📍ಚಿತ್ರದುರ್ಗ, ಜುಲೈ 28:
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ದೂರದರ್ಶನದ 124ನೇ ಸಂಚಿಕೆಯ ಮನ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಿತ್ರದುರ್ಗದ ಐತಿಹಾಸಿಕ ಕೋಟೆ ಬಗ್ಗೆ ಉಲ್ಲೇಖಿಸಿ, ಅದರ ವೈಶಾಲ್ಯತೆ ಮತ್ತು ನಿರ್ಮಾಣ ಶೈಲಿಯನ್ನು ಶ್ಲಾಘಿಸಿರುವುದಕ್ಕೆ ಜೆಡಿಎಸ್ ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್ ಅವರು ಸ್ವಾಗತ ವ್ಯಕ್ತಪಡಿಸಿದ್ದಾರೆ.
🌟 “ಚಿತ್ರದುರ್ಗ ಕೋಟೆ – ಕೇವಲ ಕಲ್ಲು ಇಟ್ಟಿಗೆಗಳಲ್ಲ, ಇದು ನಮ್ಮ ಸಂಸ್ಕøತಿಯ ಪ್ರತೀಕ!” ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.
🛕 ಕೋಟೆ ಕುರಿತು ಅವರು ಈಂತೆ ವಿವರಿಸಿದರು:
“ಈ ಕೋಟೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯೊಂದಿಗಿದ್ದು, ಅನೇಕ ರಾಜ-ಮಹಾರಾಜರ ಆಳ್ವಿಕೆಯ ಸಾಕ್ಷಿಯಾಗಿದೆ. ಇಂತಹ ಬೃಹತ್ ಮತ್ತು ಅಭೇದ್ಯ ಕೋಟೆಯನ್ನು ಪ್ರಾಚೀನ ಕಾಲದಲ್ಲಿಯೇ ಹೇಗೆ ನಿರ್ಮಿಸಲಾಗಿತ್ತೋ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡುತ್ತದೆ. ಇದು ರಾಜ್ಯದಲ್ಲಿಯೇ ಅಪರೂಪದ ಕೋಟೆ.”
📡 ಮನ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಅವರು ಈಕೆರಿತು ಹೇಳಿದರು:
“ಚಿತ್ರದುರ್ಗದ ಏಳು ಸುತ್ತಿನ ಕೋಟೆ ಅತ್ಯಂತ ವಿಶಿಷ್ಟವಾಗಿದೆ. ಇದನ್ನು ನೋಡುವಾಗ ಇಡೀ ರಾಷ್ಟ್ರದ ಸಂಸ್ಕøತಿ, ಪರಂಪರೆ ಮತ್ತು ಸ್ವಾಭಿಮಾನ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕೋಟೆ ನಮ್ಮ ಇತಿಹಾಸದ ಒಂದು ಮಹತ್ವದ ಅಧ್ಯಾಯವಾಗಿದೆ. ಪ್ರತಿ ಭಾರತೀಯ ಕೂಡ ಇಂತಹ ಇತಿಹಾಸವನ್ನು ಅರಿತುಕೊಳ್ಳಬೇಕು.”
🎯 ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಮನವಿ:
ಗೋಪಾಲಸ್ವಾಮಿ ನಾಯಕ್ ಅವರು ಮುಂದಾಗಿ ಹೇಳಿದರು,
“ಚಿತ್ರದುರ್ಗ ಕೋಟೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆಯೆಂಬುದು ತೀವ್ರ ಸಮಸ್ಯೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ಗಮನಹರಿಸಿ, ಇಲ್ಲಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಇದಲ್ಲದೆ ಈ ಕೋಟೆಯನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಕಾರ್ಯವನ್ನೂ ಸರಕಾರ ಹಮ್ಮಿಕೊಳ್ಳಬೇಕು,” ಎಂದು ಮನವಿ ಮಾಡಿದರು.