿ ಸಾಮಾನ್ಯ ಆಮ್ಲಜನಕವಿದ್ದರೆ, ಅದು ಎಣ್ಣೆಯಲ್ಲಿ ಕರಿದ […] - [​ಇಂದೋರ್‌ನಲ್ಲಿ ಕಿವೀಸ್ ಐತಿಹಾಸಿಕ ಜಯ: ಭಾರತದ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!](https://samagrasuddi.co.in/kiwis-historic-win-in-indore-new-zealand-win-odi-series-2-1-against-india/): ​ಇಂದೋರ್: ಇಲ್ಲಿನ ಹೊಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರೋಚಕ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಭಾರತವನ್ನು 41 ರನ್‌ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ 2-1 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವ ಮೂಲಕ ಭಾರತದ ನೆಲದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಆರಂಭಿಕ ಆಘಾತ ಮತ್ತು ಚೇತರಿಕೆ ​ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ತಂಡದ ಆರಂಭವು ಅತ್ಯಂತ ಕಳಪೆಯಾಗಿತ್ತು. ಕೇವಲ 5 ರನ್ ಗಳಿಸುವಷ್ಟರಲ್ಲೇ ಪ್ರಮುಖ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಈ ಹಂತದಲ್ಲಿ ಒಂದಾದ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ​ಮಿಚೆಲ್ 131 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 137 ರನ್ ಗಳಿಸಿದರೆ, ಅವರಿಗೆ ಸಾಥ್ ನೀಡಿದ ಫಿಲಿಪ್ಸ್ 88 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 106 ರನ್ ಬಾರಿಸಿದರು. ಇವರಿಬ್ಬರ ಶತಕದ ನೆರವಿನಿಂದ ನ್ಯೂಜಿಲೆಂಡ್ ನಿಗದಿತ […] - [ಸಜ್ಜನಕೆರೆ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ.](https://samagrasuddi.co.in/sajjanakere-national-road-safety-week-program-launched/): ಸಜ್ಜನಕೆರೆ/ಚಿತ್ರದುರ್ಗ: ಜ.18 ದಿನಾಂಕ 17/01/2026ರ ಶನಿವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಸಜ್ಜನಕೆರೆ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಸಂಭ್ರಮ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ವಿಶೇಷ ಮಾಹಿತಿ ನೀಡಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಮಾತನಾಡಿ ಪ್ರತಿಯೊಬ್ಬರೂ ವಾಹಗಳನ್ನು ಚಲಾಯಿಸುವಾಗ ಸ್ವಯಂ ಶಿಸ್ತು ಮತ್ತು ಜವಾಬ್ದಾರಿಯೊಂದಿಗೆ ನಿಧಾನಗತಿಯಲ್ಲಿ ರಸ್ತೆ ನಿಯಮಗಳ ಪಾಲನೆಯೊಂದಿಗೆ ವಾಹನ ಅಪಘಾತಗಳನ್ನು ಕಡಿಮೆ ಮಾಡಿ ನಮ್ಮ ಹಾಗೂ ಇತರರ ಜೀವನವನ್ನು ಸುರಕ್ಷಿತವಾಗಿರಿಸೋಣ ಎಂದು ಮಕ್ಕಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು. ದೈಹಿಕ ಶಿಕ್ಷಕರಾದ ಸತೀಶ್ ರಸ್ತೆ ನಿಯಮಗಳ ಬಗ್ಗೆ ಮಾಹಿತಿ ನೀಡುತ್ತಾ ಮಕ್ಕಳು ರಸ್ತೆ ದಾಟುವ ಮುಂಚೆ ನಿಂತು ಬಲಕ್ಕೆ-ಎಡಕ್ಕೆ-ಮತ್ತೊಮ್ಮೆ ಬಲಕ್ಕೆ ನೋಡಿ, ಸುರಕ್ಷಿತವೆಂದು ಖಚಿತಪಡಿಸಿಕೊಂಡು ಮಾತ್ರ ದಾಟಿಬೇಕು ಚಿಕ್ಕ ಮಕ್ಕಳಿಗೆ ರಸ್ತೆ ನಿಯಮಗಳು ಅರ್ಥವಾಗದ ಕಾರಣ ಸಾಧ್ಯವಾದಷ್ಟು ಹಿರಿಯ ಮಾರ್ಗದರ್ಶನದಲ್ಲಿ ರಸ್ತೆಯಲ್ಲಿ ನಡೆದಾಡುವುದು ಸೂಕ್ತ […] - [ಕೆಎಸ್‌ಸಿಸಿಎಫ್ ನೇಮಕಾತಿ 2026: ಪಿಯುಸಿ, ಪದವಿ, ಡಿಪ್ಲೊಮಾ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ.](https://samagrasuddi.co.in/ksccf-recruitment-2026-job-opportunity-for-puc-graduate-diploma-candidates/): ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ (ಕೆಎಸ್‌ಸಿಸಿಎಫ್) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 34 ಹುದ್ದೆಗಳ ನೇಮಕಾತಿ ನಡೆಯಲಿದೆ. ಹುದ್ದೆಗಳ ವಿವರ ವಿದ್ಯಾರ್ಹತೆ ವಯೋಮಿತಿ ಅರ್ಜಿ ಸಲ್ಲಿಕೆ ವಿಧಾನ ಆಯ್ಕೆ ಪ್ರಕ್ರಿಯೆ ಪ್ರಮುಖ ದಿನಾಂಕಗಳು ಹೆಚ್ಚಿನ ಮಾಹಿತಿಗೆ ಈ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗಾಗಿ  virtualofficeerp.com/ksccf2026 ವೆಬ್‌ಸೈಟ್‌ಗೆ ಭೇಟಿ ನೀಡಬಹುದು. - [ಭೀಮಣ್ಣ ಖಂಡ್ರೆ ಹೋರಾಟದ ರಾಜಕಾರಣಿ: ಮಾಜಿ ಸಚಿವ ಎಚ್. ಆಂಜನೇಯ.](https://samagrasuddi.co.in/bhimanna-khandre-struggle-politician-former-minister-h-anjaneya/): ಚಿತ್ರದುರ್ಗ ಜ.18 : ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಬದುಕನ್ನೇ ಅರ್ಪಿಸಿದ್ದ ಭೀಮಣ್ಣ ಖಂಡ್ರೆ, ಸ್ವತಂತ್ರ ಭಾರತದಲ್ಲೂ ಚಳವಳಿ ಮುಂದುವರಿಸಿದ ಅಪರೂಪದ ಜನನಾಯಕ ಎಂದು ಮಾಜಿ ಸಚಿವ ಎಚ್.ಆಂಜನೇಯ ಬಣ್ಣಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಭೀಮಣ್ಣ ಖಂಡ್ರೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ರಾಜ್ಯ, ದೇಶದಲ್ಲಿ ಅನೇಕ ರಾಜಕಾರಣಿಗಳು ಆಡಳಿತ ನಡೆಸಿ ಕಣ್ಮರೆ ಆಗಿದ್ದಾರೆ. ಆದರೆ, ಭೀಮಣ್ಣ ಖಂಡ್ರೆ ಅಗಲಿಕೆ ಬಳಿಕವೂ ಜೀವಂತವಾಗಿ ಉಳಿಯಲಿದ್ದಾರೆ ಎಂದರು. ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ದೇಶಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಶ್ರಮಿಸಿದ ಖಂಡ್ರೆ ಅವರು, ಬ್ರಿಟಿಷರ ಮುಕ್ತ ಭಾರತದಲ್ಲಿನ ಅಸಮಾನತೆ ವಿರುದ್ಧ ನಿರಂತರ  ಹೋರಾಟ ನಡೆಸಿದ್ದು ಸ್ಮರಣೀಯ ಎಂದು ತಿಳಿಸಿದರು. ಹೈದರಬಾದ್ ಕರ್ನಾಟಕಕ್ಕೆ ಅನುದಾನ, ಅಭಿವೃದ್ಧಿ ವಿಷಯದಲ್ಲಿ ಆಗುತ್ತಿದ್ದ ಅನ್ಯಾಯದ ವಿರುದ್ಧ ಸಿಡಿದೆದ್ದು ತನ್ನ ಜೀವ ಇರುವವರೆಗೂ ಹೋರಾಟ ನಡೆಸಿದ್ದು ಮಾದರಿ. ಮೈಸೂರು ಭಾಗಕ್ಕೆ ಹೆಚ್ಚು ಅನುದಾನ, ಅಭಿವೃದ್ಧಿಗೆ ಮನ್ನಣೆ ನೀಡುವುದು, ಇತರೆ ಪ್ರದೇಶಗಳನ್ನು ಕಡೆಗಣಿಸುವುದನ್ನು ಖಂಡ್ರೆ ಸದಾ ವಿರೋಧಿಸುತ್ತಿದ್ದರು. ವಿಧಾನಸಭೆ […] - [ವಿಜಯೋತ್ಸವ 2026: ಪೋಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲುದಾರರು – ಅಪರಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ.](https://samagrasuddi.co.in/vijayotsava-2026-parents-are-partners-in-all-round-development-of-children-sub-district-officer-bt-kumaraswamy/): ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ – ಶಾಲಾ ವಾರ್ಷಿಕೋತ್ಸವ, ವಿಜಯೋತ್ಸವ 2026. ಚಿತ್ರದುರ್ಗ ಜ.18: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವತಿಯಿಂದ 2025–26ನೇ ಸಾಲಿನ “ಶಾಲಾ ವಾರ್ಷಿಕೋತ್ಸವ, ವಿಜಯೋತ್ಸವ 2026” ಕಾರ್ಯಕ್ರಮವನ್ನು ದಿನಾಂಕ 17.01.2026ರ ಶನಿವಾರ ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ. ಸಮುದಾಯ ಭವನದಲ್ಲಿ ಭವ್ಯವಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆಯ ಜೊತೆಗೆ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸಿದರೆ ಪೋಷಕರ ಜವಾಬ್ದಾರಿ ಮುಗಿದಂತಲ್ಲ. ಮಕ್ಕಳ ವಿದ್ಯಾಭ್ಯಾಸ, ಸಂಸ್ಕಾರ, ಶಿಸ್ತಿನ ಬೆಳವಣಿಗೆಯಲ್ಲಿ ಪೋಷಕರು ಶಾಲೆಯೊಂದಿಗೆ ಕೈಜೋಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜದಲ್ಲಿ ಮಕ್ಕಳು ಉತ್ತಮ ಸಂಸ್ಕಾರವಂತರಾಗಬೇಕಾದರೆ ಶಾಲೆ ಮತ್ತು ಪೋಷಕರು ಎರಡೂ ಸೇರಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು. ಧಾರವಾಡದ ವಿಸ್ತಾರ್ ಜಿಂದಗಿ ಹ್ಯೂಮನ್ ಮೈಂಡ್‌ಸೆಟ್ ಕೋಚ್ ಮಹೇಶ್ ಮಾಸಾಲ್ ಮಾತನಾಡಿ, ಇಂದಿನ ಪೋಷಕರು ಕೇವಲ ಫಲಿತಾಂಶಗಳತ್ತ ಹೆಚ್ಚು ಗಮನ ಹರಿಸುವ ಮನೋಭಾವ ಹೊಂದಿದ್ದಾರೆ. ಈ ದೃಷ್ಟಿಕೋನದಲ್ಲಿ […] - [ದೇಹದ ಮೇಲೆ ಹುಟ್ಟುಮಚ್ಚೆಗಳು ಏಕೆ ಬರುತ್ತವೆ? ಯಾವಾಗ ಅವು ಅಪಾಯಕಾರಿಯಾಗಬಹುದು?](https://samagrasuddi.co.in/why-moles-appear-on-the-body-when-they-can-be-dangerous/): ದೇಹದ ಮೇಲೆ ಹುಟ್ಟುಮಚ್ಚೆಗಳು (Moles) ಇರುವುದು ಬಹುತೇಕ ಜನರಲ್ಲಿ ಸಾಮಾನ್ಯ. ಕೆಲವರಿಗೆ ಮಚ್ಚೆಗಳು ಸೌಂದರ್ಯದ ಚಿಹ್ನೆಯಾಗಿರಬಹುದು, ಇನ್ನು ಕೆಲವರಿಗೆ ಅಸಹಜವಾಗಿ ಕಾಣಿಸಬಹುದು. ಆದರೆ ಇದ್ದಕ್ಕಿದ್ದಂತೆ ಹೊಸ ಮಚ್ಚೆಗಳು ಕಾಣಿಸಿಕೊಳ್ಳುವುದು ಅಥವಾ ಹುಟ್ಟಿನಿಂದ ಇರುವ ಮಚ್ಚೆಗಳು ಗಾತ್ರದಲ್ಲಿ, ಬಣ್ಣದಲ್ಲಿ ಬದಲಾವಣೆ ಕಾಣಿಸಿದರೆ ಆತಂಕ ಉಂಟಾಗುವುದು ಸಹಜ. ಸಣ್ಣ ಮಚ್ಚೆ ಎಂದು ನಿರ್ಲಕ್ಷ್ಯ ಮಾಡುವ ಹಲವಾರು ಸಂದರ್ಭಗಳಲ್ಲಿ, ಅವು ಮುಂದೊಂದು ದಿನ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಯೂ ಇದೆ. ಹಾಗಾದರೆ ಮಚ್ಚೆಗಳು ಎಂದರೇನು? ಅವು ಏಕೆ ಬೆಳೆಯುತ್ತವೆ? ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು? ಎಂಬುದನ್ನು ತಿಳಿದುಕೊಳ್ಳೋಣ. ಮಚ್ಚೆ ಎಂದರೇನು? ನಮ್ಮ ಚರ್ಮದ ಬಣ್ಣಕ್ಕೆ ಕಾರಣವಾಗುವ ವರ್ಣದ್ರವ್ಯವೇ ಮೆಲನಿನ್. ಚರ್ಮದ ಮೇಲಿರುವ ಮೆಲನೋಸೈಟ್ಸ್ ಎಂಬ ಜೀವಕೋಶಗಳು ಒಂದೇ ಸ್ಥಳದಲ್ಲಿ ಹೆಚ್ಚು ಪ್ರಮಾಣದಲ್ಲಿ ಒಟ್ಟುಗೂಡಿ ಮೆಲನಿನ್ ಉತ್ಪಾದಿಸಿದಾಗ, ಚರ್ಮದ ಮೇಲೆ ಸಣ್ಣ ಅಥವಾ ದೊಡ್ಡ ಚುಕ್ಕೆಯಂತೆ ಮಚ್ಚೆಗಳು ಕಾಣಿಸುತ್ತವೆ. ಈ ಮಚ್ಚೆಗಳು: ದೇಹದಲ್ಲಿ ಮಚ್ಚೆಗಳು ಹೆಚ್ಚಾಗಲು ಕಾರಣಗಳೇನು? ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹದಲ್ಲಿ 10ರಿಂದ 40 ಮಚ್ಚೆಗಳು […] - [ಭಾರತ vs ನ್ಯೂಜಿಲೆಂಡ್ ಹೈ-ವೋಲ್ಟೇಜ್ ಕದನ: ಇಂದೋರ್‌ನಲ್ಲಿ ಸರಣಿ ನಿರ್ಧಾರ; ಗಿಲ್ ಪಡೆಗೆ ಅಗ್ನಿಪರೀಕ್ಷೆ!](https://samagrasuddi.co.in/india-vs-new-zealand-high-voltage-battle-series-decider-in-indore-test-for-gill-force/): ​ಇಂದೋರ್: ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಗೆದ್ದು ಬೀಗುತ್ತಿರುವ ಟೀಮ್ ಇಂಡಿಯಾ, ಇದೀಗ ಮತ್ತೊಂದು ಟ್ರೋಫಿಗೆ ಮುತ್ತಿಡಲು ಸಜ್ಜಾಗಿದೆ. ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ರೋಚಕ ಘಟ್ಟವನ್ನು ತಲುಪಿದ್ದು, ಸರಣಿಯ ನಿರ್ಣಾಯಕ ಹಾಗೂ ಅಂತಿಮ ಪಂದ್ಯಕ್ಕೆ ಮಧ್ಯಪ್ರದೇಶದ ಇಂದೋರ್ ವೇದಿಕೆಯಾಗಲಿದೆ. ​ಈಗಾಗಲೇ ನಡೆದಿರುವ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದು ಸಮಬಲ ಸಾಧಿಸಿವೆ. ಹೀಗಾಗಿ ಭಾನುವಾರ ನಡೆಯಲಿರುವ ಮೂರನೇ ಪಂದ್ಯವು ‘ಫೈನಲ್’ ಸ್ವರೂಪವನ್ನು ಪಡೆದುಕೊಂಡಿದೆ. ​ವರ್ಷದ ಮೊದಲ ಸರಣಿ ಗೆಲುವಿನ ತವಕ ​ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು 2026ರ ವರ್ಷದ ಮೊದಲ ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸುವ ಇರಾದೆಯನ್ನು ಹೊಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಗೆಲುವು ತಂಡಕ್ಕೆ ಹೊಸ ಚೈತನ್ಯ ನೀಡಿದೆ. ಆದರೆ, ನ್ಯೂಜಿಲೆಂಡ್ ತಂಡವು ಸುಲಭದ ಎದುರಾಳಿಯಲ್ಲ ಎಂಬುದು ಕಳೆದ ಪಂದ್ಯದಲ್ಲಿ ಸಾಬೀತಾಗಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಗೆದ್ದು, ಮುಂಬರುವ ಟಿ20 ಸರಣಿಗೂ […] - [ದಿನಕ್ಕೊಂದು ಶ್ಲೋಕ: ಭಗವದ್ಗೀತೆ – ಅಧ್ಯಾಯ 1(ಅರ್ಜುನ ವಿಷಾದ ಯೋಗ) | ಶ್ಲೋಕ 18](https://samagrasuddi.co.in/a-shloka-a-day-bhagavad-gita-chapter-1-arjuna-vishad-yoga-shloka-18/): ಶ್ಲೋಕ ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ॥(ಭಗವದ್ಗೀತೆ – ಅಧ್ಯಾಯ 18, ಶ್ಲೋಕ 78) ಅರ್ಥ ಯೋಗೇಶ್ವರನಾದ ಶ್ರೀಕೃಷ್ಣನು ಇರುವ ಜಾಗದಲ್ಲಿ, ಧನುರ್ಧಾರಿಯಾದ ಅರ್ಜುನನು ಇರುವ ಕಡೆಗೆ, ಅಲ್ಲಿ ಸದಾ ಐಶ್ವರ್ಯ, ವಿಜಯ, ಸಮೃದ್ಧಿ ಮತ್ತು ಧರ್ಮನಿಷ್ಠ ನೀತಿ ಖಚಿತವಾಗಿ ನೆಲೆಸಿರುತ್ತದೆ — ಇದು ನನ್ನ ದೃಢ ನಂಬಿಕೆ. ವಿವರಣೆ ಭಗವದ್ಗೀತೆಯ ಅಂತಿಮ ಶ್ಲೋಕವು ಸಂಪೂರ್ಣ ಗೀತೆಯ ಸಾರವನ್ನು ಸಾರುತ್ತದೆ. ದೇವತ್ವದ ಸಂಕೇತವಾದ ಶ್ರೀಕೃಷ್ಣ ಮತ್ತು ಕರ್ತವ್ಯನಿಷ್ಠೆಯ ಪ್ರತೀಕವಾದ ಅರ್ಜುನ ಒಂದಾಗಿರುವಲ್ಲಿ ಧರ್ಮ ಮತ್ತು ವಿಜಯ ಅನಿವಾರ್ಯ. ಜೀವನದಲ್ಲೂ ಸಹ, ಜ್ಞಾನ (ಕೃಷ್ಣ) ಮತ್ತು ಪ್ರಯತ್ನ (ಅರ್ಜುನ) ಒಂದಾದಾಗ ಯಶಸ್ಸು ಖಂಡಿತ. ಕೇವಲ ಶಕ್ತಿ ಅಥವಾ ಕೇವಲ ಜ್ಞಾನ ಸಾಕಾಗದು — ಇವೆರಡರ ಸಮನ್ವಯವೇ ಸಾರ್ಥಕ ಬದುಕಿನ ಮಾರ್ಗ. ಧರ್ಮದ ಮಾರ್ಗವನ್ನು ಅನುಸರಿಸಿ, ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದರೆ, ಜೀವನದಲ್ಲಿ ಐಶ್ವರ್ಯ, ಶಾಂತಿ ಮತ್ತು ಸಮೃದ್ಧಿ ಸ್ವಯಂ ಲಭಿಸುತ್ತವೆ ಎಂಬುದನ್ನು ಈ ಶ್ಲೋಕ ತಿಳಿಸುತ್ತದೆ. […] - [ನಿತ್ಯ ಭವಿಷ್ಯ 18 ಜನವರಿ 2026: ಇಂದು ಈ ರಾಶಿಯವರ ಆದಾಯದ ಮೂಲ ಹೆಚ್ಚಾಗಲಿದೆ.](https://samagrasuddi.co.in/daily-prediction-18-january-2026-today-the-source-of-income-for-this-zodiac-sign-will-increase/): ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ ಭಾನುವಾರ ಗುರಿ ಬದಲಾವಣೆ, ಧಾರ್ಮಿಕ ಕಾರ್ಯ, ವಿವಾದ, ಆಪ್ತರ ಭೇಟಿ, ಅನವಶ್ಯಕ ಖರೀದಿ ಇವೆಲ್ಲ ಇಂದಿನ ವಿಶೇಷ. ಜನವರಿ 18,​​ 2026ರ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಮಕರ, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಉತ್ತರಾಷಾಢ ಯೋಗ : ಹರ್ಷಣ, ಕರಣ : ನಾಗವಾನ್, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 15 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16-50 – 18:16, ಯಮಗಂಡ ಕಾಲ 12:35 – 14:00, ಗುಳಿಕ ಕಾಲ 15:25 – 16:50 ಮೇಷ ರಾಶಿ: […] - [ಇಂಜಿನಿಯರಿಂಗ್ ಪದವೀಧರರಿಗೆ DRDO ಸುವರ್ಣಾವಕಾಶ: ಬೆಂಗಳೂರಿನಲ್ಲಿ ವಾಕ್–ಇನ್ ಇಂಟರ್‌ವ್ಯೂ!](https://samagrasuddi.co.in/drdo-golden-opportunity-for-engineering-graduates-walk-in-interview-in-bangalore/): ಬೆಂಗಳೂರು: ಇಂಜಿನಿಯರಿಂಗ್ ಪದವೀಧರರಿಗೆ ಕರ್ನಾಟಕದಲ್ಲೇ ಪ್ರತಿಷ್ಠಿತ ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ದೊರೆತಿದೆ. ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಗೆ ಸೇರಿದ ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ (CABS) ತನ್ನಲ್ಲಿ ಖಾಲಿ ಇರುವ ಜ್ಯೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 10 ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ವಾಕ್–ಇನ್ ಇಂಟರ್‌ವ್ಯೂ ಮೂಲಕ ನಡೆಯಲಿದೆ. ನೇಮಕಾತಿ ವಿವರಗಳು ವಿದ್ಯಾರ್ಹತೆ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದBE / B.Tech ಅಥವಾ ME / M.Tech ಪದವಿಯನ್ನು ಪೂರ್ಣಗೊಳಿಸಿರಬೇಕು. ವಯೋಮಿತಿ ಆಯ್ಕೆ ಪ್ರಕ್ರಿಯೆ ವೇತನ ವಿವರ ಅರ್ಜಿ ಸಲ್ಲಿಸುವ ವಿಧಾನ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ,ಡಿಆರ್‌ಡಿಓ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದು,ಅರ್ಜಿಯನ್ನು ಇಮೇಲ್ ಮೂಲಕ ಕಳುಹಿಸಬೇಕು. […] - [CCL 2026: ಪಂಜಾಬ್ ಎದುರು ಕರ್ನಾಟಕ ಬುಲ್ಡೋಜರ್ಸ್ ಘರ್ಜನೆ; ಕರಣ್ ಆರ್ಯನ್ ಅಬ್ಬರಕ್ಕೆ ಶರಣಾದ 'ದಿ ಶೇರ್'!](https://samagrasuddi.co.in/ccl-2026-vs-punjab-karnataka-bulldozers-roar-karan-aryan-surrenders-the-share/): ​ಐಪಿಎಲ್‌ನಷ್ಟೇ ರೋಚಕತೆ ಸೃಷ್ಟಿಸಿರುವ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (CCL) 2026ಕ್ಕೆ ವಿಶಾಖಪಟ್ಟಣಂನಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ, ತನ್ನ ಮೊದಲ ಪಂದ್ಯದಲ್ಲೇ ಸಂಘಟಿತ ಆಟ ಪ್ರದರ್ಶಿಸಿ ಪಂಜಾಬ್ ದಿ ಶೇರ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ​ವಿಶಾಖಪಟ್ಟಣಂನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕರ್ನಾಟಕ ತಂಡವು ಪಂಜಾಬ್ ವಿರುದ್ಧ 31 ರನ್‌ಗಳ ಅಧಿಕಾರಯುತ ಗೆಲುವು ದಾಖಲಿಸಿದೆ. ಆರಂಭಿಕ ಆಘಾತ ಮತ್ತು ದಕ್ಷ್ ಸಿಂಗ್ ಹ್ಯಾಟ್ರಿಕ್ ​ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಪಂಜಾಬ್ ಬೌಲರ್ ದಕ್ಷ್ ಸಿಂಗ್ 4ನೇ ಓವರ್‌ನಲ್ಲಿ ಅಕ್ಷರಶಃ ಬೆಂಕಿ ಚೆಂಡುಗಳನ್ನು ಎಸೆದರು. ಡಾರ್ಲಿಂಗ್ ಕೃಷ್ಣ, ರಾಜೀವ್ ಹನು ಮತ್ತು ನಾಯಕ ಕಿಚ್ಚ ಸುದೀಪ್ ಅವರನ್ನು ಸತತವಾಗಿ ಔಟ್ ಮಾಡುವ ಮೂಲಕ ‘ಹ್ಯಾಟ್ರಿಕ್’ ವಿಕೆಟ್ ಸಾಧನೆ ಮಾಡಿದರು. ಇದಾದ ಬಳಿಕ […] - [Day Special: ಜನವರಿ 17 ರ ವಿಶೇಷವೇನು? ನೇತಾಜಿ ಬೋಸ್ ಮತ್ತು ಬೆಂಜಮಿನ್ ಫ್ರಾಂಕ್ಲಿನ್ ನೆನಪಿನಲ್ಲಿ.](https://samagrasuddi.co.in/day-special-january-17th-is-commemorating-netaji-bose-and-benjamin-franklin/) - [ಭೀಮಣ್ಣ ಖಂಡ್ರೆ ನಿಧನ: ಮಾಜಿ ಸಚಿವ, ಶತಾಯುಷಿ ಹಿರಿಯ ರಾಜಕಾರಣಿಗೆ ಬೀದರ್‌ನಲ್ಲಿ ಅಂತಿಮ ವಿದಾಯ](https://samagrasuddi.co.in/bhimanna-khandre-passes-away-former-minister-centenary-senior-politician-bids-farewell-in-bidar/): ಜನವರಿ 17:ಮಾಜಿ ಸಚಿವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಬೀದರ್‌ನ ಸ್ವಗೃಹದಲ್ಲಿ ನಿಧನರಾದರು. ದೀರ್ಘಕಾಲದಿಂದ ವಯೋ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಮಲ್ಸಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಅವರನ್ನು ಮನೆಗೆ ಕರೆತಂದು ಆರೈಕೆ ಮಾಡಲಾಗುತ್ತಿತ್ತು. ಶುಕ್ರವಾರ ರಾತ್ರಿ ಆರೋಗ್ಯ ಮತ್ತಷ್ಟು ಕ್ಷೀಣಿಸಿ ಕೊನೆಯುಸಿರೆಳೆದಿದ್ದಾರೆ. ಅವರು ಪುತ್ರ, ರಾಜ್ಯ ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ನಿಧನದಿಂದ ಉತ್ತರ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಶೂನ್ಯ ಉಂಟಾಗಿದೆ. ಇಂದೇ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಭೀಮಣ್ಣ ಖಂಡ್ರೆ ಅವರ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ ಇಂದೇ ಭಾಲ್ಕಿಯಲ್ಲಿ ನಡೆಯಲಿದೆ. ಭಾಲ್ಕಿಯ ಗಾಂಧಿ ಗಂಜ್‌ನಲ್ಲಿರುವ ಅವರ ಸ್ವಗೃಹದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು […] - [ನಿಮ್ಮ ಹೃದಯ ಎಷ್ಟು ಬಲಿಷ್ಠ? ಸರಳ ಪರೀಕ್ಷೆಯಿಂದ ತಿಳಿಯಿರಿ – ಹೃದ್ರೋಗ ತಜ್ಞರ ಸಲಹೆ.](https://samagrasuddi.co.in/know-how-strong-your-heart-is-with-a-simple-test-advice-from-a-cardiologist/): ಮಾನವ ದೇಹದಲ್ಲಿನ ಅತ್ಯಂತ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದು. ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುವ ಮೂಲಕ ಜೀವಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸುವುದು, ಇಂಗಾಲದ ಡೈಆಕ್ಸೈಡ್‌ನಂತಹ ತ್ಯಾಜ್ಯಗಳನ್ನು ಶ್ವಾಸಕೋಶಕ್ಕೆ ಮರಳಿಸುವುದು ಹೃದಯದ ಮುಖ್ಯ ಕಾರ್ಯ. ಹೃದಯವು ಕ್ಷಣವೂ ವಿಶ್ರಾಂತಿ ಪಡೆಯದೆ ನಿರಂತರವಾಗಿ ಕೆಲಸ ಮಾಡುವ ಅಂಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೃದ್ರೋಗದ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ವಿಶೇಷವಾಗಿ ಯುವಜನರಲ್ಲಿ ಹೃದಯಾಘಾತದಿಂದ ಸಾವಿನ ಪ್ರಮಾಣ ದಿನೇ ದಿನೇ ಏರುತ್ತಿರುವುದು ಆತಂಕಕಾರಿ ವಿಷಯವಾಗಿದೆ. ನೃತ್ಯ, ಹಾಡು, ನಡೆಯುವಂತಹ ಸಾಮಾನ್ಯ ಚಟುವಟಿಕೆಗಳಲ್ಲೇ ಅನೇಕರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಹೃದಯದ ಆರೋಗ್ಯದ ಬಗ್ಗೆ ಜಾಗೃತರಾಗುವುದು ಅತ್ಯಂತ ಅವಶ್ಯಕವಾಗಿದೆ. ಹೃದಯದ ಶಕ್ತಿಯನ್ನು ತಿಳಿಯಲು ಸರಳ ವಿಧಾನ ಸೋಷಿಯಲ್ ಮೀಡಿಯಾದಲ್ಲಿ ಹೃದಯ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಿರುವ ಆಶ್ಲೋಕ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ಡಾ. ಅಲೋಕ್ ಚೋಪ್ರಾ ಅವರು, ಹೃದಯದ ಶಕ್ತಿಯನ್ನು ತಿಳಿಯಲು ಒಂದು ಸರಳ ಮಾರ್ಗವಿದೆ ಎಂದು ತಿಳಿಸಿದ್ದಾರೆ. ಅನೇಕ ಜನರು ಹೃದಯದ ಆರೋಗ್ಯ […] - [​WPL: ಶ್ರೇಯಾಂಕಾ 'ಪಂಚ' ಕರಾಮತ್ತು, ರಾಧಾ ಅರ್ಧಶತಕದ ಆಸರೆ; ಆರ್‌ಸಿಬಿಗೆ ಹ್ಯಾಟ್ರಿಕ್‌ ಜಯದ ಸಂಭ್ರಮ](https://samagrasuddi.co.in/wpl-ranka-panch-kara-and-radha-half-centuries-give-rcb-a-hat-trick-victoryu/): ​ನವಿ ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಜಯದ ಓಟ ಮುಂದುವರಿದಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರ ಅದ್ಭುತ ಬೌಲಿಂಗ್ ಹಾಗೂ ರಾಧಾ ಯಾದವ್ ಅವರ ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ ಆರ್‌ಸಿಬಿ, ಗುಜರಾತ್ ಜೈಂಟ್ಸ್ ವಿರುದ್ಧ 32 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ​ಇದು ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ತಂಡಕ್ಕೆ ಟೂರ್ನಿಯಲ್ಲಿ ಸತತ ಮೂರನೇ ಗೆಲುವಾಗಿದೆ (ಹ್ಯಾಟ್ರಿಕ್ ಗೆಲುವು). ​ಆರ್‌ಸಿಬಿ ಸಂಕಷ್ಟಕ್ಕೆ ರಾಧಾ-ರಿಚಾ ನೆರವು ​ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ಆರಂಭದಲ್ಲೇ ಆಘಾತ ಅನುಭವಿಸಿತು. ಕೇವಲ 43 ರನ್ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಾಯಕಿ ಸ್ಮೃತಿ ಮಂದಾನ (5), ಗ್ರೇಸ್ ಹ್ಯಾರಿಸ್ (17) ಹಾಗೂ ಡಿ. ಹೇಮಲತಾ ಬೇಗನೆ ನಿರ್ಗಮಿಸಿದರು. ​ಈ ವೇಳೆ ಒಂದಾದ ರಾಧಾ ಯಾದವ್ ಮತ್ತು ರಿಚಾ ಘೋಷ್ ತಂಡಕ್ಕೆ ಆಸರೆಯಾದರು. ರಾಧಾ ಯಾದವ್‌ 47 ಎಸೆತಗಳಲ್ಲಿ 66 ರನ್‌ […] - [ದಿನಕ್ಕೊಂದು ಶ್ಲೋಕ: ಭಗವದ್ಗೀತೆ – ಅಧ್ಯಾಯ 1(ಅರ್ಜುನ ವಿಷಾದ ಯೋಗ) | ಶ್ಲೋಕ 17](https://samagrasuddi.co.in/a-shloka-a-day-bhagavad-gita-chapter-1-arjuna-vishad-yoga-shloka-17/): ಮೂಲ ಶ್ಲೋಕ (ಸಂಸ್ಕೃತ): ಕಾಶ್ಯಶ್ಚ ಪರಮೇಷ್ವಾಸಃಶಿಖಂಡೀ ಚ ಮಹಾರಥಃ |ಧೃಷ್ಟದ್ಯುಮ್ನೋ ವಿರಾಟಶ್ಚಸಾತ್ಯಕಿಶ್ಚಾಪರಾಜಿತಃ || ಕನ್ನಡ ಅರ್ಥ: ಅತಿಶ್ರೇಷ್ಠ ಧನುರ್ಧಾರನಾದ ಕಾಶಿರಾಜನು,ಮಹಾರಥಿಯಾದ ಶಿಖಂಡಿ,ಧೃಷ್ಟದ್ಯುಮ್ನ, ವಿರಾಟರಾಜ ಮತ್ತುಎಂದಿಗೂ ಸೋಲದ ಸಾತ್ಯಕಿ –ಇವರೆಲ್ಲರೂ ಪಾಂಡವರ ಪಾಳಯದ ಮಹಾವೀರರು. ವಿವರಣೆ ಈ ಶ್ಲೋಕದಲ್ಲಿ ಪಾಂಡವರ ಪಾಳಯದಲ್ಲಿರುವ ಪ್ರಮುಖ ಯೋಧರ ಪಟ್ಟಿ ಮುಂದುವರಿಯುತ್ತದೆ. ಪ್ರತಿಯೊಬ್ಬ ಯೋಧನಿಗೂ ತನ್ನದೇ ಆದ ಶೌರ್ಯ, ಕೌಶಲ್ಯ ಮತ್ತು ಪಾತ್ರವಿದೆ. ಶಿಖಂಡಿಯಂತಹ ಯೋಧನ ಉಲ್ಲೇಖವು ನ್ಯಾಯ ಮತ್ತು ಪ್ರತೀಕಾರದ ಸಂಕೇತವಾಗಿದ್ದು, ಧೃಷ್ಟದ್ಯುಮ್ನನು ಪಾಂಡವರ ಸೇನೆಯ ನಾಯಕನಾಗಿ ಯುದ್ಧ ತಂತ್ರದ ಪ್ರತಿನಿಧಿಯಾಗಿದ್ದಾನೆ. ವಿರಾಟ ಮತ್ತು ಸಾತ್ಯಕಿಯಂತಹ ವೀರರು ಪಾಂಡವ ಸೇನೆಯ ಬಲವನ್ನು ಇನ್ನಷ್ಟು ದೃಢಪಡಿಸುತ್ತಾರೆ. ಗೀತೆ ಇಲ್ಲಿ ತಿಳಿಸುವ ಸಂದೇಶವೆಂದರೆ, ಧರ್ಮಯುದ್ಧದಲ್ಲಿ ಜಯವು ಒಬ್ಬ ವ್ಯಕ್ತಿಯ ಶಕ್ತಿಯಲ್ಲ, ಬದಲಾಗಿ ಧರ್ಮಕ್ಕೆ ನಿಷ್ಠರಾದ ಸಮರ್ಥ ಯೋಧರ ಒಗ್ಗಟ್ಟಿನ ಫಲವಾಗಿದೆ. ಇಂದಿನ ಸಂದೇಶ ಧರ್ಮಕ್ಕಾಗಿ ಒಂದಾದ ಶಕ್ತಿಗಳು ಅಜೇಯವಾಗುತ್ತವೆ. - [ನಿತ್ಯ ಭವಿಷ್ಯ, 17 ಜನವರಿ : ಇಂದು ಈ ರಾಶಿಯವರ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು.](https://samagrasuddi.co.in/daily-predictions-17th-january-today-the-positive-attitude-of-this-rashi-will-appeal-to-many/): ಇಂದಿನ ರಾಶಿ ಭವಿಷ್ಯ: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ಚತುರ್ದಶೀ ತಿಥಿ ಶನಿವಾರ ಬೇಸರ ಪ್ರಯಾಣ, ನಿರುದ್ಯೋಗ ಚಿಂತೆ, ಅಸಹಿಷ್ಣುತೆ, ವ್ಯಾಪಾರ ವರ್ಧನೆ, ಗೌರವ, ಆರ್ಥಿಕ ಸಮಸ್ಯೆ ಇವೆಲ್ಲಾ ಈ ದಿನದ ವಿಶೇಷ. ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಮಕರ, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಷಾಢ ಯೋಗ : ವ್ಯಾಘಾತ, ಕರಣ : ಶಕನಿ, ಸೂರ್ಯೋದಯ – 06 – 53 am, ಸೂರ್ಯಾಸ್ತ – 06 – 15 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09-44 – 11:09, ಯಮಗಂಡ ಕಾಲ 13:59 – 15:25, ಗುಳಿಕ ಕಾಲ 06:54 – 08:18. ಮೇಷ […] - [ಚಿತ್ರದುರ್ಗ:ವಿದ್ಯಾವಿಕಾಸ ವಿದ್ಯಾಸಂಸ್ಥೆಯ 37ನೇ ವರ್ಷದ ವಿಜಯೋತ್ಸವಕ್ಕೆ ಸಜ್ಜು.](https://samagrasuddi.co.in/vidyavikasa-vidyasirshana-is-gearing-up-for-its-37th-year-of-triumph/): ಜ.17ರಂದು ವಿದ್ಯಾವಿಕಾಸ ವಿದ್ಯಾಸಂಸ್ಥೆಯ 37ನೇ ವರ್ಷದ ಶಾಲಾ ವಾರ್ಷಿಕೋತ್ಸವ. ಚಿತ್ರದುರ್ಗ:ಚಿತ್ರದುರ್ಗ ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ವತಿಯಿಂದ ಇದೇ ಜನವರಿ 17ರಂದು ಸಂಜೆ 4.30ಕ್ಕೆ ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್.ಜಿ. ಕಲ್ಯಾಣ ಮಂಟಪದಲ್ಲಿ “ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ – 37ನೇ ವರ್ಷಾಚರಣೆಯ ವಿಜಯೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಭಾಗವಹಿಸಲಿದ್ದು, ಗೌರವ ಅತಿಥಿಗಳಾಗಿ ಧಾರವಾಡದ ವಿಸ್ತಾರ್ ಜಿಂದಗಿ ಹ್ಯೂಮನ್ ಮೈಂಡ್ಸೆಟ್ ಕೋಚ್ ಮಹೇಶ್ ಮಸಾಲ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಆರ್. ಮಂಜುನಾಥ್ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ. ವಿಜಯ ಕುಮಾರ್ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ನಿರ್ದೇಶಕಿ ಸುನೀತಾ ವಿಜಯ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪೃಥ್ವೀಶ, ಪ್ರಾಂಶುಪಾಲ ಪಿ. ಬಸವರಾಜಯ್ಯ ಹಾಗೂ ಮುಖ್ಯ ಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ ಉಪಸ್ಥಿತರಿರಲಿದ್ದಾರೆ. ವಿಜಯೋತ್ಸವ ಕಾರ್ಯಕ್ರಮದ ಅಂಗವಾಗಿ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ವಿಶೇಷ ಸಾಧನೆ ಮಾಡಿದ ನ್ಯೂರೋಲಾಜಿಸ್ಟ್ […] - [ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಆಯುಷ್ ಇಲಾಖೆ ವತಿಯಿಂದ ‘ವಿದ್ಯಾರ್ಥಿ ಚೇತನ’ ಕಾರ್ಯಕ್ರಮ ಉದ್ಘಾಟನೆ.](https://samagrasuddi.co.in/inauguration-of-vidyarthi-chetana-program-by-ayush-department-at-smt-indira-gandhi-residential-school/): ಚಿತ್ರದುರ್ಗ, ಜ. 16:ಆಯುಷ್ ಇಲಾಖೆ ವತಿಯಿಂದ ದಿನಾಂಕ 16-01-2026ರಂದು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಜವನಗೊಂಡನಹಳ್ಳಿ ಇಲ್ಲಿ ವಿದ್ಯಾರ್ಥಿ ಚೇತನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು. ಈ ಕಾರ್ಯಕ್ರಮವು ಎಸ್‌ಸಿಎಸ್‌ಪಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿದ್ದು, ವಸತಿ ಶಾಲೆಯ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯನ್ನು ಉದ್ದೇಶಿಸಿಕೊಂಡ ಒಂದು ವಿಶಿಷ್ಟ ಯೋಜನೆಯಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಮಾನಸಿಕ ದೃಢತೆಗೆ ಅಗತ್ಯವಾದ ಯೋಗ, ಧ್ಯಾನ, ಪ್ರಾಣಾಯಾಮ, ನೆನಪಿನ ಶಕ್ತಿ ಹೆಚ್ಚಿಸುವ ಔಷಧಿಗಳ ವಿತರಣೆ ಹಾಗೂ ಸಮಗ್ರ ಆರೋಗ್ಯ ಕಾಳಜಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಾದ ಮಹಾಲಕ್ಷ್ಮಿ ಮತ್ತು ಲಿಖಿತ ಅವರು ಪ್ರಾರ್ಥನೆ ಸಲ್ಲಿಸಿದರು. ನಂತರ ಗಿಡಕ್ಕೆ ನೀರರೆಯುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಚಂದ್ರಕಾಂತ್ ನಾಗಸಮುದ್ರ ಅವರು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಡಾ. ಚಂದ್ರಕಾಂತ್ ನಾಗಸಮುದ್ರ ಅವರು, “ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ದೃಢತೆ ಪರೀಕ್ಷಾ ಸಮಯದಲ್ಲಿ ಅತ್ಯಂತ […] - [ಐಪಿಎಲ್ 2026: RCB ಫ್ಯಾನ್ಸ್​ಗೆ ಗುಡ್​ ನ್ಯೂಸ್; ಬೆಂಗಳೂರಿನಲ್ಲೇ ನಡೆಯಲಿವೆ ಪಂದ್ಯಗಳು! ಆದ್ರೆ ಕಂಡೀಷನ್ ಅಪ್ಲೈ.](https://samagrasuddi.co.in/good-news-for-ipl-2026-rcb-fans-matches-will-be-held-in-bangalore-conditions-apply/): ಚಿನ್ನಸ್ವಾಮಿ ಮೈದಾನದಲ್ಲಿ ಎಐ ಕ್ಯಾಮೆರಾ ಭದ್ರತೆ, ರಾಯ್‌ಪುರ್–ಪುಣೆ ಪರ್ಯಾಯ ಆಯ್ಕೆ ಬೆಂಗಳೂರು:ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ತವರು ಪಂದ್ಯಗಳನ್ನು ಯಾವ ಕ್ರೀಡಾಂಗಣದಲ್ಲಿ ಆಡಲಿದೆ ಎಂಬುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕಳೆದ ವರ್ಷ ನಡೆದ ದುರ್ಘಟನೆಯ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆ ಇನ್ನೂ ಅನುಮಾನಾಸ್ಪದವಾಗಿದ್ದು, ಈ ಮಧ್ಯೆ ಆರ್‌ಸಿಬಿ ಫ್ರಾಂಚೈಸಿ ಭದ್ರತೆ ಹೆಚ್ಚಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಐ ಕ್ಯಾಮೆರಾ ಪ್ರಸ್ತಾಪ 2025ರಲ್ಲಿ ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ. ಇದರಿಂದಾಗಿ ಮುಂಬರುವ ಐಪಿಎಲ್ ಪಂದ್ಯಗಳು ಇಲ್ಲಿ ನಡೆಯುವ ಕುರಿತು ಸಂಶಯಗಳು ಎದುರಾಗಿವೆ. ಈ ಹಿನ್ನಲೆಯಲ್ಲಿ, ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತೆ ಹೆಚ್ಚಿಸಲು ಸುಮಾರು 300–350 ಎಐ ಕ್ಯಾಮೆರಾಗಳನ್ನು ಅಳವಡಿಸುವ ಪ್ರಸ್ತಾವನೆಯನ್ನು ಆರ್‌ಸಿಬಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA)ಗೆ ಸಲ್ಲಿಸಿದೆ.ಈ ಕ್ಯಾಮೆರಾಗಳ ಅಳವಡಿಕೆಗೆ ಅಗತ್ಯವಿರುವ […] - [ಸಿರಿಗೆರೆ| ಜ.17ರಂದು ಮಾಳಪ್ಪನಹಟ್ಟಿಯಲ್ಲಿ ಸಾಮೂಹಿಕ ಗಣ ಹೋಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ.](https://samagrasuddi.co.in/on-17th-sirigere-mass-gana-homam-and-religious-meeting-program-at-malappanahatti/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 16 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ಆರ್) ಸಿರಿಗೆರೆ ಸಿರಿಗೆರೆ ತಾಲ್ಲೂಕು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳು, ಒಕ್ಕೂಟ, ಮಾಳಪ್ಪನಹಟ್ಟಿ ವಲಯ ಇವರ ಸಹಯೋಗದೊಂದಿಗೆ ಸಾಮೂಹಿಕ ಗಣ ಹೋಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವೂ ಜ. 17ರ ಶನಿವಾರ ಮಾಳಪ್ಪನ ಹಟ್ಟಿಯ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿರಿಗೆರೆ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‍ನ ಯೋಜನಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಸಾಮೂಹಿಕ ಗಣ ಹೋಮ ನಡೆಯಲಿದ್ದು ಮಧ್ಯಾಹ್ನ 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಉದ್ಘಾಟನೆ ಮಾಡಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿಗಳಾದ ಹುರುಳಿ ಬಸವರಾಜ್ ನಡೆಸಿಕೊಡಲಿದ್ದಾರೆ. ಚೋಳಗಟ್ಟಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ. ನಿರ್ಮಲಾ ದೇವರಾಜ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀ […] - [ಶ್ರೀ ಕ್ಷೇತ್ರ ಕೊಟ್ಟೂರು ರಥೋತ್ಸವದ ಪ್ರಯುಕ್ತ 28ನೇ ವರ್ಷದ ಪಾದಯಾತ್ರೆ ಫೆ.10ರಂದು ಆರಂಭ.](https://samagrasuddi.co.in/the-28th-annual-padayatra-on-the-occasion-of-sri-kshetra-kottur-rathotsava-started-on-10th-february/): ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತಾಧಿಗಳ ನೋಂದಣಿಗೆ ಸಮಿತಿ ಸಂಪರ್ಕ ಸಂಖ್ಯೆಗಳನ್ನು ಪ್ರಕಟಿಸಿದೆ. ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ 16: ನಗರದ ದೊಡ್ಡಪೇಟೆಯ ಶ್ರೀ ಗುರು ಕೊಟ್ಟೂರು ಬಸವೇಶ್ವರ ಪಾದಯಾತ್ರೆ ಸಮಿತಿ ವತಿಯಿಂದ ಕನ್ನಡನಾಡಿನ ಹಾಗೂ ವಿಶ್ವಗುರು ಬಸವಣ್ಣನವರ ಹಿರಿಮೆಯನ್ನು ಸಾರುತ್ತಾ ವಿಶ್ವಶಾಂತಿಗಾಗಿ ಫೆ.12 ರಂದು ಶ್ರೀ ಕ್ಷೇತ್ರ ಕೊಟ್ಟೂರಿನಲ್ಲಿ ನಡೆಯಲಿರುವ ರಥೋತ್ಸವದ ಪ್ರಯುಕ್ತ 28ನೇ ವರ್ಷದ ಸಮಗ್ರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ. ಫೆ. 10ರ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ದೊಡ್ಡಪೇಟೆಯ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಮಹಾಮಂಗಳಾರತಿಯೊಂದಿಗೆ ಪಾದಯಾತ್ರೆ ಪ್ರಾರಂಭವಾಗಲಿದೆ. ಈ ಪಾದಯಾತ್ರೆಯೂ ಮಲ್ಲಾಪುರ, ಗುಡ್ಡದರಂಗವ್ವನಹಳ್ಳಿ, ಬೋಗಳೇರಹಟ್ಟಿ, ಕಲ್ಲೇದೇವರಪುರ, ದೊಣ್ಣೆಹಳ್ಳಿ, ಜಗಳೂರು, ಕೆಚೇನಹಳ್ಳಿ, ಹೊಸಕೆರೆ, ಗಡಿಮಾಕುಂಟೆ, ಉಜ್ಜನಿಯಿಂದ ಕೊಟ್ಟೂರು ತಲುಪಲಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತಾಧಿಗಳು 9972975010, 99864 28930, 99020 23444 ಮತ್ತು 99015 64288 ಈ ದೂರವಾಣಿಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ. - [Daily GK Quiz : ಭಾರತದ ಯೋಜನಾ ಆಯೋಗವನ್ನು ರದ್ದುಗೊಳಿಸಿ ಅದರ ಬದಲಾಗಿ ಸ್ಥಾಪಿಸಲಾದ ಸಂಸ್ಥೆ ಯಾವುದು?](https://samagrasuddi.co.in/daily-gk-quiz-which-organization-was-replaced-by-the-planning-commission-of-india/): General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ. 2. ಸಂವಿಧಾನದ ಯಾವ ವಿಧಿಯಲ್ಲಿ ರಾಜ್ಯಪಾಲರ ನೇಮಕಾತಿಯ ಬಗ್ಗೆ ವಿವರಿಸಲಾಗಿದೆ? ವಿಧಿ 155 3. ಕೇಂದ್ರ ಮತ್ತು ರಾಜ್ಯಗಳ ನಡುವೆ ಆಡಳಿತಾತ್ಮಕ ಸಹಕಾರಕ್ಕಾಗಿ ರಚಿಸಲಾದ ಸಂಸ್ಥೆ ಯಾವುದು? ಅಂತರರಾಜ್ಯ ಪರಿಷತ್ (Inter-State Council) 4. ‘ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಎಂದು ಕರೆಯಲ್ಪಡುವವರು ಯಾರು? ಡಾ. ಎ.ಪಿ.ಜೆ. ಅಬ್ದುಲ್ ಕಲಾಂ 5. ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ ಯಾವುದು? ಕರ್ನಾಟಕ 6. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ ಯಾವುದು? 1935 7. ‘ಭಾರತ ರತ್ನ’ ಪ್ರಶಸ್ತಿಯನ್ನು ಮೊದಲ ಬಾರಿಗೆ ಯಾವ ವರ್ಷ […] - [ಇನ್ಸ್ಟಾಗ್ರಾಂ–ಫೇಸ್ಬುಕ್ ಯುಗದಲ್ಲೂ ಭಜನಾ ಕಮಟ: ಸಮಾಜಕ್ಕೆ ಉತ್ತಮ ಸಂದೇಶ – ಜಿ.ಎಸ್. ಅನಿತ್ ಕುಮಾರ್.](https://samagrasuddi.co.in/bhajana-kamata-is-a-good-message-for-the-society-even-in-the-age-of-instagram-facebook-gs-anith-kumar/): ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203 ಭೀಮಸಮುದ್ರ. ಗ್ರಾಮದ ತೊರೆಬೈಲು ಕಾಲೋನಿಯ ಉತ್ಸವಮ ಸೇವಾ ಸಮಿತಿ ಹಾಗೂ ಶ್ರೀ ಪಾಂಡುರಂಗ ಭಜನಾ ಮಂಡಳಿ ವತಿಯಿಂದ 5 ವರ್ಷದ ವಾರ್ಷಿಕೋತ್ಸವ ಹಾಗೂ ಬಜನಾ ಕುಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ ಎಸ್ ಅನಿತ್ ಕುಮಾರ್. ಗ್ರಾಮದಲ್ಲಿ ಬಜನಾ ಕುಮಟ ಮಗುವಾಗಿ ಹುಟ್ಟಿ ಯುವಕನಾಗಿ ಬೆಳೆದು ಮುಂದೆ ಸಾಗುತ್ತಿರುವ ಈ ಭಜನಾ ತಂಡವು ಮುಂದೆ ಸಾಗುತ್ತಿದೆ ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ಇನ್ಸ್ಟಾಗ್ರಾಮ್ ಮೊಬೈಲ್ ದಾರವಾಹಿ ಟಿವಿ ಕಾಲದಲ್ಲಿ ಮಾಧ್ಯಮಗಳನ್ನು ಅಡಿಟ್ ಆಗಿದ್ದಾರೆ ಆದರೆ ಸಂಕ್ರಾಂತಿಯ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಬಜನಾ ಕಮಟ ಸಂಘಕ್ಕೆ ತುಂಬು ಹೃದಯದ ಧನ್ಯವಾದಗಳು ಮುಂದಿನ ಪೀಳಿಗೆಗೆ ಇದೊಂದು ಮಾದರಿಯಾಗಲಿ ಎಂದು ತಿಳಿಸಿದರು. ಲಾವಣಿ ಪದದ ಯುಗ ಧರ್ಮ ರಾಮಣ್ಣ ಮಾತನಾಡಿ ಒಂದನೇ ತರಗತಿಯಲ್ಲಿ ಐದು ಸರಿ ಫೇಲ್ ಆಗಿ ದೈವಾನುಗ್ರಹದಿಂದ ಲಾವಣಿ ಪದದ ಮೂಲಕ ಸುಮಾರು ಈ ಕಾರ್ಯಕ್ರಮವನ್ನು ಸೇರಿ 16032 […] - [RBI ನೇಮಕಾತಿ 2026: 10ನೇ ತರಗತಿ ಪಾಸಾದವರಿಗೆ 572 ಆಫೀಸ್ ಅಟೆಂಡೆಂಟ್ ಹುದ್ದೆಗಳು.](https://samagrasuddi.co.in/rbi-recruitment-2026-572-office-attendant-vacancies-for-10th-pass/): ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) 10ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ ಕಲ್ಪಿಸಿದೆ. RBI 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜನವರಿ 15ರಿಂದ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 4, 2026 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಒಟ್ಟು 572 ಹುದ್ದೆಗಳ ಪೈಕಿ ಈ ಹುದ್ದೆಗಳನ್ನು ದೆಹಲಿ, ಮುಂಬೈ, ಕೋಲ್ಕತ್ತಾ, ಕಾನ್ಪುರ–ಲಕ್ನೋ, ಜೈಪುರ, ಪಾಟ್ನಾ, ಗುವಾಹಟಿ, ಹೈದರಾಬಾದ್ ಸೇರಿದಂತೆ ದೇಶಾದ್ಯಂತ ವಿವಿಧ RBI ಕೇಂದ್ರಗಳಲ್ಲಿ ಭರ್ತಿ ಮಾಡಲಾಗುತ್ತದೆ. ಶೈಕ್ಷಣಿಕ ಅರ್ಹತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.ಜನವರಿ 1, 2026ರ ವೇಳೆಗೆ ಪದವಿಪೂರ್ವ ವಿದ್ಯಾರ್ಥಿಯಾಗಿರಬೇಕು.⚠️ ಸ್ನಾತಕೋತ್ತರ ಅಥವಾ ಅದಕ್ಕಿಂತ ಮೇಲಿನ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಹರಲ್ಲ. ವಯೋಮಿತಿ ವಯೋಮಿತಿ ಸಡಿಲಿಕೆ: ಅರ್ಜಿ ಶುಲ್ಕ ಸಂಬಳ ವಿವರ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಅರ್ಜಿ ಸಲ್ಲಿಸುವ ವಿಧಾನ ಅಭ್ಯರ್ಥಿಗಳು RBI […] - [​ಜನವರಿ 16 ರ ಇತಿಹಾಸ ಮತ್ತು ವಿಶೇಷತೆಗಳು: ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನದಿಂದ ಐತಿಹಾಸಿಕ ಘಟನೆಗಳವರೆಗೆ](https://samagrasuddi.co.in/january-16-history-and-highlights-from-national-startup-day-to-historical-eventsu/): ​ಜನವರಿ 16 ಇತಿಹಾಸದ ಪುಟಗಳಲ್ಲಿ ಒಂದು ಮಹತ್ವದ ದಿನವಾಗಿದೆ. ಇದು ಪ್ರಾಚೀನ ಸಂಪ್ರದಾಯ, ಯುದ್ಧದ ಶೌರ್ಯ ಮತ್ತು ಆಧುನಿಕ ನಾವೀನ್ಯತೆಗಳ ಸಂಗಮವಾಗಿದೆ. ಚಕ್ರವರ್ತಿಗಳ ಪಟ್ಟಾಭಿಷೇಕದಿಂದ ಹಿಡಿದು, ಆಧ್ಯಾತ್ಮಿಕ ಗುರುಗಳ ಜನನ ಹಾಗೂ ಇಂದಿನ ನವಯುಗದ ಉದ್ಯಮಿಗಳ ಆಚರಣೆಯವರೆಗೆ ಈ ದಿನಕ್ಕೆ ವಿಶೇಷ ಸ್ಥಾನವಿದೆ. ​ಇಂದಿನ ಪ್ರಮುಖ ಘಟನೆಗಳು, ಆಚರಣೆಗಳು ಮತ್ತು ವ್ಯಕ್ತಿವಿಶೇಷಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ​1. ಇಂದಿನ ಪ್ರಮುಖ ಆಚರಣೆ: ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನ (National Startup Day) ​ಆಧುನಿಕ ಭಾರತದಲ್ಲಿ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನವನ್ನಾಗಿ ಆಚರಿಸಲಾಗುತ್ತದೆ. ​2. ಭಾರತೀಯ ಇತಿಹಾಸದಲ್ಲಿ ಈ ದಿನ ​ಭಾರತದ ಸಂಸ್ಕೃತಿ ಮತ್ತು ರಾಜಕೀಯದಲ್ಲಿ ಈ ದಿನ ನಡೆದ ಪ್ರಮುಖ ಘಟನೆಗಳು ಇಲ್ಲಿವೆ: ​3. ಜಾಗತಿಕ ಇತಿಹಾಸದ ಪ್ರಮುಖ ಘಟನೆಗಳು ​ವಿಶ್ವದಾದ್ಯಂತ ಜನವರಿ 16 ರಂದು ನಡೆದ ಪ್ರಮುಖ ಬದಲಾವಣೆಗಳು: ​4. ವ್ಯಕ್ತಿ ವಿಶೇಷ (ಜನನ ಮತ್ತು ಮರಣ) ​ಹುಟ್ಟುಹಬ್ಬದ ಸಂಭ್ರಮ: ​ಪುಣ್ಯಸ್ಮರಣೆ: - [​ಅಂಡರ್‌-19 ವಿಶ್ವಕಪ್‌: ಅಮೆರಿಕ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಹೆನಿಲ್‌ ಪಟೇಲ್‌ 'ಪಂಚ'ಪರಾಕ್ರಮ!](https://samagrasuddi.co.in/under-19-world-cup-henil-patels-hat-trick-for-india-against-usal/): ​ಬುಲವಾಯೋ: ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಯುವ ಪಡೆ ಶುಭಾರಂಭ ಮಾಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಮಧ್ಯಮ ವೇಗಿ ಹೆನಿಲ್‌ ಪಟೇಲ್‌ ಅವರ ಮಾರಕ ಬೌಲಿಂಗ್‌ ನೆರವಿನಿಂದ ಭಾರತ ತಂಡವು ಅಮೆರಿಕ ವಿರುದ್ಧ ಡಕ್ವರ್ಥ್‌ ಲೂಯೀಸ್‌ (ಡಿಎಲ್‌ಎಸ್‌) ನಿಯಮದ ಪ್ರಕಾರ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ. ​ಹೆನಿಲ್ ಪಟೇಲ್ ಬೌಲಿಂಗ್ ದಾಳಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಅಮೆರಿಕ ತಂಡಕ್ಕೆ ಆರಂಭದಿಂದಲೇ ಹೆನಿಲ್‌ ಪಟೇಲ್‌ ಆಘಾತ ನೀಡಿದರು. ಹೆನಿಲ್ ಅವರ ಕರಾರುವಾಕ್ ದಾಳಿಗೆ ನಲುಗಿದ ಅಮೆರಿಕ, ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ತಂಡದ ಪರ ನಿತೀಶ್‌ ಸುದಿನಿ (36) ಮತ್ತು ಅದ್ನಿತ್‌ ಝಂಬ್‌ (18) ಮಾತ್ರ ಸ್ವಲ್ಪ ಮಟ್ಟಿನ ಹೋರಾಟ ಪ್ರದರ್ಶಿಸಿದರು. ಅಂತಿಮವಾಗಿ ಅಮೆರಿಕ 35.2 ಓವರ್‌ಗಳಲ್ಲಿ ಕೇವಲ 107 ರನ್‌ಗಳಿಗೆ ಆಲೌಟ್ ಆಯಿತು. ಅಮೋಘ ಬೌಲಿಂಗ್ ಮಾಡಿದ ಹೆನಿಲ್‌, 7 ಓವರ್‌ಗಳಲ್ಲಿ 16 ರನ್ ನೀಡಿ ಪ್ರಮುಖ 5 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ​ಸುಲಭ ಗುರಿ ಬೆನ್ನತ್ತಿದ […] - [ದಿನಕ್ಕೊಂದು ಶ್ಲೋಕ :ಭಗವದ್ಗೀತೆ – ಅಧ್ಯಾಯ 1 | ಶ್ಲೋಕ 16 (ಅರ್ಜುನ ವಿಷಾದ ಯೋಗ)](https://samagrasuddi.co.in/a-shloka-a-day-bhagavad-gita-chapter-1-shloka-16-arjuna-vishad-yoga/): ಮೂಲ ಶ್ಲೋಕ (ಸಂಸ್ಕೃತ): ಅನಂತವಿಜಯಂ ರಾಜಾಕುಂತೀಪುತ್ರೋ ಯುಧಿಷ್ಠಿರಃ |ನಕುಲಃ ಸಹದೇವಶ್ಚಸುಘೋಷಮಣಿಪುಷ್ಪಕೌ || ಕನ್ನಡ ಅರ್ಥ: ಕುಂತೀಪುತ್ರನಾದ ರಾಜ ಯುಧಿಷ್ಠಿರನು ಅನಂತವಿಜಯ ಎಂಬ ಶಂಖವನ್ನು ಊದಿದನು.ನಕುಲನು ಸುಘೋಷ ಎಂಬ ಶಂಖವನ್ನು,ಸಹದೇವನು ಮಣಿಪುಷ್ಪಕ ಎಂಬ ಶಂಖವನ್ನು ಊದಿದರು. ವಿವರಣೆ ಈ ಶ್ಲೋಕದಲ್ಲಿ ಪಾಂಡವರ ಉಳಿದ ಸಹೋದರರ ಶಂಖನಾದವನ್ನು ಗೀತೆ ವಿವರಿಸುತ್ತದೆ. ಯುಧಿಷ್ಠಿರನ ಅನಂತವಿಜಯ ಶಂಖವು ಧರ್ಮದ ಶಾಶ್ವತ ವಿಜಯವನ್ನು ಸೂಚಿಸುತ್ತದೆ. ನಕುಲ ಮತ್ತು ಸಹದೇವರ ಶಂಖಗಳು ಸಮನ್ವಯ, ಶಿಸ್ತು ಮತ್ತು ಸಹಕಾರದ ಸಂಕೇತಗಳಾಗಿವೆ. ಇದರಿಂದ ಪಾಂಡವ ಸೇನೆಯ ಶಕ್ತಿ ಕೇವಲ ವೈಯಕ್ತಿಕ ಶೌರ್ಯದಲ್ಲೇ ಅಲ್ಲ, ಪರಸ್ಪರ ವಿಶ್ವಾಸ ಮತ್ತು ಏಕತೆಯಲ್ಲೂ ಅಡಗಿದೆ ಎಂಬುದು ಸ್ಪಷ್ಟವಾಗುತ್ತದೆ. ಗೀತೆ ಇಲ್ಲಿ ಜೀವನಪಾಠವನ್ನು ನೀಡುತ್ತದೆ – ಧರ್ಮದ ನೆಲೆಯಲ್ಲಿ ನಿಂತು, ಏಕತೆಯೊಂದಿಗೆ ನಡೆಯುವ ಪ್ರಯತ್ನಕ್ಕೆ ಅಂತಿಮ ಜಯ ಖಚಿತ. ಇಂದಿನ ಸಂದೇಶ ಧರ್ಮ, ಏಕತೆ ಮತ್ತು ಸಹಕಾರ ಇರುವಲ್ಲಿ ಸೋಲು ಎನ್ನುವುದೇ ಇಲ್ಲ. - [ಹಲ್ಲಿನ ಹುಳುಕು ಸಮಸ್ಯೆ ನಿರ್ಲಕ್ಷ್ಯ ಬೇಡ: ರೂಟ್ ಕೆನಾಲ್‌ಗೆ ಮುನ್ನ ತಡೆಯುವ ಸರಳ ಮನೆಮದ್ದುಗಳು.](https://samagrasuddi.co.in/simple-home-remedies-to-prevent-tooth-decay-problem-before-root-canal/): ಹಲ್ಲಿನ ಹುಳುಕು ಏಕೆ ಉಂಟಾಗುತ್ತದೆ? ಹಲವು ಜನರಲ್ಲಿ ಹಲ್ಲಿನ ಹುಳುಕು (Tooth Cavity) ಬಹಳ ಸಾಮಾನ್ಯವಾದ ಹಲ್ಲಿನ ಸಮಸ್ಯೆಯಾಗಿದೆ. ಬಹುತೇಕರು ಇದನ್ನು ಪ್ರಾರಂಭಿಕ ಹಂತದಲ್ಲೇ ನಿರ್ಲಕ್ಷಿಸುವುದರಿಂದ, ನಂತರ ರೂಟ್ ಕೆನಾಲ್ ಚಿಕಿತ್ಸೆಯಂತಹ ದುಬಾರಿ ಮತ್ತು ನೋವಿನ ಚಿಕಿತ್ಸೆಗೆ ಒಳಗಾಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಸಿಹಿ ಅಥವಾ ಪಿಷ್ಟಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸಿದಾಗ, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಹಲ್ಲುಗಳಲ್ಲಿ ಹುಳುಕು ಉಂಟುಮಾಡುವ ಆಮ್ಲಗಳನ್ನು ಉತ್ಪಾದಿಸುತ್ತವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೆ ಬಿಟ್ಟರೆ ಈ ಸೋಂಕು ಹಲ್ಲಿನ ನರಗಳನ್ನು ತಲುಪಬಹುದು. ಪರಿಣಾಮವಾಗಿ ಅಸಹನೀಯ ನೋವು, ಊತ ಮತ್ತು ಹಲ್ಲು ಕಳೆದುಕೊಳ್ಳುವ ಪರಿಸ್ಥಿತಿ ಸಹ ಎದುರಾಗಬಹುದು. ಆದರೆ ಪ್ರಾರಂಭಿಕ ಹಂತದಲ್ಲಿ ಮೌಖಿಕ ನೈರ್ಮಲ್ಯ ಸುಧಾರಣೆ ಹಾಗೂ ಕೆಲವು ಪರಿಣಾಮಕಾರಿ ಮನೆಮದ್ದುಗಳು ಹಲ್ಲಿನ ಕೊಳೆತವನ್ನು ನಿಯಂತ್ರಿಸಲು ಸಹಕಾರಿಯಾಗುತ್ತವೆ. ಹರಳೆಣ್ಣೆ ಮತ್ತು ಲವಂಗ: ನೈಸರ್ಗಿಕ ಪರಿಹಾರ ಲವಂಗದಲ್ಲಿ ಯುಜೆನಾಲ್ (Eugenol) ಎಂಬ ಸಂಯುಕ್ತವಿದ್ದು, ಇದು ನೈಸರ್ಗಿಕ ಅರಿವಳಿಕೆ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದಕ್ಕೆ ಜೊತೆಗೆ ಹರಳೆಣ್ಣೆ ನೀರಿನಿಂದ ಬಾಯಿ […] - [ನಿತ್ಯ ಭವಿಷ್ಯ, 16 ಜನವರಿ : ಇಂದು ಈ ರಾಶಿಯವರು ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವರು](https://samagrasuddi.co.in/daily-predictions-16th-january-today-this-rashi-will-suffer-due-to-lack-of-money-for-hard-work/): ಜನವರಿ 16,​​ 2026ರ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಮಕರ, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮೂಲಾ ಯೋಗ : ಧ್ರುವ, ಕರಣ : ವಣಿಜ, ಸೂರ್ಯೋದಯ – 06 – 53 am, ಸೂರ್ಯಾಸ್ತ – 06 – 14 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11-09 – 12:34, ಯಮಗಂಡ ಕಾಲ 15:24 – 16:49, ಗುಳಿಕ ಕಾಲ 08:19 – 09:44 ಮೇಷ ರಾಶಿ: ಅಸಂಗತ ಸಮಾಚಾರವನ್ನು ಒಪ್ಪಬೇಕಿಲ್ಲ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಪರಿಶೀಲಿಸಿ ಕಾರ್ಯ ಪ್ರವೃತ್ತರಾಗಿ.ಅತಿಥಿಗಳ ಬಗ್ಗೆ ತೋರುವ […] - [ಮಧ್ಯ ಕರ್ನಾಟಕದ ರೈತರ ಜೀವನಾಡಿ ಭದ್ರಾ ಜಲಾಶಯ: ಏಕ ನಿಗಮ ನಿರ್ವಹಣೆಗೆ ಆಗ್ರಹ.](https://samagrasuddi.co.in/demand-for-single-corporation-management-of-bhadra-reservoir-lifeline-of-central-karnataka-farmers/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 15 ಮಧ್ಯ ಕರ್ನಾಟಕದ ಬಯಲು ಸೀಮೆ ರೈತಾಪಿ ಸಮುದಾಯದ ಜೀವನಾಡಿಯಾಗಿರುವ ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಗೆ ಒಳಪಡಿಸುವ ತನ್ನ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬಾರದೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸಿದೆ. ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಹಾಲಿ ಭದ್ರಾ ಜಲಾಶಯ ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿದೆ. ಭದ್ರಾ ಮೇಲ್ದಂಡ ಕಾಮಗಾರಿಗಳು ವಿಶ್ವೇಶ್ವರಯ್ಯ ನೀರಾವರಿ ನಿಗಮದಿಂದ ನಿರ್ವಹಣೆಗೆ ಒಳಪಟ್ಟಿದ್ದು ಭವಿಷ್ಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಪಡೆಯಬೇಕಾದರೆ ಎರಡು ನಿಗಮಗಳ ನಡುವೆ ಸಂಘರ್ಷ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ ಎಂದರು. ಎರಡೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ(ಎಂಡಿಗಳು) ನಡುವೆ ಒಮ್ಮತ ಈಡೇರದೇ ಇರುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಭದ್ರಾ ಜಲಾಶಯವ ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಗೆ ಒಳಪಡಿಸಿ ಒಬ್ಬರೇ ವ್ಯವಸ್ಥಾಪಕ ನಿರ್ದೇಶಕರ ನಿರ್ವಹಣೆ ಮಾಡುವ ರೀತಿಯಲ್ಲಿ […] - [ಭೋವಿ ಸಮಾಜವನ್ನು ಒಗ್ಗೂಡಿಸಿದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಶ್ರಮ ಅಪಾರ: ಶಾಸಕ ಡಾ. ಎಂ. ಚಂದ್ರಪ್ಪ.](https://samagrasuddi.co.in/shri-immadi-siddharameshwar-swamijis-efforts-to-unite-bhovi-samaj-mla-dr-m-chandrappa/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 15 ಚದುರಿದ ಭೋವಿ ಜನಾಂಗವನ್ನು ಒಗ್ಗೂಡಿಸುವಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಶ್ರಮ ಅಪಾರವಾದದ್ದು ಎಂದು ಶಾಸಕ ಡಾ. ಎಂ ಚಂದ್ರಪ್ಪ ಶ್ಲಾಘಿಸಿದರು. ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಸಿದ್ಧರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಸಂಘಟನೆ ಮತ್ತು ಏಳಿಗೆಗಾಗಿ ಶ್ರೀಗಳು ಪಟ್ಟ ಶ್ರಮದ ಫಲವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭೋವಿ ಸಂಘಟನೆಯನ್ನು ಕಟ್ಟಲು ಸಾಧ್ಯವಾಗಿದೆ ಎಂದು ತಿಳಿಸಿ2027 ಜನವರಿ 14ರಂದು ರಾಜ್ಯ ಮಟ್ಟದ ಬೃಹತ್ ಸಿದ್ದರಾಮೇಶ್ವರ ಜಯಂತಿಯನ್ನು ಹೊಳಲ್ಕೆರೆಯಲ್ಲಿ ನಡೆಸಲಾಗುವುದು ರಾಜ್ಯದ ಎಲ್ಲಾ ಮುಖಂಡರನ್ನು ಈ ಸಮಾವೇಶದಲ್ಲಿ ಸೇರಿಸಲಾಗುತ್ತದೆ ಎಂದು ಹೆಳಿದರು. ಭೋವಿ ಗುರುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ ಸಿದ್ಧರಾಮೇಶ್ವರರು ವಚನ ಚಳವಳಿಯ ಬಹುದೊಡ್ಡ ಶಕ್ತಿ. ಕಲ್ಯಾಣದಲ್ಲಿ ಶರಣರ ಮೇಲೆ ನಡೆದ ರಕ್ತಸಿಕ್ತ ಹಿಂಸೆಯ ನಂತರದಲ್ಲಿ ವಚನ ಸಾಹಿತ್ಯ ಮತ್ತು ಚಳವಳಿಯ ಚಲನಶೀಲತೆಯನ್ನು ಕಾಪಾಡಿದ್ದು ಸಿದ್ಧರಾಮೇಶ್ವರರು […] - [ಮುರುಘಾ ಮಠದ ಸೇವಾ ಕಾರ್ಯಗಳ ಮೇಲೆ ಸಂಶೋಧನೆ: ಉಷಾ ಜಿ. ಡಾಕ್ಟರೇಟ್ ಸಾಧನೆ.](https://samagrasuddi.co.in/research-on-muruga-mutt-seva-works-usha-ji-doctoral-achievement/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ, ಜ. 15 ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಚಿತ್ರದುರ್ಗ ನಗರದ ಉಷಾ ಜಿ. ಅವರಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗಿದೆ. ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯ ಗಂಗಾಧರಪ್ಪ ಅವರ ಪುತ್ರಿಯಾದ ಉಷಾ ಜಿ., ಡಾ. ತಾರಿಹಳ್ಳಿ ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ಜಗದೀಶಕುಮಾರ್ ಸಿ.ಎನ್. ಅವರ ಸಹ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಇವರು “ಚಿತ್ರದುರ್ಗ ಮುರುಘಾ ಮಠದ ಸಮಾಜಮುಖಿ ಕಾರ್ಯಗಳು : ಒಂದು ಸಾಮಾಜಿಕ ಅಧ್ಯಯನ” ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಮಂಡಿಸಿ, ಪಿಎಚ್.ಡಿ. ಪದವಿಗೆ ಅರ್ಹರಾಗಿದ್ದಾರೆ. ಚಿತ್ರದುರ್ಗದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿರುವ ಮುರುಘಾ ಮಠದ ಸಮಾಜ ಸೇವಾ ಚಟುವಟಿಕೆಗಳ ಕುರಿತು ನಡೆಸಿದ ಈ ಅಧ್ಯಯನ, ಸಾಮಾಜಿಕ ಅಧ್ಯಯನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಸಂಶೋಧನಾ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಉಷಾ ಜಿ. ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬದವರು, […] - [ಭಕ್ತಿಯ ಶಕ್ತಿ: ಭಗವಂತನ ಆಶೀರ್ವಾದದಿಂದ ಸಂಕಷ್ಟ ನಿವಾರಣೆ — ಕೆ.ಎಸ್. ನವೀನ್.](https://samagrasuddi.co.in/the-power-of-bhakti-relief-of-suffering-with-gods-blessings-ks-naveen/): ದೀಪಗಳ ಬೆಳಕು, ಭಕ್ತಿಯ ಸಂಗೀತ: ಚಿತ್ರದುರ್ಗದಲ್ಲಿ ಅಯ್ಯಪ್ಪ ಸ್ವಾಮಿ ದೀಪೋತ್ಸವ ಚಿತ್ರದುರ್ಗ ಜ. 15 ಭಕ್ತರಾದವರು ಭಗವಂತನಿಗೆ ನಿಜವಾದ ಭಕ್ತಿಯನ್ನು ನೀಡಿದರೆ ಆತ ಅದನ್ನು ಮರಳಿ ಭಕ್ತರಿಗೆ ಆರ್ಶೀವಾದದ ರೀತಿಯಲ್ಲಿ ಅವರ ಕಷ್ಟಗಳನ್ನು ಬಗೆಹರಿಸುತ್ತಾನೆ ಎಂಬ ನಂಬಿಕೆ ನಮ್ಮ ಹಿಂದೂಗಳಲ್ಲಿ ಇದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು. ನಗರದ ಮೆದೇಹಳ್ಳಿ ರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ (ರಿ.)ವತಿಯಿಂದ ಬುಧವಾರ ಸಂಜೆ ನಡೆದ 26ನೇ ವರ್ಷದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‍ವತಿಯಿಂದ ಕಳೆದ 25 ವರ್ಷಗಳಿಂದ ನಿರಂತರವಾಗಿ ದೀಪೋತ್ಸವನ್ನು ನಡೆಸುತ್ತಾ ಬರಲಾಗಿದೆ. ಇದು ರಾಜ್ಯದೆಲ್ಲಡೆ ಖ್ಯಾತಿಯನ್ನು ಪಡೆದಿದೆ. ಪ್ರತಿ ದಿನ ಪೂಜಾ ಚಟುವಟಿಕೆಗಳು ನಡೆಯುವುದರ ಮೂಲಕ ದೇವರಿಗೆ ಭಕ್ತಿಯನ್ನು ಪ್ರದರ್ಶನ ಮಾಡಿ ದೈವಿಕ ಶಕ್ತಿ ಬೆಳೆಯುತ್ತಿದೆ. ಭಕ್ತನಾದವರು ಭಗವಂತನಿಗೆ ನಿಜವಾದ ಭಕ್ತಿಯನ್ನು ನೀಡಿದರೆ ಆತನು ತನ್ನ ಭಕ್ತರು ಸಂಕಷ್ಟದಲ್ಲಿ ಇದ್ದಾಗ ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ದೇವರು ಭಕ್ತರ ಮಧ್ಯೆ […] - [ಸ್ವದೇಶಿ ವಸ್ತು ಬಳಕೆಯಿಂದ ರೈತರು–ವ್ಯಾಪಾರಿಗಳ ಆರ್ಥಿಕ ಶಕ್ತಿ ವೃದ್ಧಿ: ಬ್ರಿಗೇಡಿಯರ್ ರವಿ ಮುನಿಸ್ವಾಮಿ.](https://samagrasuddi.co.in/brigadier-ravi-muniswamy-economic-empowerment-of-farmers-traders-by-use-of-swadeshi-materials/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 15 ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಬೇಕು, ಇದರಿಂದ ನಮ್ಮ ರೈತರ, ವ್ಯಾಪಾರಿಗಳ ಆರ್ಥಿಕ ಶಕ್ತಿ ಹೆಚ್ಚಿಸಲು ಸಾಧ್ಯವಿದೆ. ದೇಶದ ಆರ್ಥಿಕ ಸ್ಥಿತಿ ಉನ್ನತಿ ಹೊಂದಲಿದೆ ಎಂದು ಸ್ವದೇಶಿ ಸೈಕಲ್ ಜಾಗರಣಾ ಸಮಿತಿಯ ಮುಖಂಡ ಬ್ರಿಗೇಡಿಯರ್ ರವಿ ಮುನಿಸ್ವಾಮಿ ತಿಳಿಸಿದರು. ಚಿತ್ರದುರ್ಗ ಜಿಲ್ಲೆಗೆ ನಿನ್ನೆ ಆಗಮಿಸಿದ ಸ್ವದೇಶಿ ವಸ್ತುಗಳ ಬಳಕೆ ಕುರಿತು ಹಮ್ಮಿಕೊಂಡಿರುವ ಬೈಸಿಕಲ್ ಜಾಥಾ ಬಳ್ಳಾರಿ ಜಿಲ್ಲೆಯಿಂದ ತಾಲ್ಲೂಕಿನ ರಾಂಪುರ ಮೂಲಕ ತಾಲ್ಲೂಕಿಗೆ ಬಂದ ಜಾಥಾ ಹಾನಗಲ್ ಮೂಲಕ ಬಿ.ಜಿ.ಕೆರೆ ಮೂಲಕ ಚಳ್ಳಕೆರೆಯನ್ನು ತಲುಪಿ ರಾತ್ರಿ ಚಿತ್ರದುರ್ಗವನ್ನು ತಲುಪಿತು ಗುರುವಾರ ಕೋಟೆಯ ಮುಂಭಾಗದಲ್ಲಿ ಬೈಸಿಕಲ್ ಪಯಾಣವನ್ನು ಪ್ರಾರಂಭಿಸಿ ಮಾತನಾಡಿದ ಅವರು, ಸ್ವದೇಶಿ ವಸ್ತುಗಳ ಜಾಗೃತಿಗೆ ಸೈಕಲ್ ಯಾತ್ರೆ 35 ದಿನಗಳ ಯಾತ್ರೆ, 3500ಕಿ.ಮೀ. ಕ್ರಮಿಸುವ ಗುರಿಯನ್ನು ಹೊಂದಲಾಗಿದೆ. ಜನ ಸ್ವದೇಶಿ ವಸ್ತುಗಳನ್ನೇ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸಲು ಬೆಂಗಳೂರಿನ ಸ್ವದೇಶಿ ಬೈಸಿಕಲ್ […] - [ದಿನಕ್ಕೊಂದು ಶ್ಲೋಕ: ಭಗವದ್ಗೀತೆ – ಅಧ್ಯಾಯ 1 | ಶ್ಲೋಕ 15 (ಅರ್ಜುನ ವಿಷಾದ ಯೋಗ)](https://samagrasuddi.co.in/a-shloka-a-day-bhagavad-gita-chapter-1-shloka-15-arjuna-vishad-yoga/): ಮೂಲ ಶ್ಲೋಕ (ಸಂಸ್ಕೃತ): ಪಾಂಚಜನ್ಯಂ ಹೃಷೀಕೇಶೋದೇವದತ್ತಂ ಧನಂಜಯಃ |ಪೌಂಡ್ರಂ ದಧ್ಮೌ ಮಹಾಶಂಖಂಭೀಮಕರ್ಮಾ ವೃಕೋದರಃ || ಕನ್ನಡ ಅರ್ಥ: ಹೃಷೀಕೇಶನಾದ ಶ್ರೀಕೃಷ್ಣನು ಪಾಂಚಜನ್ಯ ಶಂಖವನ್ನು ಊದಿದರು.ಧನಂಜಯನಾದ ಅರ್ಜುನನು ದೇವದತ್ತ ಶಂಖವನ್ನು ಊದಿದನು.ಭೀಕರ ಕರ್ಮಗಳನ್ನು ಮಾಡುವ ವೃಕೋದರನಾದ ಭೀಮನು ಪೌಂಡ್ರ ಎಂಬ ಮಹಾ ಶಂಖವನ್ನು ಊದಿದನು. ವಿವರಣೆ : ಈ ಶ್ಲೋಕದಲ್ಲಿ ಪಾಂಡವ ಸೇನೆಯ ಶಕ್ತಿಯ ಘೋಷಣೆ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಪ್ರತಿಯೊಬ್ಬ ಯೋಧನ ಶಂಖವೂ ಅವರ ವ್ಯಕ್ತಿತ್ವ ಮತ್ತು ಶೌರ್ಯದ ಸಂಕೇತವಾಗಿದೆ. ಶ್ರೀಕೃಷ್ಣನ ಪಾಂಚಜನ್ಯ ಶಂಖವು ದೈವಿಕ ಮಾರ್ಗದರ್ಶನ ಮತ್ತು ಧರ್ಮದ ಪ್ರತೀಕವಾಗಿದೆ. ಅರ್ಜುನನ ದೇವದತ್ತ ಶಂಖವು ವಿಜಯ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಭೀಮನ ಪೌಂಡ್ರ ಶಂಖವು ಅವನ ಅಪಾರ ಶಕ್ತಿ ಮತ್ತು ಶತ್ರುಗಳಿಗೆ ಉಂಟಾಗುವ ಭಯವನ್ನು ಪ್ರತಿಬಿಂಬಿಸುತ್ತದೆ. ಈ ಶಂಖನಾದಗಳು ಕೇವಲ ಯುದ್ಧದ ಸಂಕೇತವಲ್ಲ; ಅಧರ್ಮದ ವಿರುದ್ಧ ಧರ್ಮ ನಿಲ್ಲುವುದರ ಘೋಷಣೆಯಾಗಿದೆ. ಜೀವನದಲ್ಲೂ ನಾವು ನಮ್ಮ ಧರ್ಮ, ಶಕ್ತಿ ಮತ್ತು ನಂಬಿಕೆಯನ್ನು ಧೈರ್ಯವಾಗಿ ವ್ಯಕ್ತಪಡಿಸಬೇಕು ಎಂಬ ಸಂದೇಶವನ್ನು ಈ ಶ್ಲೋಕ ನೀಡುತ್ತದೆ. ಇಂದಿನ […] - [ಜನವರಿ 15: ಶೌರ್ಯ, ಸಂಪ್ರದಾಯ ಮತ್ತು ಜ್ಞಾನದ ತ್ರಿವೇಣಿ ಸಂಗಮ](https://samagrasuddi.co.in/january-15-triveni-confluence-of-shaurya-tradition-and-knowledge/): ​ಜನವರಿ 15 ಭಾರತೀಯರಿಗೆ ಹೆಮ್ಮೆಯ ದಿನ ಮಾತ್ರವಲ್ಲದೆ, ಜಾಗತಿಕ ಇತಿಹಾಸದಲ್ಲಿ ಜ್ಞಾನದ ಕ್ರಾಂತಿ ಉಂಟಾದ ದಿನವೂ ಹೌದು. ಈ ದಿನದ ಮೂರು ಪ್ರಮುಖ ಮೈಲಿಗಲ್ಲುಗಳ ವಿವರ ಇಲ್ಲಿದೆ: ​1. ಭಾರತೀಯ ಸೇನಾ ದಿನ (Indian Army Day): ಶೌರ್ಯಕ್ಕೆ ನಮನ ​ಪ್ರತಿ ವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ​2. ಪೊಂಗಲ್ ಆಚರಣೆ: ರೈತರ ಹಬ್ಬದ ಮುಂದುವರಿಕೆ ​ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ಸಂಕ್ರಾಂತಿಯ ಮರುದಿನವೂ ಹಬ್ಬದ ಸಡಗರ ಮುಂದುವರಿಯುತ್ತದೆ. ​3. ವಿಕಿಪೀಡಿಯಾ ಉಡಾವಣೆ (2001): ಜಾಗತಿಕ ಜ್ಞಾನದ ಕ್ರಾಂತಿ ​ಇಂದಿನ ಡಿಜಿಟಲ್ ಯುಗದಲ್ಲಿ ನಮಗೆ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗುವುದೇ ವಿಕಿಪೀಡಿಯಾ. ಜೀವನವೆಂಬ ಸುದೀರ್ಘ ಪಯಣದಲ್ಲಿ ಈ ದಿನವು ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸೇತುವೆಯಾಗಿದೆ. ಒಂದು ಕಡೆ ಭಾರತೀಯ ಸೇನೆಯು ತನ್ನ ಶೌರ್ಯ ಮತ್ತು ಬದ್ಧತೆಯಿಂದ ನಮ್ಮ ಗಡಿಗಳನ್ನು ಕಾಯುತ್ತಾ ದೇಶಕ್ಕೆ ಭದ್ರತೆಯ ಭರವಸೆ ನೀಡಿದರೆ, ಇನ್ನೊಂದು ಕಡೆ ಪೊಂಗಲ್ […] - [ಚಳಿಗಾಲದ ಆರೋಗ್ಯಕ್ಕೆ ಎಳ್ಳೇ 'ಸಂಜೀವಿನಿ': ಆಧುನಿಕ ಜೀವನಶೈಲಿಗೆ ನಮ್ಮ ಹಿರಿಯರ ಪುರಾತನ ಪರಿಹಾರದ ಸಂಪೂರ್ಣ ಮಾಹಿತಿ.](https://samagrasuddi.co.in/ellae-sanjeevini-for-winter-health-complete-information-on-our-ancient-ancient-remedy-for-modern-lifestyle/): ಚಳಿಗಾಲದ ಆರೋಗ್ಯಕ್ಕೆ ಎಳ್ಳು (Sesame) ಸಂಜೀವಿನಿ: ಇದು ಕೇವಲ ಹಬ್ಬದ ಆಚರಣೆಯಲ್ಲ, ರೋಗಗಳ ವಿರುದ್ಧ ನಮ್ಮ ಹಿರಿಯರು ನೀಡಿದ ‘ವೈಜ್ಞಾನಿಕ ರಕ್ಷಾಕವಚ’! ಈ ಬಾರಿಯ ಚಳಿಗಾಲದಲ್ಲಿ ಚಳಿ ಸ್ವಲ್ಪ ಹೆಚ್ಚಾಗಿಯೇ ಇದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಕೇವಲ ತಾಪಮಾನ ಕುಸಿಯುವುದಲ್ಲ, ನಮ್ಮ ದೇಹದ ಜೈವಿಕ ಕ್ರಿಯೆಗಳಲ್ಲಿ (Biological changes) ಅಗಾಧ ಬದಲಾವಣೆಗಳಾಗುತ್ತವೆ. ವೈದ್ಯಕೀಯ ಪೋಷಣಾ ಶಾಸ್ತ್ರದ ಪ್ರಕಾರ, ಚಳಿಗಾಲವು ದೇಹದ ಆಂತರಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಚಯಾಪಚಯ ಕ್ರಿಯೆಯ ಶಾಖ ಅಥವಾ ‘ಜಠರಾಗ್ನಿ’ಯನ್ನು ತೀವ್ರಗೊಳಿಸಬೇಕಾದ ಸಮಯ. ಇಂದಿನ ಆಧುನಿಕ ಕೃಷಿ ಪದ್ಧತಿಯಿಂದಾಗಿ, ಹಿಂದೆ ಚಳಿಗಾಲದಲ್ಲಿ ಮಾತ್ರ ದೊರೆಯುತ್ತಿದ್ದ ಹಣ್ಣು-ತರಕಾರಿಗಳು ಈಗ ಎಲ್ಲಾ ಕಾಲದಲ್ಲೂ ಸಿಗುತ್ತವೆ. ಆದರೆ ಪ್ರಕೃತಿಯ ನಿಯಮ ಮೀರಿ ಇವುಗಳನ್ನು ಸೇವಿಸುತ್ತಿರುವ ಕಾರಣಕ್ಕೆ ನಾವು ಬೆಲೆ ತೆರಬೇಕಾಗಿ ಬಂದಿದೆ. ಹೀಗಾಗಿ, ನಮ್ಮ ಹಿರಿಯರು ರೂಪಿಸಿದ “ಋತುಚರ್ಯ” ಅಥವಾ ಕಾಲಕ್ಕೆ ತಕ್ಕ ಆಹಾರ ಪದ್ಧತಿಯನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಅದರಲ್ಲಿ ಪ್ರಮುಖವಾದದ್ದು ‘ಎಳ್ಳು’. 1. ದೇಹಕ್ಕೆ ಉಷ್ಣತೆ ನೀಡುವ ಶಕ್ತಿ ಕೇಂದ್ರ (Thermal Energy Source) […] - [​ರಾಜ್‌ಕೋಟ್‌ನಲ್ಲಿ ಕಿವೀಸ್ ಅಬ್ಬರ: ಕೆ.ಎಲ್. ರಾಹುಲ್ ಆಕರ್ಷಕ ಶತಕ ವ್ಯರ್ಥ, ಸರಣಿಯಲ್ಲಿ ಸಮಬಲ ಸಾಧಿಸಿದ ನ್ಯೂಜಿಲೆಂಡ್](https://samagrasuddi.co.in/new-zealand-level-series-in-rajkot-with-kiwis-kl-rahuls-impressive-century-wastedu/): ​ರಾಜ್‌ಕೋಟ್: ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವು ರೋಚಕ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕಿವೀಸ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರ ಭರ್ಜರಿ ಶತಕಗಳ ನಡುವಿನ ಪೈಪೋಟಿಯಲ್ಲಿ, ಅಂತಿಮವಾಗಿ ಜಯ ನ್ಯೂಜಿಲೆಂಡ್ ಪಾಲಾಯಿತು. 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಪ್ರವಾಸಿ ಪಡೆ, ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿದೆ. ​ಆರಂಭಿಕರ ಭದ್ರ ಬುನಾದಿ, ಮಧ್ಯಮ ಕ್ರಮಾಂಕದ ಕುಸಿತ ​ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಪರ ಆರಂಭಿಕರಾಗಿ ಬಂದ ರೋಹಿತ್ ಶರ್ಮಾ (24 ರನ್, 38 ಎಸೆತ) ಮತ್ತು ನಾಯಕ ಶುಭಮನ್ ಗಿಲ್ (56 ರನ್, 53 ಎಸೆತ) ಮೊದಲ ವಿಕೆಟ್‌ಗೆ 70 ರನ್ ಸೇರಿಸಿ ಭರವಸೆಯ ಆರಂಭ ನೀಡಿದರು. ಗಿಲ್ ಅವರ ಆಟದಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು. ಆದರೆ 13ನೇ […] - [ನಿತ್ಯ ಭವಿಷ್ಯ 15 ಜನವರಿ 2026: ಗುರುರಾಯರ ವಿಶೇಷ ಆಶೀರ್ವಾದದಿಂದ ಈ ರಾಶಿಗಳಿಗೆ ಹಠಾತ್ ಧನಲಾಭ, ಯಶಸ್ಸು!](https://samagrasuddi.co.in/daily-prediction-15th-january-2026-sudden-money-gain-success-for-these-rasis-with-special-blessings-of-guru-raya/): 2026 ಜನವರಿ 15ರ ಗುರುವಾರ ಜ್ಯೋತಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಇಂದಿನ ದಿನ ಚಂದ್ರನು ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತಿದ್ದು, ಮಂಗಳ ಮತ್ತು ಬುಧನೊಂದಿಗೆ ದ್ವಿದ್ವಾಶ ಯೋಗವನ್ನು ರೂಪಿಸುತ್ತಾನೆ. ಇದರ ನಡುವೆಯೇ ವೃದ್ಧಿ ಯೋಗದ ಶುಭ ಸಂಯೋಗ ಜ್ಯೇಷ್ಠ ನಕ್ಷತ್ರದಲ್ಲಿ ರೂಪುಗೊಳ್ಳುತ್ತಿರುವುದರಿಂದ, ಭಗವಾನ್ ವಿಷ್ಣುವಿನ ಕೃಪೆಯೊಂದಿಗೆ ಕೆಲವು ರಾಶಿಗಳಿಗೆ ಇಂದು ಅತ್ಯಂತ ಅದೃಷ್ಟಕರ ದಿನವಾಗಲಿದೆ. ಗ್ರಹಗಳ ಈ ವಿಶಿಷ್ಟ ಸಂಯೋಗದಿಂದ ಉದ್ಯೋಗ, ವ್ಯಾಪಾರ, ಹಣಕಾಸು, ಕುಟುಂಬ ಜೀವನ, ಆರೋಗ್ಯ ಹಾಗೂ ಪ್ರೇಮ ಸಂಬಂಧಗಳಲ್ಲಿ ಬದಲಾವಣೆ ಕಂಡುಬರಲಿದೆ. ಹಾಗಾದರೆ ಮೇಷದಿಂದ ಮೀನ ರಾಶಿವರೆಗೆ ಇಂದಿನ ದಿನವು ಹೇಗಿರಲಿದೆ? ಯಾರಿಗೆ ಶುಭ? ಯಾರಿಗೆ ಎಚ್ಚರಿಕೆ ಅಗತ್ಯ? ಸಂಪೂರ್ಣ ರಾಶಿ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳಿ. ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳು ಲಭ್ಯವಾಗುತ್ತವೆ. ಪ್ರಗತಿಯ ಹಾದಿಯಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿದ್ದು, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಬಯಸಿದ ಯಶಸ್ಸನ್ನು ಪಡೆಯುವಿರಿ. ಆದರೆ ಕೆಲಸದ ಸ್ಥಳದಲ್ಲಿ ಸ್ಪರ್ಧಾತ್ಮಕ ವಾತಾವರಣ ಹೆಚ್ಚಾಗಿರುತ್ತದೆ. ಕೆಲವರು ತಮ್ಮ […] - [ಬಳ್ಳಾರಿ ಟು ಬೆಂಗಳೂರು ಪಾದಯಾತ್ರೆ ಬಗ್ಗೆ ವರಿಷ್ಠರ ಜೊತೆ ಚರ್ಚೆ: ಶೀಘ್ರ ನಿರ್ಧಾರ – ಬಿ.ವೈ.ವಿಜಯೇಂದ್ರ.](https://samagrasuddi.co.in/discussion-with-seniors-about-bellary-to-bangalore-padayatra-quick-decision-b-y-vijayendra/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ,ಜ.14: ಬಳ್ಳಾರಿ ಟೂ ಬೆಂಗಳೂರು ಬಿಜೆಪಿ ಪಾದಯಾತ್ರೆ ಮಾಡಬೇಕು ಎಂಬುವುದು ರಾಜ್ಯದ ಎಲ್ಲಾ ನಾಯಕರ ಅಭಿಪ್ರಾಯವಾಗಿದ್ದು, ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಮಾಡಬೇಕು ಎಂಬುವುದು ಜನಾರ್ಧನರೆಡ್ಡಿ, ಶ್ರೀರಾಮುಲು ಅಭಿಪ್ರಾಯ ಮಾತ್ರ ಅಲ್ಲ, ನಮ್ಮೆಲ್ಲರ ಅಭಿಪ್ರಾಯವಾಗಿದೆ. ವರಿಷ್ಠರ ಜೊತೆ ಈಗಾಗಲೇ ನಾನು ಮಾತನಾಡಿದ್ದೇನೆ. ಒಂದೆರಡು ದಿನದಲ್ಲಿ ಪಾದಯಾತ್ರೆ ಬಗ್ಗೆ ಮಾಹಿತಿ ಸಿಗಲಿದೆ ಎಂದ ಅವರು, ರಾಜ್ಯದಲ್ಲಿ ಅರಾಜಕತೆ ವಿರುದ್ಧ ಹೋರಾಟಕ್ಕೆ ಪಕ್ಷ ನಿರ್ಧಾರ ಮಾಡಿದ್ದು, ಮೊದಲ ಹಂತದಲ್ಲಿ ಜ.17ಕ್ಕೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೆವೆ ಎಂದರು. ಡಿಸಿಎಂ ಡಿಕೆಶಿ ಶಿಕಾರಿಪುರಕ್ಕೆ ಪಾದಯಾತ್ರೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಾದಯಾತ್ರೆ ಬೇಡ ಡಿ.ಕೆ.ಶಿವಕುಮಾರ್ ಶಿಕಾರಿಪುರಕ್ಕೆ ಬಂದು ಸ್ಪರ್ಧೆ ಮಾಡಲಿ ಎಂದು ಸವಾಲು ಹಾಕಿ ಮೈಸೂರು ಹೆಲಿಪ್ಯಾಡ್‍ನಲ್ಲಿ ರಾಹುಲ್‍ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಚರ್ಚೆ […] - [“ಸಂಕ್ರಾಂತಿಯ ಸುಗ್ಗಿ ಸಂಭ್ರಮ 2026” –ಗ್ರಾಮೀಣ ಸೊಗಡಿನ ಸಂಕ್ರಾಂತಿ; ಮಕ್ಕಳಿಂದ ಸಂಪ್ರದಾಯಗಳ ಜೀವಂತ ಪ್ರದರ್ಶನ.](https://samagrasuddi.co.in/sankranti-harvest-celebration-2026-a-live-performance-of-traditions-by-sankranti-children-of-village-sogad/): ಚಿತ್ರದುರ್ಗ | ದಿನಾಂಕ: 14-01-2026 ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಸಂಕ್ರಾಂತಿ ಹಬ್ಬ”ವನ್ನು ಬಹಳ ವಿಜೃಂಭಣೆಯಿAದ ಆಚರಿಸಲಾಯಿತು. “ಸಂಕ್ರಾಂತಿಯ ಸುಗ್ಗಿ ಸಂಭ್ರಮ – 2026” ಸಂಸ್ಥೆಯ ಐಸಿಎಸ್‌ಸಿ ವಿಭಾಗದ 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳು ಆಕರ್ಷಕ ಸಾಂಪ್ರದಾಯಿಕ ಉಡುಪುಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಕ್ಕಳ ಸಂಭ್ರಮ, ಹಳ್ಳಿಯ ಸೊಗಡು ಹಾಗೂ ಸಂಪ್ರದಾಯಗಳ ಮೆರವಣಿಗೆಯೊಂದಿಗೆ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವು ಮನಮೋಹಕವಾಗಿ ನಡೆಯಿತು. ಗೋಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕಾರ್ಯಕ್ರಮವನ್ನು ಚಿತ್ರದುರ್ಗದ ರೋಟರಿಯನ್ ಆಗಿರುವ ಶ್ರೀಮತಿ ಗಾಯಿತ್ರಿ ಶಿವರಾಂ ಅವರು, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ. ವಿಜಯ ಕುಮಾರ್, ನಿರ್ದೇಶಕರಾದ ಶ್ರೀಮತಿ ಸುನೀತಾ ವಿಜಯ ಕುಮಾರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಎಂ. ಪೃಥ್ವೀಶ ಅವರೊಂದಿಗೆ ಸೇರಿ ಗೋಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದರು. ರಾಶಿಪೂಜೆ – ಹಳ್ಳಿಯ ಸಂಪ್ರದಾಯದ ಅನುರಣನ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹೊಲದಲ್ಲಿ ಧವಸ-ಧಾನ್ಯಗಳ ರಾಶಿ ಮಾಡಿ ಪೂಜೆ ಮಾಡುವ ಸಂಪ್ರದಾಯದಂತೆ ಇಲ್ಲಿ ಕೂಡ ಕಾಳುಗಳ ರಾಶಿ ಮಾಡಿ ರಾಶಿಪೂಜೆ […] - [ICC ODI Rankings: 4 ವರ್ಷಗಳ ಬಳಿಕ ODI ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಮರಳಿದ ವಿರಾಟ್ ಕೊಹ್ಲಿ.](https://samagrasuddi.co.in/icc-odi-rankings-after-4-years-virat-kohli-returned-to-the-no-1-position-in-the-odi-batting-rankings/): ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ, ಐಸಿಸಿ ಒಡಿಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. 4 ವರ್ಷಗಳ ಬಳಿಕ ಕೊಹ್ಲಿ ನಂಬರ್‌–1 ಸ್ಥಾನಕ್ಕೆ ಮರಳಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇದು ದೊಡ್ಡ ಸಂತೋಷದ ಸುದ್ದಿಯಾಗಿದೆ. ಈ ನಡುವೆ ತಂಡದ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೊಹ್ಲಿಯ ಭರ್ಜರಿ ಇನ್ನಿಂಗ್ಸ್‌ನಿಂದ ಶ್ರೇಯಾಂಕದಲ್ಲಿ ಏರಿಕೆ ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 93 ರನ್‌ಗಳನ್ನು ಕಲೆ ಹಾಕಿದರು. ಈ ಇನ್ನಿಂಗ್ಸ್‌ನ ಪರಿಣಾಮವಾಗಿ ಅವರು ಐಸಿಸಿ ಒಡಿಐ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದರು. ಕೊಹ್ಲಿ ಇದಕ್ಕೂ ಮೊದಲು 2021ರ ಜುಲೈನಲ್ಲಿ ಕೊನೆಯ ಬಾರಿ ನಂಬರ್‌–1 ಸ್ಥಾನದಲ್ಲಿದ್ದರು. 11ನೇ ಬಾರಿ ODI ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 11ನೇ ಬಾರಿ ಐಸಿಸಿ ಒಡಿಐ ಬ್ಯಾಟಿಂಗ್ ಶ್ರೇಯಾಂಕದ […] - [NHAI ನೇಮಕಾತಿ 2026: ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.](https://samagrasuddi.co.in/nhai-recruitment-2026-inviting-application-for-deputy-manager-posts/): ಭಾರತ ಸರ್ಕಾರದಡಿ ಕಾರ್ಯನಿರ್ವಹಿಸುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಸಿವಿಲ್ ಎಂಜಿನಿಯರಿಂಗ್‌ನಲ್ಲಿ BE/B.Tech ಪದವಿ ಪಡೆದ ಯುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಸರ್ಕಾರಿ ಉದ್ಯೋಗ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 09, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. NHAI ಡೆಪ್ಯೂಟಿ ಮ್ಯಾನೇಜರ್ ನೇಮಕಾತಿ – ಮುಖ್ಯ ವಿವರಗಳು ಶೈಕ್ಷಣಿಕ ಅರ್ಹತೆ NHAI ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ವಯಸ್ಸಿನ ಮಿತಿ (09-02-2026 ರಂತೆ) ವಯೋಮಿತಿ ಸಡಿಲಿಕೆ ಅರ್ಜಿ ಸಲ್ಲಿಸುವ ವಿಧಾನ ಯಾರಿಗೆ ಈ ಉದ್ಯೋಗ ಅವಕಾಶ ಸೂಕ್ತ? ಮುಖ್ಯ ಸೂಚನೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದುವುದು ಅತ್ಯಗತ್ಯ. ತಪ್ಪು ಮಾಹಿತಿ ನೀಡಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. - [ಚಿತ್ರದುರ್ಗ| ಶ್ರೀ ಅಯ್ಯಪ್ಪಸ್ವಾಮಿ 26ನೇ ವರ್ಷದ ದೀಪೋತ್ಸವ ಅಂಗವಾಗಿ ಆಭರಣಗಳ ಭವ್ಯ ಮೆರವಣಿಗೆ.](https://samagrasuddi.co.in/chitradurga-sri-ayyappaswamy-26th-annual-deepotsavam-a-grand-procession-of-ornaments/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 14: ನಗರದ ಮೆದೇಹಳ್ಳಿ ರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ (ರಿ.)ವತಿಯಿಂದ 26ನೇ ವರ್ಷದ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ನಗರದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಸ್ವಾಮಿಯ ಆಭರಣಗಳ ಮೆರವಣಿಗೆ ಜ 13ರ ಸಂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿಗೆ ಧರಿಸುವ ವಿವಿಧ ರೀತಿಯ ಆಭರಣಗಳು ಹಾಗೂ ದಾನಿಗಳು ನೀಡಿದ ವಜ್ರಾಭರಣವನ್ನು ಸಹಾ ಇರಿಸಿ ಅಯ್ಯಪ್ಪ ಮಾಲಾಧಾರಿಗಳಿಂದ ಅವುಗಳಿಗೆ ಪೂಜೆಯನ್ನು ಮಾಡುವುದರ ಮೂಲಕ ದೇವಾಲಯದಿಂದ ತಲೆಯ ಮೇಲೆ ಇರಿಸಿಕೊಂಡು ಸಂತೇಪೇಟೆ ವೃತ್ತ, ಬಿ.ಡಿ.ರಸ್ತೆ, ವಾಸವಿ ಮಹಲ್ ರಸ್ತೆ, ಸಂತೇಹೊಂಡದ ರಸ್ತೆ, ಮೂಲಕ ಮೇದೇಹಳ್ಳಿ ರಸ್ತೆಯಿಂದ ಅಯ್ಯಪ್ಪಸ್ವಾಮಿ ದೇವಾಲಯವನ್ನು ತಲುಪಲಾಯಿತು. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಶರಣ್ ಕುಮಾರ್, ಉಪಾಧ್ಯಕ್ಷರಾದ ಬೆಟ್ಟದ ಮಲ್ಲಪ್ಪ, ಮಲ್ಲಿಕಾರ್ಜನ್, ಕಾರ್ಯದರ್ಶಿ ಎಂ.ಪಿ.ವೆಂಕಟೇಶ್, ಸಹ ಕಾರ್ಯದರ್ಶಿ ಚಂದ್ರಶೇಖರ್, ನಿರ್ದೆಶಕರಾದ ಮೋಹನ್ ಕುಮಾರ್, ತಿಮ್ಮಣ್ಣ, ಜಗದೀಶ್, […] - [ಸಾಮರಸ್ಯ ಸಾರುವ- ಸಂಕ್ರಾಂತಿ.](https://samagrasuddi.co.in/sankranti-which-brings-harmony/): ಸಾಮರಸ್ಯ, ಕೃಷಿ ಮತ್ತು ಆಧ್ಯಾತ್ಮಿಕ ಸಂದೇಶ ಸಾರುವ ಮಕರ ಸಂಕ್ರಾಂತಿ ಹಬ್ಬದ ಮಹತ್ವ. ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 14: ಭಾರತದ ಸಂಸ್ಕೃತಿ, ಪರಂಪರೆ ಮತ್ತು ಋತುಚಕ್ರದೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಅತ್ಯಂತ ಮಹತ್ವದ್ದಾಗಿದೆ. ಪ್ರತಿವರ್ಷ ಜನವರಿ 14 ಅಥವಾ 15ರಂದು ಆಚರಿಸಲ್ಪಡುವ ಈ ಹಬ್ಬವು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದನ್ನು ಸೂಚಿಸುತ್ತದೆ. ಇದು ಖಗೋಳಶಾಸ್ತ್ರೀಯ ಮಹತ್ವ ಹೊಂದಿರುವ ಏಕೈಕ ಭಾರತೀಯ ಹಬ್ಬವಾಗಿದ್ದು, ಸೂರ್ಯನ ಉತ್ತರಾಯಣ ಆರಂಭದ ಸಂಕೇತವೂ ಆಗಿದೆ. ಸಂಕ್ರಾಂತಿ ಹಬ್ಬವು ಮುಖ್ಯವಾಗಿ ಕೃಷಿಕರ ಹಬ್ಬವಾಗಿದೆ. ಬೆಳೆ ಕಟಾವು ಮುಗಿದು ಹೊಸ ಧಾನ್ಯ ಮನೆಗೆ ಬರುತ್ತಿರುವ ಸಂತಸದ ಸಮಯ ಇದಾಗಿದೆ. ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ದಿನವೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ರೈತರು ತಮ್ಮ ಪರಿಶ್ರಮದ ಫಲವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಕರ್ನಾಟಕದಲ್ಲಿ ಸಂಕ್ರಾಂತಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಎಳ್ಳು-ಬೆಲ್ಲ ಹಂಚುವ ಸಂಪ್ರದಾಯ ಈ ಹಬ್ಬದ […] - [ನಿತ್ಯ ಭವಿಷ್ಯ, 14 ಜನವರಿ: ಇಂದು ಈ ರಾಶಿಯವರ ಭಾವನೆಗೆ ತೊಂದರೆಯಾಗಲಿದೆ.](https://samagrasuddi.co.in/daily-prediction-14th-january-today-the-feelings-of-this-rashi-will-be-disturbed/): ಜನವರಿ 14,​​ 2026ರ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಬುಧವಾರ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಅನೂರಾಧಾ ಯೋಗ : ಗಂಡ, ಕರಣ : ಬಾಲವ, ಸೂರ್ಯೋದಯ – 06 – 53 am, ಸೂರ್ಯಾಸ್ತ – 06 – 13 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12-33 – 13:58, ಯಮಗಂಡ ಕಾಲ 08:19 – 09:44, ಗುಳಿಕ ಕಾಲ 11:09 – 12:33 ಮೇಷ ರಾಶಿ: ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಅನ್ಯ ಕಾರ್ಯದಿಂದ ನಿಮ್ಮ ಮುಖ್ಯ‌ ಕಾರ್ಯದಲ್ಲಿ ವೇಗವು ಕಡಿಮೆ ಆಗಬಹುದು. ನೂತನ ವಾಹನವನ್ನು ಖರೀದಿಸುವ ಆಲೋಚನೆ ಇರುವುದು. ನಿಮ್ಮ ರಕ್ಷಣೆಯನ್ನು ನೀವೇ ಮಾಡಿಕೊಳ್ಳಬೇಕು.ಸ್ನೇಹಿತರ ಸಂಪಾದನೆಯ ದಾರಿಯನ್ನು […] - [ದಿನಕ್ಕೊಂದು ಶ್ಲೋಕ: ಭಗವದ್ಗೀತೆ –ಅಧ್ಯಾಯ 1 (ಅರ್ಜುನ ವಿಷಾದ ಯೋಗ) | ಶ್ಲೋಕ 14](https://samagrasuddi.co.in/a-shloka-a-day-bhagavad-gita-chapter-1-arjuna-vishad-yoga-shloka-14/): ಮೂಲ ಶ್ಲೋಕ (ಸಂಸ್ಕೃತ): ತತಃ ಶ್ವೇತೈರ್ಹಯೈರ್ಯುಕ್ತೇಮಹತಿ ಸ್ಯಂದನೇ ಸ್ಥಿತೌ |ಮಾಧವಃ ಪಾಂಡವಶ್ಚೈವದಿವ್ಯೌ ಶಂಖೌ ಪ್ರದಧ್ಮತುಃ || ಕನ್ನಡ ಅರ್ಥ: ನಂತರ ಶ್ವೇತ ವರ್ಣದ ಕುದುರೆಗಳು ಜೋಡಿಸಲಾದ ಮಹಾ ರಥದ ಮೇಲೆ ಕುಳಿತಿದ್ದ ಮಾಧವ (ಶ್ರೀಕೃಷ್ಣ) ಮತ್ತು ಪಾಂಡವ (ಅರ್ಜುನ) ಇಬ್ಬರೂ ತಮ್ಮ ತಮ್ಮ ದಿವ್ಯ ಶಂಖಗಳನ್ನು ಊದಿದರು. ವಿವರಣೆ ಈ ಶ್ಲೋಕವು ಕುರುಕ್ಷೇತ್ರ ಯುದ್ಧದ ಆರಂಭದ ಘೋಷಣೆಯಂತಿದೆ. ಶ್ವೇತ ಕುದುರೆಗಳೊಂದಿಗೆ ಅಲಂಕರಿಸಲಾದ ಶ್ರೀಕೃಷ್ಣನ ರಥವು ಶುದ್ಧತೆ, ಧರ್ಮ ಮತ್ತು ದೈವಿಕ ಶಕ್ತಿಯ ಸಂಕೇತವಾಗಿದೆ. ಶ್ರೀಕೃಷ್ಣ ಮತ್ತು ಅರ್ಜುನರು ದಿವ್ಯ ಶಂಖಗಳನ್ನು ಊದುವುದರಿಂದ ಪಾಂಡವ ಪಕ್ಷದ ಆತ್ಮವಿಶ್ವಾಸ, ಧೈರ್ಯ ಮತ್ತು ಧರ್ಮಯುದ್ಧದ ಸಂಕಲ್ಪ ಸ್ಪಷ್ಟವಾಗುತ್ತದೆ. ಇದು ಕೇವಲ ಯುದ್ಧದ ಆರಂಭವಲ್ಲ; ಅಧರ್ಮದ ವಿರುದ್ಧ ಧರ್ಮದ ಘೋಷಣೆಯಾಗಿದೆ. ಈ ಶ್ಲೋಕದಿಂದ ಶ್ರೀಕೃಷ್ಣನ ದೈವಿಕ ಮಾರ್ಗದರ್ಶನದಲ್ಲಿ ಅರ್ಜುನನು ಯುದ್ಧಕ್ಕೆ ಸಿದ್ಧನಾಗುತ್ತಿರುವ ಮನೋಭಾವವನ್ನು ನಾವು ಕಾಣಬಹುದು. ಜೀವನದಲ್ಲಿಯೂ ಧರ್ಮದ ಮಾರ್ಗದಲ್ಲಿ ನಿಲ್ಲುವ ಶಕ್ತಿ ನಮಗೆ ಅಗತ್ಯವೆಂದು ಇದು ಬೋಧಿಸುತ್ತದೆ. ಇಂದಿನ ಸಂದೇಶ ಧರ್ಮದ ಮಾರ್ಗದಲ್ಲಿ ನಿಲ್ಲುವವರಿಗೆ ದೈವಿಕ […] - [ಬೆನ್ನು ನೋವು ನಿವಾರಣೆಗೆ ಯೋಗಾಸನಗಳು: ಪ್ರತಿನಿತ್ಯ ಅಭ್ಯಾಸದಿಂದ ಶಾಶ್ವತ ಪರಿಹಾರ.](https://samagrasuddi.co.in/daily-practice-of-yogasanas-for-back-pain-is-a-permanent-solution/): ಇಂದಿನ ಅನಾರೋಗ್ಯಕರ ಜೀವನಶೈಲಿ, ದೀರ್ಘಕಾಲ ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆ, ತಪ್ಪಾದ ಕುಳಿತುಕೊಳ್ಳುವ ಭಂಗಿ ಇವುಗಳ ಪರಿಣಾಮವಾಗಿ ಬೆನ್ನು ನೋವು ಸಮಸ್ಯೆ ಕೇವಲ ವೃದ್ಧರಲ್ಲಿ ಮಾತ್ರವಲ್ಲದೆ ಹದಿಹರೆಯದವರಲ್ಲೂ ಹೆಚ್ಚಾಗಿ ಕಾಣಿಸುತ್ತಿದೆ. ಬೆನ್ನುನೋವನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಆಯುರ್ವೇದ ತಜ್ಞರ ಪ್ರಕಾರ, ಪ್ರತಿನಿತ್ಯ ಸರಿಯಾದ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಬೆನ್ನುನೋವನ್ನು ಸಹಜವಾಗಿ ನಿಯಂತ್ರಿಸಬಹುದು. ನಮ್ಮ ಬೆನ್ನುಮೂಳೆಗೆ ಬೆಂಬಲ ನೀಡುವ ಕೋರ್ ಸ್ನಾಯುಗಳು (ಕಿಬ್ಬೊಟ್ಟೆ ಮತ್ತು ಕೆಳ ಬೆನ್ನಿನ ಸ್ನಾಯುಗಳು) ದುರ್ಬಲವಾದಾಗ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಯೋಗಾಸನಗಳು ಈ ಸ್ನಾಯುಗಳನ್ನು ಬಲಪಡಿಸಿ ನೋವನ್ನು ಕಡಿಮೆ ಮಾಡುತ್ತವೆ. ಇಂದಿನ ಯುವಜನರಲ್ಲಿ ಬೆನ್ನುನೋವಿನ ಪ್ರಮುಖ ಕಾರಣಗಳು ಬೆನ್ನು ನೋವು ನಿವಾರಿಸಲು ಉಪಯುಕ್ತ ಯೋಗಾಸನಗಳು 1. ಭಾರದ್ವಾಜಾಸನ ಈ ಆಸನವು ಬೆನ್ನುಮೂಳೆ ಹಾಗೂ ಶ್ರೋಣಿಯ ಸ್ನಾಯುಗಳನ್ನು ಬಲಪಡಿಸಿ ದೇಹಕ್ಕೆ ಲವಚಿಕತೆಯನ್ನು ನೀಡುತ್ತದೆ. ಬೆನ್ನು ತಿರುಗಿಸುವ ಚಲನೆಯಿಂದ ಸ್ನಾಯುಗಳ ಬಿಗಿತ ಕಡಿಮೆಯಾಗುತ್ತದೆ. 2. ಸೇತು ಬಂಧಾಸನ ಬೆನ್ನುನೋವನ್ನು ಕಡಿಮೆ ಮಾಡುವ ಜೊತೆಗೆ […] - [ಜನವರಿ 14: ಸುಗ್ಗಿ ದಿನ, ಸಂಸ್ಕೃತಿ, ಇತಿಹಾಸ ಮತ್ತು ಬದಲಾವಣೆಯ ಸಂಗಮ](https://samagrasuddi.co.in/january-14-harvest-day-a-confluence-of-culture-history-and-change/): ​ಜನವರಿ 14 ಕೇವಲ ಒಂದು ದಿನಾಂಕವಲ್ಲ; ಇದು ಭಾರತೀಯರಿಗೆ ಸುಗ್ಗಿಯ ಸಂಭ್ರಮವಾದರೆ, ಜಗತ್ತಿಗೆ ಐತಿಹಾಸಿಕ ಬದಲಾವಣೆಗಳ ಸಾಕ್ಷಿಯಾಗಿದೆ. ಖಗೋಳ ಶಾಸ್ತ್ರದ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ದಿನ, ಹೊಸ ಬೆಳಕಿನ ಸಂಕೇತವಾಗಿದೆ. ​1. ಭಾರತೀಯ ಸಂಸ್ಕೃತಿ: ಸುಗ್ಗಿ ಹಬ್ಬಗಳ ಸಡಗರ ​ಭಾರತದಾದ್ಯಂತ ಈ ದಿನವನ್ನು ವಿಭಿನ್ನ ಹೆಸರುಗಳಿಂದ ಆಚರಿಸಲಾಗುತ್ತದೆ: ​2. ಭಾರತೀಯ ಇತಿಹಾಸದ ಮಹತ್ವದ ಪುಟಗಳು ​3. ವಿಶ್ವ ಇತಿಹಾಸದ ಪ್ರಮುಖ ಘಟನೆಗಳು ​4. ಗಣ್ಯ ವ್ಯಕ್ತಿಗಳ ಸ್ಮರಣೆ ​ಜನವರಿ 14 ಆಧ್ಯಾತ್ಮಿಕವಾಗಿ ಸೂರ್ಯನ ಪಥ ಬದಲಾವಣೆಯ ಕಾಲವಾದರೆ, ಲೌಕಿಕವಾಗಿ ಸಾಹಿತ್ಯ, ವಿಜ್ಞಾನ ಮತ್ತು ಶೌರ್ಯದ ನೆನಪುಗಳನ್ನು ಹೊತ್ತು ತರುತ್ತದೆ. ಇದು ಹಳೆಯದನ್ನು ಮರೆತು ಹೊಸ ಚೈತನ್ಯದೊಂದಿಗೆ ಮುನ್ನಡೆಯಲು ನಮಗೆ ಪ್ರೇರಣೆ ನೀಡುವ ದಿನ. - [​ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಹಣಾಹಣಿ: ಟೀಮ್ ಇಂಡಿಯಾದಲ್ಲಿ ಮಹತ್ತರ ಬದಲಾವಣೆ? ಸುಂದರ್ ಬದಲಿಗೆ ಯಾರಿಗೆ ಚಾನ್ಸ್?](https://samagrasuddi.co.in/2nd-odi-against-new-zealand-big-change-in-team-india-who-has-a-chance-to-replace-sundaru/): ರಾಜ್‌ಕೋಟ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರೋಚಕ ಜಯ ಸಾಧಿಸಿರುವ ಟೀಮ್ ಇಂಡಿಯಾ, ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಜನವರಿ 14ರಂದು ರಾಜ್‌ಕೋಟ್‌ನಲ್ಲಿ ನಡೆಯಲಿರುವ ಈ ಪಂದ್ಯ ಸರಣಿಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ. ಆದರೆ, ಗೆಲುವಿನ ಉತ್ಸಾಹದಲ್ಲಿರುವ ಭಾರತ ತಂಡಕ್ಕೆ ಗಾಯದ ಸಮಸ್ಯೆ ಮತ್ತು ಆಟಗಾರರ ಆಯ್ಕೆಯ ಗೊಂದಲಗಳು ಎದುರಾಗಿವೆ. ​ವಾಷಿಂಗ್ಟನ್ ಸುಂದರ್ ಅಲಭ್ಯ: ತಂಡಕ್ಕೆ ಆಯುಷ್ ಬದೋನಿ ಎಂಟ್ರಿ ​ಮೊದಲ ಪಂದ್ಯದಲ್ಲಿ ಸ್ಪಿನ್ ಆಲ್ರೌಂಡರ್ ಆಗಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಇದು ಭಾರತದ ಸಮತೋಲನಕ್ಕೆ ಸಣ್ಣ ಮಟ್ಟದ ಪೆಟ್ಟು ನೀಡಿದೆ. ಅವರ ಸ್ಥಾನವನ್ನು ತುಂಬಲು ದೆಹಲಿ ಮೂಲದ ಸ್ಫೋಟಕ ಬ್ಯಾಟರ್ ಹಾಗೂ ಪಾರ್ಟ್-ಟೈಮ್ ಸ್ಪಿನ್ನರ್ ಆಯುಷ್ ಬದೋನಿ ಅವರನ್ನು ಆಯ್ಕೆಗಾರರು ತುರ್ತಾಗಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ರಾಜ್‌ಕೋಟ್‌ನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡುವುದರಿಂದ, ಬದೋನಿಯಂತಹ ಬಿರುಸಿನ ಬ್ಯಾಟರ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಬಹುದು. ​ಮಧ್ಯಮ ಕ್ರಮಾಂಕದ ಕುಸಿತ: ಮ್ಯಾನೇಜ್‌ಮೆಂಟ್‌ಗೆ […] - [ಚಳಿಗಾಲದಲ್ಲಿ ಪದೇ ಪದೇ ಕಾಡುವ ಶೀತ-ಕೆಮ್ಮು: ರೋಗನಿರೋಧಕ ಶಕ್ತಿ ಕುಗ್ಗುತ್ತಿದೆಯೇ? ತಜ್ಞರ ಸಲಹೆಗಳು ಇಲ್ಲಿವೆ.](https://samagrasuddi.co.in/here-are-expert-tips-for-frequent-colds-and-coughs-in-winters-if-your-immune-system-is-weakened/): ​ಚಳಿಗಾಲದ ತಂಪಾದ ಹವಾಮಾನವು ಆಹ್ಲಾದಕರವಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಅನೇಕ ಸವಾಲುಗಳನ್ನು ತರುತ್ತದೆ. ಈ ಸಮಯದಲ್ಲಿ ಗಾಳಿಯಲ್ಲಿ ತೇವಾಂಶ ಮತ್ತು ತಾಪಮಾನ ಕಡಿಮೆಯಾಗುವುದರಿಂದ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ಹಾವಳಿ ಹೆಚ್ಚಿರುತ್ತದೆ. ಪರಿಣಾಮವಾಗಿ ಶೀತ, ಕೆಮ್ಮು, ಜ್ವರ ಮತ್ತು ಗಂಟಲು ನೋವಿನಂತಹ ಸಮಸ್ಯೆಗಳು ಕಾಡುವುದು ಸಾಮಾನ್ಯ. ಆದರೆ, ಈ ಲಕ್ಷಣಗಳು ಪದೇ ಪದೇ ಕಂಡುಬರುತ್ತಿದ್ದರೆ ಅಥವಾ ದೀರ್ಘಕಾಲದವರೆಗೆ ಗುಣವಾಗದಿದ್ದರೆ, ಅದು ನಿಮ್ಮ ದೇಹದ ರೋಗನಿರೋಧಕ ಶಕ್ತಿ (Immune System) ದುರ್ಬಲವಾಗಿದೆ ಎಂಬುದರ ಸ್ಪಷ್ಟ ಸೂಚನೆಯಾಗಿರಬಹುದು. ​ರೋಗನಿರೋಧಕ ಶಕ್ತಿ ಕುಂಠಿತಗೊಳ್ಳಲು ಕಾರಣಗಳೇನು? ​ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರ ಪ್ರಕಾರ, ನಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಹವಾಮಾನವೊಂದೇ ಕಾರಣವಲ್ಲ, ಬದಲಾಗಿ ನಮ್ಮ ದೈನಂದಿನ ಜೀವನಶೈಲಿಯೂ ಮುಖ್ಯ ಪಾತ್ರ ವಹಿಸುತ್ತದೆ: ​ರೋಗನಿರೋಧಕ ಶಕ್ತಿ ಹೆಚ್ಚಿಸಲು ನೀವು ಅನುಸರಿಸಬೇಕಾದ ಕ್ರಮಗಳು: ​ಆರೋಗ್ಯ ತಜ್ಞರು ಸೂಚಿಸುವ ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಚಳಿಗಾಲದ ಕಾಯಿಲೆಗಳಿಂದ ದೂರವಿರಬಹುದು: ಚಳಿಗಾಲದ ಆರೋಗ್ಯ […] - [ಚಿತ್ರದುರ್ಗ| ಎಸ್.ಸಿ. ಘಟಕದ ಕಾರ್ಯಕರ್ತರಿಗೆ ಮಾನ್ಯತೆ ನೀಡಲು ಕಾಂಗ್ರೆಸ್ ಉಸ್ತುವಾರಿಗಳಿಗೆ ಸೂಚನೆ.](https://samagrasuddi.co.in/notice-to-congress-office-bearers-to-give-recognition-to-chitradurga-sc-unit-workers/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 13 ಚುನಾವಣೆ ಸಮಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಬಳಕೆ ಮಾಡಿಕೊಂಡು ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುವುದು ಸರಿಯಲ್ಲ, ಅವರಿಗೆ ಸರಿಯಾದ ಸ್ಥಾನವನ್ನು ನೀಡುವುದು ಪಕ್ಷದ ಮುಖಂಡರ ಕೆಲಸವಾಗಿದೆ ಇದರ ಬಗ್ಗೆ ಪಕ್ಷದ ಮುಖಂಡರ ಗಮನಕ್ಕೆ ತರಲಾಗುವುದು ಎಂದು ಕೆ.ಪಿ.ಸಿ.ಸಿ.ಯ ಉಪಾಧ್ಯಕ್ಷರು ಉಸ್ತುವಾರಿಗಳಾದ ನಾಗರಾಜ್ ನಾಯ್ಕ್ ತಿಳಿಸಿದರು. ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಹಾಗೂ ಬ್ಲಾಕ್ ಅಧ್ಯಕ್ಷರುಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಭೆಗೆ ಬಹಳಷ್ಟು ಬ್ಲಾಕ್ ಅಧ್ಯಕ್ಷರುಗಳು ಬಂದಿಲ್ಲ ಈ ರೀತಿಯಾದ ನಿರ್ಲಕ್ಷ ಸರಿಯಲ್ಲ ಪಕ್ಷದಲ್ಲಿ ಅಧಿಕಾರವನ್ನು ಪಡೆದಾಗ ಅದಕ್ಕೆ ತಕ್ಕಂತೆ ನ್ಯಾಯವನ್ನು ಒದಗಿಸಬೇಕಿದೆ ಈ ಹಿನ್ನಲೆಯಲ್ಲಿ ಅಧಿಕಾರ ಪಡೆದವರು ಕೆಲಸ ಮಾಡದಿದ್ದರೆ ಅವರನ್ನು ಬಿಟ್ಟು ಬೇರೆಯ ವರನ್ನು ನೇಮಕ ಮಾಡಿ, […] - [ಚಿತ್ರದುರ್ಗ ತಾಲೂಕು ಗಾಣಿಗ ಸಂಘದಿಂದ ಸಾಧಕರಿಗೆ ಅಭಿನಂದನಾ ಸಮಾರಂಭ.](https://samagrasuddi.co.in/chitradurga-taluk-ganiga-sangha-felicitation-ceremony-for-achievers/): ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಗೌರವ ಸನ್ಮಾನ ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 13 ಚಿತ್ರದುರ್ಗ ತಾಲೂಕು ಗಾಣಿಗ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದಂತಹ ಸಾಧಕರಿಗೆ ಅಭಿನಂದನಾ ಸಮಾರಂಭವೂ ಎಪಿಎಂಸಿಯಾರ್ಡ್‍ನಲ್ಲಿನ ಶ್ರೀಕಂಠೇಶ್ವರ ದಲಾಲಿ ಮಂಡಿಯಲ್ಲಿ ಸೋಮವಾರ ಸಂಜೆ ಜರುಗಿತು. ಕರ್ನಾಟಕ ರಾಜ್ಯ ಕುಕ್ಕುಟ ಮಹಾಮಂಡಳಿಯ ನಿರ್ದೇಶಕರಾಗಿ ಭರಮಸಾಗರದ ರುದ್ರಮುನಿ, ಭರಮಸಾಗರ ಬಿಜೆಪಿ ಮಂಡಲದ ಅಧ್ಯಕ್ಷರಾಗಿ ಎನ್ ಟಿ ಬಸವರಾಜು, ಚಿತ್ರದುರ್ಗ ಹಾಪ್ ಕಾಮ್ಸ್ ನಿರ್ದೇಶಕರಾಗಿ ಎನ್ ಹೆಚ್ ಮಂಜುನಾಥ್ ನೀಲಕಂಠ ವೀರಶೈವ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‍ನ ನಿರ್ದೇಶಕರಾಗಿ ನೀಲಕಂಠ ಹಾಗೂ ಶ್ರೀಮತಿ ಶೈಲಜಾ ಪ್ರಶಾಂತ್‍ರವರನ್ನು ಜಿಲ್ಲಾ ಗಾಣಿಗ ಸಮುದಾಯದ ಪರವಾಗಿ ಗೌರವದಿಂದ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನುವಹಿಸಿದ್ದ ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಕೆ ಟಿ ಬಸಣ್ಣ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ,ಗಾಣಿಗ ಸಮುದಾಯ ಅಸಂಘಟಿತ ಸಮಾಜವಾಗಿದೆ. ಶತಶತಮಾನ ಗಳಿಂದಲೂ ಕೃಷಿ, ವ್ಯವಹಾರ, ಶಿಕ್ಷಣ, […] - [ಭೀಮಸಮುದ್ರದಲ್ಲಿ 5ನೇ ವಾರ್ಷಿಕೋತ್ಸವ ಹಾಗೂ ಭಜನಾ ಕಮಟ ಕಾರ್ಯಕ್ರಮ.](https://samagrasuddi.co.in/5th-anniversary-and-bhajana-kamata-program-at-bhimasamudra/): ಜನವರಿ 15ರಂದು ಭಜನಾ, ಸಂಜೆ ಅನ್ನಸಂತರ್ಪಣೆ ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203 ಭೀಮಸಮುದ್ರ:ಗ್ರಾಮದ ತುರೆಬೈಲು ಕಾಲೋನಿಯ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದ ಸಮೀಪ, ಶ್ರೀ ಉತ್ಸವಂಬ ಸೇವಾ ಸಮಿತಿ ಹಾಗೂ ಪಾಂಡುರಂಗ ಭಜನಾ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ 5ನೇ ವಾರ್ಷಿಕೋತ್ಸವ ಹಾಗೂ ಭಜನಾ ಕಮಟ ಕಾರ್ಯಕ್ರಮವನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಜನವರಿ 15, 2026 (ಗುರುವಾರ) ಮಧ್ಯಾಹ್ನ 4.00 ಗಂಟೆಗೆ ಆರಂಭವಾಗಲಿದೆ. 19 ಭಜನಾ ತಂಡಗಳ ಭಾಗವಹಿಸುವಿಕೆ ನಿರೀಕ್ಷೆ ಈ ಭಜನಾ ಕಮಟ ಕಾರ್ಯಕ್ರಮದಲ್ಲಿ ಸುಮಾರು 19 ಭಜನಾ ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ಭಕ್ತರು ಮತ್ತು ಗ್ರಾಮಸ್ಥರಿಗೆ ಭಜನಾ ಸಂಭ್ರಮವನ್ನು ಉಣಬಡಿಸಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ. ಸಂಜೆ ಅನ್ನಸಂತರ್ಪಣೆ ಕಾರ್ಯಕ್ರಮದ ಅಂಗವಾಗಿ ಸಂಜೆ 6.30 ಗಂಟೆಯಿಂದ ಅನ್ನಸಂತರ್ಪಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಭಜನಾ ಕಮಿಟಿ ಮಂಡಳಿ ತಿಳಿಸಿದೆ. ಗ್ರಾಮದ ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ […] - [Daily GK Quiz :“State Own Tax Revenue” ಯಲ್ಲಿ ಪ್ರಮುಖ ಪಾಲು ಯಾವ ತೆರಿಗೆಯಿಂದ ಬರುತ್ತದೆ?](https://samagrasuddi.co.in/daily-gk-quiz-state-own-tax-revenue-from-which-tax-accounts-for-the-major-share/): General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ. 2. ಕರ್ನಾಟಕದ ಮೊದಲ ಭಾಷಾ ಆಯೋಗದ ಅಧ್ಯಕ್ಷ ಯಾರು? ಉತ್ತರ: ವಿ.ಕೆ. ಗೋಕಾಕ್ 3. “State Own Tax Revenue” ಯಲ್ಲಿ ಪ್ರಮುಖ ಪಾಲು ಯಾವ ತೆರಿಗೆಯಿಂದ ಬರುತ್ತದೆ? ಉತ್ತರ: SGST 4. FRBM ಕಾಯ್ದೆಯ ಪ್ರಕಾರ ರಾಜ್ಯಗಳ ಹಣಕಾಸು ಶಿಸ್ತಿನ ಮೇಲ್ವಿಚಾರಣೆ ಯಾರು ಮಾಡುತ್ತಾರೆ? ಉತ್ತರ: Finance Commission 5. IMF ನ “Special Drawing Rights (SDR)” ಯಾವ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ? ಉತ್ತರ: ಕರೆನ್ಸಿಗಳ ಬಾಸ್ಕೆಟ್ 6. UPI ಅನ್ನು ಯಾರು ಅಭಿವೃದ್ಧಿಪಡಿಸಿದ್ದಾರೆ? ಉತ್ತರ: NPCI 7. KYC ಯ ಪೂರ್ಣ […] - [NPCIL ನೇಮಕಾತಿ 2026: 114 ಹುದ್ದೆಗಳಿಗೆ ಅರ್ಜಿ ಆಹ್ವಾನ,ಐಟಿಐ, ಡಿಪ್ಲೊಮಾ, ಪದವೀಧರರಿಗೆ ಅವಕಾಶ.](https://samagrasuddi.co.in/npcil-recruitment-2026-invites-application-for-114-posts-iti-diploma-graduates/): ನವದೆಹಲಿ:ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 114 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಸೈಂಟಿಫಿಕ್ ಅಸಿಸ್ಟೆಂಟ್, ಸ್ಟೈಪೆಂಡಿಯರಿ ಟ್ರೈನಿ, ಎಕ್ಸ್-ರೇ ತಂತ್ರಜ್ಞ ಹಾಗೂ ಅಸಿಸ್ಟೆಂಟ್ ಗ್ರೇಡ್–1 ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜನವರಿ 15 ರಿಂದ ಫೆಬ್ರವರಿ 4, 2026 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಒಟ್ಟು ಹುದ್ದೆಗಳು: 114 ವಿಭಾಗಗಳು ಈ ಹುದ್ದೆಗಳು ಕೆಳಕಂಡ ವಿಭಾಗಗಳಲ್ಲಿ ಲಭ್ಯವಿವೆ:ಮೆಕ್ಯಾನಿಕಲ್, ಇನ್ಸ್ಟ್ರುಮೆಂಟೇಶನ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಹೆಲ್ತ್ ಫಿಸಿಕ್ಸ್, ಪ್ಲಾಂಟ್ ಆಪರೇಟರ್, ಮೆಷಿನಿಸ್ಟ್, ಫಿಟ್ಟರ್, ಟರ್ನರ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ಸೇರಿದಂತೆ ವಿವಿಧ ತಾಂತ್ರಿಕ ವಿಭಾಗಗಳು. ಶೈಕ್ಷಣಿಕ ಅರ್ಹತೆ ವಯೋಮಿತಿ ಅರ್ಜಿ ಶುಲ್ಕ ಆಯ್ಕೆ ಪ್ರಕ್ರಿಯೆ ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಆಧಾರದಲ್ಲಿ ನಡೆಯಲಿದೆ: ವೇತನ ವಿವರ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೆಳಕಂಡಂತೆ ಮಾಸಿಕ ವೇತನ ನೀಡಲಾಗುತ್ತದೆ: ಅರ್ಜಿ ಸಲ್ಲಿಸುವ ವಿಧಾನ ಅರ್ಹ ಅಭ್ಯರ್ಥಿಗಳು NPCIL ಅಧಿಕೃತ […] - [ತುಮಕೂರು|ಮಹಾತ್ಮಾ ಗಾಂಧೀಜಿ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಹೆಸರು – ಬಿಜೆಪಿ ಆಕ್ರೋಶ.](https://samagrasuddi.co.in/home-minister-g-parameshwars-name-for-mahatma-gandhi-indoor-stadium-bjp-outrage/): ನರೇಗಾ ಹೆಸರಿನ ವಿವಾದದ ನಡುವೆ ತುಮಕೂರಿನಲ್ಲಿ ಮತ್ತೊಂದು ಹೆಸರು ಬದಲಾವಣೆ ಗದ್ದಲ ತುಮಕೂರು, ಜನವರಿ 13:ನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧೀಜಿ ಹೆಸರನ್ನು ಕೈಬಿಟ್ಟಿರುವುದಕ್ಕೆ ದೇಶವ್ಯಾಪಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ, ತುಮಕೂರಿನಲ್ಲಿ ಅದೇ ಕಾಂಗ್ರೆಸ್ ಸರ್ಕಾರದ ಹಿರಿಯ ನಾಯಕ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಮಹಾತ್ಮಾ ಗಾಂಧೀಜಿ ಒಳಾಂಗಣ ಕ್ರೀಡಾಂಗಣಕ್ಕೆ ನಾಮಕರಣ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವೇ ಬಿಜೆಪಿ ಕೈಗೆ ಹೊಸ ರಾಜಕೀಯ ಅಸ್ತ್ರ ಒದಗಿಸಿದಂತಾಗಿದೆ. ಮಹಾತ್ಮಾ ಗಾಂಧೀಜಿ ಹೆಸರಿನ ಬದಲಾವಣೆ ಆರೋಪ ತುಮಕೂರಿನ ಜಿಲ್ಲಾಮಟ್ಟದ ಏಕೈಕ ಒಳಾಂಗಣ ಕ್ರೀಡಾಂಗಣವನ್ನು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕ್ರೀಡಾಂಗಣವು ಹೊರಾಂಗಣ ಮಹಾತ್ಮಾ ಗಾಂಧೀಜಿ ಕ್ರೀಡಾಂಗಣದ ಆವರಣದಲ್ಲೇ ಇದ್ದು, ಇದುವರೆಗೂ “ಮಹಾತ್ಮಾ ಗಾಂಧೀಜಿ ಇಂಡೋರ್ ಸ್ಟೇಡಿಯಂ” ಎಂದೇ ಗುರುತಿಸಿಕೊಂಡಿತ್ತು. ಆದರೆ ಯಾವುದೇ ಅಧಿಕೃತ ಆದೇಶ ಅಥವಾ ಸಾರ್ವಜನಿಕ ಚರ್ಚೆ ಇಲ್ಲದೆ, ಮೂರು ದಿನಗಳ […] - [ಜನವರಿ 13: ಸುಗ್ಗಿಯ ಹಬ್ಬ ಲೋಹ್ರಿ ಮತ್ತು ಬಾಹ್ಯಾಕಾಶ ವೀರ ರಾಕೇಶ್ ಶರ್ಮಾ ಜನ್ಮದಿನ](https://samagrasuddi.co.in/january-13-is-the-harvest-festival-of-lohri-and-the-birthday-of-space-hero-rakesh-sharma/): ಜನವರಿ 13 ಇತಿಹಾಸದಲ್ಲಿ ಸಾಂಸ್ಕೃತಿಕ ಸಡಗರ ಮತ್ತು ವೈಜ್ಞಾನಿಕ ಸಾಧನೆಗಳ ಸಂಗಮದ ದಿನವಾಗಿದೆ. ಒಂದು ಕಡೆ ಉತ್ತರ ಭಾರತದಲ್ಲಿ ಚಳಿಗಾಲದ ಅಂತ್ಯವನ್ನು ಸಾರುವ ‘ಲೋಹ್ರಿ’ ಹಬ್ಬದ ಸಂಭ್ರಮವಿದ್ದರೆ, ಮತ್ತೊಂದೆಡೆ ಭಾರತದ ಹೆಮ್ಮೆಯ ಬಾಹ್ಯಾಕಾಶಯಾನಿ ರಾಕೇಶ್ ಶರ್ಮಾ ಅವರ ಜನ್ಮದಿನದ ಸಂಭ್ರಮವಿದೆ. ​1. ಸುಗ್ಗಿಯ ಸಂಭ್ರಮ: ಲೋಹ್ರಿ ಹಬ್ಬ ​ಉತ್ತರ ಭಾರತದಾದ್ಯಂತ, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಲೋಹ್ರಿ ಹಬ್ಬವನ್ನು ಇಂದು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ​2. ರಾಕೇಶ್ ಶರ್ಮಾ: ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ​1949ರ ಜನವರಿ 13 ರಂದು ಭಾರತದ ಹೆಮ್ಮೆಯ ಪುತ್ರ ರಾಕೇಶ್ ಶರ್ಮಾ ಜನಿಸಿದರು. ​3. ಭಾರತೀಯ ಇತಿಹಾಸದ ಪ್ರಮುಖ ಘಟನೆಗಳು ​4. ಜಾಗತಿಕ ಇತಿಹಾಸದ ಮೈಲಿಗಲ್ಲುಗಳು ​5. ಸಾಹಿತ್ಯ ಮತ್ತು ಸಿನಿಮಾ ಲೋಕ - [WPL 2026: ಹ್ಯಾರಿಸ್ ಅಬ್ಬರ; ಯುಪಿ ವಾರಿಯರ್ಸ್‌ ವಿರುದ್ಧ ಆರ್‌ಸಿಬಿಗೆ 9 ವಿಕೆಟ್ ಭರ್ಜರಿ ಜಯ.](https://samagrasuddi.co.in/wpl-2026-harris-abbara-9-wicket-win-for-rcb-against-up-warriorswpl-2026/): RCB WPL 2026: ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಆರಂಭ ಪಡೆದಿದೆ. ಸ್ಮೃತಿ ಮಂಧಾನ ನಾಯಕತ್ವದಲ್ಲಿ ಆರ್​ಸಿಬಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ವಿರುದ್ಧದ ಗೆಲುವು ತಂಡಕ್ಕೆ ಉತ್ತಮ ಆರಂಭ ನೀಡಿದೆ. ಮಹಿಳಾ ಪ್ರೀಮಿಯರ್ ಲೀಗ್​ನ (Women’s Premier League) 4ನೇ ಆವೃತ್ತಿಯಲ್ಲಿ ಆರ್​ಸಿಬಿ (RCB) ಅದ್ಭುತ ಆರಂಭ ಪಡೆದುಕೊಂಡಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಸ್ಮೃತಿ ಮಂಧಾನ ಪಡೆ 4 ಪಾಯಿಂಟ್​ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಸೋಲಿಸಿದ್ದ ಆರ್​ಸಿಬಿ, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ 144 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 12.1 […] - [ನಿತ್ಯ ಭವಿಷ್ಯ, 13 ಜನವರಿ : ಇಂದು ಈ ರಾಶಿಯವರಿಗೆ ದೈವಾನುಕೂಲದಿಂದ ಸಿಗಬೇಕಾದ ಸಂಪತ್ತು ಬರಲಿದೆ.](https://samagrasuddi.co.in/daily-predictions-13th-january-today-this-rasi-will-get-riches-due-to-the-blessings-of-god/): ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ದಶಮೀ ತಿಥಿ ಮಂಗಳವಾರದ ಇಂದಿನ ದಿನಭವಿಷ್ಯ ಇಲ್ಲಿದೆ. ಮೇಷದಿಂದ ವೃಶ್ಚಿಕದವರೆಗಿನ ರಾಶಿಗಳ ಸಂಪೂರ್ಣ ಭವಿಷ್ಯವನ್ನು ತಿಳಿಯಿರಿ. ನಿಮ್ಮ ಹೊಸ ಸಂಪರ್ಕಗಳು, ಆದಾಯ ಸ್ಥಿರತೆ, ಮನೋರಂಜನೆ, ಗೆಲುವು, ತಾಳ್ಮೆ ಮತ್ತು ಕೋಪದ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡುತ್ತದೆ. ಇಂದು ನಿಮಗೆ ಯಾವ ರಾಶಿಗೆ ಏನು ಫಲವಿದೆ ಎಂದು ಪರಿಶೀಲಿಸಿ. ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ದಶಮೀ ತಿಥಿ ಮಂಗಳವಾರ ಹೋಲಿಕೆ, ಹೊಸ ಸಂಪರ್ಕ, ಮನೋರಂಜನೆ, ಆದಾಯ ಸ್ಥಿರ, ಗೆಲವು, ತಾಳ್ಮೆ, ನಿಂದನೆಗೆ ಕೋಪ ಇವೆಲ್ಲ ಇಂದಿನ ಭವಿಷ್ಯ. ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ […] - [ದಿನಕ್ಕೊಂದು ಶ್ಲೋಕ: ಭಗವದ್ಗೀತಾ – ಅಧ್ಯಾಯ 1 (ಅರ್ಜುನ ವಿಷಾದ ಯೋಗ) | ಶ್ಲೋಕ 13](https://samagrasuddi.co.in/a-shloka-a-day-bhagavad-gita-chapter-1-arjuna-vishad-yoga-shloka-13/): ಶ್ಲೋಕ ತತಃ ಶಂಖಾಶ್ಚ ಭೇರ್ಯಶ್ಚಪಣವಾನಕಗೋಮುಖಾಃ |ಸಹಸೈವಾಭ್ಯಹನ್ಯಂತಸ ಶಬ್ದಸ್ತುಮುಲೋऽಭವತ್ || — ಭಗವದ್ಗೀತಾ 1.13 ಅರ್ಥ (ಕನ್ನಡದಲ್ಲಿ) ಅದಾದ ಬಳಿಕ ಶಂಖಗಳು, ಭೇರಿಗಳು,ಪಣವಗಳು, ಆನಕಗಳು ಮತ್ತು ಗೋಮುಖ ವಾದ್ಯಗಳುಒಟ್ಟಿಗೇ ನಾದಿಸಲ್ಪಟ್ಟವು;ಆ ಶಬ್ದವು ಭಾರೀ ಹಾಗೂ ಗಂಭೀರವಾಗಿತ್ತು. ವಿವರಣೆ ಈ ಶ್ಲೋಕದಲ್ಲಿ ಯುದ್ಧದ ಪೂರ್ವಭಾವಿ ವಾತಾವರಣವನ್ನು ಗೀತೆ ಚಿತ್ರಿಸುತ್ತದೆ. ಕೌರವರ ಪಾಳಯದಲ್ಲಿ ಒಂದೇ ಸಮಯದಲ್ಲಿ ವಿವಿಧ ವಾದ್ಯಗಳು ಮೊಳಗುವುದರಿಂದ ಯುದ್ಧದ ಉತ್ಸಾಹ ಮತ್ತು ಗದ್ದಲ ಹೆಚ್ಚಾಗುತ್ತದೆ. ಶಬ್ದದ ಭಾರಿತನವು ಹೊರಗೆ ಶಕ್ತಿಯ ಪ್ರದರ್ಶನದಂತೆ ಕಾಣಿಸಿದರೂ, ಒಳಗಡೆ ಅಸ್ಥಿರತೆ ಮತ್ತು ಆತಂಕದ ಸಂಕೇತವಾಗಿಯೂ ಇದನ್ನು ಅರ್ಥಮಾಡಿಕೊಳ್ಳಬಹುದು. ಗೀತೆಯ ಸಂದೇಶ ಇಲ್ಲಿ ಸ್ಪಷ್ಟ: ಗದ್ದಲ, ಪ್ರದರ್ಶನ ಮತ್ತು ಬಾಹ್ಯ ಶಕ್ತಿ ನಿಜವಾದ ಸ್ಥೈರ್ಯವಲ್ಲ. ಧರ್ಮದ ನೆಲೆಯಲ್ಲಿ ಇರುವ ಶಾಂತ ಆತ್ಮವಿಶ್ವಾಸವೇ ಯುದ್ಧದಲ್ಲಾಗಲಿ, ಜೀವನದಲ್ಲಾಗಲಿ ಶಾಶ್ವತ ಶಕ್ತಿಯ ಮೂಲ. ಇಂದಿನ ಸಂದೇಶ ಬಾಹ್ಯ ಗದ್ದಲಕ್ಕಿಂತ ಒಳಗಿನ ಶಾಂತಿಯೇ ನಿಜವಾದ ಶಕ್ತಿ. - [ಮಹಿಳೆಯರಲ್ಲಿ ಕಡಿಮೆ ಹಿಮೋಗ್ಲೋಬಿನ್: ಲಕ್ಷಣಗಳು, ಕಾರಣಗಳು ಮತ್ತು ಹೆಚ್ಚಿಸಿಕೊಳ್ಳುವ ಸರಳ ಮಾರ್ಗಗಳು.](https://samagrasuddi.co.in/symptoms-of-low-hemoglobin-in-women-causes-and-simple-ways-to-increase/): ಬೆಂಗಳೂರು:ದೇಹ ಆರೋಗ್ಯವಾಗಿದ್ದರೆ ಮಾತ್ರ ನಾವು ಚಟುವಟಿಕೆಯಿಂದ, ಲವಲವಿಕೆಯಿಂದ ಬದುಕಲು ಸಾಧ್ಯ. ದೇಹದ ಪ್ರತಿಯೊಂದು ಜೀವಕೋಶಕ್ಕೂ ಆಮ್ಲಜನಕವನ್ನು ತಲುಪಿಸುವ ಪ್ರಮುಖ ಪ್ರೋಟೀನ್ ಎಂದರೆ ಹಿಮೋಗ್ಲೋಬಿನ್. ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಸರಿಯಾಗಿದ್ದರೆ ದೇಹಕ್ಕೆ ಬೇಕಾದ ಶಕ್ತಿ ದೊರೆಯುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಹಿಮೋಗ್ಲೋಬಿನ್ ಕೊರತೆ (Low Hemoglobin / Anemia) ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯರ ಮಾಹಿತಿಯಂತೆ, ಮಹಿಳೆಯರಲ್ಲಿ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಕನಿಷ್ಠ 11 ಗ್ರಾಂ/ಡಿಎಲ್ ಇರಬೇಕು. ಇದಕ್ಕಿಂತ ಕಡಿಮೆಯಾದರೆ ದೇಹದ ಆರೋಗ್ಯದ ಮೇಲೆ ಹಲವಾರು ದುಷ್ಪರಿಣಾಮಗಳು ಕಾಣಿಸಿಕೊಳ್ಳಬಹುದು. ಹಿಮೋಗ್ಲೋಬಿನ್ ಕಡಿಮೆಯಾದಾಗ ಕಾಣಿಸುವ ಲಕ್ಷಣಗಳು ಹಿಮೋಗ್ಲೋಬಿನ್ ಮಟ್ಟ 9 ಗ್ರಾಂ/ಡಿಎಲ್‌ಗಿಂತ ಕಡಿಮೆಯಾದರೆ ಕೆಳಗಿನ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಇದೆ: ಹಿಮೋಗ್ಲೋಬಿನ್ ಪ್ರಮಾಣ 7 ಗ್ರಾಂ/ಡಿಎಲ್‌ಗಿಂತ ಕಡಿಮೆಯಾದರೆ ಇದು ಗಂಭೀರ ಸ್ಥಿತಿಯಾಗಿದ್ದು ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗುತ್ತದೆ. ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಲು ಕಾರಣಗಳು ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. […] - [ವಿಜಯ್ ಹಜಾರೆ ಟ್ರೋಫಿ 2026: ಮುಂಬೈ ಮಣಿಸಿದ ಕರ್ನಾಟಕ,ಸೆಮಿಫೈನಲ್‌ಗೆ ಎಂಟ್ರಿ.](https://samagrasuddi.co.in/vijay-hazare-trophy-2026-entry-to-karnataka-semifinals-defeated-by-mumbai/): Vijay Hazare Trophy Quarter Final: ಮುಂಬೈ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿಜೆಡಿ ನಿಯಮದಡಿಯಲ್ಲಿ 55 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮಳೆ ಅಡ್ಡಿಯಾದ ಕಾರಣ ಕರ್ನಾಟಕ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಮುಂಬೈ 254/8 ರನ್ ಗಳಿಸಿದ್ದರೆ, ಕರ್ನಾಟಕ 1 ವಿಕೆಟ್‌ಗೆ 187 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬೆಂಗಳೂರಿನಲ್ಲಿರುವ ಬಿಸಿಸಿಐ (BCCI) ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಮುಂಬೈ ಹಾಗೂ ಕರ್ನಾಟಕ (Karnataka vs Mumbai) ನಡುವಿನ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿಜೆಡಿ ನಿಯಮದಡಿಯಲ್ಲಿ 55 ರನ್​ಗಳಿಂದ ಗೆದ್ದು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 8 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 1 […] - [ಕೇಂದ್ರ ಸರ್ಕಾರದ ಜಿ ರಾಮ್ ಜಿ ಸ್ಕೀಂ: ಚಿತ್ರದುರ್ಗದಲ್ಲಿ ರಾಜ್ಯ ಸಚಿವರ ವಿರೋಧ, ಮನರೇಗಾ ಮೂಲ ಯೋಜನೆ ಉಳಿಸಬೇಕೆಂದು ಆಗ್ರಹ.](https://samagrasuddi.co.in/central-governments-g-ram-g-scheme-opposition-of-state-minister-in-chitradurga-demands-to-save-manrega-basic-scheme/): ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 12 ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತರಲು ಹೊರಟಿರುವ ವಿಬಿ ಜಿ ರಾಮ್ ಜಿ ಸ್ಕೀಂ ರಾಜ್ಯದ ಕೂಲಿ ಕಾರ್ಮಿಕರಿಗೆ ಹಾಗೂ ಗ್ರಾಮ ಪಂಚಾಯತಿಗಳಿಗೆ ಮರಣ ಶಾಸನವಾಗಲಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ತಿಳಿಸಿದರು. ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸೋನಿಯಾ ಗಾಂಧೀಜಿಯವರ ನೇತೃತ್ವದಲ್ಲಿ ಮನಮೋಹನ್‍ಸಿಂಗ್ ರವರು ಮನರೇಗಾ ಯೋಜನೆ ಜಾರಿಗೆ ತಂದರು ಆದರೆ ಅದರ ಮೂಲ ಸ್ವರೂಪವನ್ನೇ ಈಗ ಬದಲಾವಣೆ ಮಾಡಲು ಹೊರಟಿದ್ದಾರೆ. ಈ ಹಿಂದೆ ಇದ್ದ ಕಾಯಿದೆಯನ್ನು ರದ್ದುಪಡಿಸಿ ಸ್ಕೀಂ ಮಾಡಲು ಹೊರಟಿದ್ದಾರೆ ಇದು ಖಂಡನೀಯ.ಇದನ್ನು ನಾವು ಖಂಡಿಸುತ್ತೇವೆ.ಈ ಹೊಸ ಸ್ಕೀಂನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ. ಈ ಹಿಂದೆ ಇದ್ದಂತಹ ಮನರೇಗಾ ಯೋಜನೆಯನ್ನೇ ಮುಂದುವರಿಸುವ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಬೇಕು […] - [ಭೀಮಸಮುದ್ರದಲ್ಲಿ ಅದಿರು ಸಾಗಾಟ ಸಮಸ್ಯೆ: ರೈಲ್ವೆ ಮಾರ್ಗದ ಬಳಕೆಗೆ ರೈತರ ಒತ್ತಾಯ.](https://samagrasuddi.co.in/damage-to-road-health-and-crops-due-to-lorry-traffic-in-bhimasamudra-villagers-meeting/): ಭೀಮಸಮುದ್ರದಲ್ಲಿ ಲಾರಿ ಸಾಗಾಟದಿಂದ ರಸ್ತೆ, ಆರೋಗ್ಯ ಮತ್ತು ಬೆಳೆಗಳಿಗೆ ಹಾನಿ – ಗ್ರಾಮಸ್ಥರ ಸಭೆ. ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ. 12 ಭೀಮಸಮುದ್ರದಲ್ಲಿ ಗಣಿಗಾರಿಕೆಯನ್ನು ಮಾಡಲಾಗುತ್ತಿದ್ದು ಗಣಿ ಅದಿರನ್ನು ಸಾಗಿಸಲು ಲಾರಿಗಳನ್ನು ಬಲಸಾಗುತ್ತಿದೆ, ಇದರಿಂದ ರಸ್ತೆಗಳು ಹಾಳಾಗುವುದ್ದಲ್ಲದೆ ಅಲ್ಲಿನ ಜನರ ಬದುಕು ಹಾಳಾಗಿದೆ, ಈ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಭೀಮಸಮುದ್ರ ಗ್ರಾಮಸ್ಥರು ಹಾಗೂ ರೈತರು, ರಾಜಕೀಯ ಪಕ್ಷದೊಂದಿಗೆ ಸಭೆಯನ್ನು ನಡೆಸಲಾಯಿತು. ಭೀಮಸಮುದ್ರದಿಂದ ಗಣಿ ಅದಿರನ್ನು ಸಾಗಾಟ ಮಾಡಲು ಕಂಪನಿಗಳು ಲಾರಿಗಳನ್ನು ಬಳಸಲಾಗುತ್ತಿವೆ, ಇದರಿಂದ ಸರ್ಕಾರದವತಯಿಂದ ನಿರ್ಮಾಣ ಮಾಡಲಾದ ರಸ್ತೆಗಳು ಹಾಳಾಗುತ್ತಿವೆ, ಇದ್ದಲ್ಲದೆ ಅದಿರಿನಿಂದ ಬರುವಂತ ಧೂಳಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಆಲ್ಲದೆ ಜಮೀನುಗಳಲ್ಲಿ ಬೆಳೆದ ಬೆಳೆಯೂ ಸಹಾ ಹಾಳಾಗುತ್ತಿದೆ, ಇದರಿಂದ ಬೇಸತ್ತ ಆಲ್ಲಿನ ಜನತೆ ಲಾರಿಗಳ ಓಡಾಟವನ್ನು ತಡೆಯುವುದರ ಮೂಲಕ ಪ್ರತಿಭಟನೆಯನ್ನು ಸಹಾ ನಡೆಸಿದ್ದರು, ಇದಾದ ನಂತರವೂ ಸಹಾ ಲಾರಿಗಳ ಓಡಾಟವನ್ನು ನಿಲ್ಲಿಸಲಿಲ್ಲ […] - [TRUTHನಲ್ಲಿ ಟ್ರಂಪ್ ಹೊಸ ಬಾಂಬ್: ‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ನಾನೇ’ ಎಂದು ಆಘಾತಕಾರಿ ಪೋಸ್ಟ್.](https://samagrasuddi.co.in/trumps-new-bomb-on-truth-is-the-shocking-post-that-i-am-the-interim-president-of-venezuela/): ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾ ಕುರಿತಂತೆ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ TRUTHನಲ್ಲಿ ಮಾಡಿದ ಆಘಾತಕಾರಿ ಪೋಸ್ಟ್‌ನಲ್ಲಿ, ಅವರು ತಮ್ಮನ್ನು “ವೆನೆಜುವೆಲಾದ ಹಂಗಾಮಿ ಅಧ್ಯಕ್ಷ” ಎಂದು ಬಣ್ಣಿಸಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಜನವರಿ 2026ರಿಂದ ವೆನೆಜುವೆಲಾದ ಪ್ರಸ್ತುತ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎಂದು ಪಟ್ಟಿ ಮಾಡಿರುವ ಸಂಪಾದಿತ ವಿಕಿಪೀಡಿಯಾ ಪುಟದ ಮಾದರಿ ಚಿತ್ರವನ್ನೂ ಅವರು ಹಂಚಿಕೊಂಡಿದ್ದು, ಇದು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆ, ಟೀಕೆ ಹಾಗೂ ಅಚ್ಚರಿಗೆ ಕಾರಣವಾಗಿದೆ. ವೆನೆಜುವೆಲಾ ಸರ್ಕಾರ ಉರುಳಿಸಿದ ಅಮೆರಿಕ ಜನವರಿ ಆರಂಭದಲ್ಲಿ ವೆನೆಜುವೆಲಾದ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಅಮೆರಿಕ ಬೃಹತ್ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.ನಂತರ ಮಾತನಾಡಿದ ಟ್ರಂಪ್, “ಸುರಕ್ಷಿತ ಮತ್ತು ನ್ಯಾಯಯುತ ಅಧಿಕಾರ ಪರಿವರ್ತನೆ ಖಾತ್ರಿಯಾಗುವವರೆಗೆ ವೆನೆಜುವೆಲಾದ ಆಡಳಿತವನ್ನು ಅಮೆರಿಕ ಮುಂದುವರಿಸುತ್ತದೆ” ಎಂದು ಹೇಳಿದ್ದರು. […] - [ಪ್ರತಿಭೆ, ಭಕ್ತಿ ಮತ್ತು ಸಂಗೀತದ ಸಂಭ್ರಮ: ಡೆಸ್ಟಿನಿ ಮಹೋತ್ಸವ ದಿನ 2 ಯಶಸ್ವಿ.](https://samagrasuddi.co.in/destiny-mahotsav-day-2-a-celebration-of-talent-devotion-and-music/): ಡೆಸ್ಟಿನಿ ಕಾರ್ಯಕ್ರಮ ದಿನ 2 : ಸಾಂಸ್ಕೃತಿಕ ವೈಭವ ಮತ್ತು ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ರ ಮಾಧುರ್ಯ ಸಂಗೀತದ ಮಾಯಾಲೋಕ. ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ, ಜ.11:ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ, ಚಿತ್ರದುರ್ಗ ವತಿಯಿಂದ ಆಯೋಜಿಸಲಾದ ಡೆಸ್ಟಿನಿ ಮಹೋತ್ಸವದ ಎರಡನೇ ದಿನ ಸಾಂಸ್ಕೃತಿಕ ವೈಭವ, ಮನೋರಂಜನೆ ಮತ್ತು ಸಂಗೀತೋತ್ಸವದ ಸಂಭ್ರಮದೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿತು. ವಿವಿಧ ಕಲಾ ಪ್ರದರ್ಶನಗಳು ಹಾಗೂ ಖ್ಯಾತ ಗಾಯಕ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರ ಮಧುರ ಗಾಯನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಮಕ್ಕಳ ನೃತ್ಯ ಪ್ರದರ್ಶನಗಳು ಮನಸೂರೆಗೊಂಡವು ಕಾರ್ಯಕ್ರಮದ ಆರಂಭದಲ್ಲೇ ಪ್ರಾಥಮಿಕ ಶಾಲಾ ಮಕ್ಕಳ ಮನೋಹರ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಅವರ ಸೊಗಸಾದ ಚಲನೆಗಳು, ಲಾವಣ್ಯ ಹಾಗೂ ಉತ್ಸಾಹಭರಿತ ಪ್ರದರ್ಶನಗಳು ಕಾರ್ಯಕ್ರಮ ಆವರಣವನ್ನು ಸಂಭ್ರಮದಿಂದ ತುಂಬಿಸಿತು. ಭಕ್ತಿ ಮತ್ತು ಪೌರಾಣಿಕ ನೃತ್ಯಗಳಿಗೆ ಭರ್ಜರಿ ಮೆಚ್ಚುಗೆ ಎರಡನೇ ದಿನ ನಡೆದ ಭವ್ಯ ನೃತ್ಯ […] ## Pages - [Contact us](https://samagrasuddi.co.in/contact-us/): Loading… Mail: thippung@gmail.comPhone: 8310612496, 9964931936 - [About us](https://samagrasuddi.co.in/about-us/): Hello, and welcome to my beautiful mess of creative madness. I am a writer, artist, speaker, singer, and social worker. Fueled by my passion for people, places and new experiences. I help other creative like me, create amazing, unforgettable, passionate brand experiences, online and offline. I strive to redefine what it means to be an online business professional by collaborating with other entrepreneurs, small business, freelancers, and bloggers to create a brand that looks, acts, sounds, and feels just like them. I believe that you deserve a business and a life you love. I believe in the power of storytelling […] - [Chitradurga](https://samagrasuddi.co.in/chitradurga/) - [Home](https://samagrasuddi.co.in/) [comment]: # (Generated by Hostinger Tools Plugin)