1st T20I: “ಇಂಗ್ಲೆಂಡ್ ವಿರುದ್ಧ ಭಾರತದ ವನಿತೆಯರಿಗೆ” ಐತಿಹಾಸಿಕ ಜಯ, ಹಲವು ದಾಖಲೆ ನಿರ್ಮಾಣ!

ನಾಟಿಂಗ್ ಹ್ಯಾಮ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ ಮೊದಲ ಟಿ20 ಪಂದ್ಯದಲ್ಲಿ ಐತಿಹಾಸಿಕ ಜಯ ಸಾಧಿಸಿದ್ದು, ಟಿ20ಸರಣಿಯಲ್ಲಿ ಶುಭಾರಂಭ ಮಾಡಿದೆ.


ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರ ತಂಡವನ್ನು ಭಾರತ ವನಿತೆಯರ ತಂಡ 97 ರನ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತು.

ಭಾರತ ನೀಡಿದ್ದ 211 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ವನಿತೆಯರ ತಂಡ 14.5 ಓವರ್ ನಲ್ಲೇ ಕೇವಲ 113 ರನ್ ಗಳಿಗೇ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.

ಈ ಪಂದ್ಯದ ಗೆಲುವಿನೊಂದಿಗೆ ಭಾರತ ವನಿತೆಯರ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ.

ಭಾರತ ಭರ್ಜರಿ ಬ್ಯಾಟಿಂಗ್

ಇನ್ನು ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ವನಿತೆಯರ ತಂಡ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 210 ರನ್ ಕಲೆಹಾಕಿತು. ಭಾರತದ ಪರ ನಾಯಕಿ ಸ್ಮೃತಿ ಮಂದನಾ ಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾದರು. ಮಂದನಾ ಕೇವಲ 62 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 15 ಬೌಂಡರಿಗಳ ನೆರವಿನಿಂದ 112 ಕಲೆ ಹಾಕಿದರು. ಅವರಿಗೆ ಹರ್ಲೀನ್ ಡಿಯೋಲ್ (43 ರನ್) ಉತ್ತಮ ಸಾಥ್ ನೀಡಿದರು.

ಐತಿಹಾಸಿಕ ಜಯ

ಇನ್ನು ಇಂಗ್ಲೆಂಡ್ ವಿರುದ್ಧ ಭಾರತ ತಂಡಕ್ಕೆ ಸಿಕ್ಕ ಈ ಗೆಲುವು ಐತಿಹಾಸಿಕ ಜಯವಾಗಿದ್ದು, ಇದು ಭಾರತ ವನಿತೆಯರ ತಂಡಕ್ಕೆ ಸಿಕ್ಕ 4ನೇ ಅತೀ ದೊಡ್ಡ ಗೆಲುವಾಗಿದೆ. ಈ ಹಿಂದೆ 2018ರಲ್ಲಿ ಮಲೇಷ್ಯಾ ವಿರುದ್ಧ 142 ರನ್ ಗಳ ಅಂತರದ ಜಯ ಸಾಧಿಸಿತ್ತು. ಇದೀಗ ಪ್ರಬಲ ಇಂಗ್ಲೆಂಡ್ ವಿರುದ್ಧ 97 ರನ್ ಗಳ ಅಂತರದ ಜಯ ದಾಖಲಿಸಿದೆ.

Biggest win-margins for IND-W in T20Is

  • 142 runs vs Malaysia-W, Kuala Lumpur, 2018
  • 104 runs vs UAE-W, Sylhet, 2022
  • 100 runs vs Barbados-W, Edgbaston, 2022
  • 97 runs vs ENG-W, Trent Bridge, 2025
  • 84 runs vs WI-W, Gros Islet, 2019

Leave a Reply

Your email address will not be published. Required fields are marked *