ಜೊಮ್ಯಾಟೊಗೆ ಹತ್ತು ಸಾವಿರ ದಂಡ.

ಚಂಡೀಘಡ: ಪಿಜ್ಜಾ ಆರ್ಡರ್ ಆರ್ಡರ್ ರದ್ದುಗೊಳಿಸಿದ ಕಾರಣಕ್ಕಾಗಿ ಗ್ರಾಹಕನಿಗೆ 10,000 ದಂಡ ಹಾಗೂ ಒಂದು ಉಚಿತ ಊಟ ಕೊಡುವಂತೆ ಆನ್ಲೈನ್ ಫುಡ್ ಡೆಲಿವರಿ ಕಂಪನಿ ‘ಜೊಮಾಟೊ’ಗೆ ದಂಡ ವಿಧಿಸಲಾಗಿದೆ.

ಚಂಡೀಗಡದ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಈ ಆದೇಶ ನೀಡಿದೆ. “ಜೊಮ್ಯಾಟೋ ತನ್ನ ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಆರ್ಡರ್ ತಲುಪಿಸದಿದ್ದರೆ ಹಣ ವಾಪಸ್ ಕೊಡುವುದಾಗಿ ಜಾಹೀರಾತಿನ ಮೂಲಕ ಅಭಿಯಾನ ನಡೆಸಿತ್ತು. ಈ ರೀತಿ ನಡೆದುಕೊಳ್ಳದೆ ಕಂಪನಿಯ ಪಿಜ್ಜಾ ಆರ್ಡರ್ ರದ್ದುಪಡಿಸಿದೆ. ಹೀಗಾಗಿ ದಂಡತಿರಬೇಕೆಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರ ಗ್ರಾಹಕ ಅಜಯ್ ಶರ್ಮಾ ಪರವಾಗಿ ತೀರ್ಪು ನೀಡಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ರಾಜ್ ಶೇಖರ್ ಅತ್ರಿ ಹಾಗೂ ಸದಸ್ಯ ನ್ಯಾಯಮೂರ್ತಿ ರಾಜೇಶ್ ಕೆ ಆರ್ಯ “ಸೇವಾ ಕಂಪನಿಗಳು ತಮಗೆ ಸಾಧ್ಯವಾಗದೇ ಇದ್ದರೆ ಈ ರೀತಿಯ ಜಾಹೀರಾತಿಗಳನ್ನು ಪ್ರಕಟಿಸಬಾರದು” ಎಂದು ಎಚ್ಚರಿಕೆ ನೀಡಿದ್ದಾರೆ. 2020ರಲ್ಲಿ ರಾತ್ರಿ 10:15ಕ್ಕೆ ಫಿಜ್ಜಾ ಬೇಕೆಂದು ಗ್ರಾಹಕ ಅಜಯ್ ಶರ್ಮ ಅವರು ಜೊಮಟೊ ಕಂಪನಿಗೆ ಆರ್ಡರ್ ಮಾಡಿದರು. ಅಲ್ಲದೆ ನಿಗದಿತ ಸಮಯಕ್ಕೆ ಪಿಜ್ಜಾ ತಲುಪಿಸುವಂತೆ 10 ರೂಗಳ ಹೆಚ್ಚುವರಿ ಶುಲ್ಕ ಸೇರಿದಂತೆ 287 ರೂಗಳನ್ನು ಪಾವತಿಸಿದ್ದರು. ಆದರೆ ಈ ಆರ್ಡರ್ ಅನ್ನು ರಾತ್ರಿ 10.30 ಕ್ಕೆ ಕಂಪನಿ ರದ್ದುಪಡಿಸಿ, ರಿಫಂಡ್ ಕೊಡುವುದಾಗಿ ತಿಳಿಸಿತ್ತು. ಇದು ಜಾಹೀರಾತಿನಲ್ಲಿ ತಿಳಿಸಿದಂತೆ ಆನ್ ಟೈಮ್ ಡೆಲಿವರಿ ಅಥವಾ ಫ್ರೀ ಫುಡ್ ಎಂದು ತಿಳಿಸುವುದರ ವಿರುದ್ಧವಾದ ಕ್ರಮ ಎಂದು ಅಜಯ್ ದೂರಿದ್ದರು. “ಸಮಯಕ್ಕೆ ಫುಡ್ ಡೆಲಿವರಿ ಕೊಡಬೇಕಿತ್ತು. ತಡವಾದರೆ ಉಚಿತವಾಗಿ ಫುಡ್ ಕೊಡಬೇಕಿತ್ತು. ಆದರೆ ಇದು ಯಾವುದನ್ನು ಮಾಡದೆ ಏಕಾಏಕಿ ಆರ್ಡರ್ ರದ್ದು ಮಾಡಿರುವುದು ಕಂಪನಿಯ ಹಾಕಿಕೊಂಡ ನಿಯಮದ ವಿರುದ್ಧವಾಗಿದೆ ಹಾಗೂ ಗ್ರಾಹಕರಿಗೆ ಮಾಡುವ ಅನ್ಯಾಯವಾಗಿದೆ” ಎಂದು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *