ಪತ್ರಿಕೋದ್ಯಮ ಪದವೀಧರರಿಗೆ ಮಾಸಿಕ ರೂ.15,000 ಸ್ಟೈಫಂಡ್‌ ಜತೆಗೆ ತರಬೇತಿ: ಅರ್ಜಿ ಆಹ್ವಾನ.

  • ಪತ್ರಿಕೋದ್ಯಮ ಅಪ್ರೆಂಟಿಸ್ ಹುದ್ದೆಗೆ ಅಧಿಸೂಚನೆ.
  • ಪತ್ರಿಕೋದ್ಯಮ ಪದವಿ/ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಿ.
  • ಅರ್ಜಿಗೆ ನವೆಂಬರ್ 15 ಕೊನೆ ದಿನ.

ನೀವು ಪ್ರಸಕ್ತ ಸಾಲಿನಲ್ಲಿ ಪತ್ರಿಕೋದ್ಯಮ ಪದವಿ / ಸ್ನಾತಕೋತ್ತರ ಪದವಿ ಪಾಸಾಗಿದ್ದು, ಉದ್ಯೋಗಕ್ಕಾಗಿ ಮುನ್ನೋಡುತ್ತಿದ್ದಲ್ಲಿ, ಇಲ್ಲಿದೆ ನೋಡಿ ಮಾಸಿಕ ಸ್ಟೈಫಂಡ್‌ ರೂ.15,000 ದೊಂದಿಗೆ ತರಬೇತಿ. ಈಗಲೇ ಅರ್ಜಿ ಸಲ್ಲಿಸಿ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2024-25ನೇ ಸಾಲಿಗೆ ಪತ್ರಿಕೋದ್ಯಮ ಪದವೀಧರರನ್ನು ತರಬೇತಿಗೆ ನಿಯೋಜನೆ ಮಾಡಿಕೊಳ್ಳಲು ನೋಟಿಫಿಕೇಶನ್‌ ಹೊರಡಿಸಿದೆ. ಆಫ್‌ಲೈನ್‌ ಮಾದರಿಯಲ್ಲಿ ಅರ್ಜಿ ಆಹ್ವಾನಿಸಿದೆ.

12 ತಿಂಗಳ ಅಪ್ರೆಂಟಿಸ್ ತರಬೇತಿ ಇದಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪತ್ರಿಕೋದ್ಯಮ ಪದವೀಧರರು ಅರ್ಜಿ ಸಲ್ಲಿಸಬಹುದು.

ನೇಮಕಾತಿ ಸಂಸ್ಥೆವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಹುದ್ದೆ ಹೆಸರುಪತ್ರಿಕೋದ್ಯಮ ಅಪ್ರೆಂಟಿಸ್‌ ತರಬೇತುದಾರರು
ಅರ್ಜಿ ಸಲ್ಲಿಸಲು ಕೊನೆ ದಿನಾಂಕನವೆಂಬರ್ 15, 2024
ಹುದ್ದೆಗಳ ಸಂಖ್ಯೆತಿಳಿಸಲಾಗಿಲ್ಲ
ಮಾಸಿಕ ಸ್ಟೈಫಂಡ್‌ರೂ.15,000

ಅರ್ಹತೆಗಳು
– ಅಭ್ಯರ್ಥಿಯು ಪತ್ರಿಕೋದ್ಯಮದಲ್ಲಿ ಪದವಿ / ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
– ಕನ್ನಡ ಭಾಷೆಯಲ್ಲಿ ಪರಿಣಿತರಾಗಿರಬೇಕು. (ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು)
– ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 35 ವರ್ಷದೊಳಗಿರಬೇಕು.

ಸೂಚನೆಗಳು
ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆ, ಸಂಸ್ಥೆಗಳಲ್ಲಿ ಫಲಾನುಭವಿಗಳಾಗಿದ್ದರೆ ಅಂತಹವರು ಅರ್ಜಿ ಸಲ್ಲಿಸುವಂತಿಲ್ಲ.
ಸರ್ಕಾರದಿಂದ ಈಗಾಗಲೇ ಈ ತರಬೇತಿ ಸೌಲಭ್ಯ ಪಡೆದ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.

ಅಪ್ಲಿಕೇಶನ್‌ ಸಲ್ಲಿಸಲು ಬೇಕಾದ ದಾಖಲೆಗಳು, ವಿಧಾನ

ಅರ್ಜಿಯೊಂದಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪದವಿ ಹಾಗೂ ಸ್ನಾತಕೋತ್ತರ ಪ್ರಮಾಣ ಪತ್ರಗಳೊಂದಿಗೆ ಜಾತಿ ಪ್ರಮಾಣ ಪತ್ರ, ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಹಾಗೂ ಇನ್ನಿತರೆ ಪೂರಕ ದಾಖಲೆಗಳ ಜೆರಾಕ್ಸ್‌ ಪ್ರತಿ ಲಗತ್ತಿಸಿ ಅಂಚೆ ಮೂಲಕ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ನೇಮಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ

ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ವಾರ್ತಾ ಸೌಧ, 2ನೇ ಮಹಡಿ, ನಂಬರ್ 17, ಭಗವಾನ್ ಮಹಾವೀರ್ ರಸ್ತೆ, ಬೆಂಗಳೂರು – 01 ಇಲ್ಲಿಗೆ ಸಲ್ಲಿಸಬೇಕು.

ಇತರೆ ಹೆಚ್ಚಿನ ವಿವರಕ್ಕೆ ದೂರವಾಣಿ ಸಂಖ್ಯೆ : 080- 22028059, 9480841219.

Source : https://vijaykarnataka.com/jobs/govt-jobs/bengaluru-journalist-apprentice-recruitment-2024-apply-offline/articleshow/114940327.cms

Leave a Reply

Your email address will not be published. Required fields are marked *