ಚಿತ್ರದುರ್ಗದಲ್ಲಿ ಮಾಸಿಕ ಗಮಕ ಕಾರ್ಯಕ್ರಮದೊಂದಿಗೆ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ.

ಚಿತ್ರದುರ್ಗ: ನ.27

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಗಮಕ ಸಂಘವು ತನ್ನ 40ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಸುತ್ತಿರುವ ಮಾಸಿಕ ಗಮಕ ವಾಚನ ವ್ಯಾಖ್ಯಾನ ಸಂಭ್ರಮದ 28ನೇ ಕಾರ್ಯಕ್ರಮವು ದಿನಾಂಕ 29-11-2025ರ ಶನಿವಾರ ಸಂಜೆ 5ಗಂಟೆಗೆ ನಗರದ ಜೆ.ಸಿ.ಆರ್.ಬಡಾವಣೆಯ ಶ್ರೀ ಗಣಪತಿ ದೇವಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ನಗರದ 22ನೇ ವಾರ್ಡಿನ ವಿ.ಪಿ.ಹಾಗೂ ಜೆ.ಸಿ.ಆರ್.ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಮಾರುತಿ ಭಜನಾ ಮಂಡಳಿ,ಸ್ವರಾತ್ಮಿಕಾ ಸಂಗೀತ ಶಾಲೆ ಹಾಗೂ ಶಾರದಾ ಸಂಗೀತ ಕಲಾಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು.

ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳ ಗಾಯನ,ನರ್ತನ ಹಾಗೂ ವೀಣಾವಾದನ ಮುಂತಾದವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಣಪತಿ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷರಾದ ್ರೀ ಜಿ.ಆರ್. ಕೃಷ್ಣಮೂರ್ತಿವಹಿಸಲಿದ್ದು,ಉದ್ಘಾಟನೆಯನ್ನು ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಕೆ.ಎಂ. ವೀರೇಶ್ ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಎಂ.ಪಿ.ಅನಿತಾ ರಮೇಶ್, 22ನೇ ವಾರ್ಡ್‍ನ ,ನಗರ ಸಭಾ ಮಾಜಿ ಸದಸ್ಯರಾದ ಶ್ರೀಮತಿ ರೋಹಿಣಿ ನವೀನ್ ಭಾಗವಹಿ ಸಲಿದ್ದಾರೆ.

ಇದೇ ಸಂದರ್ಭದಲ್ಲಿ 2025ನೇ ಸಾಲಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಬಾಬು,ಎಸ್.ಜಿ. ರವರನ್ನು ಅಭಿನಂದಿಸಲಾಗುವುದು.

Views: 14

Leave a Reply

Your email address will not be published. Required fields are marked *