ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 22
ಜಿಲ್ಲೆಯ 6 ತಾಲ್ಲೂಕು ರೈತರಿಗೆ ನೀಡಬೇಕಾದ ಬೆಳೆ ನಷ್ಠ ಪರಿಹಾರದಲ್ಲಿ ಭಾರಿ ಬ್ರಹ್ಮಾಂಡ ಭ್ರಷ್ಠಾಚಾರ ನಡೆದಿದ್ದು, ಇದರ ಬಗ್ಗೆ ಸಮಗ್ರವಾಗಿ ತನಿಖೆಯನ್ನು ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಕೊಡಿಸಿ ನಷ್ಠವನ್ನು ಹೊಂದಿದ ನಿಜವಾದ ರೈತರಿಗೆ ಶೀಘ್ರವಾಗಿ ಹಣವನ್ನು ವಿತರಣೆ ಮಾಡುವಂತೆ ಸರ್ಕಾರವನ್ನು ಬಿಜೆಪಿಯ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಆಗ್ರಹಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, 2022-23ನೇ ಸಾಲಿನ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರದಿಂದ ರೈತರಿಗೆ ನಿಡಲಾಗಿರುವ ಬೆಳೆ ನಷ್ಠ ಪರಿಹಾರದ ಹಣ ದುರುಪಯೋಗವಾಗಿರುವುದು ಕೇಳಿ ಬಂದಿದ್ದು. ನಂತರ ಜಿಲ್ಲಾಧಿಕಾರಿಗಳು ನೇಮಿಸಿರುವ ಪ್ರಾಥಮಿಕ ತನಿಖೆಯಲ್ಲಿ ಸಾಬಿತಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಇದರ ಬಗ್ಗೆ ಸಮಗ್ರವಾಗಿ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಇದೊಂದು ದೊಡ್ಡದಾದ ಹಗರಣವಾಗಿದೆ. ರೈತರ ಪರಿಹಾರ ಹೆಸರಿನಲ್ಲಿ ಕೋಟಿ, ಕೋಟಿ ಗೋಲ್ಮಾಲ್ ಆಗಿದೆ. ರೈತರು ಜಮೀನಿಗೆ ಸರಿಯಾದ ಮಳೆಬಾರದೆ, ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಬ್ಯಾಂಕ್ ಸೇರಿದಂತೆ ಖಾಸಗಿಯಾಗಿ ಸಾಲವನ್ನು ತೆಗೆದುಕೊಂಡು ಬಂದು ಅದನ್ನು ತೀರಿಸಲಾಗಿದೆ ಸಾಲದ ಹೊರೆಯಿಂದ ಅನ್ನದಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ರೈತರಿಗೆ ಸರ್ಕಾರದವತಿಯಿಂದ ಸಿಗಬೇಕಾದ ಸೌಲಭ್ಯಗಳು ಅಧಿಕಾರಿಗಳ ಸಂಬಂಧಿಕರಿಗೆ ಸಂದಾಯವಾಗಿದೆ. 2022-23ನೇ ಸಾಲಿನಲ್ಲಿ 83,696,ಸಾವಿರ ಹೇಕ್ಟೇರ್ ಪ್ರದೇಶ ಬೆಳೆ ಪರಿಹಾರ ಹಾನಿಗೆ 1,49,370 ಹೇಕ್ಟರ್ ಹಾನಿ ಎಂದು ಸರ್ಕಾರಕ್ಕೆ ವರದಿಯನ್ನು ತೋರಿಸಿ 65,673 ಹೇಕ್ಟೇರ್ ಹೆಚ್ಚುವರಿ ಬೆಳೆ ನಷ್ಠ ಎಂದು ಸರ್ಕಾರಕ್ಕೆ ವರದಿಯನ್ನು ನೀಡಿ ಒಟ್ಟು 47.79 ಕೋಟಿ ಪರಿಹಾರ ನೀಡದೇ ವಂಚನೆಯನ್ನು ಮಾಡಿದ್ದಾರೆ. ಭಷ್ಟ ಅಧಿಕಾರಿಗಳು ತಪ್ಪು ವರದಿ ನೀಡಿ ಹಣವನ್ನು ದುರ್ಬಳಕೆ ಮಾಡಿದ್ದಾರೆ.
ನಿಜವಾದ ರೈತರ ಖಾತೆಗೆ ಜಮಾ ಆಗಬೇಕಿದ್ದ ಬೆಳೆ ಪರಿಹಾರದ ಹಣ ಭ್ರಷ್ಠ ಆಧಿಕಾರಿಗಳ ಸಂಬಂಧಿಕರ ಖಾತೆಗೆ ಜಮಾ ಆಗಿದೆ. ಅಧಿಕಾರಿಗಳು ಬೆಳೆ ಪರಿಹಾರ ಸರ್ಕಾರಕ್ಕೆ ದಾಖಲಿಸುವಾಗ ಯಾವ ಬೆಳೆಗೆ ಎಷ್ಟು ಪರಿಹಾರ ಸರ್ಕಾರದ ಮಾನದಂಡ ಇದ್ದರೂ ಸಹಾ ಅಧಿಕಾರಿಗಳು ಅದನ್ನು ಗಾಳಿಗೆ ತೋರಿ ಅಕ್ರವವೆಸಗಿದ್ದಾರೆ. ಅಧಿಕಾರಿಗಳು ತಮ್ಮ ಸಂಬಂಧಿಕರ ಖಾತೆಗೆ ಹೆಚ್ಚು ಹಣ ಜಮಾ ಮಾಡಿರುತ್ತಾರೆ. ಸರ್ಕಾರ ಈವರೆಗೆ ಭ್ರಷ್ಟಚಾರ ಮಾಡಿದ ಅಧಿಕಾರಿಗಳ ಮೇಲೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ ಈ ಕೂಡಲೆ ಭ್ರಷ್ಠ ಅಧಿಕಾರಿಗಳ ಅಮಾನತ್ತಿನಲ್ಲಿ ಇಟ್ಟು ಕಾನೂನು ಕ್ರಮ ತೆಗೆದುಕೊಳ್ಳುಬೇಕು ರೈತರಿಗೆ ಸಿಗಬೇಕಾದ ಪರಿಹಾರ ಹಣ ನೀಡಬೇಕು ಎಂದು ನಾಗರಾಜ್ ಬೇದ್ರೇ ಸರ್ಕಾರವನ್ನು ಆಗ್ರಹಿಸಿದ್ದಾರೆ.
Views: 105