ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭೀಮಸಮುದ್ರ ಜು. 27 : ಭೀಮಸಮುದ್ರ ಗ್ರಾಮದ ತುರೆಬೈಲು ಕಾಲೋನಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಜಯಪ್ಪ ಎನ್ನುವವರ ಮನೆ ಕುಸಿತಿದ್ದು 7 ಮೇಕೆ ಮೃತಪಟ್ಟಿದೆ ಮನೆಯಲ್ಲಿ ಗಂಡ ಹೆಂಡತಿ ಮಗ ಹಾಗೂ ಮೊಮ್ಮಗ ಮಲಗಿದ್ದರು ಸದ್ಯ ಯಾರಿಗೂ ಜೀವಾಣೆಯಾಗಿಲ್ಲ ಎಂದು ತಿಳಿದು ಬಂದಿದೆ.

ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ ಮಾತನಾಡಿ ಜಿಲ್ಲೆಯಲ್ಲಿ ಒಂದು ವಾರದಿಂದ ಬಹುತೇಕ ಮಳೆ ಸುರಿಯುತ್ತಿದೆ, ಶುಕ್ರವಾರ ರಾತ್ರಿ ಭೀಮಸಮುದ್ರ ಗ್ರಾಮದ ತುರೆಬೈಲು ಕಾಲೋನಿಯಲ್ಲಿ ಜಯಪ್ಪ ಎಂಬುವರ ಮನೆ ಕುಸಿದಿದ್ದು ಸದ್ಯ ಯಾರಿಗೂ ಜೀವ ಹಾನಿಯಾಗಿಲ್ಲ 4 ಜನ ಪರಾಗಿದ್ದಾರೆ ಸುಮಾರು 70000 ಸಾವಿರ ಬೆಲೆಬಾಳುವ ಮೇಕೆ ಮಣ್ಣಿನ ಗೋಡೆ ಬಿದ್ದು ಮೃತಪಟ್ಟಿದೆ ಇದಕ್ಕೆ ಪಶುವೈದ್ಯರಿಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ, ಹಾಗೆಯೇ ಗ್ರಾಮದ ಆಡಳಿತ ಅಧಿಕಾರಿ ಭೇಟಿ ನೀಡಿ ಮಾಜರು ಮಾಡಿದ್ದಾರೆ ಒಂದು ವಾರದ ಒಳಗಾಗಿ ಸರ್ಕಾರದಿಂದ ಬರುವ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿಸಲಾಗುವುದು ಎಂದು ಹೇಳಿ ದರು ಇದೇ ಸಂದರ್ಭದಲ್ಲಿ ಚಿತ್ರದುರ್ಗ ಶಾಸಕರಾದ ಕೆ.ಸಿ. ವೀರೇಂದ್ರ ಅವರಿಗೂ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.
ಭೀಮಸಮುದ್ರ ಪಶು ವೈದ್ಯಾಧಿಕಾರಿ ಸತೀಶ್ ಭೇಟಿ ನೀಡಿ 7 ಮೇಕೆ ಮೃತಪಟ್ಟಿದ್ದು ಮನೆ ಬಿದ್ದು ಮಣ್ಣಿ ಲ್ಲಿಯೇ ಮುಚ್ಚಿ ಹೋಗಿವೆ ಸರ್ಕಾರದಿಂದ ಬರುವ ಪರಿಹಾರ ಬರುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಗ್ರಾಮದ ಆಡಳಿತ ಅಧಿಕಾರಿಯಾದ ಸದಾನಂದ ಹಾಗೂ ಪಶು ವೈದ್ಯರಾದ ಸತೀಶ್ ಗ್ರಾಮ ಪಂಚಾಯಿತಿಯ ಶ್ರೀನಿವಾಸ್ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರುಗಳು ಸ್ಥಳಕ್ಕೆ ಭೇಟಿ ನೀಡಿದರು.