Sunil Chhetri: ಭಾರತ ಕಂಡ ಸರ್ವ ಶ್ರೇಷ್ಠ ಫುಟ್ಬಾಲ್ ಆಟಗಾರರಾಗಿದ್ದ ಸುನೀಲ್ ಛೆಟ್ರಿ ಭಾರತ ಮಾತ್ರವಲ್ಲದೇ ವಿಶ್ವಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ. ಅಲ್ಲದೇ ಫಿಫಾ ಸುನೀಲ್ ಛಟ್ರಿ ಅವರ ವಿದಾಯಕ್ಕೆ ವಿಶೇಷ ಫೋಸ್ಟರ್ ಬಿಡುಗಡೆ ಮಾಡುವ ಮೂಲಕ 19 ವರ್ಷದ ಫುಟ್ಬಾಲ್ ಜೆರ್ನಿಗೆ ವಿದಾಯ ಎಂದು ಬರೆದುಕೊಂಡಿದೆ.

ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ (Sunil Chhetri) ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದು, ಇಂದು ಕೊನೆಯ ಪಂದ್ಯವನ್ನಾಡಿದ್ದಾರೆ. ವಿಶ್ವಕಪ್ ಫುಟ್‌ಬಾಲ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಕುವೈತ್ ವಿರುದ್ಧ ಒಂದೇ ಒಂದು ಗೋಲು ಬಾರಿಸದೇ ಡ್ರಾ ಆಯಿತು. ಭಾರತೀಯ ಫುಟ್ಬಾಲ್ ಅನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡ ಛೆಟ್ರಿ, ಭಾರತದ ಪರ 151 ಪಂದ್ಯಗಳಲ್ಲಿ 94 ಗೋಲುಗಳನ್ನು ಗಳಿಸಿದರು. ಆದರೆ ತಮ್ಮ ಕೊನೆಯ ಪಂದ್ಯದಲ್ಲಿ ಗೋಲು ಬಾರಿಸಲಿಲ್ಲ. ಕುವೈತ್‌ನ ವಿರುದ್ಧ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಅರ್ಹತಾ ಪಂದ್ಯದವು ಡ್ಋಆ ನಲ್ಲಿ ಅಂತ್ಯಕಂಡಿತು. ಛೆಟ್ರಿಯ ಕೊನೆಯ ಪಂದ್ಯವನ್ನು ವೀಕ್ಷಿಸಲು ಐವತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸಾಲ್ಟ್ ಲೇಕ್‌ಗೆ ಬಂದಿದ್ದರು. ಅವರು ಛೆಟ್ರಿಯ ಪ್ರತಿ ಮೂವ್‌ವಗೂ ಜನರು ಚಪ್ಪಾಳೆಯೊಂದಿಗೆ ರೋಮಾಂಚನಗೊಳಿಸಿದರು.
ಛೆಟ್ರಿಗೆ ಫಿಫಾದಿಂದ ಗೌರವ:
ಇನ್ನು, ಭಾರತ ಕಂಡ ಸರ್ವ ಶ್ರೇಷ್ಠ ಫುಟ್ಬಾಲ್ ಆಟಗಾರರಾಗಿದ್ದ ಸುನೀಲ್ ಛೆಟ್ರಿ ಭಾರತ ಮಾತ್ರವಲ್ಲದೇ ವಿಶ್ವಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ. ಅಲ್ಲದೇ ಫಿಫಾ ಸುನೀಲ್ ಛಟ್ರಿ ಅವರ ವಿದಾಯಕ್ಕೆ ವಿಶೇಷ ಫೋಸ್ಟರ್ ಬಿಡುಗಡೆ ಮಾಡುವ ಮೂಲಕ 19 ವರ್ಷದ ಫುಟ್ಬಾಲ್ ಜೆರ್ನಿಗೆ ವಿದಾಯ ಎಂದು ಬರೆದುಕೊಂಡಿದೆ. ಈ ಮೂಲಕ ವಿಶ್ವಮಟ್ಟದಲ್ಲಿ ಫಿಫಾ ಭಾರತದ ಸುನೀಲ್ ಛೆಟ್ರಿಗೆ ಗೌರವ ಸಲ್ಲಿಸಿದೆ. ಅಲ್ಲದೇ ಇನ್ನು, ಛೆಟ್ರಿ ಸಹ ತಮ್ಮ ಕೊನೆಯ ಪಂದ್ಯದಲ್ಲಿ ಆಡಿದ ಬಳಿಕ ಬಿಳ್ಕೊಡುಗೆ ವೇಳೆ ಚಿಕ್ಕ ಮಗುವಿನಂತೆ ಕಣ್ಣಿರಿಟ್ಟ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು, ಚಾಂಪಿಯನ್ ಆಟಗಾರ ಎಂದು ಅನೇಕ ಅಭಿಮಾನಿಗಳು ಮಾತ್ರವಲ್ಲದೇ ಅನೇಕ ದಿಗ್ಗಜ ಆಟಗಾರರೂ ಸಹ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಛೆಟ್ರಿ ವೃತ್ತಿಜೀವನ:
ಛೆಟ್ರಿ ತನ್ನ 39 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನದ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ. ವಿಶ್ವದ ಅತ್ಯುತ್ತಮ ಗೋಲ್ ಸ್ಕೋರರ್‌ಗಳ ಪಟ್ಟಿಯಲ್ಲಿ ಛೆಟ್ರಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಅಲಿ ಡೇ ಮತ್ತು ಲಿಯೋನೆಲ್ ಮೆಸ್ಸಿ ಬಳಿಕ ಸುನೀಲ್ ಚೆಟ್ರಿ ಸ್ಥಾನ ಪಡೆದಿದ್ದಾರೆ. ಛೆಟ್ರಿ ನಾಲ್ಕು SAFF ಚಾಂಪಿಯನ್‌ಶಿಪ್‌ಗಳು, ಮೂರು ನೆಹರು ಕಪ್‌ಗಳು, ಎರಡು ಇಂಟರ್‌ಕಾಂಟಿನೆಂಟಲ್ ಕಪ್‌ಗಳು ಮತ್ತು ಭಾರತದೊಂದಿಗೆ ಒಂದು ಚಾಲೆಂಜ್ ಕಪ್ ಗೆದ್ದಿದ್ದಾರೆ. ಅಂಡರ್-20 ಆಡುವಾಗ ಅವರು ಭಾರತಕ್ಕಾಗಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದಾರೆ. ಛೆಟ್ರಿ ಏಳು ಬಾರಿ ಭಾರತದ ಅತ್ಯುತ್ತಮ ಫುಟ್ಬಾಲ್ ಆಟಗಾರನಿಗೆ AIFF ವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಸುನೀಲ್ ಛೆಟ್ರಿ ಒಟ್ಟು ಆಸ್ತಿ:
ಸುನಿಲ್ ಛೆಟ್ರಿ ಅವರು ಭಾರತದ ಅತ್ಯಂತ ಶ್ರೀಮಂತ ಫುಟ್ಬಾಲ್ ಆಟಗಾರರಾಗಿದ್ದಾರೆ. ಅನೇಕ ಮಾಧ್ಯಮ ವರದಿಗಳ ಪ್ರಕಾರ ಅವರ ನಿವ್ವಳ ಮೌಲ್ಯವು 2023ರಲ್ಲಿ 8.5 ಕೋಟಿಗಳಷ್ಟು ಹೆಚ್ಚಾಗಿದೆ. ಅವರು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಮತ್ತು ISL ನ ಬೆಂಗಳೂರು FC ಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಮತ್ತು ಫುಟ್‌ಬಾಲ್ ಮೂಲಕವೇ ವರ್ಷಕ್ಕೆ 80 ಲಕ್ಷದಿಂದ 1 ಕೋಟಿ ಗಳಿಸುತ್ತಾರೆ. ಇನ್ನು, ಕೆಲ ಮಾಧ್ಯಮ ವರದಿಗಳ ಪ್ರಕಾರ ಸುನಿಲ್ ಛೆಟ್ರಿ ಬಳಿ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದೆ. ಛೆಟ್ರಿ ಅವರು ಆಡಿ A6, ಟೊಯೊಟಾ ಫಾರ್ಚುನರ್, ಕಿಯಾ ಸೆಲ್ಟೋಸ್ ಮತ್ತು ಮಹೀಂದ್ರ ಸ್ಕಾರ್ಪಿಯೊದಂತಹ ಲಕ್ಷುರಿ ಕಾರುಗಳನ್ನು ಹೊಂದಿದ್ದಾರೆ. ಜೊತೆಗೆ ಸುನಿಲ್ ಛೆಟ್ರಿ ಬೆಂಗಳೂರಿನಲ್ಲಿ 7000 ಚದರ ಅಡಿಯ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮನೆಯ ಬೆಲೆ ಸುಮಾರು 2.5 ಕೋಟಿ ಎಂದು ಹೇಳಲಾಗುತ್ತಿದೆ.