ಚಿತ್ರದುರ್ಗ: ರಾಜ್ಯದ ಜನರೇ ಬೆಚ್ಚಿ ಬೀಳುವಂತ ಘಟನೆ ಜಿಲ್ಲೆಯಲ್ಲಿ ನಡೆದಿತ್ತು. ಅದೇ ಪಾಳು ಬಿದ್ದ ಮನೆಯಲ್ಲಿ ಒಂದೇ ಕುಟುಂಬದ ಐವರು ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದ್ದರು. ಈ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಎಫ್‌ಎಸ್‌ಎಲ್ ವರದಿಯಲ್ಲಿ ಸಾವಿನ ರಹಸ್ಯ ಬಯಲಾಗಿದೆ.
ಅದು ಏನು ಅಂತ ಮುಂದೆ ಓದಿ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಗೇಟ್ ಬಳಿಯ ಪಾಳು ಬಿದ್ದ ಮನೆಯಲ್ಲಿ 2023 ಡಿಸೆಂಬರ್ 28ರಂದು ಒಂದೇ ಕುಟುಂಬದ ಐವರು ಅಸ್ತಿಪಂಜರದ ರೂಪದಲ್ಲಿ ಪತ್ತೆಯಾಗಿದ್ದರು. ಜಗನ್ನಾಥರೆಡ್ಡಿ ಕುಟುಂಬದ ಐವರ ಮೃತದೇಹ ಹಿಂದೆ ಹಲವು ಅನುಮಾನಗಳು ಕಾಡುತ್ತಿದ್ದವು. ಈಗ ಆ ಅನುಮಾನಗಳಿಗೆ ತೆರೆ ಬಿದ್ದಿದೆ. ಪೊಲೀಸರಿಗೆ ಎಫ್‌ಎಸ್‌ಎಲ್ ವರದಿಯು ಕೈ ಸೇರಿದೆ. ಈ ಬಗ್ಗೆ ಮಾಹಿತಿ ನೀಡಿದಂತ ಚಿತ್ರದುರ್ಗ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಚಳ್ಳಕೆರೆ ಗೇಟ್ ಬಳಿಯ ಪಾಳುಮನೆಯಲ್ಲಿ ಸಿಕ್ಕಂತ ಒಂದೇ ಕುಟುಂಬದ ಐವರು ಅಸ್ತಿಪಂಜರಗಳನ್ನು ಎಫ್‌ಎಸ್‌ಎಲ್ ತನಿಖೆಗೆ ಕಳುಹಿಸಲಾಗಿತ್ತು. ಐವರ ಮೃತದೇಹದಲ್ಲಿ ಬಹುತೇಕ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ. ನಿದ್ದೆ ಮಾತ್ರೆ ಸೇವಿಸಿ ಸಾವನ್ನಪ್ಪಿರೋದು ಖಚಿತವಾಗಿದೆ ಎಂದಿದ್ದಾರೆ.
FSL ರಿಪೋರ್ಟ್ ಪ್ರಕಾರ ನಿದ್ದೆ ಮಾತ್ರೆ ಸೇವನೆಯಿಂದಲೇ ಸಾವಾಗಿದೆ. ಆದ್ರೆ ಕಿಚನ್ನಲ್ಲಿ ಇರುವ ಎರಡು ಪಾತ್ರೆಗಳಲ್ಲಿ ಸೈನೈಡ್ ಸಿಕ್ಕಿದೆ ಎಂದು FSL ನಲ್ಲಿ ಪತ್ತೆಯಾಗಿದೆ. ಅಸ್ಥಿಪಂಜರಗಳ ದೇಹದಲ್ಲಿ ಸೈನೈಡ್ ಸೇವನೆ ಮಾಡಿರುವುದು ಕಂಡು ಬಂದಿಲ್ಲ. ಆ ಮನೆಯಲ್ಲಿ ಔಷಧಿಗಳು, ಮಾತ್ರೆಗಳು ಸಿಕ್ಕಿವೆ. ನಮ್ಮ ತನಿಖೆ ಪ್ರಕಾರ ಫೆಬ್ರವರಿ, ಮಾರ್ಚ್ 2019 ರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೋಸ್ಟ್ ಮಾರ್ಟ್ಂ ರಿಪೋರ್ಟ್ ನಲ್ಲಿ ಖಚಿತವಾಗಿ ಹೇಳಲಾಗಿಲ್ಲ. ಆದ್ರೆ, ನಮ್ಮ ಎಲ್ಲಾ ರೀತಿಯ ಆಯಾಮಗಳ ತನಿಖೆಯಲ್ಲಿ ಈ ಸತ್ಯಾಂಶ ಬೆಳಕಿಗೆ ಬಂದಿದೆ. ಮುಂದುವರೆದ ತನಿಖೆಯನ್ನು CPI ಗೆ ಒಪ್ಪಿಸಲಾಗಿದೆ. ಇದು ಸಾವಿಗೆ ಸೂಕ್ತ ಕಾರಣ ಏನು ಎಂಬುದು ಬೆಳಕಿಗೆ ಬರಲಿದೆ. CPI ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ ಎಂದರು. ಅಂದಹಾಗೇ ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ನಿವೃತ್ತ ಎಇಇ ಜಗನಾಥ್ ರೆಡ್ಡಿ, ಪತ್ನಿ ಪ್ರೇಮ ಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ, ನರೇಂದ್ರ ರೆಡ್ಡಿ ಮೃತಪಟ್ಟಿದ್ದರು.