ಶಿಕ್ಷಕರ ಮಾರ್ಗ ಹೊಂದಾಣಿಕೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ಮರು ಹೊಂದಾಣಿಕೆ ನಂತರ ಹುದ್ದೆಗಳನ್ನು ನಿಗದಿಪಡಿಸಿ ಮಂಜೂರು ಮಾಡುವುದಕ್ಕೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಆ ಪ್ರಕಾರವಾಗಿ ರಾಜ್ಯದಲ್ಲಿ 4,821 ಶಾಲೆಗಳಲ್ಲಿ 43,353 ಹುದ್ದೆಗಳು ಮಂಜೂರಾಗಿರುವ ಮಾಹಿತಿಯನ್ನು ಪ್ರಕಟಿಸಿದೆ.

ಈ ಪಟ್ಟಿಯಂತೆ 70 ವಿದ್ಯಾರ್ಥಿಗಳಿಗೆ ಒಂದು ವಿಭಾಗದಂತೆ ಹಾಗೂ ಕೆಪಿಎಸ್, ಆದರ್ಶ ಶಾಲೆಗಳಲ್ಲಿ 40 ವಿದ್ಯಾರ್ಥಿಗಳಿಗೆ ಒಂದು ವಿಭಾಗದ ಆಧಾರದ ಮೇಲೆ ವಿಂಗಡನೆ ಮಾಡಿದೆ. ಐದು ಅಥವಾ ಐದಕ್ಕಿಂತ ಹೆಚ್ಚು ವಿಭಾಗದಲ್ಲಿದ್ದ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ ಶಿಕ್ಷಕರ ಹುದ್ದೆಗಳನ್ನು ಒದಗಿಸಿದೆ. ಈ ಮಂಜೂರಾದ ಹುದ್ದೆ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ಶಿಕ್ಷಕರ ವರ್ಗಾವಣೆ ವೇಳೆ ಮರು ಹೊಂದಾಣಿಕೆಯ ಕಾರ್ಯ ಕೈಗೊತ್ತಿ ಕೊಳ್ಳಲಿದೆ.

Leave a Reply

Your email address will not be published. Required fields are marked *