ಡಾನ್ ಬೋಸ್ಕೊ ಕನ್ನಡ ಮಾಧ್ಯಮ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ.

ಚಿತ್ರದುರ್ಗ: ನಗರದ ಪ್ರತಿಷ್ಟಿತ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಡಾನ್ ಬೋಸ್ಕೊ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 01ನೇ ನವೆಂಬರ್ 2024ರ ಶನಿವಾರದಂದು 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಹು ಅದ್ದೂರಿಯಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಡಾನ್ ಬೋಸ್ಕೊ ಆಂಗ್ಲ ಶಾಲೆಯ ಪ್ರಾಂಶುಪಾಲರಾದ ರೆ. ಫಾ. ಉದಯ್ ಕುಮಾರ್ ರವರು ಮಾತನಾಡುತ್ತಾ ಕನ್ನಡ ರಾಜ್ಯೋತ್ಸವದ ಆಚರಣೆ 1956ರಿಂದಲೂ ನಮ್ಮ ಕರ್ನಾಟಕ ಏಕೀಕರಣವಾದಾಗಿನಿಂದ ಪ್ರಾರಂಭವಾಗಿ ಇಂದಿಗೂ ಇದು ನಮ್ಮ ಕರ್ನಾಟಕ ರಾಜ್ಯದ ನವೋದಯವನ್ನು ನೆನಪಿಸುವ ಅಂಗವಾಗಿ ಆಚರಿಸುವುದಾಗಿದೆ. ಇದಕ್ಕೆ ಅನೇಕರ ಶ್ರಮವಿದೆ ಅಲ್ಲದೇ ಕರ್ನಾಟಕದ ಗತವೈಭವವನ್ನು, ಕನ್ನಡ ನಾಡಿನ ಏಳಿಗೆಗಾಗಿ ಶ್ರಮಿಸಿದ ರನ್ನ ಪಂಪ, ಪೊನ್ನ, ಜನ್ನರಂತಹ ಆದಿಕವಿಗಳು, ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆ, ಕಾರ್ನಾಡ್, ಕಂಬಾರರAತಹ ಸಾಹಿತಿಗಳ ಸಾಧನೆಗಳನ್ನು ಅವರು ಮಾಡಿದ ಸೇವೆಗಳನ್ನು ಹೇಳಲು ಭಾಷಣದಲ್ಲಿ ಸಾಧ್ಯವಿಲ್ಲ. ಅದೆಲ್ಲಾ ಚರಿತ್ರಾರ್ಹವಾದ ವಿಚಾರಗಳು ಎಂದು ಹೇಳಿದರು, ಅವರು ಮುಂದುವರೆದು ಮಾತನಾಡುತ್ತಾ ಕರ್ನಾಟಕದ ಗತವೈಭವವನ್ನು ಸಾರುವ ಹಂಪೆ, ಬೇಲೂರು, ಹಳೇಬೀಡು, ಪಟ್ಟದಕಲ್ಲು, ಗೋಲಗುಮ್ಮಟ ಇತ್ಯಾದಿ ಸ್ಥಳಗಳನ್ನು ಉದಾಹರಣೆ ಸಹಿತ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದ ಪದವಿ ಪೂರ್ವ ವಿದ್ಯಾರ್ಥಿಗಳು, ಶಾಲೆಯ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಉಪಾಧ್ಯಾಯರಾದ ಶ್ರೀಯುತ ಹುರುಳಿ ಎಂ ಬಸವರಾಜ ರವರು ಕನ್ನಡ ಭಾಷೆ, ನಾಡಿನ ಉಳಿವು ಅದನ್ನು ನಾವು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೇ ಕನ್ನಡದ ಶಾಸ್ತಿçÃಯತೆ, ಭಾಷೆಯ ಹಳೆಗನ್ನಡ, ನಡುಗನ್ನಡ ಹೊಸಗನ್ನಡ, ನವೋದಯ ಸಾಹಿತ್ಯ, ವಚನಕಾರರ ಸಾಹಿತ್ಯಗಳನ್ನು ಅರ್ಥಮಾಡಿಕೊಂಡು ಆಧುನಿಕ ಯುಗದಲ್ಲಿ ಜೀವನ ಸಾಗಿಸುವ ಮೂಲಕ ನಮ್ಮ ಮೌಲ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಕರುನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ ಕೆ. ಟಿ. ಶಿವಕುಮಾರ್ ರವರು ಮಾತನಾಡುತ್ತಾ, ಪ್ರಸ್ತುತ ದಿನಗಳಲ್ಲಿ ಕನ್ನಡವು ಇಂಗ್ಲೀಷ್ ಹಾಗೂ ಹಿಂದಿ ಭಾಷೆಯ ನಡುವೆ ಸಿಕ್ಕಿ ಒದ್ದಾಡುವ ಸ್ಥಿತಿಯಲ್ಲಿದೆ. ಇದನ್ನು ನಾವು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು, ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಅಳವಡಿಕೆ ಮಾಡುವಲ್ಲಿ ನಮ್ಮಗಳ ಅನುಷ್ಟಾನದ ಮೇಲೆ ನಿರ್ಧಾರವಾಗುತ್ತದೆ ಅಲ್ಲದೇ ಅದರ ಅನಿವಾರ್ಯತೆಯೂ ಪ್ರಸ್ತುತ ದಿನಕ್ಕೆ ಬೇಕಿದೆ ಎಂದು ಹೇಳಿದರು.

       ಕಾರ್ಯಕ್ರಮದಲ್ಲಿ ಕನ್ನಡ ನಾಡು, ಸಂಸ್ಕೃತಿ, ಭಾಷೆ, ಸಂಪ್ರದಾಯಗಳನ್ನು ಸಾರುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 2023 – 24ನೇ ಸಾಲಿನ ದ್ವಿತೀಯ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ. ಮಂಡಳಿಗಳು ನಡೆಸಿದ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇಕಡ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಅಲ್ಲದೇ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿ ಕನ್ನಡ ವಿಷಯ ಬೋಧನೆ ಮಾಡುತ್ತಿರುವ ಕನ್ನಡ ಭಾಷಾ ಶಿಕ್ಷಕರುಗಳಿಗೆ, ಉಪನ್ಯಾಸಕರುಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಡಾನ್ ಬೋಸ್ಕೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರೆ.ಫಾ. ಸಜಿಜಾರ್ಜ್, ಆಡಳಿತಾಧಿಕಾರಿಗಳಾದ ರೆ. ಫಾ. ಜಾನ್ ಪಾಲ್, ಡಾನ್ ಬೋಸ್ಕೊ ಕಾಲೇಜಿನ ಪ್ರಾಂಶುಪಾಲರುಗಳಾದ ರೆ.ಫಾ. ಜೋಯ್, ರೆ.ಫಾ, ಅನೂಪ್ ಥಾಮಸ್, ಸಲಹೆಗಾರರಾದ ರೆ.ಫಾ. ಜೂಡ್, ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಸವಂತ ಕುಮಾರ್ ಹಾಗೂ ಸಿ.ಬಿ.ಎಸ್.ಇ. ಶಾಲೆಯ ಪ್ರಾಂಶುಪಾಲರಾದ ರೆ.ಫಾ ಜಾರ್ಜ್ ವೆಲ್ಲಕಡೈಲ್‌ರವರು ಭಾಗಿಗಳಾಗಿ ಅತ್ಯುತ್ತಮವಾಗಿ ನೆರವೇರಿಸಿದರು.

ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಲಿಲ್ಲಿ ಅನಿತಾ ನಿರೂಪಿಸಿದರು, ಶ್ರೀಮತಿ ರೇಖಾ ಸ್ವಾಗತಿಸಿದರು, ಮುಖ್ಯೋಪಾಧ್ಯಾಯರಾದ ಶ್ರೀ ಬಸವಂತ ಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *