US Dollars Case: ಭಾನುವಾರ ಬಾಕ್ಸ್ ನಲ್ಲಿ 2.5 ಮಿಲಿಯನ್ ಡಾಲರ್ ಹಣ ಪತ್ತೆಯಾಗಿದೆ. ಚಿಂದಿ ಆಯುವಾಗ ರೈಲು ಹಳಿ ಪಕ್ಕವೇ ಈ ಡಾಲರ್ಗಳು ಪತ್ತೆಯಾಗಿವೆ. ಡಾಲರ್ಗಳ ಕಟ್ಟು ಕಂಡು ಚಿಂದಿ ಆಯುತಿದ್ದ ವ್ಯಕ್ತಿ ಮಾಲೀಕನಿಗೆ ಮಾಹಿತಿ ನೀಡಿದ್ದಾನೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬನಿಗೆ 2.5 ಮಿಲಿಯನ್ ಅಮೆರಿಕನ್ ಡಾಲರ್ ಸಿಕ್ಕಿದೆ. ರೈಲ್ವೆ ಹಳಿ ಪಕ್ಕದ ಪೊದೆಯಲ್ಲಿ ಡಾಲರ್ಗಳ ಹಲವು ಕಟ್ಟುಗಳು ಸಿಕ್ಕಿವೆ. ಹೀಗಾಗಿ ಬೆಂಗಳೂರಿನ ಹೆಬ್ಬಾಳ ಪೊಲೀಸರಿಗೆ ಮಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ. ಖುದ್ದು ಕಮಿಷನರ್ ಮಾಹಿತಿ ನೀಡಿದ ಬೆನ್ನಲ್ಲೇ ತೆರಳಿದ ಹೆಬ್ಬಾಳ ಪೊಲೀಸರಿಗೆ ಶಾಕ್ ಆಗಿದೆ. ದೊಡ್ಡ ಮೊತ್ತದ ಡಾಲರ್ ಸಿಕ್ಕಿರುವ ಪ್ರಕರಣ ಸಂಬಂಧ RBIಗೆ ಪತ್ರ ಬರೆಯುವ ಮೂಲಕ ಸತ್ಯ ಹುಡುಕಲು ಹೆಬ್ಬಾಳ ಪೊಲೀಸರು ಮುಂದಾಗಿದ್ದಾರೆ.
ಪೊದೆಯಲ್ಲಿ ಸಿಕ್ಕ 25 ಲಕ್ಷ ಅಮೆರಿಕನ್ ಡಾಲರ್ ಹಣದ ಮೂಲ ಯಾವುದು..? ಅನ್ನೋ ಪ್ರಶ್ನೆ ಮೂಡಿದೆ. ಮತ್ತೊಂದೆಡೆ ಸಿಕ್ಕ ಅಮೇರಿಕನ್ ಡಾಲರ್ಗಳು ನಕಲಿ ಎಂಬ ಶಂಕೆ ಮೂಡಿದೆ. ಜೆರಾಕ್ಸ್ ಗಳನ್ನು ಬಿಸಾಕಿ ಹೊಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಈ ಹಿನ್ನೆಲೆ ಈಗಾಗಲೇ RBIಗೆ ಹೆಬ್ಬಾಳ ಪೊಲೀಸರು ಪತ್ರ ಬರೆದಿದ್ದಾರೆ.
ಬರೆದ ಹೆಬ್ಬಾಳ ಪೊಲೀಸರಿಗೆ ಮಿಲಿಯನ್ ಡಾಲರ್ನದ್ದೇ ಪ್ರಶ್ನೆಯಾಗಿದೆ. ಭಾನುವಾರ ಬಾಕ್ಸ್ ನಲ್ಲಿ 2.5 ಮಿಲಿಯನ್ ಡಾಲರ್ ಹಣ ಪತ್ತೆಯಾಗಿದೆ. ಚಿಂದಿ ಆಯುವಾಗ ರೈಲು ಹಳಿ ಪಕ್ಕವೇ ಈ ಡಾಲರ್ಗಳು ಪತ್ತೆಯಾಗಿವೆ. ಡಾಲರ್ಗಳ ಕಟ್ಟು ಕಂಡು ಚಿಂದಿ ಆಯುತಿದ್ದ ವ್ಯಕ್ತಿ ಮಾಲೀಕನಿಗೆ ಮಾಹಿತಿ ನೀಡಿದ್ದಾನೆ.
ಈ ನಡುವೆ ವಿಚಾರ ತಿಳಿದ ಮತ್ತೊರ್ವ ವ್ಯಕ್ತಿಯಿಂದ ಕಮಿಷನರ್ಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಬಂದ ಕೂಡಲೇ ಹೆಬ್ಬಾಳ ಠಾಣೆಗೆ ಸಂಗತಿ ರವಾನೆಯಾಗಿದೆ. ಹೆಬ್ಬಾಳ ಪೊಲೀಸರು ಸಿಕ್ಕಿರುವ ದೊಡ್ಡಮೊತ್ತದ ಡಾಲರ್ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ವಶಕ್ಕೆ ಪಡೆದ ಡಾಲರ್ಗಳ ಜೊತೆಗೆ ವಿಶ್ವ ಸಂಸ್ಥೆಯ ಲೆಟರ್ ಹೆರ್ನಲ್ಲಿರುವ ಪತ್ರವೂ ದೊರೆತಿದೆ.
ಇದರಲ್ಲಿ ಅಭಿವೃದ್ಧಿಗಾಗಿ ಅಮೆರಿಕದಿಂದ ಕಳುಹಿಸಲಾದ ಹಣವೆಂದು ನಮೂದಿಸಲಾಗಿದೆ. ಈ ಮಿಲಿಯನ್ಸ್ ಆಫ್ ಡಾಲರ್ಸ್ ಬಗ್ಗೆ ಗೌಪ್ಯತೆ ಕಾಪಾಡಿ ಎಂದು ಲೆಟರ್ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಡಾಲರ್ಸ್ಗಳ ನೋಟಿನ ಸಿರಿಯಲ್ಗಳನ್ನು ಸಹ ಉಲ್ಲೇಖ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಇವು ನಕಲಿ ಡಾಲರ್ಸ್ ಎಂಬ ಶಂಕೆ ಮೂಡಿದೆ. ಮತ್ತೊಂದೆಡೆ ಈ ಯುಎಸ್ ಕರೆನ್ಸಿ ಅಸಲಿಯತ್ತು RBIನಿಂದ ಬಯಲಾಗುತ್ತಾ ಎಂಬ ಗೊಂದಲ ಮೂಡಿದೆ. ಸದ್ಯ ಹೆಬ್ಬಾಳ ಪೊಲೀಸರಿಗೆ ಮಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1