ಚಿತ್ರದುರ್ಗದಲ್ಲಿ ಭಾನುವಾರ ವಿಜಯೋತ್ಸವ ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ
ಚಿತ್ರದುರ್ಗ : ಒಳಮೀಸಲಾತಿ ಹೋರಾಟವು ಆಗಸ್ಟ್ 19ರಂದು ಫಲ ನೀಡಿದ್ದು, ಈ ಕಾರಣಕ್ಕೆ ಆಗಸ್ಟ್ 24ರ ಭಾನುವಾರ ಬೆಳಗ್ಗೆ 10.30ಕ್ಕೆ ಚಿತ್ರದುರ್ಗ ನಗರದಲ್ಲಿ ಸಂಭ್ರಮೋತ್ಸವ ಹಾಗೂ ಕೃತಜ್ಞತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಒಳಮೀಸಲಾತಿ ಕಲ್ಪನೆ ಹುಟ್ಟು ಹಾಕಿದ ಮಂದಕೃಷ್ಣ ಮಾದಿಗ ಅವರ ಹೋರಾಟದ ರಥವನ್ನು ರಾಜ್ಯದಲ್ಲಿ ಮುನ್ನಡೆಸಿದವರು. ಲಕ್ಷಾಂತರ ಮಂದಿ ಮಾದಿಗರು, ರಾಜಕಾರಣಿಗಳು, ನೌಕರರು, ವಿದ್ಯಾರ್ಥಿಗಳು. ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ದಸಂಸ ಸೇರಿ ನೂರಾರು ಸಂಘಟನೆಗಳು ಸುದೀರ್ಘ 35 ವರ್ಷ ಹೋರಾಟದ ಹಾದಿ ಸವಿಸಿವೆ.
ಜೊತೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅನೇಕರು ಒಳಮೀಸಲಾತಿ ಏಕೆ ಬೇಕೆಂದು ಸಮರ್ಥವಾಗಿ ವಾದ ಮಂಡಿಸಲು ಬೆನ್ನಿಗೆ ನಿಂತಿದ್ದಾರೆ.
ಮುಖ್ಯವಾಗಿ ಒಳಮೀಸಲಾತಿ ಜಾರಿಗೆ ಇದ್ದ ಅಡೆತಡೆಗಳನ್ನು ಮೆಟ್ಟಿ ನಿಂತು ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಜಾರಿಗೊಳಿಸಿದ್ದಾರೆ. ಮಾದಿಗ ಸಮುದಾಯಕ್ಕೆ ಶೇ.6 ಮೀಸಲಾತಿ ನೀಡಿ ನುಡಿದಂತೆ ನಡೆದಿದ್ದಾರೆ. ಆದ್ದರಿಂದ ಸುದೀರ್ಘ 35 ವರ್ಷಗಳ ಕಾಲದ ಹೋರಾಟದ ಹಾದಿಯಲ್ಲಿ ಹೆಜ್ಹೆ ಹಾಕಿದವರನ್ನು ಸ್ಮರಿಸುವುದು ಹಾಗೂ ಒಳಮೀಸಲಾತಿ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಜೊತೆಗೆ ನಾವೆಲ್ಲರೂ ಒಂದೇಡೆ ಸೇರಿ ಸಂಭ್ರಮಿಸಿ, ವಿಜಯೋತ್ಸವ ಆಚರಿಸಬೇಕಾಗಿದೆ.
ಆದ್ದರಿಂದ ಆಗಸ್ಟ್ 24 ಭಾನುವಾರ ಬೆಳಗ್ಗೆ 10.30ಕ್ಕೆ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಸಂಭ್ರಮಾಚಾರಣೆ, ವಿಜಯೋತ್ಸವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲಿಂದಲೇ ಕೃತಜ್ಞತೆ ಸಲ್ಲಿಸಲು ಕಾರ್ಯಕ್ರಮ ಹಮ್ಮಿಕೊಳ್ಳಕಾಗಿದೆ.
ಅಂದು ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮುದಾಯದವರು ಹಾಗೂ ಒಳ ಮೀಸಲಾತಿಗಾಗಿ ಹೋರಾಟದೊಂದಿಗೆ ಹೆಜ್ಜೆ ಹಾಕಿದವರು, ಸಮುದಾಯದ ಮುಖಂಡರು, ರಾಜಕಾರಣಿಗಳು ಹಾಗೂ ಒಳಮೀಸಲಾತಿ ಪರವಿದ್ದ ಸಹೋದರ ಸಮಾಜದ ಮುಖಂಡರು ಸೇರಿ ಎಲ್ಲ ವರ್ಗದವರು ಪಾಲ್ಗೊಳ್ಳುವಂತೆ ಮಾಜಿ ಸಚಿವ ಎಚ್.ಆಂಜನೇಯ ವಿನಂತಿಸಿದ್ದಾರೆ.
Views: 5