📍 ಚಿತ್ರದುರ್ಗ | ಜುಲೈ 19, 2025
✍️ ಸುರೇಶ್ ಪಟ್ಟಣ್ ನ್ಯೂಸ್ & ಫೋಟೋಸ್
🎯 “ಜನಗಣತಿಯು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ!” – ಈ ಮಾತು ಸಾರ್ಥಕವಾಗಲಿ ಎಂಬ ದೃಷ್ಟಿಯಿಂದ, ಚಿತ್ರದುರ್ಗದ ತಿರುಮಲ ಕಲ್ಯಾಣ ಮಂಟಪದಲ್ಲಿ ಶನಿವಾರದಂದು ಹಿಂದುಳಿದ ವರ್ಗಗಳ ವಿಭಾಗ ಮಟ್ಟದ ಸಮಾವೇಶ ಶ್ರದ್ಧೆಯಿಂದ ನೆರವೇರಿತು.
🎙️ ಸುಧಾಕರ್ ರೆಡ್ಡಿ ಉದ್ದಾಟನೆ:
🗣️ “2026ರ ಜಾತಿ-ಜನಗಣತಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ. ತಮ್ಮ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ದಾಖಲಿಸಿ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳಿಗೆ ಇದು ದಾರಿ ಮಾಡಿಕೊಡುತ್ತದೆ” ಎಂದು ಉಸ್ತುವಾರಿ ಸುಧಾಕರ್ ರೆಡ್ಡಿ ಹೇಳಿದ್ದಾರೆ.
🔻 ಅವರು ಮುಂದುವರಿದು,
“ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟವಾಗಿದೆ. ಜನರಿಂದ ತೆರಿಗೆ ಸಂಗ್ರಹಿಸುವ ಮೂಲಕ ಜನರ ರಕ್ತ ಹೀರುತ್ತಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಜನರೊಂದಿಗೆ ಜೂಜಾಟವಾಡುತ್ತಿದ್ದಾರೆ. ಏಕವಿಧ ಧೋರಣೆಯಿಂದ ಓಬಿಸಿ ಜನಾಂಗವನ್ನು ದ್ವೇಷಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
🏛️ ರಾಜಕೀಯ ಧ್ವನಿ ಗಟ್ಟಿಯಾಗುತ್ತದೆ:
📌 “ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಏನು ಬೇಕಾದರೂ ಮಾಡುತ್ತದೆ” ಎಂದು ಅವರು ಹೇಳಿದರು.
“ಭ್ರಷ್ಟಾಚಾರದಿಂದ ಮಾರುಕಟ್ಟೆ ದರಗಳು ಗಗನಕ್ಕೇರಿವೆ. ಜನ ಹಿತಕ್ಕಿಂತ ಅಧಿಕಾರದ ಹಿತವೇ ಅವರಿಗೆ ಮುಖ್ಯ. ತಮ್ಮ ಪಂಚ ಗ್ಯಾರೆಂಟಿಗಳಿಗಾಗಿ ಜನರ ಮೇಲೆ ತೆರಿಗೆ ಬಿಕ್ಕಟ್ಟನ್ನು ತಂದುದಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
🌏 “ಪ್ರಪಂಚದ ಬಹುತೇಕ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಪ್ಪಿಕೊಂಡಿವೆ. ಅವರ ನೇತೃತ್ವದ ಎನ್.ಡಿ.ಎ ಸರ್ಕಾರದಿಂದ ಮಾತ್ರ ಓಬಿಸಿ ಜನಾಂಗಕ್ಕೆ ನ್ಯಾಯ ಸಿಗುತ್ತದೆ” ಎಂದೂ ಹೇಳಿದರು.

🧾 ಕೇಶವ ಪ್ರಸಾದ್ ಭಾಷಣ:
🗣️ “ಪ್ರತಿ 10 ವರ್ಷಕ್ಕೊಮ್ಮೆ ಜಾತಿಗಣತಿ ನಡೆಯಬೇಕೆಂದು ನಿಯಮವಿದೆ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಇದರಲ್ಲಿ ನಿರಾಸಕ್ತಿ ತೋರಿಸಿವೆ” ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಹೇಳಿದರು.
“ನೆಹರು ಜಾತಿಗಣತಿಗೆ ವಿರೋಧಿಯಾಗಿದ್ದವರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹ ರಾವ್, ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರಗಳು ಕೂಡ ಜಾತಿಗಣತಿಗೆ ಬೆಂಬಲ ನೀಡಲಿಲ್ಲ.”
“802 ಜಾತಿಗಳಲ್ಲಿ ಕೇವಲ 156 ಜಾತಿಗಳಿಗೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಉಳಿದವರಿಗೆ ಯಾವುದೇ ಪ್ರತಿನಿಧಿತ್ವವಿಲ್ಲ” ಎಂದು ಅಂಕಿಅಂಶಗಳನ್ನು ಹಂಚಿದರು.“2026ರಲ್ಲಿ ಕೇಂದ್ರ ಸರ್ಕಾರ ₹13,000 ಕೋಟಿ ವೆಚ್ಚದಲ್ಲಿ ಜಾತಿ-ಜನಗಣತಿ ನಡೆಸಲು ತೀರ್ಮಾನಿಸಿದೆ. ರಾಜ್ಯ ಸರ್ಕಾರಗಳಿಗೆ ಇದನ್ನು ಮಾಡುವ ಅಧಿಕಾರವಿಲ್ಲ” ಎಂದು ಸ್ಪಷ್ಟನೆ ನೀಡಿದರು.
🧑🌾 ಮಾಜಿ ಶಾಸಕರ ಟಿಪ್ಪಣೆ – ಜಿ.ಎಚ್. ತಿಪ್ಪಾರೆಡ್ಡಿ:
“ಚಿತ್ರದುರ್ಗದ ಶೇಕಡಾ 80 ಜನರು ಹಿಂದುಳಿದ ವರ್ಗದವರು. ದೇಶದಲ್ಲಿ ಕಾಂಗ್ರೆಸ್ ಯಾವತ್ತೂ ಜಾತಿಗಣತಿಯನ್ನು ಮಾಡಿಲ್ಲ. ಆದರೆ ಈಗ ಮೋದಿ ಅವರು ಇದನ್ನು ಪ್ರಾರಂಭಿಸಿದ್ದಾರೆ” ಎಂದು ಹೇಳಿದರು.
“ರಾಜ್ಯ ಸರ್ಕಾರ ಈ ಜಾತಿಗಣತಿಯ ನೆಪದಲ್ಲಿ ಸಾರ್ವಜನಿಕ ಹಣವನ್ನು ವ್ಯಯಿಸುತ್ತಿದೆ. ಆದರೆ ಅವರಿಗೆ ಇದನ್ನು ನಡೆಸುವ ಅಧಿಕಾರವೇ ಇಲ್ಲ” ಎಂದು ಅಭಿಪ್ರಾಯಪಟ್ಟರು.
“ಜಾತಿಗಣತಿ ಶೈಕ್ಷಣಿಕ ಮತ್ತು ಸಾಮಾಜಿಕ ಮಟ್ಟವನ್ನು ಅರ್ಥಮಾಡಿಕೊಳ್ಳಲು ಅಗತ್ಯ. ಈಗಾಗಲೇ ರಾಜ್ಯ ಮಟ್ಟದಲ್ಲಿ ಸಮಾವೇಶವಾಯಿತು, ಈಗ ವಿಭಾಗ ಮಟ್ಟದ ಕಾರ್ಯಕ್ರಮ, ಮುಂದಿನ ದಿನಗಳಲ್ಲಿ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದ ಕಾರ್ಯಕ್ರಮಗಳು ನಡೆಯಲಿವೆ” ಎಂದು ವಿವರಿಸಿದರು.
🧓 ಹರತಾಳ್ ಹಾಲಪ್ಪ – ನಂಬಿಕೆ ಕುಸಿತ:
🗣️ “ಇದು ಎಲ್ಲ ಸಮುದಾಯಗಳಿಗೆ ಪರ್ವ ಕಾಲ. ಮೀಸಲಾತಿಯಿಂದ ಮಾನವೀಯತೆ, ಶಿಕ್ಷಣ ಎಲ್ಲವೂ ಜನರಿಗೂ ಸಿಕ್ಕಿದೆ.”
“ಸಿದ್ದರಾಮಯ್ಯ ಅವರು ವರದಿಯನ್ನು ಜಾರಿ ಮಾಡುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಅವರು ತಮ್ಮ ಅಧಿಕಾರಕ್ಕಾಗಿ ವರದಿಯನ್ನು ಮೂಲೆಗೆ ತಳ್ಳಿದ್ದಾರೆ. ಇದು ನಿರಾಸಾಜನಕ” ಎಂದು ವಿಷಾದ ವ್ಯಕ್ತಪಡಿಸಿದರು.
“2026ರ ಜನಗಣತಿಯಲ್ಲಿ ಸರಿಯಾದ ಮಾಹಿತಿ ನೀಡಿ. ನಿಮ್ಮ ತೆರಿಗೆಯ ಪಾಲನ್ನು ಸರಿಯಾಗಿ ಪಡೆಯಲು ಇದು ಅವಕಾಶ” ಎಂದು ಸಲಹೆ ನೀಡಿದರು.
👥 ಪಾಲ್ಗೊಂಡ ಗಣ್ಯರು:
✔️ ಎನ್. ರವಿಕುಮಾರ್ (ವಿಧಾನ ಪರಿಷತ್ ಸದಸ್ಯ)
✔️ ಎಂ. ಚಂದ್ರಪ್ಪ (ಶಾಸಕ)
✔️ ಕೆ.ಟಿ. ಕುಮಾರಸ್ವಾಮಿ (BJP ಜಿಲ್ಲಾಧ್ಯಕ್ಷ)
✔️ ವಾದಿರಾಜ್, ಅಂಬಿಕಾ ಹುಲಿನಾಯ್ಕರ್, ಸೋಮಶೇಖರ್, ಮುರಳಿ, ಬಾಬು ಪತ್ತರ್, ಲಕ್ಷ್ಮೀಕಾಂತ್, ವೆಂಕಟೇಶ್ ಯಾದವ್, ತಿಮ್ಮಣ್ಣ, ಕಲ್ಲೇಶ್, ಸುಂದೀಪು ಗುಡಾರ್ಪಿ, ಲೋಕೇಶ್, ನಾಗರಾಜ್, ಅಭೀನಂದನ್, ಮಹಾಲಿಂಗಪ್ಪ, ರಾಮಣ್ಣ, ಲಿಂಗರಾಜು, ಪ್ರಸಾದ್, ಶಂಕರ್ ಚಾರ್, ಗೋವಿಂದಪ್ಪ, ಗೋಪಾಲ ಜಾಧವ್
ಮತ್ತು ಹಲವಾರು ಓಬಿಸಿ ಸಮುದಾಯದ ಮುಖಂಡರು ಭಾಗವಹಿಸಿದ್ದರು.