ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಸ್ವರೂಪ, ಬದಲು ಕಠಿಣವಾಗಲಿದೆ ಎಸ್ ಎಸ್ ಎಲ್ ಸಿ ಪರೀಕ್ಷೆ.


ಬೆಂಗಳೂರು : 2022 -23 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು, ಕೊರೋನಾ ವೇಳೆ ಇದ್ದ ಸರಳತೆಯ ಪ್ರಮಾಣ ಕೈ ಬಿಟ್ಟು, ಕಠಿಣ ಪ್ರಮಾಣದ ಪ್ರಶ್ನೆಗಳನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಕಠಿಣವಾಗಿರಲಿದೆ .ಈ ಸಂಬಂಧ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಿಸಿದ ಮಾಹಿತಿ ಬಿಡುಗಡೆ ಮಾಡಿದೆ ಅದರಂತೆ ಈ ಬಾರಿ ಸುಲಭ ಪ್ರಶ್ನೆ ಶೇಕಡ 30ರಷ್ಟು ಸಾಧಾರಣ ಪ್ರಶ್ನೆ ಶೇಕಡ 50ರಷ್ಟು ಕಠಿಣ ಪ್ರಶ್ನೆ ಶೇಕಡ 20ರಷ್ಟು ಸೇರಿದಂತೆ ಒಟ್ಟು ನೂರು ಅಂಕಗಳಿಗೆ ಸರಿಸಮಾನಾಗಿ ಪ್ರಶ್ನೆ ಪತ್ರಿಕೆ ರೂಪಿಸಿದೆ. ಕಳೆದ ಎರಡು ವರ್ಷ ಕರೋನ ಕಾರಣಕ್ಕೆ ಸರಳವಾದ ಪ್ರಶ್ನೆ ಪತ್ರಿಕೆ ಜೊತೆಗೆ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ನೀಡಿತ್ತು. ಆದರೆ ಮುಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ರೀತಿ ಪ್ರಶ್ನೆ ಪತ್ರಿಕೆ ಸುಲಭವಾಗಿರುವುದಿಲ್ಲ. ಅಲ್ಲದೇ ಕಳೆದ 2 ವರ್ಷ ಶೇಕಡ 75ರಷ್ಟು ಹಾಜರಾತಿಗೆ ನೀಡಿದ್ದ ವಿನಾಯತಿಯನ್ನು ಮುಂದಿನ ಪರೀಕ್ಷೆಗೆ ರದ್ದು ಮಾಡಿದೆ.

Leave a Reply

Your email address will not be published. Required fields are marked *