
ಚಿತ್ರದುರ್ಗ,(ಏ.01) : ಬ್ಯಾಂಕಿನ ಶೇರುದಾರರಿಗೆ ಹಾಗೂ ಬ್ಯಾಂಕಿನ ಸಿಬ್ಬಂದಿಗೆ ಹಲವು ಪ್ರಥಮಗಳ ದಾಖಲೆ ಮಾಡಿರುವ ಹಾಗೂ ಸತತ 15 ವರ್ಷಗಳಿಂದ ಬ್ಯಾಂಕಿನ ಶೇರುದಾರರಿಗೆ ಶೇ. 25 ಲಾಭಾಂಶ ವಿತರಿಸುತ್ತಿರುವ, ಚಿತ್ರದುರ್ಗ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕೆಂದೇ ಪರಿಗಣಿಸಲ್ಪಟ್ಟಿರುವ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕು 2022-23 ಸಾಲಿನಲ್ಲಿ 5.28 ಕೋಟಿ ತೆರಿಗೆ ಮುಂಚಿನ ವರಮಾನ ಗಳಿಸಿರುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ.
ಬ್ಯಾಂಕು 36 ಕೋಟಿ ರೂ. ಸ್ವಂತ ಬಂಡವಾಳ, 165 ಕೋಟಿ ರೂ. ಠೇವಣಿ ಹೊಂದಿದ್ದು, 117 ಕೋಟಿ ರೂ. ಸಾಲ ಪಾವತಿಸಿದೆ. 65 ಕೋಟಿ ರೂ. ಗಳನ್ನು ಹೂಡಿಕೆಗಳಲ್ಲಿ ತೊಡಗಿಸಲಾಗಿದೆ. ಬ್ಯಾಂಕಿನ ಗ್ರಾಸ್ ಓPಂ ಪ್ರಮಾಣವು 0.78 ಇದ್ದು, ನೆಟ್ ಓPಂ ಪ್ರಮಾಣವು ಶೇ. 0.0 ಇರುತ್ತದೆ. ಬ್ಯಾಂಕಿನ ಒಟ್ಟಾರೆ ವ್ಯವಹಾರವು 282 ಕೋಟಿ ರೂ.ಗಳಿರುತ್ತದೆ ಎಂದು ಬ್ಯಾಂಕು ಸಾಧಿಸಿರುವ ಪ್ರಗತಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಎಸ್.ಆರ್. ಲಕ್ಷ್ಮೀಕಾಂತ ರೆಡ್ಡಿ ಹೇಳಿಕೆಯಲ್ಲಿ ಬಿಡುಗಡೆ ಮಾಡಿರುತ್ತಾರೆ ಎಂದು ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್. ಮಲ್ಲಿಕಾರ್ಜುನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
The post 2022-23ನೇ ಸಾಲಿನಲ್ಲಿ ಮರ್ಚೆಂಟ್ಸ್ ಬ್ಯಾಂಕಿಗೆ 5.28 ಕೋಟಿ ರೂ. ವರಮಾನ : ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/6DsRwFY
via IFTTT
Views: 0