
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 26: ದೇಶ ಸ್ವಾತಂತ್ರಯ ಬಂದಾಗ ಯಾವುದೇ ನೀರಾವರಿಯಾಗಲಿ, ಕೈಗಾರಿಕೆಯಾಗಲಿ ಇರಲಿಲ್ಲ ಇದರ ಬದಲಾಗಿ ಆಹಾರದ ಕೊರತೆ, ಬಡತನ, ನಿರುದ್ಯೋಗ ಇತ್ತು ಇದನ್ನು ಎಲ್ಲಾ ರೀತಿಯಿಂದಲೂ ಧೈರ್ಯವಾಗಿ ಎದುರಿಸಿ ನೀರಾವರಿ ಯೋಜನೆಗಳ ಜಾರಿ, ಕೈಗಾರಿಕೆಗಳ ಸ್ಥಾಪನೆ, ಜನತೆಯ ಆಹಾರ ಸಮಸ್ಯೆ ನಿವಾರಣೆ, ಬಡತನ ನಿರ್ಮೂಲನೆಗೆ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಿದ್ದು ಕಾಂಗ್ರೆಸ್ಎಂದು ಗಾಂಧಿವಾದಿ, ರಾಜ್ಯ ಸಭಾದ ಮಾಜಿ ಸದಸ್ಯರಾದ ಹೆಚ್.ಹನುಮಂತಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಕಾನೂನು ಮಾನವ ಹಕ್ಕು
ಹಾಗೂ ಮಾಹಿತಿ ಹಕ್ಕು ವಿಭಾಗದವತಿಯಿಂದ ಹಮ್ಮಿಕೊಂಡಿದ್ದ 75ನೇ ವರ್ಷದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ
ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನವನ್ನು ರಚನೆ ಮಾಡಿದ ಅಂಬೇಡ್ಕರ್
ರವರು ಸತತವಾಗಿ ಎರಡು ವರ್ಷಗಳ ಕಾಲ ಅದನ್ನು ಸರಿಯಾದ ರೀತಿಯಲ್ಲಿ ಅಭ್ಯಾಸವನ್ನು ಮಾಡುವುದರ ಮೂಲಕ ದೇಶಕ್ಕೆ
ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ಇದರ ಪ್ರಯೋಜನ ದೇಶದ ಎಲ್ಲಾ ಪ್ರಜೆಗಳಿಗೆ ಆಗಬೇಕಿದೆ. ಆದರೆ ಇಂದು ಅಧಿಕಾರವನ್ನು
ಮಾಡುತ್ತಿರುವವರ ಸಂವಿಧಾನದ ಮೇಲೆ ಪ್ರತಿಜ್ಞೆಯನ್ನು ಮಾಡಿ ಲೋಕಸಭೆಗೆ ಹೋಗುವ ಮುನ್ನಾ ಅದಕ್ಕೆ ನಮಸ್ಕಾರ ಮಾಡಿ ತದ
ನಂತರ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವುದು ದುರಂತದ ವಿಷಯವಾಗಿದೆ ಎಂದರು.
ಕಾಂಗ್ರೆಸ್ ಎನ್ನುವುದೇ ಒಂದು ಶಕ್ತಿಯಾಗಿದೆ, ಇಲ್ಲಿ ಸದಸ್ಯರಾಗಿ ಇರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ, ಸ್ವಾತಂತ್ರ್ಯ ಹೋರಾಟದಲ್ಲಿ
ಕಾಂಗ್ರೆಸ್ ಮೂಲಕ ಲಕ್ಷಾಂತರ ಜನ ಭಾಗಿಯಾಗುವುದು ಮೂಲಕ ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡಿಸಿದರು. ದೇಶ
ಸ್ವಾತಂತ್ರ್ಯಗೊಂಡ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ನೀವುಗಳೆಲ್ಲಾ ಸ್ವಾತಂತ್ರ್ಯ ಪ್ರಜೆಗಳು ಆದರೆ
ನಾನು ಬ್ರಟಿಷರ ಕಾಲದಲ್ಲಿ ಜನನವಾದ ಹಿನ್ನಲೆಯಲ್ಲಿ ಜೀತದಾಳಾಗಿದ್ದೇನೆ. ಸಂವಿಧಾನದ ಬಗ್ಗೆ ಬೇರೆ ಪಕ್ಷದವರು ವಿರುದ್ದವಾಗಿ
ಮಾತನಾಡುತ್ತಿದ್ದರು ಕಾಂಗ್ರೆಸ್ ಇದರ ಬಗ್ಗೆ ಮಾತನಾಡುತ್ತಿಲ್ಲ, ಇದು ನಮ್ಮ ದುರಂತ. ಎಂದು ತಿಳಿಸಿದ ಅವರು, ಕಾಂಗ್ರೆಸ್ ಒಂದು
ಶಕ್ತಿಯಾಗಿದೆ. ಇದರಲ್ಲಿ ಇರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಸಂವಿಧಾನದ ಬಗ್ಗೆ ಮಾತನಾಡುವವರಿಗೆ ಸರಿಯಾದ
ಉತ್ತರವನ್ನು ನೀಡಬೇಕಿದೆ ಎಂದು ಹನುಮಂತಪ್ಪ ತಾಕೀತು ಮಾಡಿದರು.
ಸರ್ಕಾರದ ಗ್ಯಾರೆಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶಿವಣ್ಣ ಮಾತನಾಡಿ, ಸಂವಿಧಾನದ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವಂತ
ಕಾರ್ಯವನ್ನು ಕಾಂಗ್ರೆಸ್‍ವತಿಯಿಂದ ಮಾಡಬೇಕಿದೆ. ದೇಶ ಯಾವ ರೀತಿ ಸ್ವಾತಂತ್ರಯಗೊಂಡಿತು ಎಂಬುದರ ಬಗ್ಗೆ ಯುವಜನತೆಗೆ
ತಿಳಿದಿಲ್ಲ ಇದನ್ನು ತಿಳಿಸುವ ಕಾರ್ಯವಾಗಬೇಕಿದೆ. ಇಂದಿನ ದಿನಮಾನದಲ್ಲಿ ಸಂವಿಧಾನವನ್ನು ಅಸ್ಥಿರಗೊಳಿಸುವ ಕಾರ್ಯ ನಡೆಯುತ್ತಿದೆ
ಇದರ ಬಗ್ಗೆ ಎಲ್ಲರು ಎಚ್ಚರವಾಗಿರಬೇಕಿದೆ. ಸಂವಿಧಾನ ಎಲ್ಲರಿಗೂ ಸಹಾ ಬದುಕುವ ಹಕ್ಕನ್ನು ನೀಡಿದೆ. ಸಂವಿಧಾನ ಉಳಿವಿಗಾಗಿ ಎಲ್ಲರ
ಪಣ ತೊಡಬೇಕಿದೆ ಎಂದರು.
ಕಾನೂನು ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷರಾದ ಸುದರ್ಶನ ಮಾತನಾಡಿ, ಸಂವಿಧಾನ ಎಲ್ಲರಿಗೂ ಜೀವಿಸುವ
ಹಕ್ಕನ್ನು ನೀಡಿದೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳನ್ನು ಸಂವಿಧಾನ ನೀಡಿದೆ. ಆದರೆ ಇಂದಿನ ಸರ್ಕಾರಗಳು
ಸಂವಿಧಾನದ ನಿಯಮಗಳನ್ನು ಸರಿಯಾದ ರೀತಿಯಾದ ಪಾಲಿಸುತ್ತಿಲ್ಲ, ಇದರ ಬಗ್ಗೆ ಎಲ್ಲರಿಗೂ ತಿಳಿಸುವ ಕಾರ್ಯವಾಗಬೇಕಿದೆ.
ಕೆಲವೊಂದು ಪಟ್ಟಭದ್ರಾ ಹಿತಾಸಕ್ತಿಗಳು ಸಂವಿಧಾನವನ್ನು ಅಸ್ಥಿರಗೊಳಿಸಲು ಮುಂದಾಗಿದೆ. ಸಂವಿಧಾನ ಎಂದು ಸಹಾ
ಸುಭದ್ರವಾಗಿರುತ್ತದೆ ಇದನ್ನು ಯಾರಿಂದಲೂ ಸಹಾ ಅಳಿಸಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್‍ನ ಕಾನೂನು ಘಟಕದ ಅಧ್ಯಕ್ಷರಾದ ಶಶಾಂಕ ಮಾತನಾಡಿ, ಅಂಬೇಡ್ಕರ್ ರವರು ಸತತವಾದ ಪರಿಶ್ರಮದಿಂದ ನಮಗೆ
ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ, ಇದರ ಸದುಪಯೋಗವನ್ನು ಎಲ್ಲರು ಪಡೆಯಬೇಕಿದೆ, ಇದು ಎಲ್ಲರಿಗೂ ಸಹಾ ಗ್ರಂಥ
ಇದ್ದಂತೆ ಇದರಲ್ಲಿ ಆಶಯಗಳು ಎಲ್ಲರಿಗೂ ತಲುಪುವಂತಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಾಜ್‍ಪೀರ್ ವಹಿಸಿದ್ದರು. ಒಬಿಸಿ ಅಧ್ಯಕ್ಷರಾದ ಎನ್.ಡಿ.ಕುಮಾರ್, ಜಿಲ್ಲಾ
ಕಾರ್ಯದರ್ಶಿ ಮೈಲಾರಪ್ಪ, ಜಮೀರ್ ಆಹ್ಮಮದ್, ರವಿಕುಮಾರ್, ಗಂಗಾಧರಪ್ಪ, ರಾಜಪ್ಪ, ಚಿದಾನಂದ ಮೂರ್ತಿ, ಬಿಸನ್ನಹಳ್ಳಿ ಜಯ್ಯಪ್ಪ,
ಚಂದ್ರಣ್ಣ, ಮುದಾಸಿರ್ ನವಾಜ್, ಲಕ್ಷ್ಮೀಕಾಂತ್, ಖಾಸಿಂಆಲಿ, ಸ್ವಾಮಿ, ತಕ್ಕಡಿ ಸುರೇಶ್, ಕಲಿಂವುಲ್ಲಾ ಸೇರಿದಂತೆ ಇತರರು
ಭಾಗವಹಿಸಿದ್ದರು.
Views: 0