ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ-ಅಪರೇಟಿವ್ ಸೊಸೈಟಿಯ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 17: ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಬೆಂಗಳೂರಿನ ಯಲಹಂಕದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.

ಸಭೆಯ ಉದ್ಘಾಟನೆಯನ್ನು ಜಿ.ನಂಜನ ಗೌಡ ನೇರವೇರಿಸಿ ಮಾತನಾಡಿ, ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ-ಅಪರೇಟಿವ್
ಸೊಸೈಟಿ ಸಂಸ್ಥೆಯು ಬದ್ಧತೆ, ವಿಧೇಯತೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಭ್ರಷ್ಟಚಾರ ಮುಕ್ತ ಸಂಸ್ಥೆಯಾಗಿದ್ದು,
ಬೆಂಗಳೂರು,ತುಮಕೂರು,ಚಿತ್ರದುರ್ಗ,ದಾವಣಗೆರೆ,ಶಿವಮೊಗ್ಗ, ಹಾವೇರಿ, ಮೈಸೂರ್, ಮಂಡ್ಯ ಸೇರಿ 33 ಶಾಖೆಗಳನ್ನು ಹೊಂದಿದ್ದು,
19,000 ಸದಸ್ಯರು ಇದ್ದಾರೆ. ಸಹಕಾರಿಯು 2023-24 ನೇ ಸಾಲಿನಲ್ಲಿ 243 ಕೋಟಿಯಷ್ಟು ಠೇವಣಿ. 181 ಕೋಟಿ ಸಾಲ, 15 ಕೋಟಿ
ಲಾಭಗಳಿಸಿದೆ ಎಂದರು.

ಈ ಸಮಾರಂಭದಲ್ಲಿ ಸುವರ್ಣ ನ್ಯೂಸ್ ಚಾನಲ್ ಹಿರಿಯ ಸಂಪಾದಕರಾದ ಅಜಿತ್ ಹನುಮಕ್ಕನವರ್ ಉಪನ್ಯಾಸ ನೀಡಿದರು. ಯಲಹಂಕ
ಶಾಸಕರಾದ ಎಸ್.ಆರ್.ವಿಶ್ವನಾಥ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ವಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ-ಅಪರೇಟಿವ್
ಸೊಸೈಟಿ ಲಿ.ನ ಸಂಸ್ಥಾಪಕ ಅಧ್ಯಕ್ಷರಾದ ಬಿ.ಹೆಚ್.ಕೃಷ್ಣಾರೆಡ್ಡಿರವರು ವಹಿಸಿಕೊಂಡಿದ್ದರು. ಸಭೆಯಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ
ವರ್ಗದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *