🛑 ಅಲೆಮಾರಿ ಸಮುದಾಯದ ಅಪ್ರಾಪ್ತರ ಮೇಲಿನ ಅತ್ಯಾಚಾರ — ಸರ್ಕಾರ ತಕ್ಷಣ ತಡೆಗಟ್ಟಬೇಕು: ಹೆಚ್. ಆಂಜನೇಯ.

📅 ಜುಲೈ 17, ಬೆಂಗಳೂರು

📍 ಬೆಂಗಳೂರು ಶಾಸಕರ ಭವನದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀವ್ರ ಪ್ರತಿಕ್ರಿಯೆ


“ಅಲೆಮಾರಿ ಸಮುದಾಯದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ ಮತ್ತು ದೌರ್ಜನ್ಯಗಳು ಮಾನವೀಯತೆಯ ವಿರುದ್ಧದ ಅಪರಾಧ!” ಎಂದು ಮಾಜಿ ಸಚಿವ ಹೆಚ್. ಆಂಜನೇಯ ಗುಡುಗಿದರು.


📢 ಸರ್ಕಾರ ತಕ್ಷಣ ಕಠಿಣ ಕ್ರಮಕೈಗೊಳ್ಳಲಿ!

ಹೆಚ್. ಆಂಜನೇಯ ಅವರು ಬೆಂಗಳೂರಿನ ಶಾಸಕರ ಭವನ ಸಭಾಂಗಣದಲ್ಲಿ ನಡೆದ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ದಿ ವೇದಿಕೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

➡️ “ಅಲೆಮಾರಿಗಳ ಮೇಲಿನ ದೌರ್ಜನ್ಯಗಳ ಬಗ್ಗೆ ಸರ್ಕಾರ ಗಂಭೀರವಾಗಿರಬೇಕು”
➡️ “ಸಿಎಂ ಸಿದ್ದರಾಮಯ್ಯ ಅವರ ಬಳಿ ನಿಯೋಗ ತೆರಳಬೇಕಿದೆ”
➡️ “ಅಲೆಮಾರಿಗಳಿಗೆ ಒಳ ಮೀಸಲಾತಿಯಲ್ಲಿ ಪ್ರತ್ಯೇಕ ಗುಂಪು ರಚನೆ ಅಗತ್ಯ” ಎಂದು ಒತ್ತಡ ತರಬೇಕೆಂದು ಹೇಳಿದರು.


⚠️ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ – ಮಾನವೀಯತೆ ಶರ್ಮಿಸೋ ಘಟನೆ!

🕯 ಮಾಗಡಿ ತಾಲ್ಲೂಕಿನ ತಾವರೆಕೆರೆಯಲ್ಲಿ ನಡೆದ ಈ ಅಮಾನವೀಯ ಘಟನೆಯ ಕುರಿತು ಅವರು ಹೇಳಿದರು –
“ಇದು ಸಮಾಜವೇ ತಲೆತಗ್ಗಿಸೋ ಕೆಲಸ! ಸರ್ಕಾರ ಆ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಉದ್ಯೋಗ ಕಲ್ಪಿಸಬೇಕು.”


📣 ಪ್ರತ್ಯೇಕ ಮೀಸಲಾತಿ – ಈಗಲೇ ಕ್ರಮ!

ಕವಿ ಎಸ್.ಜಿ. ಸಿದ್ದರಾಮಯ್ಯ ಅವರು ಹೇಳಿದರು:
🗣 “ಅಲೆಮಾರಿಗಳನ್ನು ಬಲಿಷ್ಠ ವರ್ಗಗಳ ಜೊತೆಗೆ ಸೇರಿಸಿ ಮೀಸಲಾತಿ ನೀಡುವುದು ಅಸಮರ್ಪಕ”
🎯 “49 ಅಲೆಮಾರಿ ಜಾತಿಗಳಿಗೆ ಪ್ರತ್ಯೇಕ ಮೀಸಲು ಸೌಲಭ್ಯ ನೀಡಲೇಬೇಕು.”


📚 ಕಾನೂನು ತಿದ್ದುಪಡಿ ಅಗತ್ಯ: ಡಾ. ಬಂಜಗೆರೆ ಜಯಪ್ರಕಾಶ್

ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ:
🔐 “SC/ST ಸಮುದಾಯದವರಿಂದ ಅಲೆಮಾರಿಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಅವರ ಮೇಲೂ ಕಠಿಣ ಕ್ರಮಕ್ಕೆ ತಿದ್ದುಪಡಿ ಬೇಕು.”
🛡 “ಅಲೆಮಾರಿಗಳ ರಕ್ಷಣೆಗಾಗಿ ಹೊಸ ಕಾನೂನು ರೂಪಿಸಬೇಕು” ಎಂದು ಆಗ್ರಹಿಸಿದರು.


👥 ಸಭೆಯಲ್ಲಿ ಭಾಗವಹಿಸಿದ ಗಣ್ಯರು:

🔸 ಮಾಜಿ ಸಂಸದ ಬಿ.ಎನ್. ಚಂದ್ರಪ್ಪ
🔸 ಧರ್ಮಸೇನ – ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷ
🔸 ಜಾಣಗೆರೆ ವೆಂಕಟರಮಣಯ್ಯ – ಹಿರಿಯ ಪತ್ರಕರ್ತ
🔸 ವಡ್ಡಗೆರೆ ನಾಗರಾಜಯ್ಯ, ಡಾ. ಬಾಲಗುರುಮೂರ್ತಿ – ಹಿರಿಯ ಸಾಹಿತಿಗಳು
🔸 ಜಿ.ಎಸ್. ಮಂಜುನಾಥ್ – ಆದಿಜಾಂಭವ ಅಭಿವೃದ್ದಿ ನಿಗಮದ ಅಧ್ಯಕ್ಷ
🔸 ಅಂಬಣ್ಣ ಆರೋಲಿಕರ, ಭೀಮಾಶಂಕರ್ – ಮಾದಿಗ ಮೀಸಲಾತಿ ಹೋರಾಟ ಮುಖಂಡರು
🔸 ಶೇಷಪ್ಪ ಅಂದೋಳ್ – ಅಲೆಮಾರಿ ಮುಖಂಡ


🙌 ಸಮುದಾಯದ ಮುಖಂಡರು:

ಚಾವಡೆ ಲೋಕೇಶ್, ಲೋಹಿತ್, ಕೆ. ವೀರೇಶ್, ಸುಭಾಷ್ ಚವಾಣ್, ಶಾಂತರಾಜ್, ಶಿವಕುಮಾರ್ ಬಳ್ಳಾರಿ, ಹನುಮಂತು, ಬಸವರಾಜ್ ನಾರಾಯಣಕೆರೆ, ಸಾವಿತ್ರಮ್ಮ ರತ್ನಾಕರ್, ಮಹಾಂತೇಶ್ ಸಂಕಲ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *