Copper Utensils In Winter: ಚಳಿಗಾಲದಲ್ಲಿ ತಾಮ್ರದ ಪಾತ್ರೆಯಲ್ಲಿನ ನೀರು ಸೇವನೆ ಎಷ್ಟು ಉಚಿತ?

Copper Utensils In Winter : ತಾಮ್ರದ ಪಾತ್ರೆಗಳ ಬಳಕೆ ಬಹುತೇಕ ನಮ್ಮ ಆರೋಗ್ಯದೊಂದಿಗೆ ಸಂಬಂಧಿಸಿದೆ. ತಾಮ್ರದ ಪಾತ್ರೆಯಲ್ಲಿ ನೀರು ಸೇವನೆಯಿಂದ ಹಲವಾರು ಲಾಭಗಳಿವೆ ಎಂದು ಮನೆಯ ಹಿರಿಯರು ಹೇಳುವುದನ್ನು ನೀವು ಆಗಾಗ ಕೇಳಿರಬಹುದು. ಆದರೆ, ಚಳಿಗಾಲದಲ್ಲಿ ತಾಮ್ರದ ಪಾತ್ರೆ ಬಳಕೆ ಎಷ್ಟು ಉಚಿತ? ಎಂಬ ಪ್ರಶ್ನೆ ಉದ್ಬವಿಸುತ್ತದೆ. ಇದಕ್ಕೆ ಆಯುರ್ವೇದದಲ್ಲಿ ಸ್ಪಷ್ಟ ಉತ್ತರವನ್ನು ನೀಡಲಾಗಿದೆ.

ವಾಸ್ತವದಲ್ಲಿ, ಆಯುರ್ವೇದದ ಪ್ರಕಾರ, ಚಳಿಗಾಲದಲ್ಲಿ ತಾಮ್ರದ ಪಾತ್ರೆಗಳನ್ನು ಬಳಸುವುದರಿಂದ ದೇಹದಲ್ಲಿ ಚಳಿಯಿಂದ ಉಂಟಾಗುವ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನಲಾಗಿದೆ. ನೀರಿನ ಗುಣಧರ್ಮ ಬಿಸಿಯಾಗಿರುತ್ತದೆ. ಅಲ್ಲದೆ, ಇದು ಸೋಂಕನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹೀಗಾಗಿ ಚಳಿಗಾಲದಲ್ಲಿ ತಾಮ್ರದ ಪಾತ್ರೆಗಳನ್ನು ಬಳಸಬೇಕು, ಇದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕೀಲು ನೋವಿನಲ್ಲಿ ಪ್ರಯೋಜನಕಾರಿ
ಚಳಿಗಾಲದಲ್ಲಿ ಪ್ರತಿಯೊಬ್ಬರಿಗೂ ಎದುರಾಗುವ ಒಂದು ಸಾಮಾನ್ಯ ಸಮಸ್ಯೆ ಎಂದರೆ ಅದು, ಮೂಳೆ ಮತ್ತು ಕೀಲು ನೋವು. ಇಂತಹ ಪರಿಸ್ಥಿತಿಯಲ್ಲಿ, ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಈ ನೋವನ್ನು ಹೋಗಲಾಡಿಸಬಹುದು. ತಾಮ್ರವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಈ ಕಾರಣದಿಂದಾಗಿ, ಅದು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಸಂಧಿವಾತದಲ್ಲಿ ಪ್ರಯೋಜನಕಾರಿ
ಸಂಧಿವಾತ ನೋವು ಚಳಿಗಾಲದಲ್ಲಿ ತುಂಬಾ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ, ಸಂಧಿವಾತ ರೋಗಿಗಳು ಬೆಳಗ್ಗೆ ಎದ್ದು ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ಕುಡಿಯಬೇಕು. ಇದು ಕೀಲು ನೋವಿಗೆ ಪರಿಹಾರ ನೀಡುತ್ತದೆ. ಇದರಿಂದ  ರೋಗನಿರೋಧಕ ಶಕ್ತಿಯೂ ಸುಧಾರಿಸುತ್ತದೆ ಮತ್ತು ಅನೇಕ ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವು ಹೆಚ್ಚಾಗುತ್ತದೆ.

ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ
ತಾಮ್ರದ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸುವುದು ಅಥವಾ ನೀರನ್ನು ಕುಡಿಯುವುದು ಕಬ್ಬಿಣವನ್ನು ಹೀರಿಕೊಳ್ಳಲು ಮತ್ತು ಜೀವಕೋಶಗಳ ರಚನೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಹೃದಯದ ಸಮಸ್ಯೆಗಳನ್ನು ದೂರವಿಡುತ್ತದೆ
ತಾಮ್ರವು ದೇಹದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ಅಂತಹ ಗುಣಗಳಿಂದ ಸಮೃದ್ಧವಾಗಿದೆ, ಹೀಗಾಗಿ ಅದು ಹೃದ್ರೋಗವನ್ನು ಗುಣಪಡಿಸಲು ತುಂಬಾ ಸಹಾಯ ಮಾಡುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ 
ತಾಮ್ರದ ಪಾತ್ರೆಗಳನ್ನು ಬಳಸುವುದರಿಂದ  ದೇಹದಲ್ಲಿ ಮೆಲನಿನ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದಲ್ಲದೆ, ತಾಮ್ರವು ಹೊಸ ಜೀವಕೋಶಗಳ ರಚನೆಗೆ ಸಹಾಯ ಮಾಡುತ್ತದೆ. ಇದು ಚರ್ಮದ ಮೇಲಿನ ಪದರವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮವಾಗಿಡುತ್ತದೆ
ತಾಮ್ರದ ಪಾತ್ರೆಗಳ ಬಳಕೆಯಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ. ಏಕೆಂದರೆ ತಾಮ್ರವು ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡಲು ಕೆಲಸ ಮಾಡುತ್ತದೆ. ನಿಮ್ಮ ಹೊಟ್ಟೆಯನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತದೆ. ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯನಿರ್ವಹಣೆಯನ್ನು ಇದು ನಿಯಂತ್ರಿಸುತ್ತದೆ.

ತಾಮ್ರದ ಪಾತ್ರೆಯಲ್ಲಿ ಏನನ್ನು ಸೇವಿಸಬಾರದು?
ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ತಾಮ್ರದ ಪಾತ್ರೆಗಳಲ್ಲಿ ಸೇವಿಸಬಾರದು. ಇದರೊಂದಿಗೆ ಹುಳಿ ಪದಾರ್ಥಗಳು ಅಥವಾ ಹುಳಿ ಹಣ್ಣಿನ ರಸವನ್ನು ಕುಡಿಯಬಾರದು..ಇದರಿಂದ ಆಹಾರ ವಿಷವಾಗುವ ಸಾಧ್ಯತೆ ಹೆಚ್ಚುತ್ತದೆ.

Source:https://zeenews.india.com/kannada/health/copper-utensils-in-winter-is-it-safe-to-use-copper-utensils-in-winter-season-107085

Leave a Reply

Your email address will not be published. Required fields are marked *