ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ, ಜುಲೈ 10 – ಜೀವನದಲ್ಲಿ ಎದುರಾಗುವ ಒತ್ತಡ ಮತ್ತು ಸಮಸ್ಯೆಗಳನ್ನು ನಿಭಾಯಿಸಲು ಮಾನಸಿಕ ಸಧೃಡತೆ ಅಗತ್ಯವಾಗಿದೆ. ಇಂತಹ ಸ್ಥಿತಿಯಲ್ಲಿ ಯೋಗ ಹಾಗೂ ಧ್ಯಾನ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಹೆಚ್ಚಿಸುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದ್ದಾರೆ.
ಗುರುಪೂರ್ಣಿಮೆಯ ನಿಮಿತ್ತ ಧವಳಗರಿ ಬಡಾವಣೆಯ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲೆಯ ಪತಂಜಲಿ ಯೋಗ ಸಮಿತಿಯು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ನಗರದ ಒತ್ತಡದ ಜೀವನ ಶೈಲಿಯಲ್ಲಿ ಎಲ್ಲರಿಗೂ ಯೋಗ ಹಾಗೂ ಧ್ಯಾನ ಬಹು ಅಗತ್ಯ. ಸಾರ್ವಜನಿಕರಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ ಯೋಗ ಶಿಕ್ಷಕರ ಕಾರ್ಯ ಶ್ಲಾಘನೀಯ,” ಎಂದು ಅವರು ಪ್ರಶಂಸಿಸಿದರು.
ಇದೇ ವೇಳೆ ಮುರುಘಾ ಮಠದ ಬಸವಕುಮಾರ ಸ್ವಾಮೀಜಿ ದಿವ್ಯ ಸಾನಿಧ್ಯವಿತ್ತರು. ಅವರು ಮಾತನಾಡುತ್ತಾ, “ವಿದ್ಯೆ ಕಲಿಸುವ ಗುರುಗಳು ಹಲವರು ಇದ್ದಾರೆ. ಆದರೆ ಕಾರುಣ್ಯಪೂರ್ಣ ಹೃದಯ ಹೊಂದಿರುವ ಗುರು ಮಾತ್ರ ಪೂಜ್ಯಸ್ಥಾನಕ್ಕರ್ಭವಾಗುತ್ತಾರೆ. ಗುರುಪರಂಪರೆ ನಮ್ಮ ನಾಡಿನ ಸಂಸ್ಕೃತಿಯ ಭಾಗ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಚಿತ ಯೋಗ ಶಿಕ್ಷಣ ನೀಡುತ್ತಿರುವ 10 ಯೋಗ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾ ಸಂಸ್ಥೆಯ ವೀರೇಶ್, ಬ್ರಹ್ಮಕುಮಾರಿ ರಶ್ಮಿ ಅಕ್ಕ, ಹನುಮೇಶ್ ಪದಕಿ, ಅನಪಾನ ಧ್ಯಾನ ಸಂಸ್ಥೆಯ ಬಿ.ಎನ್. ರಶ್ಮಿ, ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್, ಎಮ್. ನಾಗರತ್ಮಮ್ಮ, ಸಿ.ಜಿ. ಶ್ರೀನಿವಾಸ, ಗಂಗಣ್ಣ, ದೇವಾನಂದ, ಶ್ರೀನಿವಾಸ ಗಿರಿಯಪ್ಪ, ಜೆ.ಎಸ್. ಗುರುಮೂರ್ತಿ, ಲವಕುಮಾರ್, ಕಾಂತರಾಜು, ಕಂಚವೀರಪ್ಪ, ಶಶಿಕಿರಣ್ ಗುಡೇಕೋಟೆ, ರವೀಂದ್ರನಾಥ್, ರಘು, ಶ್ರೀಕಾಂತ್, ಜಯಪ್ಪ, ನಾಗಮ್ಮ ಮತ್ತಿತರರು ಉಪಸ್ಥಿತರಿದ್ದರು.