ಫೇಸ್ ಬುಕ್, ಇನ್ ಸ್ಟಾಗ್ರಾಮ್ ಆದಾಯ ತೀವ್ರ ಕುಸಿತ..

ವಾಷಿಂಗ್ಟನ್ : ಫೇಸ್ಬುಕ್ ಮತ್ತೆ ಇನ್ಸ್ಟಾಗ್ರಾಮ್ ನ ಮಾತ್ರ ಸಂಸ್ಥೆ ಆದ ಮೇಟಾದ ಆದಾಯ ಮತ್ತು ನಿವ್ವಳ ಲಾಭಗಳು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಳಿಕೆಯಾಗಿ ಲಾಭ ಶೇಕಡ 36 ರಷ್ಟು ಕುಸಿದಿದೆ.

ಆರ್ಥಿಕ ಬಿಗ್ಗಟ್ಟಿನ ಪರಿಣಾಮ ಜಾಹೀರಾತುಗಳು ಕಡಿಮೆಯಾಗಿರುವುದು ಒಂದು ಕಡೆಯಾದರೆ, ಎದುರಾಳಿ ಸಂಸ್ಥೆ ಟಿಕ್ ಟಾಕ್ ನ ಸ್ಪರ್ಧೆಯಿಂದಾಗಿ ಮೇಟಾದ ಆದಾಯ ಗಣನೀಯ ತಗ್ಗಿದೆ. ಇದರಿಂದಾಗಿ ವೆಚ್ಚ ಕಡಿತಕ್ಕೆ ಕಂಪನಿ ಮುಂದಾಗಿದ್ದು ಉದ್ಯೋಗ ಕಡಿತ ಮಾಡುತ್ತಿದೆ.

ಮೆಟಾ ಕಂಪನಿಯು ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ 6.69 ಶತ ಕೋಟಿ ಡಾಲರ್ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇಕಡ 36 ರಷ್ಟು ಕುಸಿತವಾಗಿದೆ. ಆದಾಯವು ಶೇಕಡ 1 ರಷ್ಟು ಇಳಿಕೆಯಾಗಿದ್ದು 28.82 ಶತಕೋಟೆ ಡಾಲರ್ ನಷ್ಟು ನಷ್ಟಿದೆ.

ಜಾಗತಿಕ ಪ್ರಭಾವಗಳಿಂದಾಗಿ ಡಿಜಿಟಲ್ ಜಾಹೀರಾತು ಮಾರುಕಟ್ಟೆಯ ಕುಸಿದಿದೆ, ಫೇಸ್ಬುಕ್ ಒಡೆತನದ ಒಡೆತನದ ಮೇಟಾಕ್ಕೆ ಮಾತ್ರವಲ್ಲ ಎದುರಾಳಿಗಳಾದ ಗೂಗಲ್, ಟ್ಟಿಟ್ಟರ್ ಗಳ ಆದಾಯ ಕುಸಿತವನ್ನು ಕಂಡಿವೆ. ಗೂಗಲ್ ನ ಮಾತೃ ಸಂಸ್ಥೆ ಆಲ್ಫಾಬೆಟ್ ನ ತ್ರೈಮಾಸಿಕ ಬೆಳವಣಿಗೆ ಇಳಿಕೆಯಾಗಿದೆ.

Leave a Reply

Your email address will not be published. Required fields are marked *