ಏಪ್ರಿಲ್‌ ತಿಂಗಳಿನಲ್ಲಿ ಪ್ರವಾಸ ಮಾಡಲೇಬೇಕಾದ ಅಪರೂಪದ 10 ದಕ್ಷಿಣದ ಸ್ಥಳಗಳು.

ಏಪ್ರಿಲ್‌ ಮಾಸದಲ್ಲಿ ಈ 10 ಪ್ರವಾಸಿ ಆಕರ್ಷಣೆಗಳನ್ನು ಸಂದರ್ಶಿಸಲು ಬಹಳ ಉತ್ತಮವಾದ ಅವಧಿ. ಅವುಗಳು ಯಾವುವು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.

ಏಪ್ರಿಲ್‌ ತಿಂಗಳಿಗೆ ಕುಟುಂಬ ಅಥವಾ ಸ್ನೇಹಿತರೊಟ್ಟಿಗೆ ಪ್ರವಾಸ ಮಾಡಬೇಕು ಎಂದು ನೀವು ಬಯಸಿದರೆ ದಕ್ಷಿಣ ಭಾರತದ ಈ 10 ಸ್ಥಳಗಳಿಗೆ ಸಂದರ್ಶಿಸಲು ಪ್ಲಾನ್ ಮಾಡಿ. ದಕ್ಷಿಣ ಭಾರತದಲ್ಲಿ ಅನೇಕ ಅದ್ಭುತವಾದ ಸ್ಥಳಗಳಿವೆ. ಅವುಗಳು ಈ ಬೇಸಿಗೆಯಿಂದ ನಿಮ್ಮನ್ನು ಕೆಲವು ದಿನಗಳವರೆಗೆ ಪಾರು ಮಾಡಲು ಪರ್ಫೇಕ್ಟ್‌ ಆಯ್ಕೆಗಳಾಗಿವೆ. ಹಾಗಾದರೆ ಆ ತಾಣಗಳು ಯಾವುವು ಎಂಬುದರ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ.

ವಾಲ್ಪಾರೈ, ತಮಿಳುನಾಡು

ವಾಲ್ಪಾರೈ, ತಮಿಳುನಾಡು


ತಮಿಳುನಾಡು ರಾಜ್ಯದ ಅತ್ಯಂತ ಪ್ರಶಾಂತವಾದ ಸ್ಥಳಕ್ಕೆ ಹೋಗಿ ಪ್ರವಾಸ ಯೋಜಿಸಬೇಕು ಎಂದು ನೀವು ಬಯಸುತ್ತಿದ್ದರೆ ತಪ್ಪದೇ ವಾಲ್ಪಾರೈಗೆ ಭೇಟಿ ನೀಡಿ. ಈ ಸೊಗಸಾದ ಬೆಟ್ಟಗಳಲ್ಲಿ ವಿವಿಧ ವನ್ಯಜೀವಿಗಳು ನೆಲೆಸಿವೆ. ನೀವು ಅತ್ಯುತ್ತಮವಾದ ಛಾಯಾಗ್ರಾಹಕರಾಗಿದ್ದರೆ ಬಹುಶಃ ವಾಲ್ಪಾರೈ ನಿಮಗೆ ಅತ್ಯುತ್ತಮವಾದ ಸ್ಥಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಂಜಿನಿಂದ ಕೂಡಿದ ಬೆಟ್ಟದ ನೋಟ, ಸೊಂಪಾಗಿ ಬೆಳೆದು ಹರಡಿರುವ ಚಹಾದ ತೋಟಗಳು ಮನಸ್ಸಿಗೆ ಶಾಂತಿಯನ್ನು ಉಂಟು ಮಾಡುತ್ತದೆ.

ಅರಕು ವ್ಯಾಲಿ, ಆಂಧ್ರಪ್ರದೇಶ

ಅರಕು ವ್ಯಾಲಿ, ಆಂಧ್ರಪ್ರದೇಶ


ಆಂಧ್ರಪ್ರದೇಶದ ಸಣ್ಣ ಗಿರಿಧಾಮವಾಗಿರುವ ಅರಕು ವ್ಯಾಲಿ ನೋಡಲೇಬೇಕಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇಲ್ಲಿನ ಸುವಾಸನೆ ಭರಿತ ಕಾಫಿಯನ್ನು ಸವಿಯುವುದನ್ನು ನೀವು ಮರೆಯದಿರಿ. ಹಾಗೆಯೇ, ಬೋರಾ ಗುಹೆಗಳ ಅನ್ವೇಷಣೆಯನ್ನು ತಪ್ಪಿಸದಿರಿ. ಇಲ್ಲಿ ಬುಡಕಟ್ಟು ಸಮಾಜದ ಮ್ಯೂಸಿಯಂ ಕೂಡ ಇದೆ. ಅಲ್ಲಿಗೆ ನೀವು ಹೋಗಬಹುದು.

ಹಂಪಿ, ಕರ್ನಾಟಕ

ಹಂಪಿ, ಕರ್ನಾಟಕ


ಕರ್ನಾಟಕ ರಾಜ್ಯದ ಶ್ರೀಮಂತ ಐತಿಹಾಸಿಕ ತಾಣವಾದ ಹಂಪಿಗೆ ನೀವು ಏಪ್ರಿಲ್‌ ತಿಂಗಳಿನಲ್ಲಿ ಪ್ಲಾನ್ ಮಾಡಬಹುದು. ಏಕೆಂದರೆ ಈ ಸಮಯದಲ್ಲಿ ಜನಜಂಗುಳಿಯಿಂದ ಹಂಪಿ ದೂರವಿರುತ್ತದೆ. ನೆಮ್ಮದಿಯಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನು ನೀವು ಸಂದರ್ಶಿಸಬಹುದು. ರೋಮಾಂಚಕ ಅನುಭವವನ್ನು ಪಡೆಯಲು ನೀವು ಸೈಕಲ್‌ ಅನ್ನು ಬಾಡಿಗೆಗೆ ಪಡೆದು ಹಂಪಿಯ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ಪರಿಶೀಲಿಸಬಹುದು. ಹಂಪಿಯ ಸೂರ್ಯಾಸ್ತ ಹಾಗೂ ಸೂರ್ಯೋದಯವನ್ನು ಕಣ್ಣಾರೆ ಕಂಡೇ ಆನಂದಿಸಬೇಕು.

ಗೋಕರ್ಣ, ಕರ್ನಾಟಕ

 ಗೋಕರ್ಣ, ಕರ್ನಾಟಕ


ಕರ್ನಾಟಕದ ಗೋಕರ್ಣ ಆಲ್‌ ಟೈಮ್ ಫೇವರೆಟ್ ತಾಣವಾಗಿದೆ. ಗೋವಾ ಬದಲಾಗಿ ನೀವು ಗೋಕರ್ಣಗೆ ಹೋಗಲು ಪ್ಲಾನ್‌ ಮಾಡಬಹುದು. ಇಲ್ಲಿನ ಪ್ರಶಾಂತ ಕಡಲತೀರವು ನಿಜಕ್ಕೂ ಮೋಡಿ ಮಾಡುತ್ತದೆ. ಇಲ್ಲಿನ ಕೂಡ್ಲೆ ಬೀಚ್ ಮತ್ತು ಓಂ ಬೀಚ್‌ಗೆ ತಪ್ಪದೇ ಭೇಟಿ ನೀಡಿ ಎಂದು ಶಿಫಾರಸು ಮಾಡುತ್ತೇವೆ. ಬೀಚ್‌ನ ಮರಳಿನಲ್ಲಿ ವಾಕಿಂಗ್‌ ಮಾಡಿ, ನೈಟ್‌ ಕ್ಯಾಂಪಿಂಗ್‌ ಮತ್ತಷ್ಟು ಆನಂದವನ್ನು ಉಂಟು ಮಾಡುತ್ತದೆ.

ಮುನ್ನಾರ್‌, ಕೇರಳ

 ಮುನ್ನಾರ್‌, ಕೇರಳ


ಕೇರಳ ರಾಜ್ಯದ ಮುನ್ನಾರ್‌ ಭಾರತದಲ್ಲಿ ತುಂಬಾ ಬೇಡಿಕೆಯ ಹನಿಮೂನ್‌ ತಾಣಗಳಲ್ಲಿ ಒಂದಾಗಿದೆ. ಈ ಸುಂದರವಾದ ಸ್ಥಳವು ಏಪ್ರಿಲ್‌ ತಿಂಗಳಿನಲ್ಲಿ ಪ್ರವಾಸ ಯೋಜಿಸಲು ಅತ್ಯುತ್ತಮವಾದ ಆಯ್ಕೆಯಾಗಿದೆ. ಸೊಂಪಾಗಿ ಬೆಳೆದ ಚಹಾದ ತೋಟಗಳು, ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳು, ಘಮ್‌ ಎನ್ನುವ ಮಸಾಲೆ ತೋಟಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ಇಲ್ಲಿನ ರಾಷ್ಟ್ರೀಯ ಉದ್ಯಾನವನಕ್ಕೂ ಭೇಟಿ ನೀಡಬಹುದು.

ಚೆಟ್ಟಿನಾಡ್, ತಮಿಳುನಾಡು

ಚೆಟ್ಟಿನಾಡ್, ತಮಿಳುನಾಡು


ಬೀಚ್‌ ಮತ್ತು ಗಿರಿಧಾಮಗಳನ್ನು ಹೊರತುಪಡಿಸಿ ಚೆಟ್ಟಿನಾಡ್ ತನ್ನ ಅಸಾಧಾರಣವಾದ ಇತಿಹಾಸವನ್ನು ಹೊಂದಿದೆ. ಏಪ್ರಿಲ್‌ ತಿಂಗಳಿನಲ್ಲಿ ನೀವು ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ಈ ಸಮಯದಲ್ಲಿ ಸಾಕಷ್ಟು ಜನರು ಇರುವುದಿಲ್ಲ, ಹಾಗಾಗಿ ಇಲ್ಲಿನ ಪುರಾತನ ಆಲಯಗಳನ್ನು ಸಂದರ್ಶಿಸಬಹುದು. ಚೆಟ್ಟಿನಾಡ್‌ ಸ್ಪೇಷಲ್‌ ಆಹಾರಗಳನ್ನು ಸವಿಯುವುದನ್ನು ಮರೆಯದಿರಿ.

ಪೂವರ್, ಕೇರಳ

ಪೂವರ್, ಕೇರಳ


ಕೇರಳ ರಾಜ್ಯದ ಪೂವರ್ ಅತ್ಯಂತ ಆಹ್ಲಾದಕರವಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಬ್ಯಾಕ್ ವಾಟರ್, ಗೋಲ್ಡನ್‌ ಬೀಚ್‌ಗಳನ್ನು ಇಲ್ಲಿ ಆನಂದಿಸಬಹುದಾಗಿದೆ. ಏಪ್ರಿಲ್‌ ತಿಂಗಳಿನಲ್ಲಿ ಸುಂದರವಾದ ಬೋಟ್‌ ರೈಡ್‌ ಅನ್ನು ತೆಗೆದುಕೊಳ್ಳಿ. ತೇಲುವ ಬೋಟ್‌ನಲ್ಲಿ ಉಳಿಯುವ ಮೂಲಕ ರೋಮಾಂಚಕ ಅನುಭವಗಳನ್ನು ಪಡೆಯಬಹುದು.

ಯೆರ್ಕಾಡ್‌, ತಮಿಳುನಾಡು

ಯೆರ್ಕಾಡ್‌, ತಮಿಳುನಾಡು


ತಮಿಳುನಾಡಿನ ಯೆರ್ಕಾಡ್ ಊಟಿ ಮತ್ತು ಕೊಡೈಕೆನಾಲ್‌ನಷ್ಟೇ ಅದ್ಭುತವಾದ ಸ್ಥಳವಾಗಿದೆ. ಸಮ್ಮೋಹನಗೊಳಿಸುವ ಸೂರ್ಯೋದಯ, ಆಳವಾದ ಕಣಿವೆಗಳು, ವಿಸ್ತಾರವಾಗಿ ಬೆಳೆದ ಕಾಫಿ ತೋಟಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಯೆರ್ಕಾಡ್‌ನ ಸರೋವರದಲ್ಲಿ ಪ್ರಶಾಂತವಾದ ಬೋಟ್‌ ರೈಡ್ ಮಿಸ್ ಮಾಡ್ಕೋಬೇಡಿ.

ಲೇಪಾಕ್ಷಿ, ಆಂಧ್ರಪ್ರದೇಶ

ಲೇಪಾಕ್ಷಿ, ಆಂಧ್ರಪ್ರದೇಶ


ಆಂಧ್ರಪ್ರದೇಶದ ಲೇಪಾಕ್ಷಿ ಒಂದು ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. ಏಪ್ರಿಲ್‌ ತಿಂಗಳಿನಲ್ಲಿ ಲೇಪಾಕ್ಷಿಯ ಸೌಂದರ್ಯ ನೋಡುವುದೇ ಅದ್ಭುತ. ಲೇಪಾಕ್ಷಿಯಲ್ಲಿನ ದೇವಾಲಯದಲ್ಲಿ ತೂಗಾಡುವ ಸ್ತಂಭವನ್ನು ಪರಿಶೀಲಿಸಿರಿ. ಈ ಸ್ತಂಭವನ್ನು ನೋಡಲು ಅನೇಕ ದೇಶಗಳಿಂದ ಜನರು ಭೇಟಿ ನೀಡುತ್ತಾರೆ. ಶ್ರೀಮಂತ ಶಿಲ್ಪಕಲೆಗಳು ಹಾಗೂ ಕೆತ್ತನೆಗಳನ್ನು ಕಣ್ತುಂಬಿಕೊಳ್ಳಿ.

ಅತಿರಪಲ್ಲಿ, ಕೇರಳ

 ಅತಿರಪಲ್ಲಿ, ಕೇರಳ


ಕೇರಳ ರಾಜ್ಯದ ಅತಿರಪಲ್ಲಿ, ಕೇರಳ ರಾಜ್ಯದ ಅತ್ಯಂತ ದೊಡ್ಡ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತದ ದೃಶ್ಯಾವಳಿಯು ಉಸಿರುಗಟ್ಟುವ ಸೌಂದರ್ಯವನ್ನು ಹೊಂದಿದೆ. ಬಹುಬಲಿ ಸಿನಿಮಾದ ಜಲಪಾತದಂತೆ ಇದು ಕಾಣುತ್ತದೆ. ಇದರ ನಿಜವಾದ ಸೊಬಗನ್ನು ನೋಡಲು ಮಳೆಗಾಲದಲ್ಲಿ ಭೇಟಿ ನೀಡಬಹುದಾದರೂ, ಏಪ್ರಿಲ್‌ ತಿಂಗಳಿನಲ್ಲಿ ಭೇಟಿ ನೀಡಲು ಯೋಗ್ಯವಾಗಿದೆ. 

Source : Vijaykarnataka

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *