ಡಿ.28ರಂದು 29ನೇ ಮಾಸಿಕ ಗಮಕ ಕಾರ್ಯಕ್ರಮ-ಮಂಕುತಿಮ್ಮನ ಕಗ್ಗದ ಆಯ್ದ ಪದ್ಯಗಳ ಗಮಕ ವಾಚನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಡಿ. 24:

ನಗರದ ಗಮಕ ಕಲಾಭಿಮಾನಿಗಳ ಸಂಘ ತನ್ನ 40ನೇ ವಾರ್ಷಿಕೋತ್ಸವದ ಸವಿ ನೆನಪಿನ ಅಂಗವಾಗಿ ಆಯೋಜಿಸುತ್ತಿರುವ ಮಾಸಿಕ ಗಮಕ ವಾಚನ–ವ್ಯಾಖ್ಯಾನ ಸಂಭ್ರಮದ 29ನೇ ಕಾರ್ಯಕ್ರಮವು ಡಿ.28-12-2025ರ ಭಾನುವಾರ ಸಂಜೆ 6 ಗಂಟೆಗೆ ನಗರದ ಜೆ.ಸಿ.ಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಅನಂತ ಕೃಷ್ಣ ಜೋಯಿಸ್ ಅವರು ಗಮಕ ವಾಚನವನ್ನು ನಡೆಸಿಕೊಡಲಿದ್ದು, ನಿವೃತ್ತ ಉಪಪ್ರಾಧ್ಯಾಪಕರಾದ ವಿದ್ವಾನ್ ಗಣಪತಿ ಭಟ್ (ಶಿವಮೊಗ್ಗ) ಅವರು ವ್ಯಾಖ್ಯಾನವನ್ನು ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಬಸವೇಶ್ವರ ಪುನರ್ಜ್ಯೋತಿ ಐ ಬ್ಯಾಂಕ್‌ನ ಸಂಸ್ಥಾಪನಾಧ್ಯಕ್ಷೆ ಶ್ರೀಮತಿ ಗಾಯತ್ರಿ ಶಿವರಾಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಡಿ.ವಿ. ಗುಂಡಪ್ಪ (ಡಿ.ವಿ.ಜಿ.) ಅವರ ‘ಮಂಕುತಿಮ್ಮನ ಕಗ್ಗ’ ಕೃತಿಯಿಂದ ಆಯ್ದ ಪದ್ಯಗಳ ಗಮಕ ವಾಚನ ನಡೆಯಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾವ್ಯವನ್ನು ಆಸ್ವಾದಿಸಿ, ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಗಮಕ ಕಲಾಭಿಮಾನಿಗಳ ಸಂಘ ಹಾಗೂ ಜೆ.ಸಿ.ಆರ್. ಗಣಪತಿ ದೇವಾಲಯ ಸೇವಾ ಸಮಿತಿ ಮನವಿ ಮಾಡಿವೆ.

Views: 22

Leave a Reply

Your email address will not be published. Required fields are marked *