” ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರಿಯಸಿ ” ಎಂಬ ಪವಿತ್ರ ಸುಮಧುರ ಸಂಸ್ಕೃತ ನುಡಿಗಳನ್ನು ಕೇಳುತ್ತಾ ಕರ್ಣಗಳು ಇಂಪಾಗುತ್ತವೆ. ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ಶ್ರೇಷ್ಠ ಎಂದು ಅನುವಾದಿಸುತ್ತದೆ. ಹೆಣ್ಣನ್ನು ದೇವರ ಸಮಾನವಾಗಿ ಕಾಣುವ ಪೂಜಿಸುವ ನೆಲದಲ್ಲಿ ಆಗಿದ್ದಾದರೂ ಏನು?? ಆಗುತ್ತಿರುವುದಾದರೂ ಎಂತದ್ದು??

ಆಗಸ್ಟ್ 14ರ ಮಧ್ಯರಾತ್ರಿಯಲ್ಲಿ ಸುಮಾರು 500 ಮೀಟರ್ ಉದ್ದದಷ್ಟು ಹೆಣ್ಣು ಮಕ್ಕಳ ದಂಡು ಇತ್ತು.ಓಹ್!!! ಇದು ಗಾಂಧೀಜಿಯವರು ಹೇಳಿದ 12 ಗಂಟೆ ಮಧ್ಯರಾತ್ರಿಯಲ್ಲಿ ಹೆಣ್ಣೊಬ್ಬಳು ನಿರ್ಭೀತಿಯಿಂದ ಓಡಾಡಿದರೆ ದೊರಕಿದ ಸ್ವತಂತ್ರವಲ್ಲ! ಬದಲಿಗೆ ತನ್ನದೇ ಕೆಲಸದ ಸ್ಥಳದಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯಾಗಿಡಾದ ಒಬ್ಬ ಅಮಾಯಕ ಮುಗ್ದ ಹುಡುಗಿಗಾಗಿ ಆಕೆಯ ಅನ್ಯಾಯಕ್ಕಾಗಿ ನಡೆಯುತ್ತಿದ್ದ ಹೋರಾಟ ಅದು..
ಹೌದು ಆಗಸ್ಟ್ 9 ರಂದು RG Kar ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾಕ್ಟರ್ ಟ್ರೈನಿ ಮೇಲೆ ನೆಡಿದಿರುವ ಹೇಯ ಕೃತ್ಯ. ನಿಜಕ್ಕೂ ಆ ಕೃತ್ಯವನ್ನು ವಿವರಿಸಲು ಸಹ ಮನಕುಲುಕುತ್ತದೆ.
ಇದೇನು ಮೊದಲಲ್ಲ ಹಾಗಾದರೆ ಕೊನೆನ??
ಇಡೀ ದೇಶಕ್ಕೆ 12 ವರ್ಷಗಳ ಹಿಂದೆ ಆದ ನಿರ್ಭಯ ಪ್ರಕರಣ ಗೊತ್ತು!!! ಆದರೆ 50 ವರ್ಷಗಳ ಹಿಂದೆ ಆದ ಅರುಣ ಶಾನುಭೋಗರ ಪ್ರಕರಣ ಬಹುಶ ಅಷ್ಟು ತಿಳಿದಿರಲು ಸಾಧ್ಯವಿಲ್ಲ ಆಕೆಯು ಸಹ ಹೀಗೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಸ್ಟಾಫ್ ಹುಡುಗನಿಂದ ಅತ್ಯಾಚಾರಕ್ಕೀಡಾದವಳು?? ಆದರೆ ಆಕೆಗೆ ದೊರಕಿದ ನ್ಯಾಯವಾದರೂ ಏನು???
National crime records bureau 2022 ರ ಪ್ರಕಾರ ದೇಶದಲ್ಲಿ ಪ್ರತಿದಿನ ಸುಮಾರು 80 ಅತ್ಯಾಚಾರ ಆಗುತ್ತಲೇ ಇವೇ!! ಇದಕ್ಕೆಲ್ಲ ನ್ಯಾಯ ಒದಗಿಸುವವರು ಯಾರು??
ವೈದ್ಯೋ ನಾರಾಯಣ ಹರಿ ಎಂದು ಪ್ರತಿಪಾದಿಸುವ ದೇಶದಲ್ಲಿ ಇಂತಹ ಘಟನೆಗೆ ಸಾಕ್ಷಿಯಾಗಿರುವ ನಾವುಗಳು ಎಂತಹ ಕ್ರೂರ ಸಮಾಜದಲ್ಲಿ ಬದುಕುತ್ತಿದ್ದೇವೆ? ಡಾಕ್ಟರ್ ವಂದನಾ ದಾಸ್ ಕೇರಳ ,ವೇಟರ್ನರಿ ಡಾಕ್ಟರ್ ಪ್ರಿಯಾಂಕ ಹೈದರಾಬಾದ್, ಸೌಜನ್ಯಾ ,ನಿರ್ಭಯ ಮುಂತಾದ ಅದೆಷ್ಟೋ ಹೆಣ್ಣು ಮಕ್ಕಳ ಕೂಗು ಕೂಗಾಗಿಯೇ ಉಳಿದಿವೆ. ಡಾಕ್ಟರ್ ಪ್ರಿಯಾಂಕರವರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಿದಾಗ ಬಂದಂತಹ ಮಾನವ ಹಕ್ಕುಗಳ ಸಂರಕ್ಷಣಾ ಸಂಘಗಳು, ವ್ಯಕ್ತಿಗಳು ಈ ಪ್ರಕರಣದಲ್ಲಿ ಮೌನ ವಹಿಸಿರುವುದು ಏಕೆ?? ಪೋಕ್ಸೋ ಕಾಯ್ದೆಡಿ ದಾಖಲಾದ 2.34 ಲಕ್ಷ ಕ್ಕು ಹೆಚ್ಚು ಪ್ರಕರಣಗಳು Fast track special court ನಲ್ಲೆ ಉಳಿದಿವೆ.
2023 ರ ವರದಿ ಪ್ರಕಾರ ದೇಶದಲ್ಲಿ ಲಿಂಗ aparada (gender crime) 2021ಕ್ಕಿಂತ 12.3% ಹೆಚ್ಚಾಗಿದೆ. ಈ ವರದಿ ಪ್ರಕಾರ ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಸ್ಥಳಗಳಲ್ಲಿ ಕಲ್ಕತ್ತಾ ಮೂರನೇ ಸ್ಥಾನದಲ್ಲಿದೆ ಗುರುತಿಸಿಕೊಂಡಿರುವುದು ವಿಪರ್ಯಾಸವೇ ಸರಿ.
ಅಂಗೈ ಹುಣ್ಣಿಗೆ ಕನ್ನಡಿ ಏಕೆ???
ಆಗಸ್ಟ್ 9 ರ 3.30-4 am ವೇಳೆಯಲ್ಲಿ ಪ್ರಕರಣ ನೆಡಿದಿದೆ ಆಗಸ್ಟ್ 10 ರ ಸಂಜೆ 4.40 ಕ್ಕೆ ವಿಚಾರಣ ವರದಿ ಸಲ್ಲಿಕೆಯಾಗಿದೆ ಏಕೆ ಇಷ್ಟು ತಡ??ಘಟನೆ ನಡೆದ ಮರುದಿನವೇ ಸಿಬಿಐಗೆ ಪ್ರಕರಣವನ್ನು ಒಪ್ಪಿಸಲು ಮುಂದಾದ ಮಮತಾ ಬ್ಯಾನರ್ಜಿ ಅವರ ನಿರ್ಧಾರ ನಂತರ ಬದಲಾಗಿದ್ದು ಏಕೆ?? ಆ ಏಳು ದಿನಗಳಲ್ಲಿ ನಡೆದ ರಾಜಕೀಯವಾದರೂ ಏನು?
ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯದ ಏಕರೂಪ ಕೇಂದ್ರೀಯ ರೆಸಿಡೆನ್ಸಿ ಸ್ಕೀಮ್ ನಿವಾಸಿ ವೈದ್ಯರು ಕೆಲಸ ಮಾಡಬಹುದಾದ ಗಂಟೆಗಳ ಸಂಖ್ಯೆಯನ್ನು 12 ಗಂಟೆ ಮೀರಬಾರದು ಮತ್ತು 2 ಪೂರ್ಣ ಪ್ರಮಾಣದ ಶಿಫ್ಟ್ ಗಳನ್ನು ಮಾಡಬಾರದು. ಎಂದು ಹೇಳುತ್ತದೆ. ಘಟನೆಯಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹ ಒಬ್ಬ ಹೆಣ್ಣು ಆದರೆ ಇಂತಹ ಪ್ರಕರಣದಲ್ಲಿ ಅವರು ಏಕೆ ಇಷ್ಟು ಸಮತ ಭಾವವನ್ನು ಅನುಸರಿಸುತ್ತಿದ್ದಾರೆ? ರಾಜ್ಯದ ಚುಕ್ಕಾಣಿ ಹಿಡಿದಿರುವ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಪ್ರಕರಣ ಹತ್ತಿಕುವ ಕೆಲಸ ಮಾಡಿ ದೇಶದಲ್ಲಿ ಮಹಿಳಾ ಶೋಷಣೆ ಹೆಚ್ಚಾಗುತ್ತಿದೆ ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಭಾಷಣ ಮಾಡಿದರೆ ಸಾಕಾಗೋದಿಲ್ಲ ಮೋದಿಜಿ…
ಇಂಥ ಕೃತ್ಯಗಳಲ್ಲಿ ಸಿಬಿಐ, ನ್ಯಾಯಾಲಯ, ಪ್ರಕರಣ ಸಾಬೀತು, ರುಜುವಾತು,ಹೋರಾಟ ಇತ್ಯಾದಿ ಮುಗಿಯುವಷ್ಟರಲ್ಲಿ ಮತ್ತೊಂದು ಅಮಾಯಕ ಹುಡುಗಿಯ ಬರ್ಬರ ಹತ್ಯೆ ಎಂದಿಗೆ ಇದೆಲ್ಲ ನಿಲ್ಲುವುದು? ಆಕೆ ವಿಶ್ರಾಂತಿ ತೆಗೆದುಕೊಳ್ಳಲು ಒಬ್ಬಳೆ ತನ್ನ ಆಸ್ಪತ್ರೆಯ ಸೆಮಿನಾರ್ ಹಾಲ್ ಗೆ ಹೋಗಿದ್ದೆ ಆಕೆ ತಪ್ಪು ಎಂದು ಹೇಳುವ RGKar ಸರ್ಕಾರಿ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ Dr. ಸಂದೀಪ್ ಕುಮಾರ್ ಘೋಷ ತನ್ನದೇ ಮನೆಯೊಳಗೆ ತಾನು ಸುರುಕ್ಷಿತ ಅಲ್ಲವಾದರೆ ಮತ್ತೆಲ್ಲಿ ಸುರಕ್ಷಿತಳು ಹೆಣ್ಣು.. ಸೆಮಿನಾರ್ ಹಾಲ್ ನಲ್ಲಿ ಒಂದು cc camera ಅಳವಡಿಸಲು ಆಗದಷ್ಟು ಬೇಜವಾಬ್ದಾರಿಯ ನಡೆಯೇಕೆ?? ಪ್ರಕರಣವನ್ನು ಆತ್ಮಹತ್ಯೆ ಎಂದು ಕೊನೆಗೊಳಿಸಲು ಮಾಡಿದ ಪ್ರಯತ್ನದ ಹಿಂದೆ ಅಂತಹ ರಹಸ್ಯವೆನಿದೆ?? ಇಷ್ಟೆಲ್ಲ ಪ್ರಕರಣ ಗಂಭೀರತೆ ಹೊಂದಿದರು ಸಹ ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮಹಿಳಾ ಆಯೋಗಗಳು ಎಲ್ಲಿ ಕೂತು ತುಕಾಡಿಸುತ್ತಿವೆ?? ಬೇರೆ ರಾಜಕೀಯ ವಿಚಾರಗಳಿಗೆ, ಕೋಮು ಗಲಭೆಗಳಿಗೆ ಎಷ್ಟು ಬೇಗ ಒಂದಾಗುವ, ಹೇಳಿಕೆ ನೀಡುವ ರಾಜಕೀಯ ಪಕ್ಷಗಳು ರಾಜಕೀಯ ಮಹಾನ್ ವ್ಯಕ್ತಿಗಳು ಏನು ಮಾಡುತ್ತಿದ್ದಾರೆ?? ಇದು ಕೇವಲ ಆಕೆಯ ಪ್ರಕರಣ ಅಲ್ಲ..ಡಾಕ್ಟರ್ಗಳ ಸಮಸ್ಯೆ ಅಲ್ಲಾ…. ಪ್ರತಿ ಕ್ಷೇತ್ರದಲ್ಲೂ ಪ್ರತಿ ಯುಗದಲ್ಲೂ ಇನ್ನು ಶೋಷಿತ ವಸ್ತುವಾಗಿಯೇ ಮುಂದುವರಿಯುತ್ತಿದ್ದಾಳೆ ಇದೆಲ್ಲಾ ಎಂದು ಕೊನೆಗೊಳ್ಳುವುದು???
ಭಾರತದ ಅನ್ಯಾಯ ಸಂಹಿತೆ ಪ್ರಕಾರ 103 – ಕೊಲೆ ಮಾಡುವ ಅಪರಾಧಿಗೆ ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ದಂಡವನ್ನು ವಿಧಿಸಬಹುದು ಮತ್ತು 64 – ಜೈಲು ಶಿಕ್ಷೆಯನ್ನು ವಿವರಿಸುತ್ತದೆ ಇದು ಈ ಪ್ರಕರಣದಲ್ಲಿ ದಾಖಲಾಗಿರುವ ಸೆಕ್ಷನ್ಗಳು. ಯಾವ ಜೀವಾವಧಿಯು ಬೇಡ,ದಂಡನೆಯೂ ಬೇಡ,ಮರಣ ದಂಡನೆಯೂ ಬೇಡ,ಮಾನ್ಯ ನ್ಯಾಯಮೂರ್ತಿಗಳೇ ಎನ್ ಕೌಂಟರ್ ಗೆ ಆದೇಶ ನೀಡಬೇಕು. ಎಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯಾಲಯದ ಶಿಕ್ಷೆಯ ನಂತರ ಕ್ಷಮಾದಾನ, ಮಾನವ ಹಕ್ಕುಗಳು ಮುಂತಾದ ಅಸ್ತ್ರಗಳನ್ನು ಹಿಡಿದುಕೊಂಡು ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ.
ಮುಂದುವರೆಯುತ್ತದೆ..

🖊️ ನಯನ ಓ ಜೋಗಿ
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು
ಚಿತ್ರದುರ್ಗ.