ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದಿಂದ ಮಾಸಿಕ ಗಮಕ ನಿವೇದನೆಯ 14ನೇ ಅಧಿವೇಶನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕುಮಾರವ್ಯಾಸ ಭಾರತದ ರಸಘಟ್ಟಿಯಾದ ಕಾವ್ಯ ಭಾಗ ಕುರುಕ್ಷೇತ್ರ ಯುದ್ಧದ ಸಂದಾನ ಸನ್ನಾಹ ಎಂಬ ಪ್ರಸಂಗದ ವಾಚನ ಮತ್ತು
ವ್ಯಾಖ್ಯಾನಗಳನ್ನು ಗಮಕಿಗಳಾದ ಅನಂತ ಕೃಷ್ಣ ಮತ್ತು ಚಂಪಕಾ ಶ್ರೀಧರ್ ನಡೆಸಿಕೊಟ್ಟರು. ಯುದ್ಧ ಪೂರ್ವದಲ್ಲಿ ಶ್ರೀ ಕೃಷ್ಣನ ನೇತೃತ್ವದಲ್ಲಿ
ವಿಚಾರ ವಿನಿಮಯ ನಡೆದಾಗ ಧರ್ಮರಾಯ ಅರ್ಜುನ ಮತ್ತು ನಕುಲ ಸಂಧಾನವೇ ಸಾಕು ಎಂದಾಗ, ಭೀಮ ಮತ್ತು ಸಹದೇವ ಮೌನ
ಸಮ್ಮತಿ ಸೂಚಿಸುತ್ತಿದ್ದಾಗ ಕೆರಳಿದ ದ್ರೌಪದಿಯು ಪತಿಗಳ ನಿಲುವನ್ನು ಕಟುವಾಗಿ ಝಂಕಿಸಿ ತಾನು ಅಭಿಮನ್ಯು ಘಟೋದ್ಘಜ ಮತ್ತು ತನ್ನ
ತಂದೆ ದ್ರುಪದನ ನೆರವಿನಿಂದ ಯುದ್ಧ ಮಾಡಿ ಕ್ಷತ್ರೀಯ ರಮಣೀಯಂತೆ ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡುವುದಾಗಿ ಹೇಳಿ ಎಲ್ಲರನ್ನೂ
ಯುದ್ಧ ಪ್ರಸಕ್ತಿಯಲ್ಲಿ ತೊಡಗುವಂತೆ ಪ್ರೇರೇಪಿಸಿದ ಕಥಾ ಭಾಗವನ್ನು ಗಮಕ ಕಲಾವಿದರು ಅತ್ಯಂತ ಪರಿಣಾಮಕಾರಿಯಾಗಿ
ಮನೋಭೂಮಿಕೆ ಮೇಲೆ ಮೂಡಿಸಿದರು.

ಸಂಘದ ಅಧ್ಯಕ್ಷ ಶ್ರೀಮತಿ ರಮಾದೇವಿ. ಕೆ. ವೆಂಕಣ್ಣಚಾರ್ ಅವರು ಮಾತನಾಡಿ ಕನ್ನಡದ ಕುಮಾರವ್ಯಾಸ ಭಾರತದಂತಹ ಉದ್ದಾಮ
ಕಾವ್ಯಗಳನ್ನು ಮಕ್ಕಳಿಗೆ ಗಮಕಲೆಯ ಮೂಲಕ ಪರಿಚಯಿಸಿದರೆ ಕನ್ನಡವನ್ನು ಉಳಿಸಿ ಬೆಳೆಸುವ ಯೋಚನೆ ಫಲಪ್ರದವಾಗುವುದರಲ್ಲಿ
ಅನುಮಾನವಿಲ್ಲ ಎಂದರು.

ಸಮಾರಂಭವು ಜೆಸಿಆರ್ ಬಡಾವಣೆಯ ಮಾರುತಿ ಭಜನಾ ಮಂಡಳಿಯವರು ಗಮಕ ಪ್ರಾರ್ಥನೆ ಮಾಡಿದರು ಸಂಘದ ನಿರ್ದೇಶಕಿ
ಸುಶೀಲ ಪ್ರಸಾದ್ ಸ್ವಾಗತಿಸಿದರೆ ಮತ್ತೋರ್ವ ನಿರ್ದೇಶಕಿ ಬಿ.ಎಲ್ ಉಮಾ ವಂದನಾರ್ಪಣೆ ಮಾಡಿದರು. ಶಶಿಧರ ಶ್ಯಾನುಭೋಗ್
ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಮಾಸಿಕ ಗಮಕ ಕಾರ್ಯಕ್ರಮವು ದಿನಾಂಕ 27-10-2024 ಭಾನುವಾರ ಸಂಜೆ 6 ಗಂಟೆಗೆ ನಗರದ ಜೆಸಿಆರ್ ಗಣಪತಿ
ದೇವಾಲಯದ ಪ್ರಾಂಗಣದಲ್ಲಿ ಲಕ್ಷ್ಮೀಶ ಕವಿಯ ಜೈಮಿನಿ ಭಾರತದ “ಬಕದಾಲ್ಭ್ಯ ಮುನಿಯ ವೃತ್ತಾಂತ” ಎಂಬ ಪ್ರಸಂಗವನ್ನು
ಬೆಂಗಳೂರಿನ ಗಮಕಿಗಳಾದ ಎಂ.ಆರ್. ಸತ್ಯನಾರಾಯಣ ಮತ್ತು ಟಿ .ಎಸ್. ಸುಬ್ರಮಣ್ಯ ಭಟ್ಟ ಅವರು ವಾಚನ ಮತ್ತು ವ್ಯಾಖ್ಯಾನ
ನಡೆಸಿಕೊಡಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *