ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 26 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿತ್ರದುರ್ಗ ನಗರದ ವತಿಯಿಂದ 25ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ನಗರದ ಎಸ್.ಎಸ್.ಚೈತನ್ಯ ವೃತ್ತದ ಬಳಿ ಕಾರ್ಗಿಲ್ ವೀರ,ವಾಯುಸೇನೆಯ ಸ್ಕ್ವಡ್ರಾನ್ ಲೀಡರ್ ಆದ ಎಸ್.ಎಸ್.ಚೈತನ್ಯ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಕಾರ್ಯಕಾರಣಿ ಸದಸ್ಯ ಕನಕರಾಜ್ ಕೋಡಿಹಳ್ಳಿ, ನಗರಕಾರ್ಯದರ್ಶಿ ಗೋಪಿ, ಕಾರ್ಯಕರ್ತರಾದ ಚಿತ್ತಸ್ವಾಮಿ, ಸಂಜಯ್, ಕಾರ್ತಿಕ್, ಸುದೀಪ್, ಚೈತ್ರ, ದರ್ಶನ್ ಉಪಸ್ಥಿತರಿದ್ದರು.