ಚಿತ್ರದುರ್ಗ : ಟ್ರ್ಯಾಕ್ಟರ್ ಗೆ ಓಮಿನಿ ಡಿಕ್ಕಿ,  ಓರ್ವ ಸಾವು

ಚಿತ್ರದುರ್ಗ,(ಡಿ.12) : ಭತ್ತದ ಹುಲ್ಲು ತುಂಬಿದ್ದ ಟ್ರ್ಯಾಕ್ಟರ್ ಗೆ ಓಮಿನಿ ಕಾರು ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದಂಡಿಗೇನಹಳ್ಳಿ ಗ್ರಾಮದ ಬಳಿ ಇಂದು (ಸೋಮವಾರ) ರಾತ್ರಿ 7:30 ಗಂಟೆಗೆ ನಡೆದಿದೆ.ಓಮಿನಿ ವಾಹನವು ಭತ್ತದ ಲೋಡ್ ತುಂಬಿಕೊಂಡು ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ನ ಟ್ರೇಲರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಓಮಿನಿ ವಾಹನ ಜಖಂ ಆಗಿದೆ.ಈ ಘಟನೆಯಲ್ಲಿ ದಾವಣಗೆರೆ ಮೂಲದ ರಂಗಸ್ವಾಮಿ( 27) ಸಾವನ್ನಪ್ಪಿದ್ದು, ಮಹೇಶ, ಮಹಂತೇಶ ಮತ್ತು ಅರುಣ ಗಾಯಗೊಂಡಿದ್ದು, ಅವರನ್ನು ಸಂತೇಬೆನ್ನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

The post ಚಿತ್ರದುರ್ಗ : ಟ್ರ್ಯಾಕ್ಟರ್ ಗೆ ಓಮಿನಿ ಡಿಕ್ಕಿ,  ಓರ್ವ ಸಾವು (https://suddione.com/chitradurga-omini-collides-with-a-tractor-one-dead/) first appeared on Kannada News | suddione (https://suddione.com/).

source https://suddione.com/chitradurga-omini-collides-with-a-tractor-one-dead/

Leave a Reply

Your email address will not be published. Required fields are marked *