ಚಿತ್ರದುರ್ಗದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯಿಂದ 3 ದಿನಗಳ ಮಹಾ ಶಿವರಾತ್ರಿ ವಿಶೇಷ ಕಾರ್ಯಕ್ರಮಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 12

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ಫೆ. 14 ರಿಂದ 16ರವರೆಗೆ ಮೂರು ದಿನಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗ ಶಿಕ್ಷಕಿ ಶಿವರಶ್ಮಿ ಅಕ್ಕನವರು ತಿಳಿಸಿದರು.

ಚಿತ್ರದುರ್ಗ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನಮ್ಮ ದೇಶದ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿ ಸಂರಕ್ಷಿಸುವಲ್ಲಿ ಹಬ್ಬ ಹರಿದಿನ ವ್ರತಾಚರಣೆಗಳು ಮಹತ್ವಪೂರ್ಣವಾಗಿವೆ. ವರ್ಷದ ಕೊನೆಯಲ್ಲಿ ಬರುವ ಮಹಾಶಿವರಾತ್ರಿ ಉನ್ನತ ಆದರ್ಶಕ್ಕೆ ಪೂರ್ವ ಸಿದ್ಧತೆಯ ಆಚರಣೆಯಾಗಿ ಎಲ್ಲೆಡೆ ವ್ಯಾಪಿಸಿದೆ. ಮಹಾಶಿವರಾತ್ರಿ ಶಿವನಭಕ್ತಿಯ ಮತ್ತು ಶಿವನ ಅವತರಣೆಯ ಶ್ರೇಷ್ಠ ಹಬ್ಬವಾಗಿರುವಂತೆ, ನಿಷ್ಠಾವಂತರಿಗೆ ಪವಿತ್ರ ವ್ರತವೂ ಆಗಿದೆ. ಆಧ್ಯಾತ್ಮಿಕ ಸಾಧಕರಿಗೆ ಸಿದ್ದಿ ಪಡೆಯುವ ಪರ್ವದಿನವಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಪರಶಿವನ ಅವತರಣೆಯ ಅರ್ಥ `ಶಿವಜಯಂತಿ ಎಂದು ಹೇಳುತ್ತಾರೆ. 1937ನೆಯ ಇಸವಿಯಲ್ಲಿ ನಿರಾಕಾರ ಜ್ಯೋತಿ ಶಿವ ಪರಮಾತ್ಮನು ಅಂದರೆ ಈಶ್ವರನೇ ಸ್ವತ: ಈಶ್ವರೀಯ ವಿಶ್ವ ವಿದ್ಯಾಲಯದ ಮೂಲಕ ಆತ್ಮಕಲ್ಯಾಣ ಮತ್ತು ವಿಶ್ವಕಲ್ಯಾಣಕ್ಕಾಗಿ ಸಹಜ ರಾಜಯೋಗ ಶಿಕ್ಷಣದ ಮೂಲಕ ಸನಾತನವಾದ ಆಧ್ಯಾತ್ಮಿಕ ಜ್ಞಾನದ ಪ್ರಸಾರ ಮತ್ತು ಅಭ್ಯಾಸ ಮಾಡಿಸುತ್ತಿದ್ದಾರೆ ಎಂದರು.

ಈ ವರ್ಷ 90ನೇ ಶಿವಜಯಂತಿ ಎಂದು 140ಕ್ಕೂ ಹೆಚ್ಚು ರಾಷ್ಟ್ರಗಳ, 9000ಕ್ಕೂ ಹೆಚ್ಚು ಈಶ್ವರೀಯ ಕೇಂದ್ರಗಳಲ್ಲಿ, ಶಿವಧ್ವಜವನ್ನು ಹಾರಿಸಿ. ಶಿವಜಯಂತಿಯನ್ನು ಆಚರಿಸುತ್ತಿದ್ದಾರೆ. ಮಹಾಶಿವರಾತ್ರಿ ಪ್ರಯುಕ್ತ ಚಿತ್ರದುರ್ಗ ನಗರದಲ್ಲಿ ವಿಶ್ವಕ್ಕೆ ವಿಶ್ವೇಶ್ವರನಾಗಿರುವ ಕಾಶಿವಿಶ್ವನಾಥನ ದರ್ಶನ ಮಾಡಿಸುವ ಯೋಜನೆಯನ್ನು ಈಶ್ವರೀಯ ವಿಶ್ವ ವಿದ್ಯಾಲಯ ಹಮ್ಮಿಕೊಂಡಿದೆ.

ಕಾರ್ಯಕ್ರಮ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯುವುದು ಇದರಲ್ಲಿ ಕಾಶಿ ವಿಶ್ವನಾಥ ದರ್ಶನದ 30 ಅಡಿ ಎತ್ತರದ ಕಾಶಿ ವಿಶ್ವನಾಥ ಮಂದಿರದ ಪ್ರವೇಶದ್ವಾರ ಕಾಶಿ ಮಂದಿರದ ಗರ್ಭ ಗುಡಿಯಲ್ಲಿ ಶಿವನ ದರ್ಶನ ಓಂ ನಮ: ಶಿವಾಯ ಶಿವಾನುಭಾವ ಮಂಟಪ ಶಿವನೊಂದಿಗೆ ಸೇಲ್ವಿ ದೃಢ ಸಂಕಲ್ಪದಿಂದ ದುರ್ಗುಣಗಳನ್ನು ಶಿವಾರ್ಪಣೆ ಮಾಡಲು ಸ್ವಪರಿವರ್ತನೆ ಮಂಟಪ ಸಹಸ್ರ ಅಗ್ನಿ ಲಿಂಗು ಜಲಧಾರ ಗುಹೇಶ್ವರ ಲಿಂಗು ಪಾತಾಳೇಶ್ವರ ಲಿಂಗು ಸ್ಥಾಪಿತವಾಗುತ್ತಿದೆ.

ಫೆ. 14ರಂದು ಸಂಜೆ 6ಕ್ಕೆ ಸ್ವರಕ್ಷಣೆ-ಪ್ರಕೃತಿರಕ್ಷಣೆ-ಸಮಾಜ ರಕ್ಷಣೆ ರಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ವಿಭಾಗೀಯ ಅರಣ್ಯ ಅಧಿಕಾರಿ ಗೋಪ್ಯನಾಯಕ್.ಜಿ ಉದ್ಘಾಟಿಸಲಿದ್ದಾರೆ. ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗ ಶಿಕ್ಷಕಿ ಶಿವರಶ್ಮಿ ಅಕ್ಕನವರು ಈಶ್ವರೀಯ ಸಂದೇಶವನ್ನು ನೀಡಲಿದ್ದಾರೆ.

ಫೆ. 15 ರ ಭಾನುವಾರ ಕಾಯಕವೇ ಕೈಲಾಸದಡಿ ಕಾರ್ಮಿಕರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಅಣ್ಣನವರು ಉದ್ಘಾಟಿಸಲಿದ್ದು, ತಾಜ್‍ಪೀರ್ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್‍ಪೀರ್, ಅಪರ ಜಿಲ್ಲಾಧಿಕಾರಿಗಳಾದ ಬಿ.ಟಿ.ಕುಮಾರಸ್ವಾಮಿ ಕಾರ್ಮಿಕ ಅಧಿಕಾರಿಗಳಾದ ಅನಿಲ್ ಬಾಲಚಂದ್ರ ಬಗಡಿ, ವರ್ತಕರಾದ ಶಂಕರಮೂರ್ತಿ ಅನೀತ್ ಸಿದ್ದೇಶ್.ಜಿ.ಎಸ್ ಭಾಗವಹಿಸಲಿದ್ದು, ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ದಿವ್ಯ ಅಕ್ಕನವರು ಮಹಾಶಿವರಾತ್ರಿ ಹಬ್ಬದ ಸಂದೇಶವನ್ನು ನೀಡಲಿದ್ದಾರೆ.

ಫೆ. 16ರ ಸೋಮವಾರ ಆಧುನಿಕ ಮಹಿಳೆಯ ಸವಾಲುಗಳು ಹಾಗೂ ನಿವಾರಣೆಗಳು ಮಹಿಳಾ ಶಿರೋಮಣಿಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಸಾನಿಧ್ಯವನ್ನು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಮಂಜುನಾಥ.ಬಿ, ದಾವಣಗೆರೆ ವಿಶ್ವವಿದ್ಯಾಲಯದ ಜ್ಞಾನ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ|| ಸತ್ಯನಾರಾಯಣ, ಚಿತ್ರದುರ್ಗ ರೈಲ್ವೇ ಸ್ಟೇಷನ್‍ನ ಸೂಪರಿಂಟೆಂಡೆಂಟ್, ಎ.ರಾಜ್ ಕುಮಾರ್, ಮಂಜುನಾಥ. ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಸಿದ್ದರಾಂ. ಬಿ. ಪಾಟೀಲ್, ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ನಿಶಾನಿ ಜಯಣ್ಣ, ಸಾಮಾಜಿಕ ಸಾಮರಸ್ಯ ವೇದಿಕೆಯ ಸಂಯೋಜಕರಾದ ಎ.ರಾಜ್‍ಕುಮಾರ್ ಭಾಗವಹಿಸಲಿದ್ದಾರೆ. ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಕನಕಾಂಬಿಕ ಈಶ್ವರೀಯ ಸಂದೇಶವನ್ನು ನೀಡಲಿದ್ದಾರೆ.

ಚಿತ್ರದುರ್ಗದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಫೆ. 15ರಂದು ಬೆಳಿಗ್ಗೆ 8 ಗಂಟೆಗೆ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶಿವ ಧ್ವಜಾರೋಹಣ ಕಾರ್ಯಕ್ರಮವಿದೆ. ಬೆಳಗ್ಗೆ 10 ಗಂಟೆಯಿಂದ 90 ಕಾರುಗಳ ಮೇಲೆ ಜ್ಯೋರ್ತಿಲಿಂಗಗಳ ಜೊತೆಗೆ ನೂರಾರು ಬ್ರಹ್ಮಾಕುಮಾರ ಬ್ರಹ್ಮಾಕುಮಾರಿಯರು ಸದ್ಭಾವನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಈ ಯಾತ್ರೆಯು ನಗರದ ವಿವಿಧ ವಾರ್ಡ್‍ಗಳಲ್ಲಿ ಶಿವನ ಸಂದೇಶವನ್ನು ನೀಡುತ್ತಾ, ಜನ ಜಾಗೃತಿ ಮೂಡಿಸಲಿದೆ.

Leave a Reply

Your email address will not be published. Required fields are marked *