ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ. 30 ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೆಳಗಾವಿ ಅಧಿವೇಶನವನ್ನು ಮಹಾತ್ಮ ಗಾಂಧಿ ರವರು ನಡೆಸಿಕೊಟ್ಟು ಇಂದಿಗೆ ನೂರು ವರ್ಷ ಸಂಪೂರ್ಣವಾಗಿರುವ ಹಿನ್ನೆಲೆಯಲ್ಲಿ ಮುಂಬರುವ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಗಾಂಧಿ ಭಾರತ ಹೆಸರಿನ ಅಡಿಯಲ್ಲಿ ವರ್ಷಪೂರ್ತಿ ಆಚರಿಸಲು ಕೈಗೊಳ್ಳಬೇಕಾಗಿದೆ ಜೊತೆಗೆ ಆ.2 ರಂದು ನಡೆಯವ ಗಾಂಧಿಜಿಯವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ
ಆಚರಣೆ ಮಾಡಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರು, ಕೌಶಲ್ಯ ಅಭೀವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ
ಕಾಂಗ್ರೆಸ್ ಮುಖಂಡರಿಗೆ ಕಾರ್ಯಕರ್ತರಿಗೆ ಕರೆ ನೀಡಿದರು.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಗಾಂಧಿ ನಡಿಗೆ ಸಿದ್ಧತೆಗಳ ಬಗ್ಗೆ
ಪೂರ್ವಸಿದ್ಧತೆಗಳ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕೆ.ಪಿ.ಸಿ.ಸಿ
ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಗಾಂಧಿ ಜಯಂತಿಯನ್ನು “ಗಾಂಧಿ ನಡಿಗೆ 100 ವರ್ಷ” ಎಂಬ
ಘೋಷಣೆಯೊಂದಿಗೆ ಅದ್ದೂರಿಯಾಗಿ ಆಚರಿಸ ಬೇಕಾಗಿರುವ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತಿದೆ ಇಲ್ಲಿ
ಅಂದು ನಡೆಯ ಬೇಕಾದ ಕಾರ್ಯಕ್ರಮಗಳ ಬಗ್ಗೆ ತಯಾರಿಯನ್ನು ನಡೆಸಲಾಗುವುದು. ಗಾಂಧೀಜಿಯವರು ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ವಹಿಸಿಕೊಂಡು ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ 29ನೇ ಆಧಿವೇಶನಕ್ಕೆ ಈಗ ನೂರ ಸಂಭ್ರಮವಾಗಿದೆ.
ಗಾಂಧಿಜಿಯವರು 1924ರ ಡಿಸೆಂಬರ್ 26-27 ರಂದು ಬೆಳಗಾವಿಯಲ್ಲಿ ಅಧ್ಯಕ್ಷತೆವಹಿಸಿದ ಮೊದಲನೇ ಹಾಗೂ ಕೊನೆಯ
ಅಧಿವೇಶನವಾಗಿದೆ.

2024 ಅ.2 ರಿಂದ ಅ.2.2025ರವರೆಗೆ ಒಂದು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ,ವಾರ್ಡ ತಾಲ್ಲೂಕು
ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು. ಅ. 2 ರಂದು ಬುಧುವಾರ ಕಾರ್ಯ ಕ್ರಮದ ಉದ್ಘಾಟನೆ ನಡೆಯಲಿದೆ. ಒಂದು ವರ್ಷದ
ಕಾರ್ಯಕ್ರಮವನ್ನು ಗಾಂಧಿ ಭಾರತ ಎಂದು ಕರೆಯಲಾ ಗುವುದು. ಇದರ ಅಂಗವಾಗಿ ಅಂದು ಸುಮಾರು 1 ಕೀ.ಮೀ.ನಷ್ಟು ಗಾಂಧಿ ನಡಿಗೆ
ಪಾದಯಾತ್ರೆ ಮಾಡಲಾಗು ವುದು. ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಗಳ ಬಳಕೆಯಾಗಬೇಕು, ಭಾಗವಹಿಸುವವರು ಶ್ವೇತ
ವಸ್ತ್ರಧಾರಿಗಳಾಗಬೇಕಿದೆ. ಗಾಂಧಿ ಟೋಪಿಯನ್ನು ಧರಿಸಬೇಕು, ಕಾರ್ಯಕ್ರಮದಲ್ಲಿ ಗಾಂಧೀಜಿಯವರಿಗೆ ಪ್ರಿಯವಾದ ಭಜನೆ ಮತ್ತು
ಹಾಡುಗಳನ್ನು ಹಾಡಬೇಕಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಮುಖಂಡರು, ಬ್ಲಾಕ್ ಅಧ್ಯಕ್ಷರು ವಿವಿಧ ಘಟಕಗಳ ಅಧ್ಯಕ್ಷರು ಸಾಧ್ಯ ವಾದಷ್ಟು
ಜನತೆಯನ್ನು ಪಾದಯಾತ್ರೆ ಹಾಗೂ ಕಾರ್ಯಕ್ರಮಕ್ಕೆ ಕರೆತರಬೇಕಿದೆ ಎಂದು ಸೂಚನೆ ನೀಡಿದರು.

ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ಬೆಳಗಾವಿ ಅಧಿವೇಶನವನ್ನು ಮಹಾತ್ಮಗಾಂಧಿ ರವರು ನಡೆಸಿಕೊಟ್ಟು ಇಂದಿಗೆ ನೂರು
ವರ್ಷ ಸಂಪೂರ್ಣವಾಗಿರವುದು ನಮ್ಮ ಕಾಲದಲ್ಲಿ ಕಾಂಗ್ರೆಸ್‍ರವರಿಗೆ ನೂರರ ಸಂಭ್ರಮ ಕಾರ್ಯಕ್ರಮ ಬಂದಿರುವುದು ಸಂತೋಷದ
ವಿಷಯವಾಗಿದೆ, ಇದನ್ನು ಅದ್ದೂರಿಯಾಗಿ ವರ್ಷ ಪೂರ್ತಿಯಾಗಿ ಆಚರಣೆಯನ್ನು ಮಾಡಲಾಗುವುದು ಅದಕ್ಕೆ ಬೇಕಾದ ತಯಾರಿಯನ್ನು
ಸಹಾ ಮಾಡಲಾಗುವುದು, ಕೆಪಿಸಿಸಿವತಿಯಿಂದ ಇದನ್ನು ಆಚರಣೆ ಮಾಡಲು ಈಗಾಗಲೇ ಎಲ್ಲಾ ತಯಾರಿಯನ್ನು ನಡೆಸಲಾಗಿದೆ. ಅಂದು
ಬೆಳಿಗ್ಗೆ 9 ಗಂಟೆಗೆ ನಗರದ ನೀಲಕಂಠೇಶ್ವರ ದೇವಾಲಯದಲ್ಲಿ ಇರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಕಾಂಗ್ರೆಸ್
ಕಚೇರಿಯವರೆಗೂ ಪಾದಯಾತ್ರೆ ನಡೆಸಲಾಗುವುದು ಎಂದ ಅವರು, ನಂತರ ಕಚೇರಿಯ ಮುಂದುಗಡೆಯಲ್ಲಿ ಕಾರ್ಯಕ್ರಮ
ನಡೆಸಲಾಗುವುದು ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳು ಆದ ರಾಮಕೃಷ್ಣಪ್ಪ ಮಾತನಾಡಿ,
ನಮಗೆ ಕೆಪಿಸಿಸಿಯಿಂದ ನಡೆಯುವ ಕಾರ್ಯಕ್ರಮ ಮುಖ್ಯವಾಗಿದೆ, ಅದನ್ನು ತಪ್ಪಿಸಿಕೊಳ್ಳಬಾರದು, ವರ್ಷ ಪೂರ್ತಿಯಾಗಿ ನಡೆಯುವ
ಕಾರ್ಯಕ್ರಮಕ್ಕೆ ವಿಭೀನ್ನವಾಗಿರಬೇಕಿದೆ. ಇದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕಿದೆ ಮುಂದಿನ ದಿನದಲ್ಲಿ ತಾಲ್ಲೂಕು ಹಾಗೂ
ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರಲಿವೆ. ಅದಕ್ಕೆ ತಯಾರಿಯನ್ನು ಮಾಡಿಕೊಳ್ಳಬೇಕಿದೆ. ಇದರೊಂದಿಗೆ ಪಕ್ಷವನ್ನು ಸಹಾ
ಸಂಘಟಿಸಬೇಕಿದೆ ಎಂದರು.
ಪೂರ್ವಬಾವಿ ಸಭೆಯಲ್ಲಿ ಡಿಸಿಸಿ ಮಾಜಿ ಅಧ್ಯಕ್ಷರಾದ ಫಾತ್ಯರಾಜನ್, ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್, ಡಿಸಿಸಿಯ
ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ
ಆರ್.ಕೆ.ಸರ್ದಾರ್, ಮಹಿಳಾ ಘಟಕದ ಅಧ್ಯಕ್ಷರಾದ ಗೀತಾ ನಂದಿನಿ ಗೌಡ, ಲಕ್ಷ್ಮೀಕಾಂತ್, ಖುದ್ದಸ್, ಆನಂತ್, ಗ್ಯಾರೆಂಟಿ ಅಧ್ಯಕ್ಷರಾದ
ಶಿವಣ್ಣ, ಮಂಜುನಾಥ್, ಚೋಟು, ಭೂತಣ್ಣ, ಶಶಿ, ಕಲೀಂವುಲ್ಲಾ, ಗ್ರಾಮಾಂತರ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.