ಪ್ರತಿದಿನದ ಜಂಜಾಟದ ಬದುಕಿನ ಜೀವನದ ಕುರಿತಾಗಿ ಕವಿತೆ. ಮಹಾಂತೇಶ ಶಿಕ್ಷಕರು ಇವರಿಂದ, ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಕಂಡುಬರುವ ಜಂಜಾಟದ ಜೀವನಕ್ಕಾಗಿ, ಜೀವಕ್ಕಾಗಿ ನಡೆಯುವ ಹೋರಾಟದ ಕುರಿತಾಗಿದೆ. ಕವಿತೆಯ ಶೀರ್ಷಿಕೆ ‘ಇತಿ ಜೀವನ’.
ಇತಿ ಜೀವನ
ಎಲ್ಲರ ಮನೆಯಲ್ಲೂ ಜಟಾಪಟಿ
ಮರೆತು ಮುಂದೆ ಹೋಗಲು ವೀಕೆಂಡ್ ಪಾರ್ಟಿ
30ಗಳು, 60 ಗಳು, 90ಗಳು
ಸಿಪ್ ಗಳು ಹೆಚ್ಚಲು ಓಪನ್ ಸ್ಟೇಟ್ಮೆಂಟ್ ಗಳು
ಫ್ರೀ ಪ್ರಾಮಿಸ್ಸುಗಳು ಸರ್ವೋಚ್ಛ ಬೈಗುಳಗಳು.
ದುಡಿಯುವವರು ವಿರಮಿಸದೆ, ಬಸ್ಸಿನಲ್ಲಿ ನಿದ್ರೆ
ಕಾಂಚಾಣದ ಹುಡುಕಾಟ ಎದ್ರೆ ಬಿದ್ರೆ
ಕಿರು ಹಾಸಿಗೆಯಲ್ಲಿ ಕಾಲು ಚಾಚುವ ಹವಣೆ
ಚಾಪೆಗೆ ಹತ್ತಿ ತುಂಬಲಾಗದ ಭವಣೆ
ಮನೆ ಕಟ್ಟುವ, ಮದುವೆ ಮಾಡುವ ಹೊಣೆ
ಕಮಿಟ್ಮೆಂಟ್ಸ್, ಹೊಣೆಗಳಿಗೆ ಚಚ್ಚಿಕೊಳ್ಳುವ ಹಣೆ
ಆಸ್ಪತ್ರೆಗಳಲ್ಲಿ ಕರುಣೆ,ನಮ್ಮದಲ್ಲದಕೆ ನಗದು ಜಮಾವಣೆ
ಹೀಗೆ ಸಾಗುವುದು ಬದುಕು ಕೊನೆ ಉಸಿರು
ಬಿಡಲಾಗದ ಮನೆಯ ಕಡೆಗೆ,
ಉಸಿರು ಬಿಡುವ ಮುಂಚೆಯೇ ಹಾಕುವರು ಮನೆಯ ಹೊರಗೆ.

-ಮಹಾಂತೇಶ್, ಶಿಕ್ಷಕರು
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.
ತೋಗರ್ಸಿ. ಶಿಕಾರಿಪುರ ತಾಲೂಕ್. ಶಿವಮೊಗ್ಗ ಜಿಲ್ಲೆ.