🎉 ಮಲ್ಲಿಕಾರ್ಜುನ ಖರ್ಗೆ 84ನೇ ಹುಟ್ಟುಹಬ್ಬ: ಚಿತ್ರದುರ್ಗದಲ್ಲಿ ಭಾವುಕವಾಗಿ ಆಚರಣೆ! 🎉

📅 ಚಿತ್ರದುರ್ಗ, ಜುಲೈ 21 |

✍️ ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಏಐಸಿಸಿ ಅಧ್ಯಕ್ಷರು ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಹಿರಾಯ ಮುತ್ಸದ್ದಿ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ 84ನೇ ಹುಟ್ಟುಹಬ್ಬವನ್ನು ಸೋಮವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಜಿ.ಕಾಂಗ್ರೆಸ್ ಪಕ್ಷ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್ ಪೀರ್ ಮಾತನಾಡಿ:

🗣️ “ಕರ್ನಾಟಕ ರಾಜ್ಯದಿಂದ ಏಐಸಿಸಿ ಅಧ್ಯಕ್ಷರಾಗಿರುವವರು ಇಬ್ಬರು ಮಾತ್ರ. ಎಸ್.ನಿಜಲಿಂಗಪ್ಪ ಮತ್ತು ಇಂದಿನ ಮಲ್ಲಿಕಾರ್ಜುನ ಖರ್ಗೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಶುರುಮಾಡಿದ ಅವರು ಇಂದು ಪಕ್ಷದ ಶೃಂಗ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ.” ಎಂದು ಹೇಳಿದರು.


📌 ಖರ್ಗೆಯವರ ರಾಜಕೀಯ ಹೆಜ್ಜೆಗಳು

ಭಾರತದಾದ್ಯಂತ ಸಾವಿರಾರು ಬ್ಲಾಕ್, ಶೇಕಡಾರು ಜಿಲ್ಲಾಧ್ಯಕ್ಷರು, 30ಕ್ಕೂ ಹೆಚ್ಚು ರಾಜ್ಯಾಧ್ಯಕ್ಷರ ಮಧ್ಯೆ ಖರ್ಗೆಯವರಿಗೆ ರಾಷ್ಟ್ರದ ಉನ್ನತ ಹುದ್ದೆ ದೊರೆತಿರುವುದು ಅವರ ಶ್ರದ್ಧೆ, ಶ್ರಮದ ಫಲ.

ಖರ್ಗೆಯವರ ಬೆಳವಣಿಗೆಯಲ್ಲಿ ಚಿತ್ರದುರ್ಗದ ಪಾತ್ರ ಮಹತ್ವಪೂರ್ಣ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಟ್ಟದ ದಲಿತ ಮುಖಂಡರಾಗಿ, ದೇಶದ ವಿವಿಧ ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರಣರಾದರು.

ಲೋಕಸಭೆಯಲ್ಲೂ ಕಾಂಗ್ರೆಸ್ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದರು.


🗳️ ಭವಿಷ್ಯದ ನಿರೀಕ್ಷೆಗಳು

“ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದರೆ ಖರ್ಗೆ ಪ್ರಧಾನ ಮಂತ್ರಿಯಾಗಬಹುದಾಗಿತ್ತು” ಎಂದು ತಾಜ್ ಪೀರ್ ಅಭಿಪ್ರಾಯಪಟ್ಟರು.

“ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖರ್ಗೆಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಹೈಕಮಾಂಡ್ ನಿರ್ಧರಿಸಲಿದೆ” ಎಂಬ ಭರವಸೆ ವ್ಯಕ್ತಪಡಿಸಿದರು.


🧭 ಸಮರ್ಥ ನಾಯಕತ್ವ – ಶಕ್ತಿ, ನಿಷ್ಠೆ, ಅನುಭವ

ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಹೇಳಿದಂತೆ:
🗨️ “ಖರ್ಗೆಯವರು ಕೇಂದ್ರ ಮತ್ತು ರಾಜ್ಯಗಳಲ್ಲಿ ಮಂತ್ರಿಯಾಗಿ ಅಪಾರ ಅನುಭವವನ್ನು ಗಳಿಸಿದ್ದು, ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಲ್ಬುರ್ಗಿಯಲ್ಲಿ ತಳಮಟ್ಟದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.”


🙌 ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖರು:

ಮೈಲಾರಪ್ಪ, ಲಕ್ಷ್ಮೀಕಾಂತ, ಅಲ್ಲಾಭಕ್ಷಿ

ಸಂಪತ್ ಕುಮಾರ್ (ಡಿಸಿಸಿ ಪ್ರಧಾನ ಕಾರ್ಯದರ್ಶಿ)

ಆರ್.ಕೆ. ಸರ್ದಾರ್ (ಮಾಜಿ ಅಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರ)

ಶಿವಲಿಂಗಪ್ಪ, ವೆಂಕಟೇಶ್, ಮುದಸಿರ್

ಎನ್.ಡಿ. ಕುಮಾರ್ (ಓಬಿಸಿ ಘಟಕ ಅಧ್ಯಕ್ಷ), ರವಿಕುಮಾರ್ (ಉಪಾಧ್ಯಕ್ಷ)

ಪೈಲಟ್, ಖಾಸಿಂಆಲಿ, ಚಾಂದ್ ಪೀರ್, ಮಧುಗೌಡ

ಅಬ್ದುಲ್ ಷಾ, ಓಬಣ್ಣ, ಅಲ್ಲಾಭಕ್ಷಿ, ಮಂಜುನಾಥ್ ಗುಪ್ತ ಮತ್ತು ಇತರರು.

Leave a Reply

Your email address will not be published. Required fields are marked *