18ನೇ ಲೋಕಸಭಾ ಅಧಿವೇಶನ: ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯದ ಸ್ಥಾಪನೆ ಬಗ್ಗೆ  ಶೀಘ್ರ ಕ್ರಮ ಕೈಗೊಳ್ಳಲು ಗೋವಿಂದ ಎಂ ಕಾರಜೋಳ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕಳೆದ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸ್ಥಾಪನೆಯಾದ ಕೇಂದ್ರಿಯ ವಿದ್ಯಾಲಯಗಳ ಸಂಖ್ಯೆ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಂಚಿಗನಲ್‌ದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆದಿಯೇ? ಈ ಭಾಗದಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪನೆಯ ವಿಳಂಬಕ್ಕೆ ಕಾರಣಗಳೇನು? ಎಂಬ ಪ್ರಶ್ನೆಯ ಜೊತೆಗೆ ರಾಜ್ಯದಲ್ಲಿರುವ ಒಟ್ಟು ಕೇಂದ್ರಿಯ ವಿದ್ಯಾಲಯಗಳ ಜಿಲ್ಲಾವಾರು ಸಂಖ್ಯೆ, ಹಂಚಿಕೆಯಾದ ಅನುದಾನದ ಸಮಗ್ರ ಮಾಹಿತಿಯನ್ನು ಕಾರಜೋಳರು ಕೇಳಿದ್ದಾರೆ.

ನನ್ನ ಕ್ಷೇತ್ರ ಚಿತ್ರದುರ್ಗದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ST, SC, ಕಾಡುಗೊಲ್ಲ ಸಮಾಜಗಳ ಜನರು 52ಪರ್ಸೆಂಟಿಗೂ ಅಧಿಕವಿದ್ದು ಅಂಕಿ ಅಂಶಗಳ ಪ್ರಕಾರ ನಮ್ಮದು ದೇಶದಲ್ಲೇ ಅತೀ ಹಿಂದುಳಿದ ಜಿಲ್ಲೆಯಾಗಿದೆ. ಹಾಗಾಗಿ ಜಿಲ್ಲೆಯಲ್ಲಿನ ಬಡಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಕಾರಣದಿಂದ ಶಿಕ್ಷಣ ಮಂತ್ರಿಗಳು ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯದ ಸ್ಥಾಪನೆ ಬಗ್ಗೆ ಸೂಕ್ತವಾಗಿ ಶೀಘ್ರ ಕ್ರಮ ಕೈಗೊಳ್ಳಬೇಕಿದೆ ಎಂದು ಸಂಸದ ಗೋವಿಂದ್ ಕಾರಜೋಳ ಮನವಿ ಮಾಡಿದರು.

ಅದಕ್ಕೆ ಪ್ರತಿಯಾಗಿ ರಾಜ್ಯ ಶಿಕ್ಷಣ ಮಂತ್ರಿಗಳಾದ ಜಯಂತ್ ಚೌದರಿರವರು “ಗೋವಿಂದ್ ಕಾರಜೋಳರವರು ಪ್ರಶ್ನೆ ಕೇಳುವ ಬದಲು ಬೇಡಿಕೆ ಇಡುತ್ತಿದ್ದಾರೆ. ಅವರು ಹೇಳಿದ ಬಗ್ಗೆ ಈಗಾಗಲೇ ವಿಚಾರ ಮಾಡಲಾಗುತ್ತಿದೆ ಎಂದು ಹೇಳಿದರು. ಆಗ ಸಭಾಪತಿಗಳಾದ ಓಂ ಬಿರ್ಲಾರವರು “ಇಲ್ಲಿಗೆ ಆರಿಸಿ ಬಂದಿರುವ ಸದಸ್ಯರುಗಳು ಪ್ರಶ್ನೆಯ ವೇಳೆಯಲ್ಲಿ ಬೇಡಿಕೆಗಳನ್ನು ಖಂಡಿತವಾಗಿ ಇಡುತ್ತಾರೆ. ಬೇಡಿಕೆಗಳ ಇಡದಿದ್ದ ಮೇಲೆ ಪ್ರಶ್ನೋತ್ತರ ವೇಳೆಯಲ್ಲಿ ಇನ್ನೇನು ಕೇಳಬೇಕು ಹೇಳಿ?” ಎಂದು ನಗುತ್ತಲೇ ಶಿಕ್ಷಣ ಸಚಿವರಿಗೆ ಹೇಳಿದರು.

ರಾಜ್ಯ ರಾಜಕಾರಣದಲ್ಲಿ ಉಪಮುಖ್ಯಮಂತ್ರಿ ಮೊದಲಾದ ಹುದ್ದೆ ಅಲಂಕರಿಸಿದ ಪ್ರಭಾವಿ ರಾಜಕಾರಣಿ ಗೋವಿಂದ ಕಾರಜೋಳ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದ್ದು, ತಮ್ಮ ಪ್ರಥಮ ಪ್ರಶ್ನೆಯನ್ನು ಕೇಳಿದ್ದಾರೆ. ಈ ವಿಶೇಷತೆ ನಡುವೆ ಈ ಅವಧಿಯ ಅಂದರೆ 18 ನೇ ಅಧಿವೇಶನದ ಪ್ರಥಮ ಕಲಾಪದಲ್ಲಿಯೇ ಗೋವಿಂದ ಕಾರಜೋಳರೇ ಪ್ರಥಮ ಪ್ರಶ್ನೆ ಕೇಳಿದ್ದು ಇನ್ನೊಂದು ವಿಶೇಷ.

Leave a Reply

Your email address will not be published. Required fields are marked *