ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ 2 ವಿಧದ 500 ರೂ. ನೋಟುಗಳು: ಆರ್ ಬಿಐ ನೀಡಿದೆ ಮಹತ್ವದ ಅಪ್ ಡೇಟ್

RBI update on 500 Rs Note : ಇತ್ತೀಚೆಗೆ 500 ರೂಪಾಯಿ ನೋಟಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿತ್ತು. ಈ ಬಗ್ಗೆ ರಿಸರ್ವ್ ಬ್ಯಾಂಕ್ ವಿವರಣೆ ನೀಡಿದೆ.   

RBI update on 500 Rs Note : ಇತ್ತೀಚೆಗೆ ಭಾರತ ಸರ್ಕಾರವು 2000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಗೊಳಿಸಿದ ನಂತರ ವಿವಿಧ ಮುಖಬೆಲೆಯ ಕರೆನ್ಸಿ ನೋಟುಗಳ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ನಿಮ್ಮ ಬಳಿ 500 ರೂಪಾಯಿ ನೋಟು ಇದ್ದರೆ ಈ ಸುದ್ದಿ ನಿಮಗೂ ಬಹಳ ಮುಖ್ಯವಾಗಲಿದೆ. 

ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ನೋಟು ಅಮಾನ್ಯೀಕರಣ ಜಾರಿ ಮಾಡಿತ್ತು. ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದ ನಂತರ, ಭಾರತೀಯ ರೂಪಾಯಿ ಮೌಲ್ಯದ ಬಗ್ಗೆ ವಿವಿಧ ಸುದ್ದಿಗಳು  ಆಗಾಗ ಹೊರಬರುತ್ತಿವೆ. ಅದರಲ್ಲೂ 2000 ರೂಪಾಯಿ ನೋಟು ಚಲಾವಣೆಯಿಂದ ಹಿಂಪಡೆದ ನಂತರ 500 ರೂಪಾಯಿ ನೋಟಿನ ಬಗ್ಗೆ  ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ( Reserve Bank Of India) ಕಾಲಕಾಲಕ್ಕೆ ಜನರಿಗೆ ಸೂಚನೆಗಳನ್ನು ನೀಡುತ್ತಿದ್ದು, ಜನರು ಅಧಿಕೃತ ಸಂಸ್ಥೆಗಳ ಪ್ರಕಟಣೆಗಳು ಮತ್ತು ಸುದ್ದಿಗಳನ್ನು ಮಾತ್ರ ನಂಬುವಂತೆ ಮನವಿ ಮಾಡುತ್ತಲೇ ಬಂದಿದೆ. ಇದೀಗ ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ 500 ರೂ. ನೋಟಿನ ಕುರಿತು ಕೆಲವು ಮಹತ್ವದ ಮಾಹಿತಿಯನ್ನು ನೀಡಿದೆ. 

ಹರಿದಾಡುತ್ತಿದೆ  2 ಬಗೆಯ 500 ರೂಪಾಯಿ ನೋಟುಗಳು : 
500ರ 2 ಬಗೆಯ ನೋಟುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಎರಡು ನೋಟುಗಳ ನಡುವೆ ಹೇಳಿಕೊಳ್ಳುವಂಥಹ ವ್ಯತ್ಯಾಸವೇನಿಲ್ಲ. ಆದರೆ ಈ ಎರಡು ರೀತಿಯ ನೋಟುಗಳಲ್ಲಿ ಒಂದನ್ನು ನಕಲಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video on 500 Rs Note ) ಆಗಿದೆ. ವಿಡಿಯೋದಲ್ಲಿ ಎರಡು ರೀತಿಯ 500 ರೂಪಾಯಿ ನೋಟುಗಳನ್ನು  ತೋರಿಸಲಾಗಿದ್ದು, ಅದರಲ್ಲಿ ಒಂದು ನಕಲಿ ಎಂದು ವಿವರಿಸಲಾಗಿದೆ. 

ವಿಡಿಯೋದಲ್ಲಿ ಹೇಳಿದ್ದೇನು? : ಆರ್‌ಬಿಐ ಗೌವರ್ನರ್ ಸಹಿಯ ಮೇಲೆ ಹಸಿರು ಪಟ್ಟಿಯಿದ್ದರೆ ಅಥವಾ ಆ ಪಟ್ಟಿ ಗಾಂಧೀಜಿ ಭಾವಚಿತ್ರಕ್ಕೆ ಹತ್ತಿರವಾಗಿದ್ದರೆ 500 ರೂಪಾಯಿ ನೋಟನ್ನು  ತೆಗೆದುಕೊಳ್ಳದಂತೆ ವೀಡಿಯೊದಲ್ಲಿ ಹೇಳಲಾಗಿದೆ. ಈ ವಿಡಿಯೋದಲ್ಲಿ ಎರಡು ರೀತಿಯ 500 ರೂಪಾಯಿ ನೋಟುಗಳಲ್ಲಿ ಒಂದು ನಕಲಿ ಎಂದು ಹೇಳಲಾಗಿದೆ. ಪಿಐಬಿ ಈ ವೀಡಿಯೋದಲ್ಲಿ ವಾಸ್ತವ ಪರಿಶೀಲನೆ ನಡೆಸಿದೆ. ಅಂದಿನಿಂದ ಇದರ ಸತ್ಯ ಬೆಳಕಿಗೆ ಬಂದಿದೆ. ಈ ಕುರಿತು ವಿವರಣೆ ನೀಡಿರುವ PIB, ಎರಡೂ ಬಗೆಯ ನೋಟುಗಳು ಮಾನ್ಯವಾಗಿವೆ ಎಂದು ಟ್ವೀಟ್ ಮಾಡಿದೆ. ಆರ್‌ಬಿಐ ಪಿಡಿಎಫ್ ಅನ್ನು ಸಹ ಹಂಚಿಕೊಳ್ಳಲಾಗಿದೆ. ಇದು ಸಾಮಾನ್ಯ ಜನರಿಗೆ ಅಸಲಿ ಮತ್ತು ನಕಲಿ 500 ನೋಟುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಹಾಯ ಮಾಡುತ್ತದೆ.

ಎರಡೂ ರೀತಿಯ ಕರೆನ್ಸಿ ನೋಟುಗಳು ಮಾನ್ಯ : 
ಒರಿಜಿನಲ್ ವೀಡಿಯೋವನ್ನು ಪರಿಶೀಲಿಸಿದಾಗ ಈ ವಿಡಿಯೋ ಸಂಪೂರ್ಣ ನಕಲಿ ಎನ್ನುವುದು ತಿಳಿದು ಬಂದಿದೆ. ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಎರಡೂ ಬಗೆಯ ನೋಟುಗಳು ಅಸಲಿ. ನಿಮ್ಮ ಬಳಿ 500 ನೋಟು ಇದ್ದರೆ ಗಾಬರಿ ಪಡುವ ಅಗತ್ಯವಿಲ್ಲ. ಎರಡೂ ಬಗೆಯ ನೋಟುಗಳು ಮಾನ್ಯವಾಗಿರುತ್ತವೆ ಎಂದು ಆರ್‌ಬಿಐ ಹೇಳಿದೆ.

ವೈರಲ್ ಸಂದೇಶದ ಹಿಂದಿನ ಸತ್ಯವನ್ನು ಇಲ್ಲಿ ಕಂಡುಹಿಡಿಯಿರಿ :
ನಿಮಗೂ ಇಂತಹ ಸಂದೇಶಗಳು ಬರುತ್ತಿದ್ದರೆ, ಚಿಂತಿಸಬೇಡಿ. ಇಂತಹ ಸುಳ್ಳು ಸುದ್ದಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದರ ಹೊರತಾಗಿ, ಯಾವುದೇ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು. ಇದಕ್ಕಾಗಿ ಅಧಿಕೃತ ವೆಬ್‌ಸೈಟ್ https://factcheck.pib.gov.in/ ಗೆ ಭೇಟಿ ನೀಡಿ. ಇದಲ್ಲದೆ, ನೀವು ವೀಡಿಯೊವನ್ನು  +918799711259 ಗೆ ಕಳುಹಿಸಬಹುದು ಅಥವಾ ಸತ್ಯವನ್ನು ತಿಳಿಯಲು pibfactcheck@gmail.com ಗೆ ಇಮೇಲ್ ಮಾಡಬಹುದು.

Source : https://zeenews.india.com/kannada/business/rbi-big-update-on-two-types-of-500-rs-note-rbi-notifications-152678

Leave a Reply

Your email address will not be published. Required fields are marked *