ಅಲೆಮಾರಿಗಳಿಗೆ ಶೇ.1 ಒಳಮೀಸಲಾತಿ ಜಾರಿ ಮಾಡಬೇಕು – ಪ್ರತಿಭಟನೆಗೆ ಸಜ್ಜಾದ ಸಮಿತಿ

ಚಿತ್ರದುಗ್ ಆ. 28

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಅಲೆಮಾರಿಗಳಿಗೆ ಶೇ 1ರಷ್ಟು ಒಳ ಮೀಸಲಾತಿ ಜಾರಿ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುವ ಸಲುವಾಗಿ ಪ್ರತಿಭಟನೆ ಮತ್ತು ಧರಣಿಯನ್ನು ಹಮ್ಮಿಕೊಂಡಿರುವುದಾಗಿ ಪರಿಶಿಷ್ಟ ಜಾತಿ 59, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ಸಮಿತಿಯ ಪ್ರತಾಪ್ ಜೋಗಿ ತಿಳಿಸಿದ್ದಾರೆ. 

ಅಲೆಮಾರಿ ಮತ್ತು ಅತಿ ಸೂಕ್ಷ್ಮ ಅಲೆಮಾರಿಗಳಿಗೆ ಒಳಮೀಸಲಾತಿ ವಂಚಿತವಾಗಿದ್ದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್‍ರವರ ವರದಿಯಂತೆ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇಕಡ 1ರಷ್ಟು ಮೀಸಲಾತಿ ನೀಡಬೇಕೆಂದು ವರದಿಯಲ್ಲಿ ತಿಳಿಸಿದ್ದು ಮತ್ತು ಅಲೆಮಾರಿ ಸಮುದಾಯಗಳು ಪರಿಶಿಷ್ಟ ಜಾತಿಗಿಂತಲೂ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ತಿಳಿಸಿದ್ದರೂ ಸಹ ರಾಜ್ಯ ಸರ್ಕಾರ ಮೂರು ಹಂತಗಳಲ್ಲಿ ವಿಂಗಡನೆ ಮಾಡಿ ಅಲೆಮಾರಿ ಸಮುದಾಯಗಳನ್ನು ಪ್ರಬಲ ಜಾತಿಗಳ ಪಟ್ಟಿಯಲ್ಲಿ ಮೂರನೇ ಹಂತಕ್ಕೆ ಸೇರಿಸಿರುವುದು ಖಂಡನೀಯ. 

ಆ.29ರಂದು ಬೆಳಗ್ಗೆ 11ಗಂಟೆಗೆ ಚಿತ್ರದುರ್ಗ ನಗರದ ಗಾಂಧಿವೃತ್ತದಿಂದ ಜಿಲ್ಲಾಧಿಕಾರಿಗಳ ವೃತ್ತದವರಿಗೆ ಭಿಕ್ಷೆ ಬೇಡಿ ಬಂದ ಹಣದಲ್ಲಿ ಅಲೆಮಾರಿಗಳು ನ್ಯಾಯಾಲಯದ ಮೊರೆ ಹೋಗುತ್ತೇವೆ ಮತ್ತು ಸಂಜೆ 6ಗಂಟೆಗೆ ಜನಪದ ವೈವಿದ್ಯಮಯ ಅಲೆಮಾರಿಗಳ ಸಂಸ್ಕøತಿಯನ್ನು ಕಛೇರಿಯ ಮುಂದೆ ಬಿಂಬಿಸುತ್ತಾ ದಿನಾಂಕ:30 ರ ಮಧ್ಯಾಹ್ನ 3ಗಂಟೆಗೆ  ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗುವುದೆಂದು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *