70ನೇ ಕನ್ನಡ ರಾಜ್ಯೋತ್ಸವ: ಕರವೇ ವತಿಯಿಂದ ಸನ್ಮಾನ, ಕನ್ನಡದ ಗೌರವಕ್ಕೆ ಹೋರಾಟ ಮುಂದುವರಿಸಲು ನಿರ್ಧಾರ.

ಚಿತ್ರದುರ್ಗ ಡಿ. 2

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕರ್ನಾಟಕ ರಕ್ಷಣ ವೇದಿಕೆವತಿಯಿಂದ 70ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸೋಮವಾರ ಸಂಜೆ ಕಚೇರಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಟಿ ರಮೇಶ್ ನಮ್ಮ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕೆಂದರೆ ಕನ್ನಡ ರಾಜ್ಯೋತ್ಸವ, ಪ್ರತಿಭೆಗಳನ್ನು ಗುರುತಿಸುವಂತಹ ಇಂತಹ ಕಾರ್ಯಕ್ರಮಗಳು ಪ್ರತಿ ವಾರ್ಡಿನಲ್ಲೂ ಹೆಚ್ಚೆಚ್ಚು ನಡೆಯುವಂತಾಗಬೇಕು ಕನ್ನಡ ಒಂದು ಭಾಷೆ ಅಷ್ಟೇ ಅಲ್ಲ. ಅದು ಒಂದು ಜೀವನ. ಪ್ರಪಂಚದ ಕೆಲವೇ ಜೀವಂತ ಭಾಷೆಗಳಲ್ಲಿ ಕನ್ನಡವೂ ಸಹಾ ಒಂದಾಗಿದೆ. ಈ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇದೆ ಕನ್ನಡ ಶಾಲೆಗಳು ಮುಚ್ಚುವಂತಹ ಇಂತಹ ಸಂದರ್ಭದಲ್ಲಿ ನಾವೂ ಸಹಾ ನಮ್ಮ ಮನೆ, ವ್ಯವಹಾರಗಳಲ್ಲಿ ಕನ್ನಡ ಬಳಸಿ ಉಳಿಸುವಂತಾಗಬೇಕು ನಾಡಿನ ಮೂಲೆ ಮೂಲೆಗಳಲ್ಲಿ ಭಾಷೆಗೆ ಧಕ್ಕೆಯುಂಟಾದರೆ ಅಥವಾ ಗಡಿಭಾಗದಲ್ಲಿ ಕನ್ನಡಿಗರು ದರೆಗೆ ಒಳಗಾದರೆ ಧೈರ್ಯವಾಗಿ ಧ್ವನಿ ಎತ್ತುವುದು ನಾರಾಯಣಗೌಡರ ಏಕೈಕ ಸಂಘಟನೆ ಎಂದು ಕರವೇ ನಾಡಿನ ಭಾಷೆ, ಗಡಿ ಹಾಗೂ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ನಿರಂತರವಾಗಿ ಹೋರಾಟ ರೂಪಿಸುತ್ತಿದೆ. ರಾಜ್ಯದಲ್ಲಿ ಸುಮಾರು ನೂರಾರು ಸಂಘಟನೆಗಳಿವೆ. ಆದರೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ನಾಡು, ನುಡಿ ಘನತೆ ಧಕ್ಕೆಯಾದಾಗ ಹೋರಾಟ ನಡೆಸಿ ಸೆರೆವಾಸ ಅನುಭವಿಸಿರುವ ಸಂಘಟನೆ ನಮ್ಮದು ಎಂದು ತಿಳಿಸಿದರು.

ಹೊರ ರಾಜ್ಯದಲ್ಲಿ ವಿದ್ಯಾಭ್ಯಾಸ ಪೂರೈಸಿದ ಹಲವು ಮಂದಿಗೆ ರಾಜ್ಯದಲ್ಲಿ ಉದ್ಯೋಗದ ಅವಕಾಶ ಬಹಳಷ್ಟಿದೆ. ಆದರೆ ಪ್ರಾಮಾಣಿಕವಾಗಿ ಕನ್ನಡ ನೆಲದಲ್ಲೇ ಸಂಪೂರ್ಣ ಜ್ಞಾನ ಪಡೆದುಕೊಂಡ ಯುವಕರಿಗೆ ಉದ್ಯೋಗದಲ್ಲಿ ವಂಚಿತಗೊಳಿಸು ವುದು ನ್ಯಾಯ ಸಮಂಜಸವಲ್ಲ ಕೂಡಲೇ ಸರ್ಕಾರಗಳು ಶೇ.90ರಷ್ಟು ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ನಾಡಿನ ಭಾಷೆಯ ವಿಚಾರದಲ್ಲಿ ಧಕ್ಕೆಯಾದರೆ ಕರವೇ ಕೈಕಟ್ಟಿ ಕೂರುವುದಿಲ್ಲ. ನಿರಂತರ ಹೋರಾಟ ಕೈಗೊಳ್ಳಲಿದೆ. ಅದರಂತೆ ಭಾಷಾ ಬೆಳವಣಿಗೆ ದೃಷ್ಟಿಯಿಂದ ಎಲ್ಲೆಡೆ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಪೂರ್ವಿಕರು ಕಟ್ಟಿ `ಬೆಳೆಸಿದ ನಾಡಿನ ಸಂಸ್ಕೃತಿ ಉಳಿಸುವ ಕೆಲಸ ಮಾಡುವುದಾಗಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 41ನೇ ರಾಷ್ಟ್ರಮಟ್ಟದ ಟೈಕ್ಯಾಂಡೋಪಂದ್ಯಾವಳಿಯಲ್ಲಿ ಉತ್ತರ ಪ್ರದೇಶದಲ್ಲಿ ಚಿತ್ರದುರ್ಗದ ಹತ್ತು ಜನ ಸ್ಪರ್ಧಿಗಳು ಭಾಗವಹಿಸಿ ಗೆದ್ದಿದ್ದು, ಅವರಿಗೆ ಕರವೇ ಇವರಿಂದ ಸನ್ಮಾನವನ್ನು ಮಾಡಲಾಯಿತು.

Views: 21

Leave a Reply

Your email address will not be published. Required fields are marked *