ಚಿತ್ರದುರ್ಗ: (ಕರ್ನಾಟಕ ವಾರ್ತೆ) ನ.೦೧ ಇಂದು ಕರ್ನಾಟಕ ರಾಜ್ಯವು ಏಕೀಕರಣಗೊಂಡು 69 ವರ್ಷಗಳು ಕಳೆದರೂ ಕೂಡ ಇನ್ನೂ ಅನೇಕ ಪಟ್ಟಣಗಳು ಹಳ್ಳಿಗಳು ನಮ್ಮ ರಾಜ್ಯದ ಗಡಿ ರಾಜ್ಯಗಳಲ್ಲಿ ಉಳಿದುಕೊಂಡಿವೆ. ಅವುಗಳು ಇನ್ನೂ ನಮ್ಮ ಕರ್ನಾಟಕಕ್ಕೆ ಸೇರಿಕೊಳ್ಳುವುದು ಬಾಕಿ ಇದೆ. ಹಾಗಾಗಿ ಇನ್ನೂ ನಮ್ಮ ಕರ್ನಾಟಕ ಏಕೀಕರಣ ಸಂಪೂರ್ಣಗೊಳ್ಳದಿರುವುದು ವಿಶಾದನೀಯ ಸಂಗತಿ ಎಂದು ಸಾಹಿತಿ ಹಾಗೂ ಉಪನ್ಯಾಸಕ ಡಾ|| ಎಸ್ ಹೆಚ್ ಶಫಿವುಲ್ಲಾ ಅಭಿಪ್ರಾಯ ಪಟ್ಟಿದ್ದಾರೆ.
69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ನಗರದ ತುರುವನೂರು ರಸ್ತೆಯ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭುವನೇಶ್ವರಿ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಎರಡನೇ ಹಂತದಲ್ಲಿ ಮತ್ತೆ ಕರ್ನಾಟಕ ಏಕೀಕರಣ ಚಳುವಳಿ ಮಾಡುವ ಮೂಲಕ ನಮ್ಮ ಕರ್ನಾಟಕದ ಪ್ರದೇಶಗಳನ್ನು ಮತ್ತೆ ನಮ್ಮ ನಾಡಿಗೆ ಒಳಪಡಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ. ಸ್ವಾತಂತ್ರ ನಂತರ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹರಿದ ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸುವುದು ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಪಿತಾಮಹ, ಕನ್ನಡ ಕುಲ ಪುರೋಹಿತ ರೆನಿಸಿಕೊಂಡ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ರಚಿಸುವ ಮೂಲಕ ಕನ್ನಡಿಗರಲ್ಲಿ ಸ್ಪೂರ್ತಿಯನ್ನು ಉಂಟು ಮಾಡುತ್ತಾರೆ. ಹಲವು ನಾಯಕರ ಶ್ರಮದಿಂದ ಕರ್ನಾಟಕ ಏಕೀಕರಣಗೊಳ್ಳುತ್ತದೆ.ಸ್ವಾತಂತ್ರ ನಂತರ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹರಿದ ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸುವುದು ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಪಿತಾಮಹ, ಕನ್ನಡ ಕುಲ ಪುರೋಹಿತ ರೆನಿಸಿಕೊಂಡ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ರಚಿಸುವ ಮೂಲಕ ಕನ್ನಡಿಗರಲ್ಲಿ ಸ್ಪೂರ್ತಿಯನ್ನು ಉಂಟು ಮಾಡುತ್ತಾರೆ. ಹಲವು ನಾಯಕರ ಶ್ರಮದಿಂದ ಕರ್ನಾಟಕ ಏಕೀಕರಣಗೊಳ್ಳುತ್ತದೆ. ಸ್ವಾತಂತ್ರ ನಂತರ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹರಿದ ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸುವುದು ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಪಿತಾಮಹ, ಕನ್ನಡ ಕುಲ ಪುರೋಹಿತ ರೆನಿಸಿಕೊಂಡ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ರಚಿಸುವ ಮೂಲಕ ಕನ್ನಡಿಗರಲ್ಲಿ ಸ್ಪೂರ್ತಿಯನ್ನು ಉಂಟು ಮಾಡುತ್ತಾರೆ. ಹಲವು ನಾಯಕರ ಶ್ರಮದಿಂದ ಕರ್ನಾಟಕ ಏಕೀಕರಣಗೊಂಡ ಕರ್ನಾಟಕದಲ್ಲಿ ಕನ್ನಡವೇ ಪ್ರದಾನ ಭಾಷೆಯಾಗಬೇಕು ಅದಕ್ಕಾಗಿ ಎಲ್ಲರೂ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡವನ್ನೇ ಬಳಸುವಂತಾಗಬೇಕು ಎಂದು ಹೇಳಿದರು.
ಕನ್ನಡ ಸಾಹಿತಿ ಹಾಗೂ ಉಪನ್ಯಾಸಕ ಡಾಕ್ಟರ್ ಎಸ್ ಹೆಚ್ ಅವರನ್ನು ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಕೆ. ಅಂಬೇಕರ್ ಸನ್ಮಾನಿಸಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ಭಾರತೀಯ ಯೋಗಾ ಶಿಕ್ಷಣ ಸಂಸ್ಥೆ ಕೇವಲ ಉಚಿತ ಯೋಗ ಶಿಬಿರ ಧ್ಯಾನ ಪ್ರಾಣಾಯಾಮ ಇವುಗಳ ತರಬೇತಿ ಪ್ರಚಾರಕ್ಕೆ ಮಾತ್ರ ಸಿಗುತವಾಗದೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಸಾಧಕರಿಗೆ ಸಾಧನೆಗೆ ತಕ್ಕ ಪ್ರೋತ್ಸಾಹ ದೊರೆತಾಗ ಸಾಧಕರ ಸಾಧನೆ ಇನ್ನೂ ಉನ್ನತ ಮಟ್ಟಕ್ಕೆ ತಲುಪುತ್ತದೆ 69ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಯುವ ಬರಹಗಾರ ಡಾ|| ಎಸ್ ಹೆಚ್ ಶಫಿ ಉಲ್ಲಾ ಅವರನ್ನು ಗೌರವಿಸುತ್ತಿರುವುದು ಹೆಮ್ಮೆ ತಂದಿದೆ ಚಿತ್ರದುರ್ಗ ಜಿಲ್ಲೆಯನ್ನು ಬಯಲು ಸೀಮೆ ಹಿಂದುಳಿದ ಪ್ರದೇಶ ಎಂಬ ಮಾತಿದೆ ಆದರೆ ಕಲೆ ಸಾಹಿತ್ಯ ಸಂಸ್ಕೃತಿ ಕ್ರೀಡೆ ಇವುಗಳಲ್ಲಿ ಎಂದಿಗೂ ಹಿಂದುಳಿದಿಲ್ಲ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಚಿಂತಕರಾದ ರಶ್ಮಿ ಅಕ್ಕನವರು ಆಧ್ಯಾತ್ಮದಲ್ಲಿ ದೀಪಾವಳಿಯ ಮಹತ್ವ ಕುರಿತು ಮಾತನಾಡುತ್ತಾ ದೀಪಾವಳಿ ಎಂದರೆ ಕೇವಲ ಪಟಾಕಿಗಳನ್ನು ಸುಡುವುದು ದೀಪಗಳನ್ನು ಹಚ್ಚುವುದು ಅಲ್ಲ ದೀಪಾವಳಿ ಹಬ್ಬದಲ್ಲಿ ಎಣ್ಣೆ ಮತ್ತು ಬತ್ತಿಯ ದೀಪಗಳನ್ನು ಹಚ್ಚುವುದರ ಜೊತೆಗೆ ನಮ್ಮ ಇಂತರಂಗದ ಅಜ್ಞಾನದ ಕತ್ತಲನ್ನು ಓಡಿಸುವ ಜ್ಞಾನದ ಜ್ಯೋತಿಯನ್ನು ಬೆಳಗಿಸಬೇಕು ಅದಕ್ಕಾಗಿ ಧ್ಯಾನ ಮಾಡುವುದರ ಮೂಲಕ ಪರಮಾತ್ಮನಲ್ಲಿ ನಮ್ಮ ಅಂತರ್ಜೋತಿಯನ್ನು ಬೆಳಗಿಸುವುದರ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಆಶಿರ್ವಾಚನ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರು ಕನ್ನಡ ಧ್ವಜದ ವರ್ಣಗಳನ್ನು ಪ್ರತಿಬಿಂಬಿಸುವ ಅರಿಶಿಣ ಮತ್ತು ಕೆಂಪು ಬಣ್ಣದ ಉಡುಪುಗಳನ್ನು ಧರಿಸಿ ಭಾಗವಹಿಸಿದ್ದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರೆದನ್ನು ನೀಡಿತ್ತು
ಭಾರತೀಯ ಯೋಗ ಶಿಖರ ಸಂಸ್ಥೆಯ ಗೌರಾಧ್ಯಕ್ಷ ಆರ್. ಸತ್ಯಣ್ಣ ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನಚಾರ್ ಯೋಗ ಸಾಧಕರಾದ ವನಜಾಕ್ಷಮ್ಮ ಅಂಬುಜಮ್ಮ ಅನಿತಾ, ಸುಧಮ್ಮ ಸಮಾಜಸೇವಕಿ ರೀನಾ ವೀರಭದ್ರಪ್ಪ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿಕ್ಷಣಾಧಿಕಾರಿ ಮಹೇಶ್ ಡಿ, ಯೋಗ ಶಿಕ್ಷಕರಾದ ಮಂಜುನಾಥ್ ಎಂಆರ್, ವಸಂತ ಲಕ್ಷ್ಮಿ ಮಂಜುಳಾ ಇನ್ನು ಹಲವರು ಉಪಸ್ಥಿರಿದ್ದರು