
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜೂ. 16 ನಿಮ್ಮ ಬೇಡಿಕೆಗಳಲ್ಲಿ ಕೆಲವು ಜಿಲ್ಲಾ ಮಟ್ಟ ಹಾಗೂ ಇನ್ನೂ ಕೆಲವು ರಾಜ್ಯ ಮಟ್ಟದಲ್ಲಿ ಬಗೆಹರಿಯುವಂತವಾಗಿವೆ ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ನಾನೇ ಖುದ್ದಾಗಿ ಪರಿಹಾರ ಮಾಡುತ್ತೇನೆ, ರಾಜ್ಯ ಮಟ್ಟದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ಮಾಡುವುದಾಗಿ ಯೋಜನಾ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ ಸರ್ಕಾರಿ ನಿವೃತ್ತ ನೌಕರರಿಗೆ ಭರವಸೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಕ್ರೀಡಾಭವನದಲ್ಲಿ ಭಾನುವಾರ ನೂತನವಾಗಿ ಅಸ್ಥಿತ್ವಕ್ಕೆ ಬಂದ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಅವರು ನಿವೃತ್ತ ನೌಕರರು ತಮ್ಮ ಸೇವಾವಧಿಯಲ್ಲಿ ಉತ್ತಮವಾದ ಸೇವೆಯನ್ನು ಸಲ್ಲಿಸುವುದರ ಮೂಲಕ ಸಮಾಜ ಸೇವೆಯನ್ನು ಮಾಡಿದ್ದೀರಾ, ನಿಮ್ಮ ನಿವೃತ್ತಿಯಿಂದಾಗಿ ಸರ್ಕಾರಕ್ಕೆ ನುರಿತ ಕೆಲಸಗಾರರು ಕಡಿಮೆಯಾಗಿದ್ದಾರೆ. ಮುಂದಿನ ದಿನಮಾನದಲ್ಲಿ ನಿಮ್ಮ ಸೇವೆ ಸರ್ಕಾರಕ್ಕೆ ಅಗತ್ಯ ಬಿದ್ದಲ್ಲಿ ಬಂದು ನಿಮ್ಮ ಮಾರ್ಗದರ್ಶನವನ್ನು ನೀಡಬೇಕು, ನಿಮ್ಮ ಅನುಭವವನ್ನು ಅಧಿಕಾರಿಗಳಿಗೆ ಹಾಗೂ ನೌಕರರಿಗೆ ತಿಳಿಸಬೇಕು ಎಂದ ಅವರು, ನಾನು ಎಲ್ಲೇ ಇದ್ದರೂ ಸಹಾ ನಿಮ್ಮ ಜೊತೆಯಲ್ಲಿ ಇರುತ್ತೇನೆ, ನಿಮ್ಮ ಸಂಘದಲ್ಲಿ ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸನ್ಮಾನ ಮಾಡಿರುವುದು ಬೇರೆಯವರಿಗೆ ಪ್ರೇರಣೆಯಾಗಿದೆ. ನಿಮ್ಮ ಸಂಘ ಉತ್ತಮವಾದ ಕಾರ್ಯವನ್ನು ಮುಂದಿನ ದಿನಮಾನದಲ್ಲಿ ಮಾಡಲಿ, ಉತ್ತಮವಾದ ಆರೋಗ್ಯವನ್ನು ಹೊಂದಿ, ಸರ್ಕಾರ ನಿಮ್ಮ ಬೇಡಿಕೆಗಳಿಗೆ ಸ್ಪಂದನೆ ಮಾಡಲಿದೆ ಇದ್ದಲ್ಲದೆ ಹಿರಿಯ ನಾಗರೀಕರಾದ ನಿಮ್ಮಗಳನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ನಿಮ್ಮ ಸಂಘಕ್ಕೆ ವಿವಿಧ ರೀತಿಯ ಬೇಡಿಕೆಗಳ ಪಟ್ಟಿಯನ್ನು ಇಡಲಾಗಿದೆ ಇದನ್ನು ಪರಿಶೀಲನೆ ಮಾಡಿದ್ದೇನೆ ಇದರಲ್ಲಿ ಕೆಲವು ಬೇಡಿಕೆಗಳು ಜಿಲ್ಲಾ ಮಟ್ಟದಲ್ಲಿ ನನ್ನ ಹಂತದಲ್ಲಿ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ತೀರ್ಮಾನವಾಗಲಿವೆ, ಇನ್ನೂ ಕೆಲವೂ ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ ಇವುಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ಮಾಡಲಾಗುವುದೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ನಿವೃತ್ತ ನೌಕರರನ್ನು ನೋಡಿ ಸಂತೋಷವಾಗಿದೆ, ನನ್ನ ಚುನಾವಣೆಯಲ್ಲಿ ನೀವುಗಳು ನಿವೃತ್ತ ನೌಕರರಾದರೂ ಸಹಾ ಸಹಾಯವನ್ನು ಮಾಡಿದ್ದೀರಾ, ನಿಮ್ಮ ಬೇಡಿಕೆ ಈಡೇರಿಕೆಗೆ ನಾನು ಸಹಾ ಸಹಾಯವನ್ನು ಮಾಡುವುದರ ಜೊತೆಗೆ ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯುವುದಲ್ಲದೆ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಲಾಗುವುದು ಎಂದ ಅವರು, ನಿವೃತ್ತಿ ಹೊಂದಿದ ನೌಕರರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ವರ್ಷದಲ್ಲಿ 2 ಬಾರಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ತಜ್ಞ ವೈದ್ಯರಿಂದ ಚಿಕಿತ್ಸೆಗಳನ್ನು ಉಚಿತವಾಗಿ ಸಲಹೆ ತಪಾಸಣೆ ಮಾಡುವುದಕ್ಕೆ ನನ್ನ ಸಹಕಾರ ಇದೆ ಇದಕ್ಕೆ ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳನ್ನು ಕಳುಹಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು. ನಿಮ್ಮ ಸೇವಾವಧಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡುವುದರ ಜೊತೆಗೆ ಸರ್ಕಾರಕ್ಕೆ ಉತ್ತಮವಾದ ಹೆಸರನ್ನು ತರಲಾಗಿದೆ. ನಿಮ್ಮ ನಿವೃತ್ತಿ ಜೀವನವನ್ನು ಉತ್ತಮ ರೀತಿಯಲ್ಲಿ ಕಳೆಯಿರಿ ಮನರಂಜನಾ ಕೇಂದ್ರದಲ್ಲಿ ಸದಾ ಚಟುವಟಿಕೆಯಿಂದ ಇರುವುದರ ಮೂಲಕ ಕ್ರಿಯಾಶೀಲರಾಗಿ ನಿಮ್ಮ ಪಿಂಚಿಣಿ ಹಾಗೂ ವೈಯತ್ತಿಕವಾಗಿ ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ ನಾನು ಸ್ಪಂದನೆ ಮಾಡುವುದಾಗಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಈಗ ನಮ್ಮಲ್ಲಿ ಅನುಭವವನ್ನು ಹೊಂದಿದವರ ಸಂಖ್ಯೆ ಕಡಿಮೆ ಇದೆ ಅನುಭವನ್ನು ಹೊಂದಿದವರೆಲ್ಲಾ ನಿವೃತ್ತಿಯಾಗಿದ್ದಾರೆ. ಈಗ ಹೊಸದಾಗಿ ಬಂದವರಿಗೆ ಅಷ್ಠಾಗಿ ಅನುಭವ ಇಲ್ಲ, ಮುಂದಿನ ದಿನದಲ್ಲಿ ನಿಮ್ಮ ಸೇವೆ ನಮ್ಮ ಸರ್ಕಾರಕ್ಕೆ ಅಗತ್ಯವಾಗಿ ಬೇಕಾಗಿದೆ ಮನವಿ ಮಾಡುತ್ತೇವೆ ಬಂದು ನಮ್ಮ ನೌಕರರಿಗೆ ತಿಳಿಸಿ ಫೈಲುಗಳನ್ನು ಯಾವ ರೀತಿ ಪೂರ್ಣ ಮಾಡಬೇಕು ಎಂದು ಮಾಹಿತಿಯನ್ನು ನೀಡಿ, ಸುಮಾರು 60 ವರ್ಷಗಳ ಕಾಲ ಸರ್ಕಾರದಲ್ಲಿ ಸೇವೆಯನ್ನು ಮಾಡಿದ್ದೀರಾ ಅದನ್ನು ನಮ್ಮ ಈಗಿನ ನೌಕರರಿಗೆ ಧಾರೆಯನ್ನು ಎರೆಯಿರಿ ಮುಂದಿನ ದಿನದಲ್ಲಿ ನಿಮಗೆ ಏನಾದರೂ ಸಮಸ್ಯೆ ಬಂದರೆ ನನ್ನನ್ನು ಬೇಟಿ ಮಾಡಿ ಪರಿಹಾರವನ್ನು ಮಾಡುವ ಭರವಸೆಯನ್ನು ನೀಡಿದರು.
ವಿಕಲ ಚೇತನ ಕಲ್ಯಾಣಾಧಿಕಾರಿಗಳು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿ ಗಳಾದ ಶ್ರೀಮತಿ ವೈಶಾಲಿ ಮಾತನಾಡಿ, ನೀವುಗಳು ನಿವೃತ್ತ ಸರ್ಕಾರಿ ನೌಕರರು ಜೊತೆಗೆ ಹಿರಿಯ ನಾಗರೀಕರಾಗಿದ್ದೀರಾ, ಸರ್ಕಾರ ನಿಮಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಅವುಗಳನ್ನು ಜಾರಿ ಮಾಡಲಾಗುವುದು. 2006ರಿಂದ ಸರ್ಕಾರ ಯೋಜನೆಯೊಂದನ್ನು ಜಾರಿ ಮಾಡಿದೆ ಅದನ್ನು ಜಾರಿ ಮಾಡಲಾಗುವುದು. ಹಿರಿಯ ನಾಗರೀಕರಿಗೆ ಹಲವಾರು ಇಲಾಖೆಗಳಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುವುದು. ಬ್ಯಾಂಕ್ ಗಳಲ್ಲಿ ಕುಡಿಯವ ನೀರಿನ ವ್ಯವಸ್ಥೆ, ಹಾಗೂ ಅವರನ್ನು ಕಾಯಿಸದೆ ಶೀಘ್ರವಾಗಿ ಹಣವನ್ನು ನೀಡುವಂತ ಕಾರ್ಯವನ್ನು ಮಾಡಲಾಗಿದೆ. ಹಿರಿಯ ನಾಗರೀಕರಿಗೆ ಏನಾದರೂ ತೊಂದರೆ ಯಾದರೆ ಕಾನೂನು ಮೂಲಕ ನ್ಯಾಯವನ್ನು ಒದಗಿಸಲಾಗುವುದು ಎಂದರು.
ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷರಾದ ನಾಗರಾಜ ಸಂಗಮ ಮಾತನಾಡಿ, ಇತ್ತೀಚೆಗೆ ಸುಪ್ರೀಂ ನ್ಯಾಯಾಲಯವು ನಿವೃತ್ತ ನೌಕರರಿಗೆ ಕಂಪ್ಯುಟೇಷನನ್ನು 10 ವರ್ಷ 8 ತಿಂಗಳಿಗೆ ಮಾತ್ರ ನಿರ್ಧಾರ ಮಾಡುವಂತೆ ಸೂಚನೆ ನೀಡಿದೆ ಇದನ್ನು ಈಗಾಗಲೇ ತೆಲಗಾಣ, ಹರಿಯಾಣ ರಾಜ್ಯ ಸರ್ಕಾರಗಳು ಜಾರಿ ಮಾಡಿದೆ ಅದರೆ ಕರ್ನಾಟಕದಲ್ಲಿ ಇನ್ನೂ ಜಾರಿಯಾಗಿಲ್ಲ, ಇದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಾರಿ ಮಾಡುವಂತೆ ಆಗ್ರಹಿಸಲಾಯಿತು.
ಈ ಸಮಾರಂಭದಲ್ಲಿ 2024-25ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಪಿ.ಎನ್.ಶ್ರೇಯಾ ಹಾಗೂ ಡಿ.ವಿ.ವರಣ್ ವಂಶಿ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೇಣುಪ್ರಸಾದ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಾಲತೇಶ್ ಮುದ್ದಜ್ಜಿ, ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿ.ಬಿ.ಮಹಾಂತೇಶ್, ಚಳ್ಳಕೆರೆ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಂ.ಕರಿಯಪ್ಪ, ಹೊಸದುರ್ಗ ಸಂಘದ ಅಧ್ಯಕ್ಷರಾದ ಸಿ.ಅಂಜಿನಪ್ಪ, ಹೊಳಲ್ಕೆರೆ ಸಂಘದ ಅಧ್ಯಕ್ಷರಾದ ಎ.ಸಿ.ಗಂಗಾಧರಪ್ಪ, ಮೊಳಕಾಲ್ಮೂರು ಸಂಘದ ಅಧ್ಯಕ್ಷರಾದ ರಾಜಶೇಖರ್, ಭಾಗವಹಿಸಿದ್ದರು.
ಶಿಕ್ಷಕಿ ಶ್ರೀಮತಿ ಗೀತಾ ಪ್ರಾರ್ಥಿಸಿದರೆ, ಹೆಚ್.ಪರಮೇಶ್ವರಪ್ಪ ಸ್ವಾಗತಿಸಿದರು. ಅಧ್ಯಕ್ಷರಾಧ ಹನುಮಂತಪ್ಪ ಪ್ರಸ್ತಾವಿಕವಾಗಿ ಮಾತನಾಡಿ ಸಂಘದ ಧೇಯ್ಯ ಉದ್ದೇಶಗಳನ್ನು ತಿಳಿಸಿದರು. ನೀಲಕಂಠಾಚಾರ್ ವಂದಿಸಿದರು. ಶ್ರೀಮತಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
Views: 0