WPL 2025: ವುಮೆನ್ಸ್ ಪ್ರೀಮಿಯರ್ ಲೀಗ್​ ಹರಾಜು ಪಟ್ಟಿಯಲ್ಲಿ 120 ಆಟಗಾರ್ತಿಯರು.

ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೂರನೇ ಸೀಸನ್​​ಗೆ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 15 ರಂದು WPL ಮಿನಿ ಹರಾಜು ನಡೆಯಲಿದ್ದು, ಈ ಹರಾಜಿಗಾಗಿ ಒಟ್ಟು 120 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ 120 ಆಟಗಾರ್ತಿಯರಲ್ಲಿ 91 ಭಾರತೀಯರು ಹಾಗೂ 29 ವಿದೇಶಿ ಆಟಗಾರ್ತಿಯರಿದ್ದಾರೆ.

ಇನ್ನು ಈ ಬಾರಿಯ ಹರಾಜಿನಲ್ಲಿ ಒಟ್ಟು 19 ಆಟಗಾರ್ತಿಯರಿಗೆ ಮಾತ್ರ ಅವಕಾಶ ಲಭಿಸಲಿದ್ದು, ಇದರಲ್ಲಿ ಐವರು ವಿದೇಶಿ ಆಟಗಾರ್ತಿಯರ ಸ್ಲಾಟ್​​ಗಳು ಖಾಲಿಯಿವೆ. ಈ ಸ್ಲಾಟ್​​ಗಳನ್ನು ಭರ್ತಿ ಮಾಡಿಕೊಳ್ಳಲು 5 ಫ್ರಾಂಚೈಸಿಗಳು ಡಿಸೆಂಬರ್ 15 ರಂದು ಬಿಡ್ಡಿಂಗ್ ನಡೆಸಲಿದೆ. ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳ ಪಟ್ಟಿ ಈ ಕೆಳಗಿನಂತಿದೆ…

  • ಡೆಲ್ಲಿ ಕ್ಯಾಪಿಟಲ್ಸ್: 4 ಸ್ಲಾಟ್​ (1 ವಿದೇಶಿ ಆಟಗಾರ್ತಿಯ ಸ್ಲಾಟ್)
  • ಗುಜರಾತ್ ಜೈಂಟ್ಸ್: 4 ಸ್ಲಾಟ್ (2 ವಿದೇಶಿ ಆಟಗಾರ್ತಿಯ ಸ್ಲಾಟ್)
  • ಮುಂಬೈ ಇಂಡಿಯನ್ಸ್: 4 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್)
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: 4 ಸ್ಲಾಟ್​ (ವಿದೇಶಿ ಆಟಗಾರ್ತಿಯರ ಸ್ಲಾಟ್ ಭರ್ತಿ)
  • ಯುಪಿ ವಾರಿಯರ್ಸ್​: 3 ಸ್ಲಾಟ್ (1 ವಿದೇಶಿ ಆಟಗಾರ್ತಿಯ ಸ್ಲಾಟ್)

ಪ್ರತಿ ಫ್ರಾಂಚೈಸಿಗಳ ಬಳಿಯಿರುವ ಹರಾಜು ಮೊತ್ತ:

  • ಡೆಲ್ಲಿ ಕ್ಯಾಪಿಟಲ್ಸ್: 2.5 ಕೋಟಿ ರೂ.
  • ಗುಜರಾತ್ ಜೈಂಟ್ಸ್: 4.4 ಕೋಟಿ ರೂ.
  • ಮುಂಬೈ ಇಂಡಿಯನ್ಸ್: 2.65 ಕೋಟಿ ರೂ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: 3.25 ಕೋಟಿ ರೂ.
  • ಯುಪಿ ವಾರಿಯರ್ಸ್: 3.9 ಕೋಟಿ ರೂ.

ಹರಾಜು ಪಟ್ಟಿಯಲ್ಲಿರುವ ಸ್ಟಾರ್ ಆಟಗಾರ್ತಿಯರು:

  • ಡಿಯಾಂಡ್ರಾ ಡಾಟಿನ್ (ವೆಸ್ಟ್ ಇಂಡೀಸ್)
  • ಹೀದರ್ ನೈಟ್ (ಇಂಗ್ಲೆಂಡ್)
  • ಲಿಝೆಲ್ಲೆ ಲೀ (ಸೌತ್ ಆಫ್ರಿಕಾ)
  • ಲಾರೆನ್ ಬೆಲ್ (ಇಂಗ್ಲೆಂಡ್)
  • ಸೋಫಿಯಾ ಡಂಕ್ಲಿ (ಇಂಗ್ಲೆಂಡ್)
  • ನಡಿನ್ ಡಿ ಕ್ಲರ್ಕ್ (ಸೌತ್ ಆಫ್ರಿಕಾ)
  • ಸ್ನೇಹ್ ರಾಣಾ (ಭಾರತ)
  • ಪೂನಂ ಯಾದವ್ (ಭಾರತ).

ವುಮೆನ್ಸ್ ಪ್ರೀಮಿಯರ್ ಲೀಗ್​​ನ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿರುವ ಆಟಗಾರ್ತಿಯರ ಸಂಪೂರ್ಣ ಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

Source : https://tv9kannada.com/sports/cricket-news/wpl-2025-auction-full-list-of-120-players-kannada-news-zp-946580.html

Leave a Reply

Your email address will not be published. Required fields are marked *