
ಬೆಂಗಳೂರು: ಈ ಮನುಷ್ಯನ ಹೆಸರು ಟೈಲರ್ ಕೋಹೆನ್. ಗೂಗಲ್ ನಲ್ಲಿ ಈತ ಉದ್ಯೋಗಕ್ಕಾಗಿ ಪದೇಪದೇ ಪ್ರಯತ್ನಿಸುತ್ತಿದ್ದ. ಇವನನ್ನು ಗೂಗಲ್ ಸಂಸ್ಥೆಯು 39 ಸಲ ರಿಜೆಕ್ಟ್ ಮಾಡಿದರೂ. 40 ನೇ ಪ್ರಯತ್ನದಲ್ಲಿ ಕೆಲಸ ಸಂಪಾದಿಸಿದ್ದಾನೆ.
ತನ್ನ ಅನುಭವವನ್ನು ಕೋಹೆನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಗೂಗಲ್ ನೊಂದಿಗಿನ ತನ್ನ ಉದ್ಯೋಗ ಬೇಟೆಯ ಇ-ಮೇಲ್ ಗಳ ಸ್ಕ್ರೀನ್ ಶಾಟ್ ಗಳನ್ನು ಲಿಂಗ್ಡ್ ಇನ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಲಕ್ಷಾಂತರ ಜನರು ಲೈಕ್ ಗಳನ್ನು ಒತ್ತಿದ್ದರೆ, ಸಾವಿರಾರು ಕಾಮೆಂಟ್ಗಳು ಬಂದಿವೆ. 2019ರ ಆಗಸ್ಟ್ 25ರಂದು ಮೊದಲ ಸಲ ಈತನು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ.