ಸ್ವತಂತ್ರ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್‍ರ 117ನೇಜನ್ಮದಿನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 29 ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರಾಗಿರುವ ಧೀರಹುತಾತ್ಮ ಭಗತ್ ಸಿಂಗ್‍ರವರು ಇಂದಿನ ಯುವಜನತೆಗೆ ಆದರ್ಶವಾಗಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ನಮ್ಮ ಸಮಾಜವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.” ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆ ಮುಖಂಡರಾದ ರವಿಕುಮಾರ್ ತಿಳಿಸಿದರು.

ಚಿತ್ರದುರ್ಗದಲ್ಲಿ ಎಐಡಿಎಸ್‍ಓ-ಎಐಡಿವೈಓವತಿಯಿಂದ ಸ್ವತಂತ್ರ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್‍ರ 117ನೇ
ಜನ್ಮದಿನವನ್ನು ನಗರದ ಡಿ.ಸಿ ವೃತ್ತದ ಬಳಿ ಇರುವ ಭಗತ್ ಸಿಂಗ್ ಪಾರ್ಕ್‍ನ ಬಳಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು
ಭಗತ್ ಸಿಂಗ್‍ರವರ ಇಂಕ್ವಿಲಾಬ್ ಜಿಂದಾಬಾದ್ ಅಂದರೆ ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯು ಇಂದಿಗೂ ಸಹ ಆಳ್ವಿಕರ ಎಲ್ಲ ಶೋಷಣೆಯ ವಿರುದ್ಧ ಯುವಕರ ಮನಸ್ಸನ್ನು ಎಚ್ಚರಿಸುತ್ತವೆ.

ದೇಶದ ಎಲ್ಲಾ ಸಂಪತ್ತಿನ ಒಡೆತನವನ್ನು ಬಂಡವಾಳಗಾರರು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಇದೇ ನಮ್ಮ ದೇಶದ ಬಡ ರೈತರ, ಕಾರ್ಮಿಕರ, ನವ ಯುವಕರ ಬೆಳವಣಿಗೆಗೆ ದೊಡ್ಡ ತೊಡಕಾಗಿದೆ ಎಂಬುದನ್ನು ಭಗತ್‍ಸಿಂಗ್ ಸ್ಪಷÀ್ಟವಾಗಿ ಗ್ರಹಿಸಿದ್ದರು. ಅದಕ್ಕಾಗಿ ಮಾನವನಿಂದ ಮಾನವನ ಮೇಲೆ ಜರುಗುವ ಶೋಷಣೆಯನ್ನು ತೊಲಗಿಸಿ ನೊಂದ ಜನ ಗೌರವದಿಂದ ತಲೆಯೆತ್ತಿ ಜೀವಿಸುವ ಸಮಾಜವಾದಿ ಸಮಾಜವ ಗುರಿ ಹೊಂದಿದ್ದರು. ಆದರೆ ಅವರ ಕನಸು ಇಂದಿಗೂ ನನಸಾಗಿರುವುದಿಲ್ಲ. ಸ್ವಾತಂತ್ರ್ಯ ನಂತರ ಆಳ್ವಿಕೆಗೆ ಬಂದ ಎಲ್ಲ ಸರ್ಕಾರಗಳು ಅವರ ವಿಚಾರಧಾರೆಗಳನ್ನು ಯತ್ನಿಸಿವೆ. ದೇಶ ಸ್ವತಂತ್ರವಾಗಿ ಏಳು ದಶಕಗಳು ಕಳೆದಿದ್ದರೂ ಬಡವರು ಶ್ರೀಮಂತರ ಮಧ್ಯ ಅಂತರ ಕಡಿಮೆಯಾಗಿಲ್ಲ. ರೈತ ಕಾರ್ಮಿಕರ ಬದುಕು ಇನ್ನು ಅತಂತ್ರವಾಗಿಯೇ ಉಳಿದಿದೆ. ಉದ್ಯೋಗ, ಆರೋಗ್ಯ ವ್ಯವಸ್ಥೆ ಮತ್ತು ಶಿಕ್ಷಣದಲ್ಲಿ ಗಂಭೀರವಾದ ಕೊರತೆಗಳನ್ನು ಎದುರಿಸುತ್ತಿದ್ದೇವೆ.

ಇಂದು ಭಾರತ ಅಪಾರವಾದ ನೈಸರ್ಗಿಕ ಸಂಪತ್ತನ್ನು ಹೊಂದಿದ್ದರು ಸಹ ಆಳ್ವಿಕ ಸರ್ಕಾರಗಳು ಮೂಲಸೌಕರ್ಯಗಳನ್ನು ಕೊಡುವಲ್ಲಿಯೂ ವಿಫಲವಾಗಿ ಕೇವಲ ನೆಪ ನೀಡುತ್ತಿವೆ. ಬ್ರಿಟಿಷರ ನಂತರ ಬಂದ ಎಲ್ಲಾ ಆಳ್ವಿಕರು ಈ ಬಂಡವಾಳಿಗರ ಸೇವೆಗೆ ಬದ್ಧರಾಗಿ ನಿಂತಿದ್ದಾರೆ. `ಆದರೆ ಭಗತ್‍ಸಿಂಗರೇ ನುಡಿದಂತೆವ್ಯಕ್ತಿಯನ್ನು ಕೊಲ್ಲಬಹುದೇ ಹೊರತು, ಅವನ ವಿಚಾರಗಳನ್ನಲ್ಲ” ಇವರ ವಿಚಾರಧಾರೆಯನ್ನು ಸಂಪೂರ್ಣವಾಗಿ ಮುಚ್ಚಿಡಲು ಸಾಧ್ಯವಿಲ್ಲ. ನಮ್ಮ ವಿದ್ಯಾರ್ಥಿ ಸಂಘಟನೆ ಮತ್ತು ಯುವಜನ ಸಂಘಟನೆಗಳು ದೇಶದಾದ್ಯಂತ ಇಂದು ಭಗತ್ ಸಿಂಗ್‍ರ ಜನ್ಮದಿನವನ್ನು ಅತ್ಯಂತ ಗೌರವದಿಂದ ಆಚರಿಸಿ ಯುವಜನರಿಗೆ ಅವರ ವಿಚಾರಧಾರೆಯನ್ನ ತಲುಪಿಸುವ ಪ್ರಯತ್ನ
ಮಾಡಲಾಗುತ್ತಿದೆ’ ಎಂದರು.

ಓನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಡಿಎಸ್‍ಓ ಜಿಲ್ಲಾ ಮುಖಂಡ ಕೆ.ಈರಣ್ಣ ಅವರು
“ಜಾತಿ – ಧರ್ಮಗಳ ಗಡಿಯನ್ನು ಮೀರಿ ಎಲ್ಲರೂ ಭಾರತವೆಂಬ ಒಂದೇ ಸೂರಿನಡಿಯಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಬೇಕು, ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ರಾಜಿರಹಿತ ಹೋರಾಟ ನಡೆಸಿ, ನಗುನಗುತ್ತಾ ಗಲ್ಗಂಬವನ್ನೀರಿದವರು ಭಗತ್ ಸಿಂಗ್.

ಈ ಸಮಾಜದಲ್ಲಿ ಶಿಕ್ಷಣ ವ್ಯಾಪಾರೀಕರಣ, ನಿರುದ್ಯೋಗ, ಜಾತಿ ಹಾಗೂ ಕೋಮುವಾದದ ವಿರುದ್ಧ ದ್ವನಿ ಎತ್ತಲು ಅವರ ವಿಚಾರಗಳು ನಮಗೆ ಸ್ಫೂರ್ತಿಯಾಗಿವೆ. ಭಗತ್ ಸಿಂಗ್‍ರ ಜೀವನ ಸಂಘಷರ್ ಹಾಗೂ ವಿಚಾರಗಳನ್ನು ಸ್ಫೂರ್ತಿಯಾಗಿಸಿಕೊಂಡು ಅವರ ಕನಸಿನ ಸಮಾಜವಾದಿ ಭಾರತ ಕಟ್ಟುಲು ವಿದ್ಯಾರ್ಥಿಗಳು ಸಂಕಲ್ಪವನ್ನು ತೆಗೆದುಕೊಳ್ಳಬೇಕು ಶಿಕ್ಷಣ – ಸಂಸ್ಕøತಿ – ಮಾನವತೆ ಉಳಿಸಲು ವಿದ್ಯಾರ್ಥಿ-ಯುವಜನತೆ ಒಂದಾಗಬೇಕು” ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಐಡಿಎಸ್‍ಓ ಸದಸ್ಯರಾದ ಹೇಮಂತ್, ಪವನ್, ನಿಶಾನ್ ಎಐಡಿವೈಓನ ನಿಂಗರಾಜ್, ಎಐಎಂಎಸ್‍ಎಸ್ ಮಹಿಳಾ
ಸಂಘಟನೆಯಿಂದ ಸುಜಾತ, ಮತ್ತು ನಗರಸಭೆಯ ನೌಕರರಾದ ಶಿವು ಮತ್ತು ಕೃಷ್ಣ ಅನೇಕ ವಿದ್ಯಾರ್ಥಿ-ಯುವಜನರು ಹಾಗೂ
ಸಾರ್ವಜನಿಕರು ಭಾಗವಹಿಸಿದ್ದರು.

ಓನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಮತ್ತು ಇನ್ನಿತರೆ ಶಾಲಾ ಕಾಲೇಜು, ಹಾಸ್ಟೆಲ್‍ಗಳಲ್ಲಿ ಭಗತ್ ಸಿಂಗ್‍ರವರಿಗೆ ಗೌರವ ಸಲ್ಲಿಸುವ ಮೂಲಕ
ಆಚರಿಸಲಾಯಿತು..

Leave a Reply

Your email address will not be published. Required fields are marked *