ರಾಜ್ಯದಲ್ಲಿ ಝೀಕಾ ವೈರಸ್ ಪತ್ತೆ!!

ಬೆಂಗಳೂರು:ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಸೋಂಕು ವರದಿಯಾಗಿರುವುದನ್ನು ಆರೋಗ್ಯ ಸಚಿವ ಡಾಕ್ಟರ್ ಕೆ ಸುಧಾಕರ್ ದೃಢಪಡಿಸಿದ್ದಾರೆ.

ನಗರದ ಆರೋಗ್ಯ ಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಪುಣೆ ವೈರಾಲಜಿ ಲ್ಯಾಬ್ ನಿಂದ ಪಾಸಿಟಿವ್ ರಿಪೋರ್ಟ್ ಬಂದಿದೆ. ಬಾಲಕಿ ಮೇಲೆ ತೀವ್ರ ನಿಗ ವಹಿಸಿದ್ದೇವೆ. ಆಕೆಯ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ ಎಂದರು.

ರಾಯಚೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಕಟ್ಟೆಚರ ವಹಿಸುವಂತೆ ಸೂಚಿಸಲಾಗಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ, ಎಂದು ತಿಳಿಸಿದರು.

ಏನಿದು ಝೀಕಾ ವೈರಸ್?

ಹೆಸರೇ ಹೇಳುವಂತೆ ಇದೊಂದು ವೈರಸ್, ಈಡೀಸ್ ಸೊಳ್ಳೆಯಿಂದ ಹಬ್ಬುತ್ತದೆ. ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಆರಂಭದಲ್ಲಿ ಸೌಮ್ಯವಾಗಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಕ ರೋಗಗಳ ರೀತಿ ಬದಲಾಗುತ್ತವೆ. ಅದರಂತೆಯೇ ಝೀಕಾ ವೈರಸ್ ಕೂಡ ಹಗಲಿನಲ್ಲಿ ಕಚ್ಚುವ ಈಡೀಸ್ ಸೊಳ್ಳೆಗಳ ಮೂಲಕ ಹರಡುತ್ತದೆ.

ರೋಗದ ಲಕ್ಷಣಗಳು: ಸೌಮ್ಯ ಜ್ವರ, ದದ್ದುಗಳು, ಕಾಂಜಂಕ್ಟವಿಟಿಸ್, ಸ್ನಾಯು ಕೀಲು ನೋವು, ಅಸ್ವಸ್ಥತೆ ಅಥವಾ ತಲೆನೋವು.

ಮುನ್ನೆಚ್ಚರಿ ಕಾರ್ಯಕ್ರಮಗಳು: ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ, ಸದ್ಯ ಮಳೆ ಇರುವುದರಿಂದ ರಸ್ತೆಯ ಹೊಂಡಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ. ಇಂತಹ ಕಡೆ ಸೊಳ್ಳೆಗಳು ಸಂತಾನೋತ್ಪತ್ತಿ ಹೆಚ್ಚಿಸಿಕೊಂಡು ಮನುಷ್ಯರ ಮೇಲೆ ಹಗಲಿನ ವೇಳೆ ದಾಳಿ ಮಾಡುತ್ತವೆ ಇವುಗಳಿಂದ ರಕ್ಷಣೆ ಪಡೆದುಕೊಳ್ಳಲು ಬೇಕಾದ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಬೇಕು.

ಮೊದಲು ಝೀಕಾ ವೈರಸ್ ಪತ್ತೆಯಾಗಿದ್ದು ಎಲ್ಲಿ?1947ರಲ್ಲಿ ಉಗಾಂಡದ ಕೋತಿಯಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ನಂತರ 2007ರಲ್ಲಿ ಮೈಕ್ರೋನೇಶಿಯಾದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕವಾಗಿ ಹರಡಿ ಆತಂಕ ಉಂಟು ಮಾಡಿತ್ತು. 2015 ರಲ್ಲಿ ಪ್ಲಾಟಿನ ಅಮೆರಿಕಾದಲ್ಲಿ ವಿಶೇಷವಾಗಿ ಬ್ರೆಜಿಲ್ ನಲ್ಲಿ ಕಾಣಿಸಿಕೊಂಡಿತ್ತು

Leave a Reply

Your email address will not be published. Required fields are marked *