ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ, ಆರ್ಯನ್ ಖಾನ್ ಬಂಧನವಾದಾಗ ಏನೆಲ್ಲಾ ಆಯ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಇದೀಗ ಅದಕ್ಕೆ ಟ್ವಿಸ್ಟ್ ಸಿಕ್ಕಿದ್ದು, ರಿಲೀಸ್ ಮಾಡುವುದಕ್ಕೆ 25 ಕೋಟಿ ಡಿಮ್ಯಾಂಡ್ ಇಟ್ಟಿದ್ದರಂತೆ. ಈ ಸಂಬಂಧ NCB ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
2021ರಲ್ಲಿ ಐಷರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಆರ್ಯನ್ ಖಾನ್ ರನ್ನು ಬಂಧಿಸಲಾಗಿತ್ತು. 22 ದಿನಗಳ ಕಾಲ ಬಂಧನದ್ಲಿಡಲಾಗಿತ್ತು. ಈ ವೇಳೆ 25 ಕೋಟಿ ಹಣ ನೀಡದೆ ಹೋದರೆ ಡ್ರಗ್ಸ್ ಕೇಸಲ್ಲಿ ಸಿಕ್ಕಿ ಹಾಕಿಸುವುದಾಗಿ ಬೆದರಿಕೆ ಹಾಕಲಾಗಿತ್ತಂತೆ. ಈ ಮೊತ್ತ 18 ಕೋಟಿಗೆ ಇತ್ಯರ್ಥವಾಗಿತ್ತು ಎನ್ನಲಾಗಿದೆ. 50 ಲಕ್ಷದ ಟೋಕನ್ ಹಣವನ್ನು ಕೆ ಪಿ ಗೋಸ್ವಾಮಿ ಮತ್ತು ಅವರ ಸಹಾಯಕ ಸ್ಯಾನ್ ವಿಲ್ ಡಿಸೋಜಾ ತೆಗೆದುಕೊಂಡಿದ್ದರು ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಆರ್ಯನ್ ಖಾನ್ ನನ್ನು ಜೈಲಿಗೆ ಕಳುಹಿಸಿದಾಗ ಶಾರುಖ್ ಖಾನ್ ದಂಪತಿ ಟೆನ್ಶನ್ ಅನುಭವಿಸಿದ್ದರು. ಮಗನನ್ನು ತಪ್ಪಿತಸ್ಥ ಅಲ್ಲ ಎಂದು ಪ್ರೂವ್ ಮಾಡಿ ಕರೆದುಕೊಂಡು ಬರಲು ಸಾಕಷ್ಟು ಸಮಯವೇ ಬೇಕಾಯಿತು. ಜಾಮೀನು ಪಡೆಯುವುದಕ್ಕೆ ಸಾಕಷ್ಟು ಕಷ್ಟಪಟ್ಟರು.
The post ಶಾರುಖ್ ಖಾನ್ ಪುತ್ರನ ಬಂಧನದ ವಿಚಾರಕ್ಕೆ ಟ್ವಿಸ್ಟ್ : ರಿಲೀಸ್ ಮಾಡಲು ಇಟ್ಟಿದ್ದು 25 ಕೋಟಿ ಡಿಮ್ಯಾಂಡ್ ಅಂತೆ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/ot0BHCW
via IFTTT