ಒದ ದನದಲಲ 510 ರನ ಕಲಹಕದ ಇಗಲಡ..!

ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಆ್ಯಶಸ್ ಸರಣಿಗಾಗಿ ಇಂಗ್ಲೆಂಡ್ ತಂಡವು ಭರ್ಜರಿ ತಯಾರಿಯಲ್ಲಿದೆ. ಇದಕ್ಕಾಗಿ ಆಸ್ಟ್ರೇಲಿಯಾ-ಎ ಮಹಿಳಾ ತಂಡದೊಡನೆ 3 ದಿನಗಳ ಅಭ್ಯಾಸ ಪಂದ್ಯವನ್ನಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಎ ತಂಡವು ಮೊದಲು ಬ್ಯಾಟಿಂಗ್ ಮಾಡಿತು.ಆದರೆ ಇಂಗ್ಲೆಂಡ್ ವನಿತೆಯರ ಕರಾರುವಾಕ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಆಸ್ಟ್ರೇಲಿಯಾ ಎ ತಂಡವು 221 ರನ್​ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಟಮ್ಮಿ ಬ್ಯೂಮೊಂಟ್ ಉತ್ತಮ ಆರಂಭ ಒದಗಿಸಿದ್ದರು.ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಟಮ್ಮಿ ಬ್ಯೂಮೊಂಟ್ ಬರೋಬ್ಬರಿ 31 ಫೋರ್​ ಹಾಗೂ 1 ಸಿಕ್ಸ್ ಸಿಡಿಸಿದರು. ಪರಿಣಾಮ ಕೇವಲ 238 ಎಸೆತಗಳಲ್ಲಿ 201 ರನ್ ಬಾರಿಸಿ ಮಿಂಚಿದರು. ಅಲ್ಲದೆ ದ್ವಿಶತಕದ ಬೆನ್ನಲ್ಲೇ ಟಮ್ಮಿ ಬ್ಯೂಮೊಂಟ್ ರಿಟೈರ್ಡ್​ ಆಗಿ ಹೊರನಡೆದರು.ಇನ್ನು ಹೀದರ್ ನೈಟ್ 72 ರನ್ ಬಾರಿಸಿದರೆ, ಸೋಫಿಯಾ ಡಂಕ್ಲಿ 84 ರನ್ ಸಿಡಿಸಿದರು. ಹಾಗೆಯೇ ನಟಾಲಿಯಾ ಸ್ಕಿವರ್ 78 ಎಸೆತಗಳಲ್ಲಿ 76 ರನ್ ಚಚ್ಚಿದರು. ಪರಿಣಾಮ ಒಂದೇ ದಿನದಾಟದಲ್ಲಿ ಇಂಗ್ಲೆಂಡ್ ತಂಡದ ಸ್ಕೋರ್ 500 ರನ್​ಗಳ ಗಡಿದಾಟಿತು.ಇತ್ತ ಇಂಗ್ಲೆಂಡ್ ಪುರುಷರ ತಂಡ ಆಸ್ಟ್ರೇಲಿಯಾ ವಿರುದ್ದ ಮೊದಲ ದಿನದಾಟದಲ್ಲಿ 393 ರನ್ ಬಾರಿಸಿ ಅಬ್ಬರಿಸಿದರೆ, ಅತ್ತ ಇಂಗ್ಲೆಂಡ್ ವನಿತೆಯರ ತಂಡ ಮೊದಲ ದಿನದಾಟದಲ್ಲಿ 510 ರನ್ ಬಾರಿಸಿ ಮಿಂಚಿದ್ದರು.
ಅಷ್ಟೇ ಅಲ್ಲದೆ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವು 650 ರನ್ ಪೇರಿಸಿತು. 429 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಎ ತಂಡವು ಕೊನೆಯ ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 361 ರನ್​ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

source https://tv9kannada.com/photo-gallery/cricket-photos/tammy-beaumont-double-century-england-scores-500-runs-in-a-day-kannada-news-zp-603625.html

Views: 0

Leave a Reply

Your email address will not be published. Required fields are marked *