ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ಅಂಚೆ ನೌಕರರ ಪತ್ತಿನಸಹಕಾರ ಸಂಘ ನಿಯಮಿತದ 28ನೇ ವಾರ್ಷಿಕ ಮಹಾಸಭೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ಅಂಚೆ ನೌಕರರ ಪತ್ತಿನ
ಸಹಕಾರ ಸಂಘ ನಿಯಮಿತದ 2023-24ನೇ ಸಾಲಿನ 28ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,
ಪ್ರಪಂಚದಲ್ಲಿ ತುಂಬಾ ಹಳೆಯದಾದ ವೃತ್ತಿ ಎಂದರೆ ಅಂಚೆ ಇಲಾಖೆಯದ್ದಾಗಿದೆ ಹಿಂದಿನ ಕಾಲದಲ್ಲಿ ಪಕ್ಷಿಗಳ ಮೂಲಕ ಬರವಣಿಗೆಯ
ಮೂಲಕ ಸಂದೇಶವನ್ನು ಕಳುಹಿಸುತ್ತಿದ್ದ ಪದ್ದತಿ ಇತ್ತು, ಈಗ ಇದು ಬದಲಾವಣೆಯಾಗಿ ಅಂಚೆ ಇಲಾಖೆಯಾಗಿ ರೂಪುಗೊಂಡಿದೆ. ಹಿಂದಿನ
ಕಾಲದಲ್ಲಿ ಅಂಚೆ ಇಲಾಖೆ ಎಂದರೆ ಪೋಸ್ಟ್ ಹಾಗೂ ಮನಿಯಾಡರ್ ಮಾತ್ರ ಎಂದು ಇತ್ತು ಆದರೆ ಈಗ ಕಾಲ ಬಂದಲಾಗಿದೆ ಅಂಚೆ
ಇಲಾಖೆ ಎಲ್ಲಾ ರೀತಿಯ ಕೆಲಸವನ್ನು ಮಾಡುತ್ತಿದೆ. ಬ್ಯಾಂಕ್, ವೀಸಾ, ಮನಿಯಾಡರ್, ಪೆನ್‍ಷನ್, ಪಾರ್ಸಲ್, ಟೀಕೇಟ್ ಬುಕ್
ಸೇರಿದಂತೆ ವಿವಿಧ ರಿತಿಯ ಕೆಲಸವನ್ನು ಮಾಡುತ್ತಿದೆ ಎಂದರು.

ಅಂಚೆಯನ್ನು ವಿತರಣೆ ಮಾಡುವ ಸಮಯದಲ್ಲಿ ಹಿಂದಿನ ಕೆಲಸ ಜವಾಬ್ದಾರಿಯ ಬುದ್ದ್ದಿವಂತ ಕೆಲಸವಾಗಿದೆ. ನಿಮ್ಮ ಸೂಸೈಟಿ ಇನ್ನೂ
ಚನ್ನಾಗಿ ಬೆಳೆಯಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ಸದಸ್ಯತ್ವವನ್ನು ಮಾಡಿರಿ ನಿಮ್ಮ ಇಲಾಖೆಯಲ್ಲಿ ನಿವೃತ್ತಿಯಾಗಿರುವವರು ಹಾಗೂ
ಅಸಕ್ತಿಯನ್ನು ಹೊಂದಿರುವವರನ್ನು ಸದಸ್ಯರನ್ನಾಗಿ ಮಾಡಿ ಸೊಸೈಟಿಯನ್ನು ಅಭೀವೃದ್ದಿ ಮಾಡಿ ಇಲಾಖೆಯ ಕುಂಟುಂಬದ ಸದಸ್ಯರನ್ನು
ಸದಸ್ಯರನ್ನಾಗಿ ಮಾಡಿಕೊಳ್ಳಿ, ಅಂಚೆ ಇಲಾಖೆಯ ವೃತ್ತಿ ಶುದ್ದವಾದ ವೃತ್ತಿಯಾಗಿದೆ. ಇಲ್ಲಿ ಕೈ ಮತ್ತು ಬಾಯಿ ಶುದ್ದವಾಗಿರುತ್ತದೆ. ಅಲ್ಲದೆ ಇಲ್ಲಿ
ಕೆಲಸ ಮಾಡುವವರು ಸಹಾ ಪ್ರಮಾಣೀಕರಾಗಿರುತ್ತಾರೆ ಇಲ್ಲಿ ಯಾವುದೇ ರೀತಿಯ ಭಷ್ಟಚಾರ ಇರುವುದಿಲ್ಲ ನಿಸ್ವಾರ್ಥವಾದ ಸೇವೆಯನ್ನು
ಮಾಡುವವರು ಮಾತ್ರ ಇಲ್ಲಿ ಸೇರಬೇಕಿದೆ ಎಂದು ತಿಳಿಸಿದರು.

ಸಂಘಕ್ಕೆ ನಿವೇಶನಕ್ಕಾಗಿ ಅರ್ಜಿಯನ್ನು ಹಾಕಿದ್ದಾರೆ ಈ ಹಿಂದೆ ಸರ್ಕಾರದವತಿಯಿಂದ ಕಡಿಮೆ ದರದಲ್ಲಿ ನೀಡುವ ಕಾರ್ಯ ಇತ್ತು ಆದರೆ ಈಗ
ಇದು ಇಲ್ಲವಾಗಿದೆ ಈ ಹಿನ್ನಲೆಯಲ್ಲಿ ಕಟ್ಟಡ ನಿಧಿಯನ್ನು ಪ್ರಾರಂಭ ಮಾಡಿ ಅದರಲ್ಲಿ ಹಣವನ್ನು ಸಂಗ್ರಹ ಮಾಡಿ ಕಟ್ಟಡವನ್ನು ನಿರ್ಮಾಣ
ಮಾಡಿ ಇದರಿಂದ ಸೊಸೈಟಿಗೆ ಅನುಕೂಲವಾಗಲಿದೆ ಎಂದು ತಾಜ್ ಪೀರ್ ಹೇಳಿದರು.

ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ಅಂಚೆ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು
ವಹಿಸಿದ್ದ ಅಣ್ಣಪ್ಪ ಹಂಚಿನಮನೆ ಮಾತನಾಡಿ, ಸಂಘದ 2023-24ನೇ ಸಾಲಿನಲ್ಲಿ ಸಂಘದ ಸದಸ್ಯರಿಂದ 82,7,020/-ರೂಗಳ ಷೇರು
ಬಂಡವಾಳವನ್ನು ಸಂಗ್ರಹಿಸಿದ್ದು, 1,66,000/-ನ್ನು ಮರುಪಾವತಿಸಲಾಗಿದ್ದು, ದಿನಾಂಕ : 31-03-2024 ಕ್ಕೆ 410 ಸದಸ್ಯರಿಂದ
52,54,720/- ಗಳ ಷೇರು ಬಂಡವಾಳವನ್ನು ಹೊಂದಿರುತ್ತದೆ.ಸಂಘದ 2023-24 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಪ್ರಕಾರ
2022-23 ನೇ ಸಾಲಿನ ಲಾಭ ವಿಲೇವಾರಿ ಮಾಡಿದ್ದರಿಂದ, 42,74,062.62 ಗಳ ಆಪದ್ಧನ ನಿಧಿ ಇದ್ದು,19,89,326.63 ಗಳ ಇತರೆ
ನಿಧಿಗಳನ್ನು ಹೊಂದಿರುತ್ತದೆ. ಹಾಗೂ 31.03.2024 ಕ್ಕೆ ಸಂಘದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ವೀಕ್ಷಿಸಿದರೆ ನಿಧಿಗಳು ಹೆಚ್ಚಿನ ಪಾತ್ರ
ವಹಿಸಿದ್ದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿರುತ್ತವೆ ಎಂದರು.

ನಮ್ಮ ಸಂಘದಲ್ಲಿ ಸದಸ್ಯರಿಂದ ವರ್ಷದಿಂದ ವರ್ಷಕ್ಕೆ ಈ ಠೇವಣಿಗಳು ಸದಸ್ಯರಿಂದ ಹೆಚ್ಚಿನ ರೀತಿಯಲ್ಲಿ ಸಂಗ್ರಹಣೆಯಾಗುತ್ತಿದ್ದು,
ಸಂಘದಲ್ಲಿ ಸದಸ್ಯರುಗಳಿಗೆ ಸಂಬಳಾಧಾರಿತ ಸಾಲ ನೀಡುವುದು ಪ್ರಮುಖ ಉದ್ದೇಶವಾಗಿದ್ದು 2023-24 ನೇ ಸಾಲಿನಲ್ಲಿ ಸದಸ್ಯರಿಗೆ
1,26,09,137/- ಗಳ ಸಾಲ ವಿತರಣೆ ಮಾಡಿದ್ದು, 1,11,23,607/-31.03.2024 500 3,18,71,006/- ವಸೂಲಾಗಬೇಕಾಗಿದೆ2023-
24 ನೇ ಸಾಲಿನಲ್ಲಿ ಸಂಘವು 10,96,518/ ಲಾಭಗಳಿಸಿದೆ ಆದ್ದರಿಂದ ಲಾಭಾಂಶದಲ್ಲಿ ಸದಸ್ಯರಿಗೆ 2023-24ನೇ ಸಾಲಿಗೆ ಶೇ.12% ರಂತೆ
ಡಿವಿಡೆಂಡ್ ನಗದು ಹಣವನ್ನು ಪಾವತಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುತ್ತೂರು ವಿಭಾಗದ ಹಿರಿಯ ಅಂಚೆ ಅಧಿಕ್ಷಕರಾದ ಜಿ.ಹರೀಶ್, ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕರಾದ
ಕೆ.ಆರ್.ಉಷಾ, ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕರಾzಸ ಚಂದ್ರಶೇಖರ್, ಅಂಚೆ ಪಾಲಕರಾದ ಪರಮೇಶ್ವರಪ್ಪ ನೂರ್ ಆಹಮ್ಮದ್
ಅರುಣ್ ಕುಮಾರ್, ಕಲ್ಲೇಶ್ ವಿರೂಪಾಕ್ಷಪ್ಪ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಳೆದ 1 ವರ್ಷದಲ್ಲಿ ನಿಧನರಾಧ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಇದ್ದಲ್ಲದೆ ಒಂದು
ವರ್ಷದಲ್ಲಿ ನಿವೃತ್ತರಾದ ನೌಕರರಿಗೆ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ನೌಕರರ
ಮಕ್ಕಳನ್ನು ಸನ್ಮಾನಿಸಲಾಯಿತು.ಮಹೇಶ್ ಪ್ರಾರ್ಥಿಸಿದರೆ ಷಫಾಯತ್ ಉಲ್ಲಾ ಷರೀಪ್ ಸ್ವಾಗತಿಸಿದರು.

Leave a Reply

Your email address will not be published. Required fields are marked *