3D Printed Post Office: ಬೆಂಗಳೂರಿನಲ್ಲಿ ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿ

3D Printed Post Office: ಕೇಂಬ್ರಿಡ್ಜ್ ಲೇಔಟ್ ಪೋಸ್ಟ್ ಆಫೀಸ್ ಇದು ಭಾರತದ ಮೊದಲ 3D ಮುದ್ರಿತ ಸರ್ಕಾರಿ ಕಟ್ಟಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

3D Printed Post Office: ಬೆಂಗಳೂರಿನ ಅಲಸೂರು ಸಮೀಪದ ಜೋಗುಪಾಳ್ಯದ ಬಳಿ ಹೊಸ ಅಂಚೆ ಕಚೇರಿಗೆ 3D ಮುದ್ರಿತ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ (ಆಗಸ್ಟ್ 18) ಈ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಕೇಂಬ್ರಿಡ್ಜ್ ಲೇಔಟ್ ಪೋಸ್ಟ್ ಆಫೀಸ್ ಇದು ಭಾರತದ ಮೊದಲ 3D ಮುದ್ರಿತ ಸರ್ಕಾರಿ ಕಟ್ಟಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಗುಣಮಟ್ಟದ ಕಾಮಗಾರಿಗೆ ಹೆಸರುವಾಸಿಯಾಗಿರುವ ಎಲ್ ಅಂಡ್ ಟಿ ಸಂಸ್ಥೆಯು 3D ಅಂಚೆ ಕಚೇರಿಯನ್ನು ನಿರ್ಮಿಸಿದೆ. ವರದಿಗಳ ಪ್ರಕಾರ 1,100 ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡಕ್ಕೆ ತೆರಿಗೆ ಸೇರಿ 26 ಲಕ್ಷ ರೂ. ವೆಚ್ಚವಾಗಿದೆ. ಆದರೆ ನೀರು, ಒಳಚರಂಡಿ ಇತ್ಯಾದಿಗಳಿಗೆ ಹೆಚ್ಚುವರಿ 40 ಲಕ್ಷ ರೂ. ವೆಚ್ಚವಾಗಿದೆ.

3D ಪ್ರಿಂಟೆಡ್ ಪೋಸ್ಟ್ ಆಫೀಸ್ ಕಟ್ಟಡವನ್ನು ಕೇವಲ 44 ದಿನದಲ್ಲಿ ನಿರ್ಮಾಣ ಮಾಡಲಾಗಿದೆ. ಮಾರ್ಚ್ 21ರಂದು ಕಾಮಕಾರಿ ಶುರುವಾಗಿ ಮೇ 3ಕ್ಕೆ ಮುಗಿದಿತ್ತು. ಇದರ ಚರಂಡಿ ಮತ್ತು ನೀರಿನ ವ್ಯವಸ್ಥೆಗೆ 2 ತಿಂಗಳಾಗಿದೆ. ಕಟ್ಟಡ ನಿರ್ಮಾಣಕ್ಕೆ 3D ಪ್ರಿಂಟಿಂಗ್ ತಂತ್ರಜ್ಞಾನ ಬಳಸಿರುವುದರಿಂದ ನಿರ್ಮಾಣ ವೆಚ್ಚ ಶೇ.30ರಿಂದ 40ರಷ್ಟು ಉಳಿತಾಯವಾಗಿದೆ. ಇದನ್ನು ನಿರ್ಮಿಸಲು ಹಣದ ಜೊತೆಗೆ ಸಮಯವೂ ಸಾಕಷ್ಟು ಉಳಿತಾಯವಾಗಿದೆ.

ಭಾರತದಲ್ಲಿ ಈ ಮೊದಲೇ 3D ಪ್ರಿಂಟೆಡ್ ಟೆಕ್ನಾಲಜಿಯಲ್ಲಿ ಕಟ್ಟಡಗಳು ನಿರ್ಮಾಣವಾಗಿದ್ದವು. 2020ರಲ್ಲಿ ಎಲ್ ಅಂಡ್ ಟಿ ಮೊದಲ ಬಾರಿಗೆ ಈ ತಂತ್ರಜ್ಞಾನದಲ್ಲಿ ಕಟ್ಟಡ ನಿರ್ಮಿಸಿತ್ತು. ಆದರೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಕಟ್ಟಡವನ್ನು 3D ಪ್ರಿಂಟಿಂಗ್​ನಲ್ಲಿ ನಿರ್ಮಿಸಲಾಗಿದೆ. ಕೇಂಬ್ರಿಡ್ಜ್ ಲೇಔಟ್ ಪೋಸ್ಟ್ ಆಫೀಸ್ ಭಾರತದ ಮೊದಲ 3D ಮುದ್ರಿತ ಸರ್ಕಾರಿ ಕಟ್ಟಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

3D ಪ್ರಿಂಟೆಡ್ ಕಟ್ಟಡದ ಎಲ್ಲಾ ನಿರ್ಮಾಣ ಕಾರ್ಯವೂ ಕಂಪ್ಯೂಟರ್ ನಿಯಂತ್ರಿತವಾಗಿರುತ್ತದೆ. ಕ್ಯಾಡ್ ಮಾಡೆಲ್ ಅಥವಾ ಡಿಜಿಟಲ್ 3D ಮಾಡಲ್ ರೂಪಿಸಿ ಕಂಪ್ಯೂಟರ್ ನಿರ್ದೇಶನದಲ್ಲಿ ಕಾಂಕ್ರೀಟ್ ಇತ್ಯಾದಿ ಸಾಮಗ್ರಿಗಳನ್ನು ಸೇರಿಸಲಾಗುತ್ತದೆ.

Source : https://zeenews.india.com/kannada/photo-gallery/3d-printed-post-office-indias-first-3d-printed-post-office-in-bangalore-152939/3d-printed-post-office-152940

Leave a Reply

Your email address will not be published. Required fields are marked *