ಪತಿಯಿಂದ ಪ್ರತಿದಿನ ಹಲ್ಲೆ, ಕಿರಿಕಿರಿ. ಜೈಲನಿಂದ ಮರಳಿದ ಬಳಿಕ ಪತಿಯ ಕ್ರೌರ್ಯ ಹೆಚ್ಚಾಗಿದೆ. ಬೇಸತ್ತ ಪತ್ನಿ ಬದುಕು ಅಂತ್ಯಗೊಳಿಸಲು ಕೈಗಳ ನರ ಕತ್ತರಿಸಿದ ತಾಯಿಯನ್ನು 7 ವರ್ಷದ ಮಗಳು ಬದುಕಿಸಿದ್ದಾಳೆ. ಶಾಲೆಯಲ್ಲಿ ಹೇಳಿದ ಪಾಠದಿಂದ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಬಾಲಕಿಯ ಸಮಯ ಪ್ರಜ್ಞೆಗೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಹಮ್ಮದಾಬಾದ್(ಏ.27) ಮನೆಯಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳ. ಪತ್ನಿಗೆ ಹಲ್ಲೆ ಮಾಡಿ ಜೈಲು ಸೇರಿದರೂ ಪತಿಯೂ ವರ್ತನೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಜೈಲಿನಿಂದ ಹೊರಬಂದ ಬಳಿಕ ಪತಿಯ ಕ್ರೌರ್ಯ ಹೆಚ್ಚಾಗಿದೆ. ಮನನೊಂದ ಪತ್ನಿ ಬದುಕು ಅಂತ್ಯಗೊಳಿಸಲು ನಿರ್ಧರಿಸಿದ್ದಾಳೆ. ಮನೆಯಲ್ಲಿ ಮಗಳು ಬಿಟ್ಟರೆ ಇನ್ಯಾರು ಇರಲಿಲ್ಲ. ಇದೇ ವೇಳೆ ಕೈಗಳ ನರಗಳನ್ನು ಕತ್ತರಿಸಿದ ಮಹಿಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ಸದ್ದು ಕೇಳಿ ಓಡಿ ಬಂದ 7 ವರ್ಷದ ಪುತ್ರಿ ತಕ್ಷಣವೇ ತುರ್ತು ಸೇವೆಗೆ ಕರೆ ಮಾಡಿ ತಾಯಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ಅಹಮ್ಮದಾಬಾದ್ ನಿವಾಸಿಯಾಗಿರುವ ಈ ಮಹಿಳೆ ಪ್ರತಿ ದಿನ ಪತಿಯಿಂದ ಕಿರಿಕಿರಿ, ದೌರ್ಜನ್ಯ ಅನುಭವಿಸಿದ್ದಾಳೆ. ಎಲ್ಲವನ್ನೂ ಸಹಿಸಿಕೊಂಡು ದಿನದೂಡಿದ್ದ ಮಹಿಳೆ ಮೇಲೆ ಪತಿಯ ಕ್ರೌರ್ಯ ಹೆಚ್ಚಾಗಿದೆ. ಹೀಗಾಗಿ ಪತಿ ಮನೆಯಲ್ಲಿ ಇಲ್ಲದ ವೇಳೆ ಬದುಕಿಗೆ ವಿರಾಮ ನೀಡಲು ಬಯಸಿದ್ದಾಳೆ. ಶಾಲೆಗೆ ರಜೆ ಕಾರಣ 7 ವರ್ಷದ ಮಗಳು ಮಾತ್ರ ಮನೆಯಲ್ಲಿದ್ದಳು. ಮಗಳು ಮತ್ತೊಂದು ಕೋಣೆಯಲ್ಲಿ ಆಡವಾಡುತ್ತಿರುವಾಗ, ಮಹಿಳೆ ಎರಡೂ ಕೈಗಳ ನರಗಳನ್ನು ಕತ್ತರಿಸಿದ್ದಾಳೆ.
ರಕ್ತ ಸ್ರಾವವಾಗುತ್ತಿದ್ದಂತೆ ಅಸ್ವಸ್ಥಗೊಂಡ ಮಹಿಳೆ ಕುಸಿದು ಬಿದ್ದಿದ್ದಾಳೆ. ಸದ್ದುಕೇಳಿ ಕೋಣೆಯಿಂದ ಹೊರಬಂದ ಮಗಳು ದೃಶ್ಯ ಕಂಡು ಗಾಬರಿಯಾಗಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದ ತಾಯಿಯನ್ನು ಹಿಡಿದು ಕಿರುಚಿದ್ದಾಳೆ. ಇದೇ ವೇಳೆ ತಾಯಿಯ ಬದುಕಿಸಲು ಮುಂದಾಗಿದ್ದಾಳೆ. ಶಾಲೆಯಲ್ಲಿ ಹೇಳಿಕೊಟ್ಟ ಮೌಲ್ಯಯುತ ಪಾಠಗಳು ನೆನಪಿಗೆ ಬಂದಿದೆ. ಅಪಘಾತವಾದಾಗ, ಬೆಂಕಿ ಬಿದ್ದಾಗ, ತುರ್ತು ಸೇವೆಯ ಅಗತ್ಯವಿದ್ದಾಗ ಕರೆ ಮಾಡಿ ಸೇವೆ ಪಡೆದುಕೊಳ್ಳಲು ತಿಳಿಸಲಾಗಿತ್ತು.
ತಕ್ಷಣವೇ ತಾಯಿಯ ಫೋನ್ ತೆಗೆದು 108 ಗೆ ಕರೆ ಮಾಡಿದ್ದಾಳೆ. ಅ್ಯಂಬುಲೆನ್ಸ್ ಸೇವೆಗೆ ಕರೆ ಮಾಡಿ ತನ್ನ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಬದುಕಿಸಿಕೊಡುವಂತೆ ಕೇಳಿದ್ದಾಳೆ. ವಿಳಾಸ ತಿಳಿದುಕೊಂಡು ತುರ್ತು ಸೇವೆ ಅಧಿಕಾರಿಗಳು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಆಗಮಿಸಿದ್ದಾರೆ. ಬಳಿಕ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ಪ್ರಾಣಾಪಾಯದಿಂದ ಪಾರಗಿರುವ ಮಹಿಳೆಗೆ ಚಿಕಿತ್ಸೆ ಮುಂದುವರಿದಿದೆ.
ಈ ಘಟನೆ ಕುರಿತು ತುರ್ತು ಸೇವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಗುವಿಗೆ ಶಾಲೆಯಲ್ಲಿ ಹೇಳಿಕೊಟ್ಟ ತುರ್ತು ಸೇವೆ ಬಳಕೆಯನ್ನು ಸರಿಯಾದ ಸಮಯದಲ್ಲಿ ಬಳಸಿದ್ದಾಳೆ. ಆಕೆಯ ಧೈರ್ಯ, ಪರಿಸ್ಥಿತಿಯನ್ನು ಎದುರಿಸಿದ ರೀತಿ ನಿಜಕ್ಕೂ ಅಭಿನಂದನೆಗೆ ಅರ್ಹ. ಆಕೆಯ ತಾಯಿ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ತುರ್ತು ಸೇವೆ ಅಧಿಕಾರಿಗಳು ಹಾರೈಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1