ದೀಪಕ್ ಹೂಡ ವಿಶ್ವ ದಾಖಲೆ.

ಹರಾರೆ: ಟೀಮ್ ಇಂಡಿಯಾದ ಬ್ಯಾಟಿಂಗ್ ಆಲ್ರೌಂಡರ್ ದೀಪ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ದಿನದಿಂದ ಇಲ್ಲಿಯವರೆಗೆ ನಿರಂತರವಾಗಿ ಅತಿ ಹೆಚ್ಚು ಅಂದರೆ 16 ಪಂದ್ಯಗಳನ್ನು ಗೆದ್ದ ಆಟಗಾರನಾಗಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಭಾರತ ಮತ್ತು ಅತಿಥೇಯ ಜಿಂಬಾಬ್ವೆ ತಂಡಗಳ ನಡುವೆ ಶನಿವಾರ ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಹೂಡರಿಂದ ಈ ದಾಖಲೆ ನಿರ್ಮಾಣಗೊಂಡಿದ್ದು, ಇದುವರೆಗೆ ಕೂಡ ಆಡಿದ ಎಲ್ಲಾ 16 ಪಂದ್ಯಗಳನ್ನು ಟೀಮ್ ಇಂಡಿಯ ಗೆದ್ದಿದೆ. ಇದಕ್ಕೂ ಮೊದಲು ಈ ದಾಖಲೆ ರೊಮೇನಿಯಾದ ಸಾತ್ವಿಕ್ ನಾಡಿ ಗೋಟ್ಲಾ ಪಾದಾರ್ಪಣೆ ಪಂದ್ಯದಿಂದ ಸತತ 15ಜಯ ಅವರ ಹೆಸರಲ್ಲಿ ಇತ್ತು.

Leave a Reply

Your email address will not be published. Required fields are marked *